For Quick Alerts
ALLOW NOTIFICATIONS  
For Daily Alerts

ಇನ್ನು ಸೌಂದರ್ಯ ಹೆಚ್ಚಿಸಲು ಬ್ಯೂಟಿ ಪಾರ್ಲರ್‌ಗೆ ಹೋಗಬೇಡಿ!

By Jaya subramanya
|

ತನ್ನ ತ್ವಚೆಯು ಇತರರಿಗಿಂತ ಚೆನ್ನಾಗಿರಬೇಕು ಮತ್ತು ಪ್ರತಿಯೊಬ್ಬರು ತನ್ನ ತ್ವಚೆಯ ಬಗ್ಗೆಯೇ ಚರ್ಚೆ ಮಾಡುತ್ತಿರಬೇಕು ಎನ್ನುವುದು ಪ್ರತಿಯೊಬ್ಬ ಹುಡುಗಿಯ ಆಸೆಯಾಗಿರುತ್ತದೆ. ಸೌಂದರ್ಯದಲ್ಲಿ ಚರ್ಮದ ಆರೋಗ್ಯ ಮತ್ತು ಆರೈಕೆ ಕೂಡ ಮುಖ್ಯವಾಗಿರುತ್ತದೆ. ಇಂತಹ ಚರ್ಮವನ್ನು ಪಡೆಯಲು ಕೆಲವೊಮ್ಮೆ ಸಲೂನಿಗೆ ಹೋಗಿ ದುಬಾರಿ ವೆಚ್ಚ ಮಾಡುತ್ತೇವೆ. ಆದರೆ ಇದು ಅಲ್ಪಾವಧಿಗೆ ಮಾತ್ರ. ಯಾಕೆಂದರೆ ಕೆಲವೇ ದಿನಗಳಲ್ಲಿ ಚರ್ಮವು ಮತ್ತೆ ಅದೇ ಸ್ಥಿತಿಗೆ ಬರುತ್ತದೆ.

ಹಾಗಿದ್ದರೆ ಖರ್ಚು ವೆಚ್ಚ ಕಡಿಮೆಗೊಳಸಿ ಮಿತದರದಲ್ಲಿ ಸೌಂದರ್ಯವನ್ನು ವರ್ಧಿಸುವ ಏನಾದರೂ ಪರಿಹಾರಗಳಿವೆಯೇ ಎಂಬುದಾಗಿ ನೀವು ಯೋಚಿಸುತ್ತಿದ್ದೀರಿ ಎಂದಾದಲ್ಲಿ ಇಂದಿನ ಬೋಲ್ಡ್ ಸ್ಲೈ ಲೇಖನ ನಿಮಗೆ ಈ ವಿಧದಲ್ಲಿ ಸಹಾಯ ಮಾಡಲಿದೆ. ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!

ಹೆಚ್ಚೇನೂ ಖರ್ಚು ಮಾಡದೇ ಕೆಲವೊಂದು ಸರಳ ಫೇಸ್ ಮಾಸ್ಕ್‌ಗಳನ್ನು ನಾವು ತಿಳಿಸಿಕೊಡುತ್ತಿದ್ದು ಇದನ್ನು ಬಳಸಿದ ನಂತರ ನಿಮ್ಮ ತ್ವಚೆ ಹೊಳೆಯುವುದನ್ನು ನಿಮಗೆ ನೋಡಬಹುದಾಗಿದೆ.

ಬಾದಾಮಿ ಮತ್ತು ಹಾಲು ಫೇಸ್ ಮಾಸ್ಕ್
*ರಾತ್ರಿ ಪೂರ್ತಿ 2-3 ಬಾದಾಮಿಯನ್ನು ನೆನೆಸಿಡಿ
*ಬೆಳಗ್ಗೆ, ಬಾದಾಮಿಯನ್ನು 2 ಚಮಚ ಹಸಿಹಾಲಿನೊಂದಿಗೆ ಮ್ಯಾಶ್ (ಹಿಸುಕಿಕೊಳ್ಳಿ) ಮಾಡಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ
*ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ ನಂತರ 15 ನಿಮಿಷಗಳ ಕಾಲ ಹಾಗೆಯೇ ಬಿಡಿ
ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

badam

ಬಾಳೆಹಣ್ಣು ಮತ್ತು ಜೇನು ಫೇಸ್ ಮಾಸ್ಕ್
*ಬಾಳೆಹಣ್ಣನ್ನು ಮ್ಯಾಶ್ ಮಾಡಿಕೊಂಡು ಇದಕ್ಕೆ 1 ಚಮಚ ಜೇನನ್ನು ಸೇರಿಸಿಕೊಳ್ಳಿ
*ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ
*20 ನಿಮಿಷಗಳ ಕಾಲ ಹಾಗೆಯೇ ಬಿಡಿ
*ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ಅರಿಶಿನ, ಹಾಲು ಮತ್ತು ಜೇನು ಫೇಸ್ ಮಾಸ್ಕ್
*1 ಚಮಚದಷ್ಟು ಹಸಿ ಹಾಲನ್ನು ಜೇನು ಮತ್ತು ಚಿಟಿಕೆಯಷ್ಟು ಅರಶಿನದೊಂದಿಗೆ ಮಿಶ್ರ ಮಾಡಿ
*ನಿಮ್ಮ ಮುಖ ಮತ್ತು ಕುತ್ತಿಗೆಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ
*ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ
ಮುಖ ಒಣಗಿದ ನಂತರ ಮೃದುವಾದ ಮಾಯಿಶ್ಚರೈಸ್ ಅನ್ನು ಹಚ್ಚಿಕೊಳ್ಳಿ ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು

ಆಲೂಗಡ್ಡೆ, ಲಿಂಬೆ ರಸ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಮಾಸ್ಕ್
*ಆಲೂಗಡ್ಡೆ ರಸ, ಲಿಂಬೆ ರಸ ಮತ್ತು ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಳ್ಳಿ
*ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಮುಖ ಮತ್ತು ಕುತ್ತಿಗೆಗೆ ಮಿಶ್ರಣವನ್ನು ಹಚ್ಚಿಕೊಳ್ಳಿ
*15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...

English summary

DIY Face Masks For An Instant Glow On Your Face

Today at Boldsky, we've brought together a list of incredibly simple yet effective DIY face masks that can help you get an instant glow on your skin. These face masks can be prepared in a jiffy. And, the ingredients used can have tremendous effects on your skin. They are packed with skin-brightening properties that can make your dull skin glow.
X
Desktop Bottom Promotion