ಅಂದವನ್ನು ಇಮ್ಮಡಿಸಲು 'ಬೀಟ್‌ರೂಟ್' ಫೇಸ್ ಪ್ಯಾಕ್ ಪ್ರಯತ್ನಿಸಿ

ಬಣ್ಣ ಕೆಂಪಗಿದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನವರು ಬೀಟ್‌ರೂಟ್ ಅಂದಾಕ್ಷಣ ಮುಖ ಸಿಂಡರಿಸಿ ಬಿಡುತ್ತಾರೆ, ಆದರೆ ಇದರ ಪ್ರಯೋಜನಗಳನ್ನು ತಿಳಿದರೆ, ನಿಮಗೇ ಅಚ್ಚರಿಯಾಗಬಹುದು....

By: manu
Subscribe to Boldsky

ಕತ್ತರಿಸಿದಾಗ ಒಸರುವ ಕೆಂಪು ಬಣ್ಣವನ್ನು ಇಷ್ಟಪಡದೇ ಹೆಚ್ಚಿನವರು ಬೀಟ್ರೂಟ್ ಪದಾರ್ಥಗಳನ್ನು ತಿನ್ನುವುದಕ್ಕೇ ಹೋಗುವುದಿಲ್ಲ. ಆದರೆ ಬೀಟ್ರೂಟ್ ಜ್ಯೂಸ್ ಅನ್ನು ಕುಡಿಯುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಕರುಳುಗಳಲ್ಲಿನ ಕಲ್ಮಶಗಳನ್ನು ಹೊರಹಾಕುವುದು, ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು ಇತ್ಯಾದಿ. ಪೋಷಕಾಂಶಗಳ ಆಗರ ಕೆಂಪು ಕೆಂಪಾದ ಬೀಟ್‍ರೂಟ್‌  
 

ಆದರೆ ಈ ರಸಕ್ಕೆ ಮುಖದ ಸೌಂದರ್ಯವನ್ನೂ ಹೆಚ್ಚಿಸುವ ಗುಣವಿದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಮುಖದ ಸೂಕ್ಷರಂಧ್ರಗಳನ್ನು ಕಿರಿದಾಗಿಸುವುದು, ಚರ್ಮಕ್ಕೆ ಆರ್ದ್ರತೆಯನ್ನು ನೀಡುವ ಮೂಲಕ ಕಾಂತಿಯನ್ನು ಹೆಚ್ಚಿಸುವುದು ಮೊದಲಾದವುಗಳ ಮೂಲಕ ಮುಖದ ಸೂಕ್ಷ್ಮ ಚರ್ಮಕ್ಕೆ ಹೆಚ್ಚಿನ ಆರೈಕೆಯನ್ನು ನೀಡುತ್ತದೆ. ಗೌರವರ್ಣದ ತ್ವಚೆಗಾಗಿ ಪ್ರಯತ್ನಿಸಿ- ಬೀಟ್‌ರೂಟ್ ಜ್ಯೂಸ್

ಬೀಟ್ರೂಟ್‌ನಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣವಿದ್ದು ವಿಶೇಷವಾಗಿ ಉರಿಯೂತವನ್ನು ನಿವಾರಿಸುವ ಕ್ಷಮತೆ ಹೊಂದಿದೆ. ವಿಶೇಷವಾಗಿ ಮುಖದ ಚರ್ಮದ ಅಡಿಯಲ್ಲಿ ಬೀಡು ಬಿಟ್ಟಿರುವ ಬ್ಯಾಕ್ಟೀರಿಯಾಗಳನ್ನು ಒದ್ದು ಹೊರಹಾಕಿ ಇವು ಹಾನಿಗೊಳಿಸಿದ್ದ ಚರ್ಮಕ್ಕೆ ಹೊಸ ಕಳೆಯನ್ನು ನೀಡುತ್ತದೆ.

ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿರುವ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಟೇಷ್ಟಿತಗೊಳಿಸುವ ಮೂಲಕ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತದೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ. ಅಲ್ಲದೇ ಹಳೆಯ ಮೊಡವೆಗಳ ಕಲೆಯನ್ನು ತಿಳಿಗೊಳಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್   

ಒಂದು ವೇಳೆ ಮೇಕಪ್ ಇಲ್ಲದೆಯೇ ನಿಮ್ಮ ಚರ್ಮ ಕೋಮಲವಾಗಿ ಗುಲಾಬಿ ಬಣ್ಣದಿಂದ ಕಂಗೊಳಿಸಬೇಕು ಎಂದಿದ್ದರೆ ಕೆಳಗೆ ನೀಡಿರುವ ಮುಖಲೇಪಗಳಲ್ಲಿ ನಿಮಗೆ ಸೂಕ್ತವೆನಿಸಿದ್ದನ್ನು ಆಯ್ದುಕೊಂಡು ನಿಯಮಿತವಾಗಿ ಅನುಸರಿಸುತ್ತಾ ಬಂದರೆ ಅದ್ಭುತ ಪರಿಣಾಮಗಳನ್ನು ಪಡೆಯಬಹುದು. ಆದರೆ ಇದರ ಪೂರ್ಣ ಪರಿಣಾಮ ಪಡೆಯಲು ನಿತ್ಯವೂ ಕೊಂಚ ಬೀಟ್ರೂಟ್ ರಸವನ್ನು ಸೇವಿಸುವುದೂ ಅಗತ್ಯ.... 

 

ತಕ್ಷಣ ಚರ್ಮದ ಕಾಂತಿ ಹೆಚ್ಚಿಸಲು

ಎರಡು ದೊಡ್ಡಚಮಚ ಬೀಟ್ರೂಟ್ ರಸವನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ ಇದಕ್ಕೆ ಒಂದು ಚಿಕ್ಕಚಮಚ ಜೇನು ಹಾಕಿ ಬೆರೆಸಿ. ಒಂದು ಹತ್ತಿಯುಂಡೆಯನ್ನು ಈ ದ್ರಾವಣದಲ್ಲಿ ಮುಳುಗಿಸಿ ಮುಖದ, ಕುತ್ತಿಗೆಯ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ.

ತಕ್ಷಣ ಚರ್ಮದ ಕಾಂತಿ ಹೆಚ್ಚಿಸಲು

ಈ ಲೇಪವನ್ನು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಒದ್ದೆಯಾಗಿಸಿದ ಹತ್ತಿಯ ಬಟ್ಟೆಯನ್ನು ಬಳಸಿ ಒರೆಸಿಕೊಳ್ಳಿ.

ಕಣ್ಣುಗಳ ಕೆಳಗಿನ ಕಪ್ಪು ಕಲೆಗಳಿಗೆ

ಒಂದು ಚಿಕ್ಕ ಚಮಚ ಬೀಟ್ರೂಟ್ ರಸಕ್ಕೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹಚ್ಚಿ. ನಯವಾದ ಮಸಾಜ್ ಮೂಲಕ ಕಣ್ಣುಗಳ ಕೆಳಗಿನ ಭಾಗಕ್ಕೆ ದಪ್ಪನಾಗಿ ಹಚ್ಚಿ. ಈ ಲೇಪನ ಸುಮಾರು ಅರ್ಧ ಗಂಟೆಯಾದರೂ ಹೀಗೇ ಇರುವಂತೆ ಮಾಡಿ. ಬಳಿಕ ತಣ್ಣೀರಿನಿಂದ ಒದ್ದೆಯಾಗಿಸಿದ ಹತ್ತಿಯ ಟವೆಲ್ಲಿನಿಂದ ಒರೆಸಿಕೊಳ್ಳಿ.

ತುಟಿಗಳು ತುಂಬಿಕೊಂಡಿರುವಂತೆ ಮಾಡಲು

ತುಟಿಗಳು ತುಂಬಿಕೊಂಡಿರುವಂತೆ ಹಾಗೂ ಗುಲಾಬಿ ಬಣ್ಣ ಹೊಂದಿರುವಂತೆ ಮಾಡಲು ಈ ಸರಳ ವಿಧಾನ ಅನುಸರಿಸಿ: ಒಂದು ದೊಡ್ಡ ಚಮಚ ಈಗತಾನೇ ಸಂಗ್ರಹಿಸಿದ ಬೀಟ್ರೂಟ್ ರಸವನ್ನು ಫ್ರೀಜರಿನೊಳಗೆ ಅರ್ಧ ಗಂಟೆ ಇಡಿ. ಬಳಿಕ ಇದು ಮಂಜುಗಡ್ಡೆಯಂತಾಗುತ್ತದೆ. ಈ ಗಡ್ಡೆಯಿಂದ ಮಲಗುವ ಮುನ್ನ ನಿಮ್ಮ ತುಟಿಗಳನ್ನು ಸವರಿಕೊಳ್ಳಿ.

ತುಟಿಗಳು ತುಂಬಿಕೊಂಡಿರುವಂತೆ ಮಾಡಲು

ರಾತ್ರಿಯಿಡೀ ಈ ದ್ರವದ ಲೇಪನ ಹಾಗೇ ಇರಲಿ. ಮರುದಿನ ಬೆಳಿಗ್ಗೆ ಒಣಗಿರುವ ಮೃದುವಾದ ಟವೆಲ್ ಉಪಯೋಗಿಸಿ ಒರೆಸಿಕೊಳ್ಳಿ. ಪ್ರತಿನಿತ್ಯವೂ ಈ ವಿಧಾನ ಅನುಸರಿಸುತ್ತಿದ್ದರೆ ಕೆಲವೇ ದಿನಗಳಲ್ಲಿ ತುಟಿಗಳು ಎಲ್ಲರ ಆಕರ್ಷಣೆಯ ಬಿಂದುವಾಗುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು

ಸಮಪ್ರಮಾಣದಲ್ಲಿ ಬೀಟ್ರೂಟ್ ಮತ್ತು ಕಿತ್ತಳೆಯ ರಸಗಳನ್ನು ಬೆರೆಸಿ. ಈ ದ್ರಾವಣದಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ನಿಮ್ಮ ಮುಖ, ಕುತ್ತಿಗೆ, ಕೈಗಳ ಚರ್ಮಕ್ಕೆ ಹಚ್ಚಿಕೊಳ್ಳಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಒಣಗಲು ಬಿಡಿ.

ಚರ್ಮದ ಕಾಂತಿ ಹೆಚ್ಚಿಸಲು

ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ವಿಶೇಷವಾಗಿ ದಿನವಿಡೀ ಹೊರಗಿದ್ದು ಬಳಲಿರುವ ಚರ್ಮಕ್ಕೆ ಹೆಚ್ಚಿನ ಆರೈಕೆ ದೊರಕುತ್ತದೆ ಹಾಗೂ ಬಿಸಿಲಿಗೆ ಕಪ್ಪಗಾಗಿದ್ದ ಭಾಗ ಸಹಜವರ್ಣ ಪಡೆಯುತ್ತದೆ.

English summary

Beetroot Face Mask Recipes For That Rosy Glow!

We knew that beetroot juice cleanses the colon, purifies blood and stimulates blood flow. However, did you know that beetroot, when applied as a face mask, can breathe new life into your skin? From shrinking pores, lightening blemishes to giving skin an enviable glow, apparently there is much that beetroot can do!
Please Wait while comments are loading...
Subscribe Newsletter