For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಅಡುಗೆ ಮನೆಯೊಳಗೆ ಒಂದು ರೌಂಡಪ್!

By Manu
|

ಭಾರತದ ಯಾವುದೇ ಮನೆಯಲ್ಲಿರುವಷ್ಟು ಸಾಂಬಾರ ಪದಾರ್ಥಗಳು ಇನ್ನಾವ ದೇಶದಲ್ಲಿಯೂ ಪ್ರಾಯಶಃ ಇರಲಾರದು. ಭಾರತೀಯ ಅಡುಗೆಗಳಿಗೆ ಜೀವ ತುಂಬುವ ಈ ರುಚಿಕರ ಸಾಮಾಗ್ರಿಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ.

ಇದೇ ಸಾಂಬಾರವನ್ನು ಹುಡುಕೊಂಡೇ ಅಲ್ಲವೇ ವಿದೇಶೀಯರು ಬಂದು ವ್ಯಾಪಾರ ಪ್ರಾರಂಭಿಸಿ ನಂತರ ಭಾರತವನ್ನೇ ಗುಲಾಮರಾಗಿಸಿದ್ದು! ಈ ಸಾಂಬಾರ ಪದಾರ್ಥಗಳು ಕೇವಲ ಅಡುಗೆಯ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಸಲೂ, ಸೌಂದರ್ಯ ವೃದ್ಧಿಸಲೂ ಮತ್ತು ಹಲವು ತ್ವಚೆಯ ತೊಂದರೆಗಳನ್ನು ನಿವಾರಿಸಲೂ ನೆರವಾಗುತ್ತವೆ.

Best Spices That Will Save Your Skin From All Problems

ಕೂದಲ ಪೋಷಣೆಗೂ ಹಲವು ಸಾಂಬಾರ ಪದಾರ್ಥಗಳು ಇತರ ಯಾವುದೇ ಪ್ರಸಾದನ ನೀಡುವುದಕ್ಕಿಂತ ಉತ್ತಮ ಪೋಷಣೆ ನೀಡುತ್ತದೆ. ಎಲ್ಲಾ ಸರಿ, ಆದರೆ ಯಾವ ಸಾಮಾಗ್ರಿ ಯಾವ ತೊಂದರೆಗೆ ಸೂಕ್ತ? ಯಾವ ಸಾಮಾಗ್ರಿ ಕೂದಲ ಅಥವಾ ತ್ವಚೆಯ ಪೋಷಣೆಗೆ ಸೂಕ್ತ? ಈ ಪ್ರಶ್ನೆಗೆ ನಮ್ಮಲ್ಲಿ ಸಿದ್ಧ ಉತ್ತರವಿಲ್ಲ. ಬನ್ನಿ ಈ ಬಗ್ಗೆ ಹಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದ್ದು ಇವು ನಿಮ್ಮ ಜ್ಞಾನವನ್ನೂ, ಇದರ ಬಳಕೆಯ ಮೂಲಕ ನಿಮ್ಮ ತ್ವಚೆ, ಕೂದಲು ಮತ್ತು ಒಟ್ಟಾರೆ ಆರೋಗ್ಯವನ್ನೂ ವೃದ್ಧಿಸಲಿದೆ:

ಅರಿಶಿನ
ಆರೋಗ್ಯಕರ ಸಾಂಬಾರವಸ್ತುಗಳ ಪಟ್ಟಿಯಲ್ಲಿ ಎಲ್ಲಕ್ಕಿಂತ ಪ್ರಥಮ ಸ್ಥಾನ ಪಡೆಯುವ ಸಾಮಾಗ್ರಿ ಎಂದರೆ ಅರಿಶಿನಪುಡಿ. ಇದರ ಆರೋಗ್ಯಕರ ಗುಣಗಳು ಹಲವಾರಿದ್ದು ಸಿದ್ಧ ರೂಪದಲ್ಲಿ ಹಲವು ತೊಂದರೆಗಳಿಗೆ ಉಪಶಮನ ನೀಡುತ್ತದೆ. ಮೊಡವೆಯ ಹುಟ್ಟಡಗಿಸುವ-ಅರಿಶಿನದ ಫೇಸ್ ಪ್ಯಾಕ್

ವಿಶೇಷವಾಗಿ ಇದರ ಉರಿಯೂತ ನಿವಾರಕ ಗುಣ ವಿವಿಧ ಸೋಂಕುಗಳಿಂದ ರಕ್ಷಿಸುವ ಜೊತೆಗೇ ಚರ್ಮದ ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ. ಅಲ್ಲದೇ ಬಿಸಿಲು ಮತ್ತು ಗಾಯ ಮೊದಲಾದ ಕಾರಣಗಳಿಂದ ಚರ್ಮ ಕಪ್ಪಗಾಗಿದ್ದರೆ ಅಥವಾ ಕಲೆ ಉಳಿದಿದ್ದರೆ ಇದನ್ನು ನಿವಾರಿಸಲೂ ಅರಿಶಿನದ ಲೇಪನ ಅತ್ಯುತ್ತಮ ಆರೈಕೆ ನೀಡುತ್ತದೆ. ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ

ಲವಂಗ
ಲವಂಗದಲ್ಲಿರುವ ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ಹಲ್ಲುನೋವಿಗೆ ಅತ್ಯುತ್ತಮ ಉಪಶಮನ ನೀಡುತ್ತದೆ. ಅಲ್ಲದೇ ಮುಖದ ಕಾಂತಿ ಹೆಚ್ಚಿಸುವ ಲೇಪನದಲ್ಲಿ ಕೊಂಚ ಲವಂಗವನ್ನು ಸೇರಿಸುವುದರಿಂದ ಮುಖದ ಕಾಂತಿ ಹೆಚ್ಚುವ ಜೊತೆಗೇ ಮೊಡವೆಗಳು, ಕೀವುಗುಳ್ಳೆಗಳು ಮತ್ತು ಚರ್ಮದ ಕಪ್ಪುತಲೆ ಮೊದಲಾದವು ಸುಲಭವಾಗಿ ಇಲ್ಲವಾಗುತ್ತವೆ. ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

ಬೆಳ್ಳುಳ್ಳಿ ಪುಡಿ
ಹಸಿಬೆಳ್ಳುಳ್ಳಿ ಹೇಗೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆಯೋ ಅಂತೆಯೇ ಬೆಳ್ಳುಳ್ಳಿಯ ಒಣಪುಡಿಯೂ ಚರ್ಮದ ಆರೈಕೆಗೆ ಉತ್ತಮವಾಗಿದೆ. ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ವಿಶೇಷವಾಗಿ ಮೊಡವೆಗಳ ಒಳಭಾಗದಲ್ಲಿ ಸೋಂಕು ಉಂಟುಮಾಡಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಔಷಧೀಯ ಗುಣಗಳ ಆಗರ-ಬಿಳಿ ಬಿಳಿ ಬೆಳ್ಳುಳ್ಳಿ

ಮೊಡವೆಗಳಿಗೆ ಉತ್ತಮ ಪರಿಣಾಮ ಪಡೆಯಲು ಕೊಂಚ ಅರಿಶಿನ ಪುಡಿ, ಜೇನು ಮತ್ತು ಬೆಳ್ಳುಳ್ಳಿ ಪುಡಿಯನ್ನು ಬೆರೆಸಿ ಲೇಪನ ಮಾಡಿ ರಾತ್ರಿಯಿಡೀ ಇರುವಂತೆ ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಮೊಡವೆಗಳಿಗೆ ವಿದಾಯ ಹೇಳಬಹುದು.

ದಾಲ್ಚಿನ್ನಿ

ದಾಲ್ಚಿನ್ನಿ ಅಥವಾ ಚೆಕ್ಕೆಪುಡಿಯಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿವೆ. ಮೊಡವೆ ಮತ್ತು ಇತರ ತೊಂದರೆಗಳ ನಿವಾರಣೆಗೆ ಕೊಂಚ ಜೇನು ಮತ್ತು ದಾಲ್ಚಿನ್ನಿಪುಡಿಯನ್ನು ಬೆರೆಸಿ ಮೊಡವೆಗಳ ಮೇಲೆ ಹಚ್ಚಿಕೊಂಡು ಇಡಿ ರಾತ್ರಿ ಬಿಟ್ಟು ಮರುದಿನ ತಣ್ಣೀರಿನಿಂದ ತೊಳೆದುಕೊಂಡರೆ ಶೀಘ್ರವೇ ಮೊಡವೆಗಳು ಕಲೆಯಿಲ್ಲದೇ ಮಾಯವಾಗುತ್ತವೆ. ಸೂಕ್ಷ್ಮ ಚರ್ಮದವರಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.
English summary

Best Spices That Will Save Your Skin From All Problems

There is a huge number of spices in the Indian kitchen no doubt. These spices add the required zing to any Indian cooking, which makes it famous world over. But, most of these spices can also be used on skin and included in your beauty routine to solve a lot of skin problems. So, have a look at this list of spices that you could use for skin care!
Story first published: Friday, September 2, 2016, 10:42 [IST]
X
Desktop Bottom Promotion