For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ-ದಾಲ್ಚಿನ್ನಿ ಫೇಸ್ ಪ್ಯಾಕ್

By manu
|

ಸಾಂಬಾರ ಪದಾರ್ಥಗಳ ಕಣಜವನ್ನೇ ಹೊಂದಿರುವ ಭಾರತದಲ್ಲಿ ಆಯುರ್ವೇದ ಮೂಲಕ ಮತ್ತು ಮನೆಮದ್ದಿನಿಂದ ಕೆಲವೊಂದು ಸಾಂಬಾರ ಪದಾರ್ಥಗಳನ್ನು ಈಗಲೂ ಕಾಯಿಲೆಗಳ ನಿವಾರಣೆ ಮತ್ತು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.

ದಾಲ್ಚಿನ್ನಿಯು ಇಂತಹ ಸಾಂಬಾರ ಪದಾರ್ಥಗಳಲ್ಲಿ ಒಂದಾಗಿದೆ. ದಾಲ್ಚಿನ್ನಿಂದ ಚರ್ಮ ಮತ್ತು ಕೂದಲಿಗೆ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದು ಚರ್ಮದಲ್ಲಿನ ಮೊಡವೆಗಳನ್ನು ನಿವಾರಣೆ ಮಾಡುತ್ತದೆ ಮಾತ್ರವಲ್ಲದೆ ಅಕಾಲಿಕವಾಗಿ ವಯಸ್ಸಾಗುವ ಚರ್ಮದ ಲಕ್ಷಣಗಳನ್ನು ನಿವಾರಣೆ ಮಾಡುತ್ತದೆ. ಮುಖದಲ್ಲಿ ಉಂಟಾಗುವಂತಹ ಮೊಡವೆ ಮತ್ತು ಗುಳ್ಳೆಗಳ ನಿವಾರಣೆಗೆ ಇದು ಅತಿ ಉಪಯೋಗಿ ಮನೆಮದ್ದಾಗಿದೆ. ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಗಿಡಮೂಲಿಕೆಗಳಿಂದ ಮಾಡಿರುವಂತಹ ಕೆಲವೊಂದು ಫೇಸ್ ಪ್ಯಾಕ್ ಮತ್ತು ಕ್ರೀಮ್‌ಗಳಲ್ಲಿ ದಾಲ್ಚಿನ್ನಿಯ ಸಾರವನ್ನು ಬಳಸಲಾಗುತ್ತದೆ. ಈ ಲೇಖನದಲ್ಲಿ ದಾಲ್ಚಿನಿಯಿಂದ ಚರ್ಮಕ್ಕೆ ಆಗುವಂತಹ ಕೆಲವೊಂದು ಲಾಭಗಳನ್ನು ತಿಳಿಸಿಕೊಡಲಿದ್ದೇವೆ. ಇದನ್ನು ಬಳಸಿಕೊಂಡು ಮುಖದಲ್ಲಿರುವ ಮೊಡವೆ ಮತ್ತು ಗುಳ್ಳೆಗಳನ್ನು ನಿವಾರಣೆ ಮಾಡಿಕೊಳ್ಳಿ.

DIY Face Pack For Spots Using Cinnamon

ಎಣ್ಣೆಯಂಶವಿರುವ ಚರ್ಮಕ್ಕೆ ದಾಲ್ಚಿನ್ನಿ ಮತ್ತು ಜಾಯಿಕಾಯಿ ಫೇಸ್ ಪ್ಯಾಕ್ ಚರ್ಮದಲ್ಲಿ ಎಣ್ಣೆಯಂಶವಿದ್ದರೆ ಅವರ ಮುಖದಲ್ಲಿ ಯಾವಾಗಲೂ ಮೊಡವೆಗಳು ಮೂಡುತ್ತಾ ಇರುತ್ತದೆ. ಇಂತಹ ಸಮಸ್ಯೆ ಕಾಣಿಸಿಕೊಳ್ಳುವವರು ಸ್ವಲ್ಪ ದಾಲ್ಚಿನ್ನಿ ಹುಡಿಗೆ ಅಷ್ಟೇ ಪ್ರಮಾಣದ ಜಾಯಿಕಾಯಿ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಹಾಗೆ ಬಿಡಿ. ಬಳಿಕ ಇದನ್ನು ತಣ್ಣಗಿನ ನೀರಿನಿಂದ ತೊಳೆದು ಒಣಗಲು ಬಿಡಿ. ಇದು ಮೊಡವೆಗಳನ್ನು ನಿವಾರಣೆ ಮಾಡಿ ಸೋಂಕನ್ನು ತಡೆಯುವುದು.

ದಾಲ್ಚಿನ್ನಿ ಮತ್ತು ಜೇನಿನ ಫೇಸ್ ಪ್ಯಾಕ್
ದಾಲ್ಚಿನ್ನಿ ಹುಡಿ ಮತ್ತು ಜೇನಿನ ಮಿಶ್ರಣದ ಈ ಫೇಸ್ ಪ್ಯಾಕ್ ಮುಖಕ್ಕೆ ಕಾಂತಿಯುಂಟು ಮಾಡುವುದು ಮಾತ್ರವಲ್ಲದೆ ತನ್ನಲ್ಲಿರುವ ನಂಜುನಿರೋಧಕ ಗುಣದಿಂದಾಗಿ ಮೊಡವೆಗಳನ್ನು ನಿವಾರಣೆ ಮಾಡುವುದು. ಬಿಳಿಯ ತ್ವಚೆಯುಂಟಾಗಲು ರಕ್ತದ ಸಂಚಲವನ್ನು ಉತ್ತಮಪಡಿಸುವುದು. ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ

ಅರ್ಧ ಚಮಚ ದಾಲ್ಚಿನ್ನಿ ಹುಡಿ ಮತ್ತು ಎರಡು ಚಮಚ ಜೇನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷ ಕಾಲ ಮುಖದಲ್ಲಿ ಈ ಪ್ಯಾಕ್ ನ್ನು ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ.

ದಾಲ್ಚಿನ್ನಿ ಫೇಸ್ ಪ್ಯಾಕ್ ಮತ್ತು ಪಪ್ಪಾಯಿ ಜ್ಯೂಸ್
ಬಿಸಿಲಿನಿಂದ ಮುಖದಲ್ಲಿ ಉಂಟಾಗಿರುವ ಕಲೆಗಳು, ತ್ವಚೆಯಲ್ಲಿರುವ ಗಾಢವಾದ ಕಲೆ ಮತ್ತು ಚರ್ಮ ಬಣ್ಣ ಕಳಕೊಳ್ಳುವುದಕ್ಕೆ ಪಪ್ಪಾಯಿ ಮತ್ತು ದಾಲ್ಚಿನ್ನಿ ಹುಡಿಯ ಫೇಸ್ ಪ್ಯಾಕ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
ಸ್ವಲ್ಪ ಪಪ್ಪಾಯಿ ಜ್ಯೂಸ್ ಅಥವಾ ಪಪ್ಪಾಯಿ ತಿರುಳಿಗೆ ಅರ್ಧ ಚಮಚದಷ್ಟು ದಾಲ್ಚಿನ್ನಿ ಹುಡಿಯನ್ನು ಹಾಕಿ. ತಿರುಳು ಬಳಸುವುದಾದರೆ ಬ್ಲೆಂಡರ್ ಬಳಸಿ. ಈ ಪ್ಯಾಕ್ ಅನ್ನು ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೆ ಬಿಡಿ.

English summary

DIY Face Pack For Spots Using Cinnamon

Cinnamon has numerous skin and hair benefits. It is a good acne treatment, anti aging treatment as it boosts the collagen production, improves blood circulation and fades the marks from the skin. Cinnamon’s antiseptic properties make it a very good treatment to cure pimples and acne.
X
Desktop Bottom Promotion