For Quick Alerts
ALLOW NOTIFICATIONS  
For Daily Alerts

ಕಿತ್ತಳೆ ಹಾಗೂ ಬೆಣ್ಣೆ ಹಣ್ಣಿನಲ್ಲಿದೆ, ಬೆಣ್ಣೆಯಂತಹ ಸೌಂದರ್ಯ!

By Manjula Balaraj
|

ಬಾಲ್ಯದಲ್ಲಿದ್ದ ಮೃದು ಮತ್ತು ಹೊಳಪು ಕೆನ್ನೆಗಳು ವಯಸ್ಸಾಗುತ್ತಿದ್ದಂತೇ ಸೊರಗುವುದು ಸಹಜ. ಆದರೂ, ಅದೇ ಸೌಂದರ್ಯ, ಹೊಳಪನ್ನು ಬಹುತೇಕ ಕಾಪಾಡಿಕೊಳ್ಳಲು ಬಹಳಷ್ಟು ನೈಸರ್ಗಿಕ ವಿಧಾನಗಳಿವೆ. ಅದರಲ್ಲಿ ಕೆಲವೊಂದನ್ನು ಈ ಲೇಖನದ ಮೂಲಕ ತಿಳಿಸುತ್ತಿದ್ದೇವೆ. ಬಾಲ್ಯದ ದಿನಗಳಲ್ಲಿ ನಾವು ಕೆನ್ನೆಯನ್ನು ಮುಟ್ಟಿಕೊಂಡು ಅದರ ಮೃದುತ್ವವನ್ನು ಹೊಗಳುತ್ತಿದ್ದನ್ನು ಯಾರೂ ಮೆರೆತಿರಲಾರರು? ಆ ದಿನಗಳಲ್ಲಿ ಚರ್ಮಗಳಲ್ಲಿರುವ ಮೃದುತ್ವ ಮತ್ತು ಹೊಳಪು ವಯಸ್ಸಾಗುತ್ತಿದ್ದಂತೇ ಕಮ್ಮಿಯಾಗುತ್ತದೆ.

ಒತ್ತಡದ ಜೀವನ, ಅನಾರೋಗ್ಯಭರಿತ ಡಯೆಟ್, ಧೂಳು, ಕೊಳೆ ಮುಂತಾದವುಗಳಿಂದ ತ್ವಚೆಯ ಕಡೆಗೆ ಗಮನ ಕಡಿಮೆಯಾಗುವುದನ್ನು ನಮ್ಮ ಪ್ರಯಾಸದ ಮುಖ ಪ್ರತಿಬಿಂಬಿಸುತ್ತದೆ. ಹೀಗಾಗಿ, ಮುಖದ ಸೌಂದರ್ಯ ಮಂದ ಮತ್ತು ಅನಾರೋಗ್ಯ ಭರಿತವಾಗಿ ಕಾಣುತ್ತದೆ.

DIY Avocado And Orange Face Pack For Soft Skin

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಂದವಾದ ಮತ್ತು ಅನಾರೋಗ್ಯಭರಿತ ಮತ್ತು ಒರಟಾದ ತ್ವಚೆಯನ್ನು ನೋಡಿ ಮನಸ್ಸಿಗೆ ಕಿರಿಕಿರಿಯಾಗುವುದು ಸಹಜ. ಎಷ್ಟೇ ಸೌಂದರ್ಯ ವರ್ಧಕಗಳನ್ನು ಬಳಸಿ ಮುಖವನ್ನು ಕಾಂತಿಯುತವನ್ನಾಗಿ ಮಾಡಲು ಪ್ರಯತ್ನಿಸಿದರೂ ಅದರಲ್ಲಿ ಮೃದುತ್ವ ಬರಲು ಸಾಧ್ಯವಿರುವುದಿಲ್ಲ.

ತ್ವಚೆಯಲ್ಲಿ ಮೃದುತ್ವ, ಹೊಳಪು ಬರಲು ಮೊದಲು ನೀರಿನ ಪದಾರ್ಥಗಳನ್ನು ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಚರ್ಮದಲ್ಲಿ ತೇವಾಂಶದ ಸಂಗ್ರಹಣೆ ಹೆಚ್ಚಾಗಿ ಶೇಖರಣೆಯಾಗುತ್ತದೆ. ಮುಖದ ಅಂದಕ್ಕೆ-ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

ಇದರ ಜೊತೆಗೆ ಮಾಯಿಶ್ಚುರೈಸರ್‌ಗಳನ್ನು ಬಳಸುವುದರಿಂದ ಮುಖದ ಹೊರಭಾಗದಲ್ಲಿ ಒಣತ್ವವನ್ನು ಹೋಗಲಾಡಿಸಿ ಸೌಂದರ್ಯತೆಯನ್ನು ಕಾಪಾಡಬಹುದಾಗಿದೆ. ಇದಲ್ಲದೇ, ನೈಸರ್ಗಿಕವಾಗಿಯೂ ಕೆಲವು ವಿಧಾನಗಳನ್ನು ಬಳಸಿ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳು ಅಡುಗೆ ಮನೆಯಲ್ಲಿಯೇ ಸಿಗುವಂತಹುದು. ಚರ್ಮದ ಮೃದುತ್ವ ಕಾಪಾಡಿಕೊಳ್ಳಲು ಮನೆಯಲ್ಲಿ ತಯಾರಿಸಿದ ವಿಧಾನವನ್ನು ಬಳಸಿಕೊಳ್ಳಲು ಇಷ್ಟ ಪಡುವವರಿಗೆ ಇಲ್ಲಿದೆ ವಿಧಾನ ಆವಕಾಡೋ(ಬೆಣ್ಣೆ ಹಣ್ಣು) ಮತ್ತು ಕಿತ್ತಳೆ ಹಣ್ಣಿನ ಫೇಶಿಯಲ್ ಮಾಸ್ಕ್

ಫೇಶಿಯಲ್ ಮಾಸ್ಕ್ ತಯಾರಿಸುವ ವಿಧಾನ:
*ಸಾಮಗ್ರಿಗಳು: ಕಿತ್ತಳೆ ರಸ -1 ಕಪ್
*ಅವಕಾಡೊ(ಬೆಣ್ಣೆ ಹಣ್ಣು)-1
*ಜೇನುತುಪ್ಪ ಎರಡು ಟೇಬಲ್ ಸ್ಪೂನ್ ಸೌಂದರ್ಯದ ಸಕಲ ಸಮಸ್ಯೆಗಳಿಗೂ-ಬೆಣ್ಣೆ ಹಣ್ಣಿನ ಚಿಕಿತ್ಸೆ

ಅವಕಾಡೊ ಹಣ್ಣು ತೇವಾಂಶವನ್ನು ಹೆಚ್ಚಿಸುವಲ್ಲಿ ಹೆಸರುವಾಸಿ. ಇದು ಚರ್ಮದ ನೈಸರ್ಗಿಕ ಸಮತೋಲನತೆಯನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿದೆ. ಇದು ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿ ಮಾಡಲಾದ ಮಾಯಿಶ್ಚುರೈಸರ್‌ಗಿಂತ ಪರಿಣಾಮಕಾರಿಯಾಗಿರುತ್ತದೆ. ಇದಕ್ಕೆ ಜೇನನ್ನು ಬಳಸುವುದರಿಂದ ತ್ವಚೆಯ ಮೃದುತ್ವ ಕಾಪಾಡಲು ಮತ್ತು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯಕಾರಿಯಾಗಿದೆ. ಅಲ್ಲದೇ, ಇದರಿಂದ ಗುಳ್ಳೆಗಳು ಮತ್ತು ಕಲೆಗಳು ಮಾಯವಾಗುತ್ತದೆ.

ಕಿತ್ತಳೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಇರುವುದರಿಂದ ಇದರಲ್ಲಿರುವ ರೋಗನಿರೊಧಕ ಗುಣವು ತ್ವಚೆಯನ್ನು ಕಾಪಾಡುತ್ತದೆ ಮತ್ತು ಆರೋಗ್ಯಯುಕ್ತ ಕಣಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಮಂದವಾದ ಒಣಗಿದ ಚರ್ಮಕ್ಕೆ ಹೊಸ ಹೊಳಪು ಬರುವಲ್ಲಿ ಸಹಾಯಕಾರಿಯಾಗಿರುತ್ತದೆ.

ಉಪಯೋಗಿಸುವ ವಿಧಾನ:
ಆವಕಾಡೊ ಹಣ್ಣಿನ ತಿರುಳನ್ನು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ನಂತರ ಇದನ್ನು ಮೇಲೆ ಹೇಳಿರುವ ಪ್ರಮಾಣದಲ್ಲಿ ಜೇನಿನೊಂದಿಗೆ ಬೆರೆಸಬೇಕು. ನಂತರ ಕಿತ್ತಳೆ ರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಮುಂದೆ, ಇದನ್ನೆಲ್ಲಾ ರುಬ್ಬಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ ಇದರ ಮಿಶ್ರಣವನ್ನು ಚೆನ್ನಾಗಿ ಬೆರೆಸಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.

English summary

DIY Avocado And Orange Face Pack For Soft Skin

Do you remember those times during your childhood, when people constantly pulled your cheeks and admired your skin for being "baby-soft"? Well, those days are long gone, as your skin gradually loses its original softness and radiance with age. So, if you are looking for a homemade remedy to get softer, smoother skin, then you can try the avocado and orange facial mask!
Story first published: Tuesday, May 24, 2016, 14:50 [IST]
X
Desktop Bottom Promotion