For Quick Alerts
ALLOW NOTIFICATIONS  
For Daily Alerts

ತ್ವಚೆಯ ಆರೈಕೆಗೆ ಲಿಂಬೆ ಮತ್ತು ಟೀ ಟ್ರೀ ಎಣ್ಣೆಯ ಜೋಡಿ

By Arshad
|

ನಿಮ್ಮ ಅಜ್ಜ ಅಜ್ಜಿಯರ ಮನೆಗೆ ಹೋದಾಗ ಅವರು ನಿಮಗೆ ತಮ್ಮ ಹಳೆಯ ಆಲ್ಬಂ ತೋರಿಸಿದ್ದಿರಬಹುದು. ಆಗ ಅವರ ಹರೆಯದ ದಿನಗಳಲ್ಲಿ ಅವರ ಚರ್ಮ ಎಷ್ಟು ನುಣುಪಾಗಿ, ಆರೋಗ್ಯಕರವಾಗಿತ್ತೆಂದು ಗಮನಿಸಿದ್ದೀರಾ? ಅದೂ ಮೇಕಪ್ ಇಲ್ಲದೇ? ಕಾಸ್ಮೆಟಿಕ್ ಸರ್ಜರಿ, ದುಬಾರಿ ಪ್ರಸಾಧನಗಳಿಲ್ಲದಿದ್ದ ಅಂದಿನ ದಿನಗಳಲ್ಲಿ ಇವರಿಗೆ ಅಂತಹ ಬೆಡಗಿನ ಚರ್ಮವನ್ನು ಪಡೆಯಲು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡುತ್ತಿದ್ದೀರಾ? ಹಿಂದಿನ ದಿನಗಳಲ್ಲಿ ಈ ದುಬಾರಿ ಪ್ರಸಾಧನಗಳು ಇಲ್ಲದಿದ್ದುದೇ ಒಂದು ವರವಾಗಿತ್ತು.

Beauty tips: Use Lemon And Tea Tree Oil for glowing tips

ಆ ಕಾಲದಲ್ಲಿ ಎಲ್ಲರೂ ನೈಸರ್ಗಿಕ ಸೌಂದರ್ಯವರ್ಧಕಗಳನ್ನೇ ಉಪಯೋಗಿಸುತ್ತಿದ್ದರು. ಚರ್ಮ ಮತ್ತು ಕೂದಲ ಆರೈಕೆಗಾಗಿ ನೈಸರ್ಗಿಕ ಎಣ್ಣೆ ಮತ್ತು ಸುಲಭವಾಗಿ ಸಿಗುವ ಅಡುಗೆಮನೆಯ ಸಾಮಾಗ್ರಿಗಳನ್ನೇ ಬಳಸಿಕೊಳ್ಳುತ್ತಿದ್ದರು. ಇವು ತಲತಲಾಂತರದಿಂದ ಅನುಸರಿಸಿಕೊಂಡು ಪ್ರಮಾಣಿಸಲ್ಪಟ್ಟ ವಿಧಾನಗಳಾಗಿದ್ದು ಯಾವುದೇ ಅಳುಕಿಲ್ಲದೇ, ಯಾವುದೇ ಅಡ್ಡಪರಿಣಾಮಗಳಿಲ್ಲದ ಪರಿಣಾಮವಾಗಿ ಕಾಂತಿಯುಕ್ತ ಚರ್ಮ ಮತ್ತು ಹೊಳಪಿನ ಕೂದಲು ಇವರದ್ದಾಗಿರುತ್ತಿತ್ತು. ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!

ಈ ಪ್ರಸಾಧನಗಳ ಉತ್ತಮ ಗುಣವೆಂದರೆ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವುದು. ಆದರೆ ಇದರಲ್ಲಿರುವ ಏಕಮಾತ್ರ ಕೊರತೆ ಎಂದರೆ ಇವುಗಳ ಪ್ರಭಾವ ಕಂಡುಬರಲು ಕೊಂಚ ಹೆಚ್ಚಿನ ಅವಧಿ ಹಿಡಿಯುವುದು. ಇಂದಿನ ನಾಗಾಲೋಟದ ಕಾಲದಲ್ಲಿ ಇಷ್ಟು ಕಾಯುವ ಸಂಯಮ ಯಾರಿಗೂ ಇಲ್ಲ. ಇದನ್ನೇ ಹಣಮಾಡುವ ಅವಕಾಶವನ್ನಾಗಿಸಿರುವ ಇಂದಿನ ಸೌಂದರ್ಯ ಪ್ರಸಾಧನ ಸಂಸ್ಥೆಗಳು ಥಟ್ಟನೇ ಫಲಿತಾಂಶ ಒದಗಿಸುವ ಪ್ರಸಾಧನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಇವು ಥಟ್ಟನೆ ಪ್ರಭಾವ ಬೀರಿದರೂ, ಕಾಲಕ್ರಮೇಣ ಇದರ ಅಡ್ಡಪರಿಣಾಮ ಚರ್ಮ ಮತ್ತು ಕೂದಲುಗಳಿಗೆ ವಿಪರೀತವಾಗಬಹುದು. ಚರ್ಮದ ಆರೈಕೆಗೆ ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಒಂದು ವಿಧಾನವೆಂದರೆ ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆ.

ತ್ವಚೆಯ ಆರೈಕೆಗೆ ಲಿಂಬೆ ಮತ್ತು ಟೀ ಟ್ರೀ ಎಣ್ಣೆಯ ಜೋಡಿ

ಒಂದು ಚಿಕ್ಕ ಬೋಗುಣಿಯಲ್ಲಿ ತಲಾ ಎರಡು ಚಿಕ್ಕಚಮಚ ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆ ಸೇರಿಸಿ ಬಿಸಿಲಿಗೆ ಒಡ್ಡುವ ಚರ್ಮದ ಭಾಗಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಸಾಕು, ಕೆಲವೇ ದಿನಗಳಲ್ಲಿ ಚರ್ಮ ಅತ್ಯುತ್ತಮ ಸೆಳೆತ ಹಾಗೂ ಕಾಂತಿಯನ್ನು ಪಡೆಯುತ್ತದೆ. ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿದರೆ ಯಾವ ಪ್ರಯೋಜನಗಳಿವೆ ಎಂಬುದನ್ನು ಮುಂದೆ ಓದಿ... ಸೌಂದರ್ಯವನ್ನು ವೃದ್ಧಿಸುವ ಅದ್ಭುತ ಗುಣ ಲಿಂಬೆ ಹಣ್ಣಿನಲ್ಲಿದೆ!

ಮೊಡವೆಗಳನ್ನು ಕಡಿಮೆ ಮಾಡುತ್ತದೆ

ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆಯ ಸಂಯೋಜನೆಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣವಿರುವ ಕಾರಣ ಇವು ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಂದು ಮೊಡವೆ ಮೂಡುವ ಸಂಭವ ಕಡಿಮೆಯಾಗಿಸುತ್ತವೆ. ಒಂದು ವೇಳೆ ಈ ಮಿಶ್ರಣದೊಂದಿಗೆ ಕೊಂಚ ಜೇನು ಬೆರೆಸಿದರೆ ಇದು ಚರ್ಮದ ಅಡಿಯಲ್ಲಿ ಚರ್ಮಕ್ಕೆ ಸೆಳೆತ ನೀಡುವ ಕೊಲ್ಯಾಜೆನ್ ಎಂಬ ಕಣಗಳನ್ನು ಹೆಚ್ಚು ಉತ್ಪತ್ತಿ ಮಾಡಲು ನೆರವಾಗುತ್ತದೆ. ಕೊಲ್ಯಾಜೆನ್ ಹೆಚ್ಚಾದಷ್ಟೂ ಚರ್ಮದ ಸೆಳೆತ ಹೆಚ್ಚಾಗಿ ನೆರಿಗೆ, ಸೂಕ್ಷ್ಮ ಗೆರೆಗಳು ಮೊದಲಾದವು ಮೂಡುವುದನ್ನು ಮುಂದೂಡಬಹುದು.

ಚರ್ಮದ ವರ್ಣವನ್ನು ಸಹಜವರ್ಣದತ್ತ ತರುತ್ತದೆ

ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆಯ ಸಂಯೋಜನೆಯಲ್ಲಿ ನೈಸರ್ಗಿಕ ಬಿಳಿಚುಕಾರಕ ಗುಣವೂ ಇದೆ. ಇದು ಚರ್ಮವನ್ನು ಯಾವುದೇ ಹಾನಿಯಿಲ್ಲದೇ ಬಿಳಿಚಿಸುವ ಮೂಲಕ ಚರ್ಮ ಕೆಲವೇ ದಿನಗಳಲ್ಲಿ ಸಹಜವರ್ಣ ಪಡೆಯುವುದನ್ನು ಕಾಣಬಹುದು. ಅಲ್ಲದೇ ವಯೋಸಹಜ ಗುರುತುಗಳು, ಸೂಕ್ಷ್ಮವಾದ ಕಲೆಗಳು, ಕಪ್ಪು ಮಚ್ಚೆಗಳು ಮೊದಲಾದವುಗಳನ್ನೂ ನಿಧಾನವಾಗಿ ಹಿಮ್ಮೆಟ್ಟಿಸುತ್ತದೆ.

ಉರಿಯನ್ನು ಕಡಿಮೆ ಮಾಡುತ್ತದೆ

ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆಯಲ್ಲಿರುವ ಪ್ರತಿಜೀವಕ ಗುಣ ಚರ್ಮದ ಸೂಕ್ಷ್ಮ ಗಾಯಗಳನ್ನು ತುಂಬಲು ನೆರವಾಗುತ್ತದೆ. ಪರಿಣಾಮವಾಗಿ ಉರಿ ಮತ್ತು ತುರಿಕೆಯನ್ನು ಇಲ್ಲವಾಗಿಸುತ್ತದೆ.

ಉತ್ತಮ ಟೋನರ್ ಆಗಿದೆ

ಚರ್ಮದಿಂದ ಎಣ್ಣೆಯ ಪಸೆಯನ್ನು ನಿವಾರಿಸುವ ದ್ರವಕ್ಕೆ ಟೋನರ್ ಎಂದು ಕರೆಯುತ್ತಾರೆ. ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆಯ ಸಂಯೋಜನೆ ಉತ್ತಮ ಟೋನರ್ ಸಹಾ ಆಗಿದ್ದು ಎಣ್ಣೆಪಸೆಯನ್ನು ನಿವಾರಿಸುವುದು ಮಾತ್ರವಲ್ಲ, ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸಿ ಇನ್ನಷ್ಟು ಎಣ್ಣೆ ಒಸರದಂತೆ ತಡೆಯುತ್ತದೆ ಹಾಗೂ ಚರ್ಮ ಇನ್ನಷ್ಟು ನುಣುಪಾಗಿರುವಂತೆ ಮಾಡುತ್ತದೆ.

ಚರ್ಮವನ್ನು ಸ್ವಚ್ಛಗೊಳಿಸುತ್ತದೆ

ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆ ಚರ್ಮದ ಸೂಕ್ಷ್ಮರಂಧ್ರಗಳ ಒಳಗೆ ಇಳಿದು ಒಳಗಿದ್ದ ಕಲ್ಮಶ ಮತ್ತು ಸೂಕ್ಷ್ಮ ಜೀವಿಗಳನ್ನು ಹೊರಹಾಕುವ ಕ್ಷಮತೆ ಹೊಂದಿದೆ. ಇದರಿಂದ ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಿದಂತಾಗುತ್ತದೆ. ಮೊಡವೆ ಹಾಗೂ ಕಲೆಯ ನಿವಾರಣೆಗೆ ಲಿಂಬೆ ರಸದ ಬಳಕೆ ಹೇಗೆ?

ಚರ್ಮಕ್ಕೆ ಪೋಷಣೆ ಮತ್ತು ಆರೈಕೆ ನೀಡುತ್ತದೆ

ಒಂದು ವೇಳೆ ಚರ್ಮದ ಮೇಲೆ ಯಾವುದಾದರೂ ಗಾಯ, ಕೀಟಕಡಿತ, ಮೊಡವೆ, ಹುಳಕಡ್ಡಿ ಮೊದಲಾದ ತೊಂದರೆ ಅಥವಾ ಸೋಂಕು ಆವರಿಸಿದ್ದರೆ ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆ ಇದಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ. ವಿಶೇಷವಾಗಿ ತುರಿಕೆ ಉಂಟುಮಾಡುವ ಹುಳಕಡ್ಡಿ, ನೋವಿನಿಂದ ಕೂಡಿದ ಕಾಲಿನ ಆಣಿ ಮೊದಲಾದವುಗಳಿಗೆ ಹತ್ತಿಯಲ್ಲಿ ಲಿಂಬೆರಸ ಮತ್ತು ಟೀ ಟ್ರೀ ಎಣ್ಣೆಯನ್ನು ಕೊಂಚ ಅದ್ದಿ ಪ್ಲಾಸ್ಟರ್ ಮೂಲಕ ಅಂಟಿಸಿಟ್ಟರೆ ಒಂದೆರಡೇ ದಿನಗಳಲ್ಲಿ ಇವು ಗುಣವಾಗುತ್ತಾ ಹೋಗುತ್ತವೆ.

English summary

Beauty tips: Use Lemon And Tea Tree Oil for Glowing Skin

Did you know that the combination of tea tree oil and lemon juice has numerous skin benefits? Just mix 2 teaspoons of tea tree oil with 2 teaspoons of lemon juice in a mixing bowl, apply the mixture on the desired area of your skin, leave it on for 15 minutes and rinse it off with lukewarm water. By doing this regularly, you can see a lot of positive changes in your skin. Find out what they are, here!
X
Desktop Bottom Promotion