For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಕಿತ್ತಳೆ ಸಿಪ್ಪೆ-ಲಿಂಬೆ ರಸದ ಫೇಸ್ ಮಾಸ್ಕ್

By Hemanth
|

ಹಣ್ಣುಗಳು ದೇವರ ವರವೆಂದೇ ಹೇಳಬಹುದು. ಹಣ್ಣುಗಳಲ್ಲಿ ಇರುವ ಪೋಷಕಾಂಶಗಳು ಹಾಗೂ ವಿಟಮಿನ್‌ಗಳು ನಮ್ಮ ದೇಹಕ್ಕೆ ಅಪಾರವಾದ ಶಕ್ತಿ ಮತ್ತು ಆರೋಗ್ಯವನ್ನು ನೀಡುತ್ತದೆ. ಇಂತಹ ಹಣ್ಣುಗಳಲ್ಲಿ ಕಿತ್ತಳೆ ಕೂಡ ಒಂದಾಗಿದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಪಾರ ಪ್ರಮಾಣದಲ್ಲಿದೆ. ಇದು ನಮ್ಮ ದೇಹದಲ್ಲಿ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಕೂಡ ನಮ್ಮ ದೇಹಕ್ಕೆ ನೆರವಾಗುವ ಅಂಶಗಳು ಇದೆ ಎಂದು ಯಾರಿಗಾದರೂ ತಿಳಿದಿದೆಯಾ?

ಸಾಮಾನ್ಯವಾಗಿ ಹಣ್ಣನ್ನು ತಿಂದು ನಾವು ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಹಣ್ಣಿಗಿಂತ ಹೆಚ್ಚಿಗೆ ಕಿತ್ತಳೆ ಸಿಪ್ಪೆಯಲ್ಲಿ ಕೆಲವೊಂದು ವಿಟಮಿನ್ ಹಾಗೂ ಖನಿಜಾಂಶಗಳಿವೆ. ಇದು ನಮ್ಮ ಚರ್ಮಕ್ಕೆ ತುಂಬಾ ನೆರವಾಗುತ್ತದೆ. ನಮ್ಮ ಮುಖದ ಮೇಲೆ ಬಣ್ಣ ಮಾಸಿ ಹೋಗಿ ವೃತ್ತಕಾರದ ಕಲೆಗಳು ಮೂಡುವುದನ್ನು ನಿವಾರಿಸುವಲ್ಲಿ ಕಿತ್ತಳೆ ಸಿಪ್ಪೆಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬಣ್ಣ ಮಾಸುವುದಕ್ಕೆ ರಾಸಾಯನಿಕ ಹಾಗೂ ಲೇಸರ್ ಚಿಕಿತ್ಸೆ ಪಡೆಯುವ ಬದಲು ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಮಾಸ್ಕ್ ಬಳಸಿ ಯಾವುದೇ ಅಡ್ಡಪರಿಣಾಮ ಇಲ್ಲದೆ ಫಲಿತಾಂಶ ಪಡೆಯಿರಿ. ಇನ್ನು ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುವ ಬದಲು ಅದನ್ನು ಜೋಪಾನವಾಗಿಟ್ಟುಕೊಳ್ಳಿ. ಕಿತ್ತಳೆ ಸಿಪ್ಪೆಯ ಲಾಭಗಳ ಬಗ್ಗೆ ತಿಳಿದುಕೊಳ್ಳಲು ಮುಂದಕ್ಕೆ ಓದಿಕೊಳ್ಳಿ.

DIY Orange Peel And Lemon Juice Mask To Treat Pigmentation

ಮಾಸ್ಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
*2 ಚಮಚ ಕಿತ್ತಳೆಯ ಒಣಗಿದ ಸಿಪ್ಪೆಯ ಪುಡಿ(ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ ಅಥವಾ ಬಿಸಿಲಿಗೆ ಇದನ್ನು ಚೆನ್ನಾಗಿ ಒಣಗಿಸಿ ಮನೆಯಲ್ಲೇ ಹುಡಿ ಮಾಡಿಕೊಳ್ಳಬಹುದು)
*2 ಚಮಚ ಲಿಂಬೆರಸ
*ಕಿತ್ತಳೆ ಹಣ್ಣಿನ ಸಿಪ್ಪೆಯು ಆ್ಯಸಿಡ್ ಗುಣವನ್ನು ಹೊಂದಿದೆ ಹಾಗೂ ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಿ ಮಾಸಿ ಹೋಗಿರುವ ಬಣ್ಣವು ಮರಳಿ ಬರುವಂತೆ ಮಾಡುವುದು.
*ಕಿತ್ತಳೆ ಸಿಪ್ಪೆಯಲ್ಲಿನ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಸೋಂಕುಗಳನ್ನು ದೂರವಿರಿಸುತ್ತದೆ ಮತ್ತು ಮೊಡವೆಗಳು ಬರದಂತೆ ನೋಡಿಕೊಳ್ಳುತ್ತದೆ.
*ವಿಟಮಿನ್ ಸಿ ಚರ್ಮಕ್ಕೆ ತೇವಾಂಶ ನೀಡಿ ಚರ್ಮವು ಮೃಧುವಾಗಿ ಕಾಣುವಂತೆ ಮಾಡುತ್ತದೆ.
*ಲಿಂಬೆರಸವು ನೈಸರ್ಗಿಕ ಬ್ಲೀಚಿಂಗ್ ನಂತೆ ಕೆಲಸ ಮಾಡಿ ಚರ್ಮದ ಬಣ್ಣ ಮಾಸಿ ಹೋಗಿರುವುದನ್ನು ಮರಳಿ ಬರುವಂತೆ ಮಾಡುವುದು. ಇದರಿಂದ ಚರ್ಮದ ಕಾಂತಿ ಹೆಚ್ಚುವುದು.

ಮಾಡುವ ವಿಧಾನ
*ಹೇಳಿದಷ್ಟು ಸಾಮಗ್ರಿಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ಒಂದು ಸಣ್ಣ ಪಿಂಗಾಣಿಗೆ ಹಾಕಿ ಕಲಸಿಕೊಳ್ಳಿ. ಪೇಸ್ಟ್ ಆದ ಬಳಿಕ ಅದನ್ನು ಭಾದಿತ ಪ್ರದೇಶಗಳಿಗೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

English summary

DIY Orange Peel And Lemon Juice Mask To Treat Pigmentation

You are getting ready to go to a wedding, all decked up with perfect makeup and a beautiful dress. When you have a final look at the mirror, you can't help but notice uneven, dark patches on your skin that make you feel self-conscious.These marks can definitely be signs of pigmentation. Pigmentation is nothing but discolouration of the skin in certain areas, which may make your complexion appear uneven and unhealthy.
X
Desktop Bottom Promotion