ತ್ವಚೆಯ ಆರೈಕೆಗೆ ಬರೀ ಒಂದು ಚಮಚ ಬೆಣ್ಣೆ ಸಾಕು!

By: Hemanth
Subscribe to Boldsky

ಹಿಂದಿನಿಂದಲೂ ಬೆಣ್ಣೆಯನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಆದರೆ ಈಗೀಗ ಇದು ತೂಕವನ್ನು ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕಾಗಿ ಕಡೆಗಣಿಸಲ್ಪಟ್ಟಿದೆ. ಬೆಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಬೆಣ್ಣೆಯಿಂದ ಚರ್ಮಕ್ಕೂ ಹಲವಾರು ಲಾಭಗಳಿವೆ.

skin care
 

ಬೆಣ್ಣೆಯು ಚರ್ಮಕ್ಕೆ ಒಳ್ಳೆಯ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುವುದರ ಜೊತೆಗೆ ಚರ್ಮ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ, ಅಲ್ಲದೇ ಚರ್ಮಕ್ಕೆ ಸಂಬಂಧಿಸಿದಂತಹ ಕೆಲವೊಂದು ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುತ್ತದೆ... ಬನ್ನಿ ಬೆಣ್ಣೆಯಲ್ಲಿರುವ ಇನ್ನಷ್ಟು ಪ್ರಯೋಜನಗಳು ಯಾವುದು ಎಂಬುದನ್ನು ಮುಂದೆ ಓದಿ...

Dry Skin
 

ಒಣ ಚರ್ಮಕ್ಕೆ
ಚರ್ಮವು ತುಂಬಾ ಒಣಗಿರುವಂತವರಿಗೆ ಬೆಣ್ಣೆಯು ಒಳ್ಳೆಯ ಮದ್ದು. ಸ್ನಾನಕ್ಕೆ ಮೊದಲು ಬೆಣ್ಣೆಯನ್ನು ಹಚ್ಚಿಕೊಂಡು ಸ್ವಲ್ಪ ಮಸಾಜ್ ಮಾಡಿಕೊಳ್ಳಿ. ಇದು ಚರ್ಮದಲ್ಲಿ ತೇವಾಂಶವನ್ನು ಉಂಟುಮಾಡುವುದು ಮತ್ತು ಚರ್ಮವನ್ನು ಮೃದುವಾಗಿಸುವುದು.    ಒಣ ತ್ವಚೆಯನ್ನು ನುಣುಪಾಗಿಸುವ ಸರಳ ಮನೆಮದ್ದು

ಕಪ್ಪಗಿನ ತುಟಿಗಳಿಗೆ
ಚಳಿಗಾಲದಲ್ಲಿ ತುಟಿಗಳು ಒಡೆದುಹೋದಾಗ ಅದಕ್ಕೆ ಬೆಣ್ಣೆ ಹಚ್ಚಿಕೊಂಡರೆ ಒಡೆದ ತುಟಿಗಳಿಗೆ ಪರಿಹಾರ ಸಿಗುವುದು. ಬೆಣ್ಣೆ ಹಾಕಿಕೊಂಡು ತುಟಿಗಳಿಗೆ ಮಸಾಜ್ ಮಾಡಿದರೆ ತುಟಿ ಕಪ್ಪಗಾಗುವುದು ತಪ್ಪುವುದು. ಇದು ಬೆಣ್ಣೆಯ ಮತ್ತೊಂದು ಲಾಭ.

hand care
 

ಮಾಯಿಶ್ಚರೈಸರ್
ಹೆಚ್ಚಿನ ಎಲ್ಲಾ ವಿಧದ ಚರ್ಮಗಳಿಗೆ ಮಾಯಿಶ್ಚರೈಸರ್ ಬೇಕಾಗುತ್ತದೆ. ಇದನ್ನು ನೈಸರ್ಗಿಕ ರೀತಿಯಿಂದ ಮಾಡಿಕೊಂಡರೆ ಒಳ್ಳೆಯದು. ಬೆಣ್ಣೆ, ರೋಸ್ ವಾಟರ್, ಜೇನು ಮತ್ತು ಸಾರಭೂತ ತೈಲವು ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ಫಲಿತಾಂಶ ಕಾಣಬಹುದು.         ಹಳ್ಳಿ ಮದ್ದಿನ ಬ್ಯೂಟಿ ಟಿಪ್ಸ್‌ನಲ್ಲಿ ಖಂಡಿತ ಮೋಸವಿಲ್ಲ...

ಸುಟ್ಟ ಗಾಯಗಳಿಗೆ
ಸಣ್ಣಪುಟ್ಟ ಸುಟ್ಟ ಗಾಯಗಳಿಗೆ ಬೆಣ್ಣೆ ಒಳ್ಳೆಯ ಮನೆಮದ್ದು. ಸುಟ್ಟ ಗಾಯಗಳನ್ನು ಪರಿಣಾಮಕಾರಿಯಾಗಿ ಇದು ನಿವಾರಣೆ ಮಾಡುವುದು. ಇದು ಗಾಯದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಿಕೊಂಡು ಚರ್ಮವನ್ನು ತಂಪಾಗಿಸುವುದು.

wounded
 

ಒಡೆದ ಪಾದಗಳಿಗೆ
ಪಾದಗಳು ಒಡೆದು ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳಲು ಹಲವಾರು ಕಾರಣಗಳು ಇವೆ. ಅದರಲ್ಲಿ ಪ್ರಮುಖ ಕಾರಣವೆಂದರೆ ಒಣಚರ್ಮ ಹಾಗೂ ವಾತಾವರಣದಲ್ಲಿನ ಬದಲಾವಣೆ. ಒಡೆದ ಪಾದಗಳಿಂದಾಗಿ ತುಂಬಾ ನೋವಾಗುತ್ತಾ ಇದ್ದರೆ ಬೆಣ್ಣೆಯ ಚಿಕಿತ್ಸೆ ನೀಡಿ ಒಡೆದ ಪಾದಗಳಿಂದ ಮುಕ್ತಿ ಪಡೆಯಿರಿ.

feet care
 

ಕಪ್ಪು ಕಲೆಗಳಿಗೆ
ಮುಖದಲ್ಲಿ ಕೆಲವೊಂದು ಕಾರಣಗಳಿಂದ ಮೂಡುವಂತಹ ಕಪ್ಪು ಕಲೆಗಳನ್ನು ಬೆಣ್ಣೆಯ ಬಳಕೆಯಿಂದ ನಿವಾರಣೆ ಮಾಡಬಹುದು. ರಾತ್ರಿ ವೇಳೆ ಮುಖಕ್ಕೆ ಬೆಣ್ಣೆ ಹಚ್ಚಿಕೊಂಡರೆ ಕಪ್ಪು ಕಲೆಗಳ ನಿವಾರಿಸಲು ಸಾಧ್ಯ. ಬೆಣ್ಣೆಯನ್ನು ಚರ್ಮದ ಆರೈಕೆಗೆ ಬಳಸಿಕೊಂಡು ಆರೋಗ್ಯಕರ ಚರ್ಮವನ್ನು ಪಡೆಯಿರಿ.   ಮುಖದಲ್ಲಿ ಕಾಡುವ ಕಪ್ಪು ಕಲೆಗಳಿಗೆ ಇಲ್ಲಿದೆ ಪರಿಹಾರ

Story first published: Saturday, September 24, 2016, 10:10 [IST]
English summary

Benefits Of Butter For Skin Care

Do you know that there are many benefits of Butter for skin? Lets know how in this article. Butter is the fat left over, when all the moisture in the butter is removed completely. this is simply referred to as clarified Butter. Butter is an excellent moisturiser for your skin and it will thus help to treat almost all problems associated with dry skin. have a look
Please Wait while comments are loading...
Subscribe Newsletter