For Quick Alerts
ALLOW NOTIFICATIONS  
For Daily Alerts

ನವತಾರುಣ್ಯದ ತ್ವಚೆಗಾಗಿ ಬಳಸಿ ಈ ಹಣ್ಣುಗಳ ಫೇಸ್ ಪ್ಯಾಕ್

By Manu
|

ಹಣ್ಣುಗಳು ಕೇವಲ ದೇಹದ ಒಳಗಿನಿಂದ ಮಾತ್ರವಲ್ಲ, ದೇಹದ ಹೊರಗೂ, ಅಂದರೆ ತ್ವಚೆಗೂ ಉತ್ತಮ ಆರೈಕೆ ನೀಡುತ್ತವೆ. ಹಣ್ಣುಗಳ ಆರೈಕೆಯ ಉಪಯೋಗದ ಪರಿಣಾಮವನ್ನು ಕಂಡುಕೊಂಡ ಸೌಂದರ್ಯ ಮಳಿಗೆಗಳು ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಪರಿಣಾಮವಾಗಿ ಇವು ಅತಿ ದುಬಾರಿಯಾಗಿದ್ದು ಸಾಮಾನ್ಯರಿಗೆ ಭರಿಸಲು ಹಿಂದೇಟು ಹಾಕುವಂತಾಗುತ್ತದೆ. ವಾಸ್ತವವಾಗಿ ಮಳಿಗೆಗಳಲ್ಲಿ ಬಳಸುವ ಈ ಹಣ್ಣುಗಳ ಮುಖಲೇಪಗಳಲ್ಲಿ ಹಣ್ಣಿನ ಅಂಶ ಕಡಿಮೆ ಮತ್ತು ಹಣ್ಣಿನ ರುಚಿ ಮತ್ತು ಪರಿಮಳವೇ ಇರುವ ಕೃತಕ ರಾಸಾಯನಿಕಗಳೇ ಇರುತ್ತವೆ. ಅಪ್ಸರೆಯಂತಹ ತ್ವಚೆಗಾಗಿ ತಾಜಾ ಹಣ್ಣಿನ ಫೇಸ್ ಪ್ಯಾಕ್

ಅಂದಿನ ಮಟ್ಟಿಗೆ ಇವು ತ್ವಚೆಯನ್ನು ಹೊಳೆಯುವಂತೆ ಮಾಡುತ್ತವಾದರೂ ಕ್ರಮೇಣ ಇವು ತ್ವಚೆಗೆ ಹಾನಿಯನ್ನೇ ಉಂಟುಮಾಡುತ್ತವೆ. ಕೆಲವು ಹಾನಿಗಳು ಹಿಂದಿರುಗಿ ಪಡೆಯಲಾರದಂತಹವೂ ಆಗಬಹುದು. ಬದಲಿಗೆ ಮನೆಯಲ್ಲಿಯೇ ನಿಜವಾದ ಹಣ್ಣುಗಳನ್ನೇ ಉಪಯೋಗಿಸಿ ಸೌಂದರ್ಯ ಮಳಿಗೆಗಿಂತಲೂ ಉತ್ತಮವಾದ ಪೋಷಣೆಯನ್ನು ಪಡೆಯಬಹುದು. ಹಣ್ಣುಗಳಲ್ಲಿರುವ ನೈಸರ್ಗಿಕ ಆಮ್ಲಗಳು ಚರ್ಮದ ಹೊರಪದರದಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುವ ಸತ್ತ್ತ ಜೀವಕೋಶಗಳನ್ನು ನಿವಾರಿಸಲು (exfoliation) ಸಮರ್ಥವಾಗಿದ್ದು ತ್ವಚೆಯ ಆಳದಿಂದ ಪೋಷಣೆ ನೀಡಲು ಸಾಧ್ಯವಾಗುತ್ತದೆ. ಕೋಮಲವಾದ ತ್ವಚೆಗಾಗಿ ಹಣ್ಣಿನ ಫೇಸ್ ಪ್ಯಾಕ್

ಚರ್ಮದ ಸೂಕ್ಷ್ಮ ರಂಧ್ರಗಳು ತೆರೆದು ಒಳಗಿನ ಧೂಳು, ಸತ್ತ ಜೀವಕೋಶಗಳು ಮತ್ತು ಇತರ ಕಲ್ಮಶಗಳನ್ನು ಹೊರಗೆಳೆಯಲು ನೆರವಾಗುತ್ತದೆ. ಹಣ್ಣಿನ ರಸದಲ್ಲಿರುವ ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳನ್ನು ಚರ್ಮದ ಒಳಪದರಗಳು ಆಳವಾಗಿ ಹೀರಿಕೊಳ್ಳುವ ಮೂಲಕ ಹಣ್ಣನ್ನು ಸೇವಿಸಿ ಆ ಪೋಷಕಾಂಶಗಳು ರಕ್ತದ ಮೂಲಕ ಚರ್ಮಕ್ಕೆ ಲಭ್ಯವಾಗುದಕ್ಕಿಂತಲೂ ಸಮರ್ಥವಾಗಿ ಈ ವಿಧಾನದ ಮೂಲಕ ಲಭ್ಯವಾಗುತ್ತವೆ. ಪರಿಣಾಮವಾಗಿ ಚರ್ಮದ ಆರೈಕೆ ಉತ್ತಮಗೊಂಡು ಕೋಮಲವಾದ ಮತ್ತು ಸಹಜವರ್ಣದ ತ್ವಚೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಬನ್ನಿ, ಮುಖದ ಚರ್ಮಕ್ಕೆ ಸೂಕ್ತವಾದ ವಿವಿಧ ಹಣ್ಣುಗಳ ಮುಖಲೇಪಗಳನ್ನು ಮನೆಯಲ್ಲಿಯೇ ತಯಾರಿಸುವ ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಸ್ಟ್ರಾಬೆರಿ ಮುಖಲೇಪ

ಸ್ಟ್ರಾಬೆರಿ ಮುಖಲೇಪ

ಅರ್ಧ ಕಪ್ ಸ್ಟ್ರಾಬೆರಿ ಅರೆದ ತಿರುಳಿಗೆ ಕಾಲು ಕಪ್ ಜೋಳದ ಹಿಟ್ಟನ್ನು (cornstarch) ಬೆರೆಸಿ. ಈ ಲೇಪನವನ್ನು ಮುಖಕ್ಕೆ ದಪ್ಪನಾಗಿ ಹಚ್ಚಿ ಅರ್ಧ ಘಂಟೆ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. (ಬಿಸಿನೀರು ಸರ್ವಥಾ ಉಪಯೋಗಿಸಬೇಡಿ, ಏಕೆಂದರೆ ಮುಖಲೇಪದ ಕಾರಣ ಚರ್ಮದ ಸೂಕ್ಷ್ಮರಂಧ್ರಗಳು ಬಹಳವಾಗಿ ತೆರೆದಿದ್ದು ಬಿಸಿನೀರು ಚರ್ಮದಾಳಕ್ಕೆ ನುಗ್ಗಿ ಹಾನಿ ಎಸಗಬಹುದು. ಬದಲಿಗೆ ಉಗುರುಬೆಚ್ಚನೆಯ ನೀರನ್ನು ಬಳಸಬಹುದು.) ಈ ಮುಖಲೇಪದಿಂದ ಮುಖದ ಚರ್ಮ ನವತಾರುಣ್ಯ ಮತ್ತು ಕಾಂತಿಯನ್ನು ಪಡೆಯುತ್ತದೆ.

ಸ್ಟ್ರಾಬೆರಿ ಮುಖಲೇಪದ ಪ್ರಯೋಜನಗಳು

ಸ್ಟ್ರಾಬೆರಿ ಮುಖಲೇಪದ ಪ್ರಯೋಜನಗಳು

ಸ್ಟ್ರಾಬೆರಿಯಲ್ಲಿರುವ ನೈಸರ್ಗಿಕ ಸ್ಯಾಲಿಸಿಲಿಕ್ ಆಮ್ಲ ಚರ್ಮದ ಸೋಂಕುಗಳನ್ನು ನಿವಾರಿಸಲು, ಸತ್ತ ಜೀವಕೋಶ ಮತ್ತು ಇತರ ಕಲ್ಮಶಗಳನ್ನು ನಿವಾರಿಸಲು ಸಮರ್ಥವಾಗಿರುವ ಕಾರಣ ಚರ್ಮಕ್ಕೆ ಸಹಜವರ್ಣ ನೀಡಲು ನೆರವಾಗುತ್ತದೆ. ಅಲ್ಲದೇ ಅಗಲವಾಗಿ ತೆರೆದುಕೊಂಡಿದ್ದ ರಂಧ್ರಗಳನ್ನು ಮುಚ್ಚಲು ಸಹಾ ನೆರವಾಗುತ್ತದೆ. ಇದರಿಂದ ಚರ್ಮದಲ್ಲಿ ಕಲ್ಮಶಗಳು ತುಂಬಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ಪೀಚ್ ಹಣ್ಣಿನ ಮುಖಲೇಪ

ಪೀಚ್ ಹಣ್ಣಿನ ಮುಖಲೇಪ

ಒಂದು ಚೆನ್ನಾಗಿ ಹಣ್ಣಾದ ಪೀಚ್ ಹಣ್ಣಿನ ತಿರುಳನ್ನು ಅರೆದು ಒಂದು ದೊಡ್ಡ ಚಮಚ ಜೇನು ಮತ್ತು ಒಂದು ಚಿಕ್ಕಚಮದ ಓಟ್ಸ್ ರವೆಯನ್ನು ಹಾಕಿ ದಪ್ಪನೆಯ ಮಿಶ್ರಣವಾಗಿಸಿ. ಇದನ್ನು ಮುಖದ ಮೇಲೆ ದಪ್ಪನಾಗಿ ಹಚ್ಚಿ ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.ಈ ಮುಖಲೇಪ ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಪೀಚ್ ಹಣ್ಣಿನ ಮುಖಲೇಪದ ಪ್ರಯೋಜನಗಳು

ಪೀಚ್ ಹಣ್ಣಿನ ಮುಖಲೇಪದ ಪ್ರಯೋಜನಗಳು

ಪೀಚ್ ನಲ್ಲಿರುವ ವಿಟಮಿನ್ ಎ ಮತ್ತು ಸಿ ಚರ್ಮದ ಅಡಿಯಿಂದ ಪೋಷಣೆ ನೀಡಲು ನೆರವಾಗುತ್ತದೆ. ಮುಖದ ಹೊರಭಾಗದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಪೀಚ್ ತಿರುಳು ಕರಗಿಸಿ ಸುಲಭವಾಗಿ ನಿವಾರಸಲು ಸಾಧ್ಯವಾಗುವಂತೆ ಮಾಡುತ್ತದೆ. ಇದರಲ್ಲಿರುವ alpha-hydroxy acids (AHA) ಎಂಬ ಪೋಷಕಾಂಶ ಈ ಕೆಲಸಕ್ಕೆ ನೆರವಾಗುತ್ತದೆ. ಪರಿಣಾಮವಾಗಿ ಚರ್ಮದ ಸೆಳೆತ ಹೆಚ್ಚುತ್ತದೆ ಮತ್ತು ನೆರಿಗೆ ಮತ್ತು ಇತರ ವೃದ್ದಾಪ್ಯದ ಗುರುತುಗಳನ್ನು ನಿವಾರಿಸುತ್ತದೆ.

ಬೆಣ್ಣೆ ಹಣ್ಣಿನ ಮುಖಲೇಪ

ಬೆಣ್ಣೆ ಹಣ್ಣಿನ ಮುಖಲೇಪ

ಬೆಣ್ಣೆ ಹಣ್ಣು ಅಥವಾ ಅವೋಕ್ಯಾಡೋ ಹಣ್ಣಿನ ತಿರುಳನ್ನು ಪ್ರತ್ಯೇಕಿಸಿ ಒಂದು ಮೊಟ್ಟೆಯ ಹಳದಿ ಭಾಗದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ದಪ್ಪನಾಗಿ ಹಚ್ಚಿ ಇಪ್ಪತ್ತು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಸೌಮ್ಯ ಮತ್ತು ಕಾಂತಿಯುಕ್ತ ತ್ವಚೆ ಲಭಿಸುತ್ತದೆ.

ಬೆಣ್ಣೆ ಹಣ್ಣಿನ ಮುಖಲೇಪದ ಪ್ರಯೋಜನಗಳು

ಬೆಣ್ಣೆ ಹಣ್ಣಿನ ಮುಖಲೇಪದ ಪ್ರಯೋಜನಗಳು

ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ,ಬಿ,ಡಿ ಮತ್ತು ಇ ಹೇರಳವಾಗಿವೆ. ಜೊತೆಗೇ ಖನಿಜಗಳಾದ ಪೊಟ್ಯಾಷಿಯಂ ಮತ್ತು ಸೌಮ್ಯ, ಸಹಜವರ್ಣದ ಚರ್ಮದ ಆರೈಕೆಗೆ ಅಗತ್ಯವಾದ ಇತರ ಪೋಷಕಾಂಶಗಳೂ ಇವೆ. ಈ ಮುಖಲೇಪದಿಂದ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿದು ಪೋಷಣೆ ನೀಡುತ್ತವೆ. ಪರಿಣಾಮವಾಗಿ ಮುಖದ ಕಾಂತಿ, ಸೆಳೆತ ಹೆಚ್ಚುತ್ತದೆ ಮತ್ತು ನೆರಿಗೆಗಳು ಇಲ್ಲವಾಗುತ್ತವೆ. ಜೊತೆಗೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನೂ ನೀಡುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ನೀಡುತ್ತದೆ.

ಬಾಳೆಹಣ್ಣಿನ ಮುಖಲೇಪ

ಬಾಳೆಹಣ್ಣಿನ ಮುಖಲೇಪ

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಎರಡು ದೊಡ್ಡಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಚರ್ಮಕ್ಕೆ ದಪ್ಪನಾಗಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ತಕ್ಷಣವೇ ಮುಖ ಉತ್ತಮ ಕಾಂತಿ ಪಡೆಯುತ್ತದೆ.

ಬಾಳೆಹಣ್ಣಿನ ಮುಖಲೇಪದ ಪ್ರಯೋಜನಗಳು

ಬಾಳೆಹಣ್ಣಿನ ಮುಖಲೇಪದ ಪ್ರಯೋಜನಗಳು

ಈ ಮುಖಲೇಪದಿಂದ ಚರ್ಮ ನವತಾರುಣ್ಯ ಪಡೆಯುತ್ತದೆ. ವಿಶೇಷವಾಗಿ ಈ ಮುಖಲೇಪ ಎಣ್ಣೆಚರ್ಮಕ್ಕೆ ಅತ್ಯುತ್ತಮವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಅಡಿಯಲ್ಲಿರುವ ಕಲ್ಮಶಗಳನ್ನು ಮತ್ತು ಹೆಚ್ಚಿನ ಎಣ್ಣೆಪಸೆಯನ್ನು ನಿವಾರಿಸಲು ನೆರವಾಗುವ ಮೂಲಕ ಕಾಂತಿಯುಕ್ತವಾಗಿಸುತ್ತದೆ.

English summary

Best Fruits mask for beautiful and glowing Skin

Fruit facials boost your skin with natural goodness, and also help you do away with harmful, chemical-induced facials,which definitely give you the desired results, but leave their trail behind on your skin. Here are some popular ones that are quick and easy,and will give you hydrated, healthy, and glowing skin.
X
Desktop Bottom Promotion