For Quick Alerts
ALLOW NOTIFICATIONS  
For Daily Alerts

ನಾಟಿ ಕೋಳಿಯ ಮೊಟ್ಟೆಯಲ್ಲಿ ಅಡಗಿದೆ ಸೌಂದರ್ಯದ ರಹಸ್ಯ!

ಕಾಲವನ್ನು ತಡೆಹಿಡಿಯುವುದು ಯಾರಿಂದಲೂ ಸಾಧ್ಯವಿಲ್ಲ. ಕಾಲದ ಜೊತೆಗೇ ಶರೀರವೂ ಬದಲಾವಣೆಗೆ ಒಳಪಡುತ್ತಾ ಹೋಗುತ್ತದೆ. ಮಧ್ಯವಯಸ್ಸು ದಾಟುತ್ತಿದ್ದಂತೆಯೇ ಚರ್ಮದಲ್ಲಿ ನೆರಿಗೆಗಳು ಮೂಡಲು ತೊಡಗುತ್ತವೆ....

By Arshad
|

ಸೌಂದರ್ಯ ಪ್ರಸಾಧನಗಳಲ್ಲಿ ಮೊಟ್ಟೆಯ ಚಿತ್ರವನ್ನು ಪ್ರಮುಖವಾಗಿ ಜಾಹೀರಾತುಗಳಲ್ಲಿ ಬಳಸುವುದನ್ನು ಕಾಣಬಹುದು. ಏಕೆಂದರೆ ನಾವೆಲ್ಲರೂ ಮೊಟ್ಟೆ ತ್ವಚೆಗೆ ಅತ್ಯುತ್ತಮ ಆರೈಕೆ ನೀಡುವ ಪ್ರಸಾಧನ ಎಂದು ನಂಬಿಕೊಂಡು ಬಂದಿದ್ದೇವೆ. ಆದರೆ ಇದರ ಸತ್ಯಾಸತ್ಯತೆಯನ್ನು ತಿಳಿಯುವ ಗೋಜಿಗೆ ಮಾತ್ರ ಹೋಗುವುದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿದ ಪ್ರಸಾಧನ ಸಂಸ್ಥೆಗಳು ಮೊಟ್ಟೆಯನ್ನು ಜಾಹೀರಾತುಗಳಲ್ಲಿ ಬಿಂಬಿಸಿ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳುತ್ತವೆ. ಆದರೆ ಮೊಟ್ಟೆಯ ನಿಜವಾದ ಶಕ್ತಿಯನ್ನು ಕಂಡುಕೊಂಡರೆ ಇದುವರೆಗೆ ಇದರ ಬಗ್ಗೆ ನಾವು ತಿಳಿದುಕೊಂಡಿದ್ದು ಅಲ್ಪವೆಂದು ಖಾತರಿಯಾಗುತ್ತದೆ. ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

ಮೊಟ್ಟೆಯಲ್ಲಿರುವ ಪ್ರೋಟೀನ್ ನಮ್ಮ ಚರ್ಮ ಸುಲಭವಾಗಿ ಬಳಸಬಹುದಾದ ಪೋಷಕಾಂಶವಾಗಿದ್ದು ಇದೇ ಚರ್ಮದ ಆರೈಕೆಯ ಗುಟ್ಟಾಗಿದೆ. ಚರ್ಮದ ಜೀವಕೋಶಗಳು ಈ ಪ್ರೋಟೀನುಗಳನ್ನು ಪಡೆದ ಬಳಿಕ ಹೆಚ್ಚಿನ ಸೆಳೆತವನ್ನು ಪಡೆಯುತ್ತವೆ ಹಾಗೂ ಜಖಂಗೊಂಡಿದ್ದ ಜೀವಕೋಶಗಳು ರಿಪೇರಿಯಾಗುತ್ತವೆ. ಮೊಡವೆ ಮರೆಮಾಚಲು- ಮೊಟ್ಟೆಯ ಬಿಳಿಲೋಳೆಯ ಮಾಸ್ಕ್!

ತನ್ಮೂಲಕ ಚರ್ಮ ಕಳೆದುಕೊಂಡಿದ್ದ ನೈಜ ಸೌಂದರ್ಯವನ್ನು ಮತ್ತೆ ಹಿಂದೆ ಪಡೆಯುವಂತೆ ಮಾಡುತ್ತದೆ. ಈ ಗುಟ್ಟನ್ನು ಅರಿತ ವೃತ್ತಿಪರರು ಮೊಟ್ಟೆಯೊಂದಿಗೆ ಇನ್ನಾವುದೋ ಕೆಲವು ಬಣ್ಣಗಳನ್ನು ಸೇರಿಸಿ ಯಾವುದೋ ಅದ್ಭುತವಾದ ದ್ರವದಿಂದ ನಿಮ್ಮ ಸೇವೆ ಮಾಡುತ್ತಿದ್ದೇವೆ ಎಂದು ಬಿಂಬಿಸಿ ದುಬಾರಿ ಹಣ ಪಡೆಯುತ್ತಾರೆ. ಕೂದಲು ಹೊಳೆಯುವಂತಾಗಲು ಮೊಟ್ಟೆಯ ಪಾತ್ರವೇನು ಗೊತ್ತೇ?

ಇದರ ಬದಲಿಗೆ ನಿಮ್ಮ ಮನೆಯಲ್ಲಿ ನಾಟಿ ಕೋಳಿಯ ಮೊಟ್ಟೆಯೊಂದೇ ನಿಮ್ಮ ಚರ್ಮದ ಆರೈಕೆಯನ್ನು ಇನ್ನೂ ಚೆನ್ನಾಗಿ ಮಾಡಬಲ್ಲುದು. ಬನ್ನಿ, ಮೊಟ್ಟೆಯನ್ನು ಉಪಯೋಗಿಸಿ ಚರ್ಮದ ಆರೈಕೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಐದು ಪ್ರಮುಖ ವಿಧಾನಗಳನ್ನು ನೀಡಿದ್ದೇವೆ ಮುಂದೆ ಓದಿ...

 ಮೊಟ್ಟೆ + ಮೊಸರು + ಬೆಣ್ಣೆಹಣ್ಣು

ಮೊಟ್ಟೆ + ಮೊಸರು + ಬೆಣ್ಣೆಹಣ್ಣು

ಒಂದು ಮೊಟ್ಟೆಯ ಬಿಳಿಭಾಗ, ಒಂದು ದೊಡ್ಡಚಮಚ ಬೆಣ್ಣೆಹಣ್ಣಿನ ತಿರುಳು ಮತ್ತು ಸಮಪ್ರಮಾಣದಲ್ಲಿ ಗಟ್ಟಿ ಮೊಸರನ್ನು ಬೆರೆಸಿ ನಯವಾದ ಮಿಶ್ರಣ ತಯಾರಿಸಿ. ಈ ಲೇಪನವನ್ನು ನಿಮ್ಮ ಮುಖ, ಕುತ್ತಿಗೆಗಳಿಗೆ ಕೆಳಗಿನಿಂದ ಮೇಲೆ ಬರುವಂತೆ ಸವರುತ್ತಾ ತೆಳುವಾಗಿ ಹಚ್ಚಿ.ಸಾಧ್ಯವಾದಷ್ಟು ತಲೆಯನ್ನು ಹಿಂದಕ್ಕೆ ವಾಲಿಸಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಈ ಪದರ ಒಣಗಿದೆ ಅನ್ನಿಸಿದಾಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಮೊಟ್ಟೆ + ಬಾಳೆಹಣ್ಣು + ಬಾದಾಮಿ ಎಣ್ಣೆ

ಮೊಟ್ಟೆ + ಬಾಳೆಹಣ್ಣು + ಬಾದಾಮಿ ಎಣ್ಣೆ

ಒಂದು ಮೊಟ್ಟೆಯ ಬಿಳಿಭಾಗ, ಒಂದು ದೊಡ್ಡ ಚಮಚದಷ್ಟು ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನ ತಿರುಳು ಮತ್ತು ಕೆಲವು ಹನಿ ಬಾದಾಮಿ ಎಣ್ಣೆ ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ನಿಮ್ಮ ಮುಖ, ಕುತ್ತಿಗೆಗಳಿಗೆ ಕೆಳಗಿನಿಂದ ಮೇಲೆ ಬರುವಂತೆ ಸವರುತ್ತಾ ತೆಳುವಾಗಿ ಹಚ್ಚಿ ಮೂವತ್ತು ನಿಮಿಷಗಳ ಕಾಲ ನೆರಳಿನಲ್ಲಿ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಒಂದು ಅಥವಾ ಎರಡು ಮೊಟ್ಟೆಗಳ ಬಿಳಿಭಾಗವನ್ನು ಪ್ರತ್ಯೇಕಿಸಿ ಇದನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ನೆರಳಿನಲ್ಲಿ ಹಾಗೇ ಒಣಗಿದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿದರೆ ಮುಖದಲ್ಲಿ ನೆರಿಗೆ ಮೂಡುವ ದಿನಗಳು ಮುಂದೂಡಲ್ಪಡುತ್ತವೆ.

ಮೊಟ್ಟೆ ಕ್ಯಾರೆಟ್

ಮೊಟ್ಟೆ ಕ್ಯಾರೆಟ್

ಒಂದು ಕ್ಯಾರೆಟ್ ಅನ್ನು ಚಿಕ್ಕದಾಗಿ ಹೆಚ್ಚಿ ಇದನ್ನು ಮಿಕ್ಸಿಯಲ್ಲಿ ಕಡೆದು ಬಟ್ಟೆಯಲ್ಲಿ ಹಿಂಡಿ ಒಂದು ದೊಡ್ಡಚಮಚ ರಸ ಸಂಗ್ರಹಿಸಿ. ಈ ರಸಕ್ಕೆ ಒಂದು ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ. ಈಗ ಹತ್ತಿಯುಂಡೆಯೊಂದನ್ನು ಈ ರಸದಲ್ಲಿ ಮುಳುಗಿಸಿ ಮುಖ, ಕುತ್ತಿಗೆಗಳಿಗೆ ಹಚ್ಚಿ. ಈ ಲೇಪನ ಕೊಂಚ ಒಣಗುತ್ತಿದ್ದಂತೆಯೇ ಇನ್ನೊಂದು ಪದರ ಹಚ್ಚಿ. ಕೊಂಚ ಹೊತ್ತಿನ ಬಳಿಕ ಈ ಪದರ ಒಣಗಿ ಎಳೆದಂತಾಗುತ್ತದೆ. ಆಗ ತಣ್ಣೀರಿನಿಂದ ತೊಳೆದುಕೊಳ್ಳಿ. ವಿಶೇಷವಾಗಿ ಒಣಚರ್ಮ ಮತ್ತು ಹೊರಗೆ ಹೋಗಿ ಬಂದ ಬಳಿಕ ನಿತ್ರಾಣವಾಗಿದ್ದ ಚರ್ಮಕ್ಕೆ ಈ ಆರೈಕೆ ತಕ್ಷಣವೇ ಕೋಮಲತೆ ಮತ್ತು ಮೃದುತ್ವ ನೀಡುತ್ತದೆ.

ಮೊಟ್ಟೆ ಕಡ್ಲೆಹಿಟ್ಟು ಲಿಂಬೆರಸ

ಮೊಟ್ಟೆ ಕಡ್ಲೆಹಿಟ್ಟು ಲಿಂಬೆರಸ

ಒಂದು ಮೊಟ್ಟೆಯ ಬಿಳಿಭಾಗ, ಒಂದು ಚಿಕ್ಕಚಮಚ ಕಡ್ಲೆಹಿಟ್ಟು, ಕೆಲವು ಹನಿ ಲಿಂಬೆರಸ ಮತ್ತು ಕೊಂಚ ಹಸಿಹಾಲು ಬೆರೆಸಿ ಲೇಪಯ ತಯಾರಿಸಿ. ಈ ಲೇಪನವನ್ನು ನಿಮ್ಮ ಮುಖ, ಕುತ್ತಿಗೆಗಳಿಗೆ ಕೆಳಗಿನಿಂದ ಮೇಲೆ ಬರುವಂತೆ ಸವರುತ್ತಾ ತೆಳುವಾಗಿ ಹಚ್ಚಿ ನೆರಳಿನಲ್ಲಿ ಒಣಗಲು ಬಿಡಿ. ಕೊಂಚವೇ ಸಮಯದಲ್ಲಿ ಲಿಂಬೆರಸದ ಕಾರಣ ಚಿಕ್ಕದಾಗಿ ಉರಿಯಲು ಪ್ರಾರಂಭವಾಗುತ್ತದೆ. (ಚರ್ಮದ ಬಗೆಯನ್ನು ಅನುಸರಿಸಿ ಕೆಲವರಿಗೆ ತಡವಾಗಬಹುದು) ಆಗ ತಕ್ಷಣವೇ ತಣ್ಣೀರಿನಿಂದ ತೊಳೆದುಕೊಂಡು ಟವೆಲ್ ಒತ್ತಿ ಒರೆಸಿಕೊಳ್ಳಿ.

English summary

Can Egg Really Make You Look Younger?

Eggs have high quotient of proteins, which act as a building block for your skin, boosting elasticity and repairing damaged skin cells. Yes, egg repairs, heals, nourishes and creates new skin cells, which in turn makes you look younger. So, what are you waiting for, cancel that pricey spa appointment, chuck high-end cosmetic products and simply crack that desi egg. It is time to beat it good. Here are 10 herbal face mask recipes for younger looking skin!
X
Desktop Bottom Promotion