ಮುಖದ ಅಂದಕ್ಕೆ- ಬಾಳೆ ಹಣ್ಣಿನ ಫೇಸ್ ಪ್ಯಾಕ್....

By: Hemanth
Subscribe to Boldsky

ನಿಸರ್ಗ ಪ್ರತಿ ಹಣ್ಣು ತರಕಾರಿಯಲ್ಲಿಯೂ ಪ್ರತ್ಯೇಕವಾದ ಪೋಷಕಾಂಶಗಳನ್ನು ನೀಡಿದೆ. ಆದರೆ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಬಹುತೇಕ ಎಲ್ಲವನ್ನೂ ಕೆಲವು ಹಣ್ಣು ತರಕಾರಿಗಳಲ್ಲಿ ಮಾತ್ರ ಇರಿಸಿದೆ. ಬಾಳೆಹಣ್ಣು ಕೂಡ ಇಂತಹ ಒಂದು ಹಣ್ಣಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಮತ್ತು ನೈಸರ್ಗಿಕ ಸಕ್ಕರೆ ಇದೆ.   ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಬಾಳೆಹಣ್ಣು, ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯದ ವಿಷಯದಲ್ಲೂ ತಾನೂ ಏನು ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದೆ...! ಬನ್ನಿ ಇಂದು ಬೋಲ್ಡ್ ಸ್ಕೈ ಬಾಳೆಹಣ್ಣಿನಿಂದ ಮಾಡುವಂತಹ ಕೆಲವೊಂದು ಫೇಸ್ ಪ್ಯಾಕ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ... 

ಮಾಗಿದ ಅರ್ಧ ಬಾಳೆಹಣ್ಣು....

ಮಾಗಿದ ಅರ್ಧ ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಳ್ಳಿ. ಇದನ್ನು ನಿಮ್ಮ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20-25 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮಾಗಿದ ಅರ್ಧ ಬಾಳೆಹಣ್ಣು....

ಇದು ನೈಸರ್ಗಿಕವಾಗಿ ಚರ್ಮಕ್ಕೆ ತೇವಾಂಶವನ್ನು ನೀಡುವುದಲ್ಲದೆ, ಚರ್ಮವು ಒಣ ಹಾಗೂ ಪೇಲವಗೊಂಡಿದ್ದರೆ ಜೇನುತುಪ್ಪ ಸೇರಿಸಿಕೊಂಡು ಹಚ್ಚಿಕೊಳ್ಳಿ. ಬಾಳೆಹಣ್ಣು ಕಪ್ಪು ಕಳೆಗಳನ್ನು ತೆಗೆದುಹಾಕುವುದು.

ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣು....

ಸರಿಯಾಗಿ ಹಣ್ಣಾಗಿರುವ ಒಂದು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಎರಡು ಚಮಚ ನಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಉಗುರು ಬೆಚ್ಚಗಿನ     ನೀರಿನಿಂದ ತೊಳೆಯಿರಿ. ಕಾಂತಿಯುತ ಮುಖವು ನಿಮ್ಮದಾಗುವುದು. ಇದು ಕಳೆಗಳನ್ನು ನಿವಾರಿಸುವುದು.

ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣು

ಅವಕಾಡೋ ಅಥವಾ ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣನ್ನು ಸರಿಯಾಗಿ ಹಿಚುಕಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಬಳಿಕ ತೊಳೆಯಿರಿ. ಇದನ್ನು ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು. ಈ ಪ್ಯಾಕ್ ಅನ್ನು ಪ್ರಯತ್ನಿಸಿ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಿ.

ಅರ್ಧ ಬಾಳೆಹಣ್ಣು....

ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಊದಿಕೊಂಡಿರುವ ಕಣ್ಣೆಗೆ ಹಚ್ಚಿಕೊಳ್ಳಿ. 10-15 ನಿಮಿಷ ಹಾಗೆ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ.

ಬಾಳೆಹಣ್ಣು+ಸಕ್ಕರೆ

ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿಕೊಂಡು ಅದಕ್ಕೆ ಸಕ್ಕರೆ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ. ಬಳಿಕ ಮುಖ ತೊಳೆಯಿರಿ. ಇದು ನೈಸರ್ಗಿಕ ಸ್ಕ್ರಬ್. ಬಾಳೆಹಣ್ಣು ಮಾಯಿರೈಸರ್ ನಂತೆ ಕೆಲಸ ಮಾಡುತ್ತದೆ ಮತ್ತು ಸಕ್ಕರೆ ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ.

 

Story first published: Wednesday, September 21, 2016, 13:19 [IST]
English summary

Banana Face Masks For A Glowing Skin

Banana is a great fruit that is available all throughout the year. It is extremely rich in some vital nutrients and vitamins. They also save our skin from the free radicals and hence help stop premature aging. You can eat a banana and at the same time apply it on your skin as a natural face mask. Here are a few natural face masks that can be made using banana as the main ingredient.
Please Wait while comments are loading...
Subscribe Newsletter