For Quick Alerts
ALLOW NOTIFICATIONS  
For Daily Alerts

ಬಾದಾಮಿ-ಹಾಲಿನ ಫೇಸ್ ಪ್ಯಾಕ್, ಕಡಿಮೆ ಖರ್ಚು ಅಧಿಕ ಲಾಭ!

By Manu
|

ಗೌರವರ್ಣ ಹೊಂದುವುದು ಎಲ್ಲರ ಇಚ್ಛೆ. ಪೂರ್ಣವಾಗಿ ಗೌರವರ್ಣ ಪಡೆಯುವುದು ಸಾಧ್ಯವಿಲ್ಲದಿದ್ದರೂ ನಮ್ಮ ಚರ್ಮದ ಸಹಜವರ್ಣವನ್ನು ಪಡೆಯುವುದು ಮಾತ್ರ ಖಂಡಿತಾ ಸಾಧ್ಯ. ಮುಖದ ಚರ್ಮಕ್ಕೆ ಕೊಂಚ ಹೆಚ್ಚಿನ ಆರೈಕೆ ನೀಡುವ ಮೂಲಕ ಸಹಜವರ್ಣಕ್ಕೂ ಕೊಂಚ ಹೆಚ್ಚಿನ ಗೌರವರ್ಣ ಹಾಗೂ ಕಾಂತಿಯನ್ನು ಪಡೆಯುವ ಮೂಲಕ ಅತಿಹೆಚ್ಚಿನ ಆತ್ಮವಿಶ್ವಾಸವನ್ನು ಪಡೆಯಬಹುದು.

ಸಾಮಾನ್ಯವಾಗಿ ಬಿಸಿಲು ಮತ್ತು ಇತರ ಕಾರಣಗಳಿಂದ ಬಿಸಿಲು ಬೀಳುವ ಭಾಗವೆಲ್ಲಾ ಕೊಂಚ ಗಾಢವರ್ಣವನ್ನು ಪಡೆದಿರುತ್ತದೆ. ಮುಖದ ಚರ್ಮವೂ ಇದಕ್ಕೆ ಹೊರತಲ್ಲ. ಬರೆಯ ಬಿಸಿಲು ಮಾತ್ರವಲ್ಲ, ಧೂಳು, ಹೊಗೆ, ಪರಾಗ, ಧಗೆ ಮೊದಲಾದ ಕಾರಣಗಳೂ ಚರ್ಮದ ಬಣ್ಣವನ್ನು ಗಾಢಗೊಳಿಸಬಹುದು. ಇನ್ನುಳಿದಂತೆ ಕೆಲವು ಹಾರ್ಮೋನುಗಳ ಏರುಪೇರು, ಔಷಧಿಗಳ ಅಡ್ಡಪರಿಣಾಮಗಳೂ ಬಣ್ಣವನ್ನು ಗಾಢಗೊಳಿಸಬಹುದು.

ಮಾರುಕಟ್ಟೆಯಲ್ಲಿ ಗೌರವರ್ಣ ಪಡೆಯುವ ನೂರಾರು ಪ್ರಸಾಧನಗಳಿವೆ. ಆದರೆ ಇವು ಸುರಕ್ಷಿತ ಅಥವಾ ಫಲಪ್ರದ ಎನ್ನುವುದಕ್ಕೆ ಯಾವುದೇ ಪುರಾವೆ ಅಥವಾ ಖಾತರಿ ಇಲ್ಲ. ಅಲ್ಲದೇ ಇದರಲ್ಲಿ ಬಳಸಿರುವ ಹಾನಿಕಾರಕ ರಾಸಾಯನಿಕಗಳು ಗೌರವರ್ಣವನ್ನು ನೀಡಿದರೂ ಇದರೊಂದಿಗೆ ಕೆಲವು ತೊಂದರೆಗೆಳನ್ನೂ ತಂದೊಡ್ಡಬಹುದು. ಆದ್ದರಿಂದ ಇವುಗಳಿಗೆ ಹಣ ಪೋಲು ಮಾಡುವ ಬದಲು ಮನೆಯಲ್ಲಿಯೇ ತಯಾರಿಸಬಹುದಾದ ಈ ಮುಖಲೇಪ ಬಳಸಿ ಉತ್ತಮ ಪರಿಣಾಮವನ್ನು ಪಡೆಬಹುದು. ಹೇಗೆ ಎಂಬುದನ್ನು ಕೆಳಗೆ ವಿವರಿಸಿದ್ದೇವೆ ಮುಂದೆ ಓದಿ...

DIY Homemade Almond And Milk Face Pack For Fair Skin

ಅಗತ್ಯವಿರುವ ಸಾಮಾಗ್ರಿಗಳು:
*ಬಾದಾಮಿ: ಸುಮಾರು ಮೂರರಿಂದ ನಾಲ್ಕು
*ಹಾಲು: ಎರಡು ದೊಡ್ಡಚಮಚ (ಹಸಿ ಹಾಲು ಉತ್ತಮ)
*ಲಿಂಬೆರಸ: ಒಂದು ದೊಡ್ಡಚಮಚ

ಬಾದಾಮಿಯ ಗುಣಗಳು ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!
*ಬಾದಾಮಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಲಭ್ಯವಿದ್ದು ಇವುಗಳು ಚರ್ಮದ ಜೀವಕೋಶಗಳಿಗೆ ಅತ್ಯುತ್ತಮ ಆರೈಕೆ ನೀಡುತ್ತವೆ. ಈ ಆರೈಕೆಯ ಕಾರಣದಿಂದಾಗಿ ಪ್ರತಿ ಜೀವಕೋಶವೂ ಕಳೆಹೊಂದುತ್ತದೆ. ಅಲ್ಲದೇ ವಿಶೇಷವಾಗಿ ಬಾದಾಮಿಯಲ್ಲಿರುವ ವಿಟಮಿನ್ ಇ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇವೆಲ್ಲವೂ ಚರ್ಮಕ್ಕೆ ಅಗತ್ಯವಾದ ಪೋಷಣೆ ಹಾಗೂ ಗೌರವರ್ಣವನ್ನು ನೀಡಲು ನೆರವಾಗುತ್ತವೆ.

*ಹಾಲಿನಲ್ಲಿಯೂ ಉತ್ತಮ ಪ್ರಮಾಣದ ಪೋಷಕಾಂಶಗಳು, ವಿಟಮಿನ್ನುಗಳು ಮತ್ತು ಪ್ರೋಟೀನು ಇದೆ. ಇವೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಹಾಗೂ ಆರೋಗ್ಯಕರವಾಗಿಸಲು ನೆರವಾಗುತ್ತವೆ. ಅಲ್ಲದೇ ಚರ್ಮದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಲು ನೆರವಾಗುವ ಮೂಲಕ ಕಲೆಯಿಲ್ಲದ ಮತ್ತು ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯವಾಗುತ್ತದೆ. ಚರ್ಮವನ್ನು ಬಿಳಿಚಿಸಲು ಲಿಂಬೆರಸ ಉತ್ತಮವಾಗಿದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ನುಸುಳಿದ್ದ ಕ್ರಿಮಿಗಳನ್ನು ಹೊರತೆಗೆಯಲು ಮತ್ತು ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶವನ್ನು ತೊಡೆದು ಮೊಡವೆಗಳಾಗದಂತೆ ರಕ್ಷಿಸುತ್ತದೆ.
*ಬಾದಾಮಿ, ಲಿಂಬೆರಸ ಮತ್ತು ಹಾಲನ್ನು ಬಳಸಿ ಮಾಡಿದ ಮುಖಲೇಪದ ಮೂಲಕ ಈ ಎಲ್ಲಾ ಸಾಮಾಗ್ರಿಗಳ ಪೋಷಣೆಯನ್ನು ಜಂಟಿಯಾಗಿ ಪಡೆದು ಗೌರವರ್ಣ ಪಡೆಯಲು ಸಾಧ್ಯವಾಗುತ್ತದೆ.

ವಿಧಾನ:
*ಸುಮಾರು ನಾಲ್ಕು ಬಾದಾಮಿಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಿ
*ಮರುದಿನ ಬೆಳಿಗ್ಗೆ ಈ ಬಾದಾಮಿಗಳನ್ನು ಹಾಲಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ನುಣ್ಣಗಾಗಿದೆ ಅನ್ನಿಸಿದ ಬಳಿಕ ಮಿಶ್ರಣವನ್ನು *ಒಂದು ಬೋಗುಣಿಯಲಿ ಹಾಕಿ ಬಳಿಕ ಲಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
*ಈ ಲೇಪನವನ್ನು ಚರ್ಮದ ಮೇಲೆ ತೆಳುವಾಗಿ ಲೇಪಿಸಿಕೊಂಡು ಸುಮಾರು ಇಪ್ಪತ್ತು ನಿಮಿಷ ಹಾಗೇ ಒಣಗಲು ಬಿಡಿ.
ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಸೌಮ್ಯ ಸೋಪು ಬಳಸಿ ಸ್ನಾನ ಮಾಡಿ.
*ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ. ಶೀಘ್ರದಲ್ಲಿಯೇ ಗೌರವರ್ಣದತ್ತ ಚರ್ಮ ತಿರುಗತೊಡಗುತ್ತದೆ. ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

English summary

DIY Homemade Almond And Milk Face Pack For Fair Skin

We do find a whole array of fairness creams in the markets that promise to give us a lighter shade of complexion, but they offer no guarantee. Also, many of the fairness creams are infused with strong chemicals that may be too harsh for your skin. So, if you want to try a natural, effective way to make your skin fairer, you can try this homemade almond and milk face pack. Have a look
X
Desktop Bottom Promotion