For Quick Alerts
ALLOW NOTIFICATIONS  
For Daily Alerts

ಒಂದು ಕಪ್ ಮೊಸರಿನಲ್ಲಿದೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳು!

By Manu
|

ಮೊಸರನ್ನು ಆಹಾರದ ಮೂಲಕ ಸೇವಿಸುವುದರಿಂದ ಯಾವ ರೀತಿಯ ಲಾಭಗಳಿವೆ ಎಂದು ಪಟ್ಟಿ ಮಾಡಿದರೆ ದೊಡ್ಡ ಪಟ್ಟಿಯೇ ತಯಾರಾಗಬಹುದು. ಬರೆಯ ಆಹಾರವಾಗಿ ಮಾತ್ರವಲ್ಲ, ಸೌಂದರ್ಯವರ್ಧಕವಾಗಿಯೂ ಮೊಸರು ಹಲವು ರೀತಿಯಲ್ಲಿ ಬಳಸಲ್ಪಡುತ್ತದೆ. ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಮೊಸರನ್ನು ನೇರವಾಗಿ ಮುಖ, ತಲೆ, ಕುತ್ತಿಗೆ, ಕೈಗಳಿಗೆ ನೇರವಾಗಿ ಹಚ್ಚಿಕೊಳ್ಳುವ ಮೂಲಕ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹಲವು ದುಬಾರಿ ಸೌಂದರ್ಯ ಮಳಿಗೆಗಳಲ್ಲಿ ಕೇವಲ ಮೊಸರನ್ನೇ ಯಾವುದೋ ಸೌಂದರ್ಯವರ್ಧಕದ ಹೆಸರಿನಲ್ಲಿ ಹಚ್ಚಿ ಹಣ ಸುಲಿಯುವುದೂ ಇದೆ. ಬನ್ನಿ, ಮೊಸರನ್ನು ಬಳಸಿ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ...

ಮೊಡವೆಯಾಗದಂತೆ ತಡೆಯುತ್ತದೆ

ಮೊಡವೆಯಾಗದಂತೆ ತಡೆಯುತ್ತದೆ

ಒಂದು ವೇಳೆ ನಿಮ್ಮ ಚರ್ಮದಲ್ಲಿ ಎಣ್ಣೆ ಪಸೆ ಹೆಚ್ಚಾಗಿದ್ದರೆ ಇದು ಮೊಡವೆಗಳಿಗೆ ಕಾರಣವಾಗುತ್ತದೆ. ಇದರಿಂದ ರಕ್ಷಣೆ ಪಡೆಯಲು ಒಂದು ಚಿಕ್ಕ ಕಪ್‌ನಷ್ಟು ಮೊಸರಿಗೆ ಒಂದು ಚಿಕ್ಕ ಚಮಚ ಅರಿಶಿನ ಪುಡಿ, ಕೊಂಚ ಸಕ್ಕರೆ ಮತ್ತು ಕೊಂಚ ಚಂದನದ ಪುಡಿ ಸೇರಿಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮುಖದ ಕಾಂತಿ ಹೆಚ್ಚಿಸುತ್ತದೆ

ಮುಖದ ಕಾಂತಿ ಹೆಚ್ಚಿಸುತ್ತದೆ

ಒಂದು ಕಪ್ ಮೊಸರಿಗೆ ಕೊಂಚ ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಮಾಡಿದ ಪುಡಿ, ಕೊಂಚ ಮಸೂರ್ ಬೇಳೆಯನ್ನು ಕುಟ್ಟಿ ಮಾಡಿದ ಪುಡಿ ಹಾಗೂ ಕೊಂಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಮಿಶ್ರಣವನ್ನು ದಪ್ಪನಾಗಿ ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಗಾಯದ ಕಲೆಗಳನ್ನು ಮಾಗಿಸುತ್ತದೆ

ಗಾಯದ ಕಲೆಗಳನ್ನು ಮಾಗಿಸುತ್ತದೆ

ಒಂದು ವೇಳೆ ನಿಮ್ಮ ಮುಖದಲ್ಲಿ ಹಳೆಯ ಮೊಡವೆಯ ಅಥವಾ ಗಾಯದ ಕಲೆ ಉಳಿದಿದ್ದರೆ ಇದರ ಮೇಲೆ ಕೊಂಚ ನೀರು ಬೆರೆಸಿದ ಮೊಸರನ್ನು ಹಚ್ಚಿ. ಕೀಟದ ಕಡಿತವಿರುವ ಸ್ಥಳಕ್ಕೂ ಇದೇ ಕ್ರಮ ಅನುಸರಿಸಬಹುದು.

ಗಾಯದ ಕಲೆಗಳನ್ನು ಮಾಗಿಸುತ್ತದೆ

ಗಾಯದ ಕಲೆಗಳನ್ನು ಮಾಗಿಸುತ್ತದೆ

ಇದರಿಂದ ಉರಿ ತಕ್ಷಣ ಕಡಿಮೆಯಾಗುತ್ತದೆ. ಮೊಸರಿನಲ್ಲಿರುವ ಸತು ಗಾಢವಾಗಿದ್ದ ಕಲೆಯನ್ನು ತಿಳಿಗೊಳಿಸಿ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ. ಮನೆಯಲ್ಲೇ ಸಿದ್ಧಪಡಿಸಿದ ಮೊಸರಿನ 12 ಅದ್ಭುತ ಕಮಾಲುಗಳು

ಸಹಜವರ್ಣ ಮರಳಿಸುತ್ತದೆ

ಸಹಜವರ್ಣ ಮರಳಿಸುತ್ತದೆ

ಸಮಪ್ರಮಾಣದಲ್ಲಿ ಮೊಸರು ಮತ್ತು ಕಡಲೆಹಿಟ್ಟನ್ನು ಬೆರೆಸಿ ಇದಕ್ಕೆ ಕೊಂಚ ಲಿಂಬೆರಸ ಸೇರಿಸಿ ಲೇಪನ ತಯಾರಿಸಿ.ಈ ಲೇಪನವನ್ನು ಬಿಸಿಲಿನಿಂದ ಕಪ್ಪಗಾಗಿದ್ದ ಚರ್ಮದ ಮೇಲೆ ತೆಳುವಾಗಿ ಹಚ್ಚಿ ಹದಿನೈದು ನಿಮಿಷ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.ಕೂದಲಿನ ಆರೈಕೆಗೆ, ಮೊಸರು-ಬೇವಿನ ಮ್ಯಾಜಿಕ್ ಚಿಕಿತ್ಸೆ

English summary

Did you know curd could do this to your skin?

While eating curd will benefit your body internally, applying it directly on your face and scalp has beauty benefits. Chuck expensive salon treatments and give yourself a hair and skin makeover at home using curd.
X
Desktop Bottom Promotion