For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಬೆಳ್ಳುಳ್ಳಿ ಬಳಸಿ ನಿಮ್ಮ ಸೌಂದರ್ಯ ಹೆಚ್ಚಿಸಿ!

ಬೆಳ್ಳುಳ್ಳಿಯು ತ್ವಚೆ ಹಾಗೂ ಕೂದಲನ್ನು ಆರೋಗ್ಯವಾಗಿಡಬಲ್ಲದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ತ್ವಚೆಯ ಆರೈಕೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುವುದು ಹೇಗೆಂದು ತಿಳಿಯುವ ಬನ್ನಿ, ಮುಂದೆ ಓದಿ....

By Hemanth
|

ಸಾಂಬಾರ ಪದಾರ್ಥಗಳಲ್ಲಿ ಪ್ರಮುಖವಾಗಿ ಬಳಸುವಂತಹ ಬೆಳ್ಳುಳ್ಳಿಯನ್ನು ಅದರ ಘಾಟು ವಾಸನೆಯಿಂದಾಗಿ ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿರುವ ಆರೋಗ್ಯ ಗುಣಗಳು ಅಪಾರವಾಗಿದೆ. ಬೆಳ್ಳುಳ್ಳಿಯು ಕರುಳನ್ನು ಸ್ವಚ್ಛಗೊಳಿಸಿ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿದೆ. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಬೆಳ್ಳುಳ್ಳಿಯು ತ್ವಚೆ ಹಾಗೂ ಕೂದಲನ್ನು ಆರೋಗ್ಯವಾಗಿಡಬಲ್ಲದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ತ್ವಚೆಯ ಆರೈಕೆಯಲ್ಲಿ ಬೆಳ್ಳುಳ್ಳಿಯನ್ನು ಬಳಸುವುದು ಹೇಗೆಂದು ತಿಳಿಯುವ ಮೊದಲು ಅದರಲ್ಲಿರುವ ಆರೋಗ್ಯಕಾರಿ ಗುಣಗಳು ಯಾವುದು ಮತ್ತು ಅದನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ತಿಳಿದುಕೊಳ್ಳುವ.

garlic

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಫಂಗಲ್ ವಿರೋಧಿ ಗುಣಗಳು ಇವೆ. ಈ ಗುಣಗಳಿಂದ ತುರಿಕಚ್ಚಿ ಹಾಗೂ ಕಚ್ಚಿ ಬೀಳುವುದನ್ನು ತಡೆಯಬಹುದು. ಇದರಲ್ಲಿ ಅಲಿಸಿನ್ ಮತ್ತು ಸೆಲೆನಿಯಂ ಅಂಶಗಳು ಹೆಚ್ಚಾಗಿರುವ ಕಾರಣದಿಂದ ತ್ವಚೆಯಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಿ ಕಲೆಗಳು ಮೂಡದಂತೆ ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿ ಇರುವಂತಹ ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಮೊಡವೆಗಳನ್ನು ಕಿರಿದಾಗಿಸುತ್ತದೆ. ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಗುಣಗಳಿವೆಯೇ? ನಂಬಿಕೆಯೇ ಬರುತ್ತಿಲ್ಲ!

ಇದು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುತ್ತದೆ. ಇದರಿಂದ ವಯಸ್ಸಾಗುವಂತಹ ಲಕ್ಷಣ ಮತ್ತು ನೆರಿಗೆ ಮೂಡದಂತೆ ತಡೆಯುತ್ತದೆ. ತ್ವಚೆಗೆ ಬೆಳ್ಳುಳ್ಳಿಯಿಂದ ಆರೈಕೆ ಮಾಡಿಕೊಳ್ಳುವ ಮೊದಲು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ಇದು ಪ್ರತಿಯೊಬ್ಬರ ತ್ವಚೆಗೂ ಹೊಂದಲ್ಲ.

ಸೂಕ್ಷ್ಮ ಚರ್ಮವನ್ನು ಹೊಂದಿರುವ ವ್ಯಕ್ತಿಗಳಿಗೆ ಇದರಿಂದ ಸಮಸ್ಯೆಯಾಗಬಹುದು. ಬೆಳ್ಳುಳ್ಳಿಯನ್ನು ತ್ವಚೆಗೆ ಹಚ್ಚಿಕೊಳ್ಳುವ ಮೊದಲು ಅದನ್ನು ದೇಹದ ಯಾವುದಾದರೂ ಭಾಗಕ್ಕೆ ಹಚ್ಚಿ ಪರೀಕ್ಷಿಸಿಕೊಳ್ಳಿ. ಈಗ ಬೆಳ್ಳುಳ್ಳಿಯನ್ನು ತ್ವಚೆಗೆ ಯಾವ ರೀತಿಯಿಂದ ಬಳಸಿಕೊಳ್ಳಬಹುದು ಎಂದು ನೋಡುವ....

ರಂಧ್ರಗಳನ್ನು ಕಿರಿದುಗೊಳಿಸುವುದು
ರಂಧ್ರಗಳು ತೆರೆದುಕೊಂಡಿದ್ದರೆ ಅದರಲ್ಲಿ ಧೂಳು ಹಾಗೂ ಬ್ಯಾಕ್ಟೀರಿಯಾ ಬಂದು ಸೇರಿಕೊಳ್ಳುವುದು. ಇದರಿಂದ ರಂಧ್ರಗಳನ್ನು ಮುಚ್ಚಬೇಕು. ಇದಕ್ಕಾಗಿ ಒಂದು ಚಮಚ ಟೊಮೆಟೋ ಪೇಸ್ಟ್, ಸಿಪ್ಪೆ ತೆಗೆದಿರುವ ಒಂದು ಬೆಳ್ಳುಳ್ಳಿ. ಇದನ್ನು ಪೇಸ್ಟ್ ಬರುವ ತನಕ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಹಚ್ಚಿಕೊಂಡು ಹಾಗೆ ಬಿಡಿ ಬಳಿಕ ತೊಳೆಯಿರಿ.

ಗುಳ್ಳೆಗಳನ್ನು ಒಣಗಿಸಲು
ಮುಖದಲ್ಲಿ ಮೊಡವೆಗಳು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ಇದಕ್ಕಾಗಿ ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಮತ್ತು ಅಷ್ಟೇ ಪ್ರಮಾಣದ ಬೆಳ್ಳುಳ್ಳಿ ಜ್ಯೂಸ್ ಅಥವಾ ಎಣ್ಣೆ ಹಾಕಿ. ಒಂದು ಹತ್ತಿ ಉಂಡೆಯನ್ನು ಬಳಸಿಕೊಂಡು ದಿನದಲ್ಲಿ ಹಲವಾರು ಬಾರಿ ಇದನ್ನು ಗುಳ್ಳೆಗಳಿಗೆ ಹಚ್ಚಿಕೊಳ್ಳಿ. ಸಂಪೂರ್ಣವಾಗಿ ಒಣಗಿದ ಬಳಿಕ ಇದನ್ನು ತೊಳೆಯಿರಿ. ಗುಳ್ಳೆಗಳನ್ನು ನಾಶ ಮಾಡಲು ಬೆಳ್ಳುಳ್ಳಿಯನ್ನು ಬಳಸಿ. ಒಂದು ವೇಳೆ ಚರ್ಮವು ಉರಿಯುಂಟು ಮಾಡುತ್ತಾ ಇದ್ದರೆ ತಕ್ಷಣ ತೊಳೆಯಿರಿ. ಶೀತ, ಕೆಮ್ಮು ದೂರವಿಡುವ ಬೆಳ್ಳುಳ್ಳಿ ರಸಂ

ಮೊಡವೆಗಳ ಚಿಕಿತ್ಸೆಗಾಗಿ
ಫುಲ್ಲರ್ ಅರ್ಥ್ ಮಣ್ಣನ್ನು ತೆಗೆದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಎಣ್ಣೆ ಮತ್ತು ರೋಸ್ ವಾಟರ್ ಹಾಕಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಮುಖವನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಸಂಪೂರ್ಣವಾಗಿ ಒಣಗಿದ ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಮೆತ್ತಗಿನ ಟವೆಲ್ ನಿಂದ ಮುಖ ಒರೆಸಿಕೊಳ್ಳಿ.

ತುರಿಕಚ್ಚಿ ನಿವಾರಣೆಗೆ


ಒಂದು ಚಮಚ ಬೆಳ್ಳುಳ್ಳಿ ಎಣ್ಣೆಯನ್ನು ಹತ್ತು ನಿಮಿಷ ಕಾಲ ಮಧ್ಯಮ ಬೆಂಕಿಯಲ್ಲಿ ಬಿಸಿ ಮಾಡಿ. ಬೆಂಕಿಯನ್ನು ನಂದಿ ಎಣ್ಣೆ ತಣ್ಣಗಾಗಲು ಬಿಡಿ. ಎಣ್ಣೆಯು ಉಗುರುಬೆಚ್ಚಗೆ ಇರುವಾಗ ಕೆಲವು ಹನಿ ಎಣ್ಣೆಯನ್ನು ಹತ್ತಿ ಉಂಡೆಗೆ ಹಾಕಿಕೊಳ್ಳಿ. ಎಣ್ಣೆಯನ್ನು ಹತ್ತಿ ಉಂಡೆಯಲ್ಲಿ ಹಚ್ಚಿಕೊಂಡ ಬಳಿಕ ದಿನಕ್ಕೆ ಎರಡು ಬಾರಿ ಅದನ್ನು ಹಚ್ಚಿಕೊಳ್ಳಿ. ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು
ಬೆಳ್ಳುಳ್ಳಿಯಲ್ಲಿರುವಂತಹ ಉನ್ನತ ಮಟ್ಟದ ಸಲ್ಫರ್ ಚರ್ಮದಲ್ಲಿನ ಕಾಲಜನ್ ಮಟ್ಟವನ್ನು ವೃದ್ಧಿಸಿ ಬಿಗಿಯಾಗಿಸುತ್ತದೆ. ಒಂದು ಮೊಟ್ಟೆಯ ಲೋಳೆ, ಐದು ಚಮಚ ಬಾದಾಮಿ ಎಣ್ಣೆ, ಒಣ ಬೆಳ್ಳುಳ್ಳಿಯ ಹುಡಿ ಹಾಕಿಕೊಂಡು ಕಲಸಿಕೊಂಡು ಸರಿಯಾಗಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸರಿಯಾಗಿ ಒಣಗಿದ ಬಳಿಕ ಅದನ್ನು ತಣ್ಣೀರಿನಿಂದ ತೊಳೆಯಿರಿ.

English summary

Beauty Uses Of Garlic; A Must Try!

Here are some off-beat beauty uses of garlic that you will thank us for! Before listing out these ingenious beauty uses of garlic, let us first understand the properties of garlic, and how exactly they can make a difference to your skin. So here is how to use garlic on the skin. Check it out!
X
Desktop Bottom Promotion