For Quick Alerts
ALLOW NOTIFICATIONS  
For Daily Alerts

ಆಯುರ್ವೇದ ಚಿಕಿತ್ಸೆಯಿಂದ ಮುಖದ ಅಂದ ವೃದ್ಧಿಸಿ!

By Jaya subramanya
|

ಸುಂದರವಾದ ಮೈಕಾಂತಿಯನ್ನು ಪಡೆಯುವುದು ಎಲ್ಲಾ ಹೆಂಗಳೆಯರ ಬಯಕೆಯಾಗಿರುತ್ತದೆ. ಇದಕ್ಕೆಂದೇ ಅವರುಗಳು ಮಾರುಕಟ್ಟೆಯಲ್ಲಿ ಬರುವ ಸೌಂದರ್ಯ ಪ್ರಸಾಧನಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಟಿವಿಯಲ್ಲಿ ಬರುವ ಯಾವುದೇ ಸೌಂದರ್ಯ ಜಾಹೀರಾತುಗಳಿರಲಿ ಅದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುವುದನ್ನು ಮಾತ್ರ ಬಿಡುವುದಿಲ್ಲ ಅಂತೆಯೇ ಅದನ್ನು ತಮ್ಮ ಮೇಲೆ ಪ್ರಯೋಗಿಸುವ ಕಾರ್ಯವನ್ನು ನಡೆಸದಿರುವುದಿಲ್ಲ. ಆದರೆ ನೀವು ಮಾಡುವ ಈ ಪ್ರಯತ್ನಗಳೆಲ್ಲವೂ ನಿಷ್ಪ್ರಯೋಜಕ ಎಂಬುದು ನಿಮಗೆ ಗೊತ್ತಿದ್ದರೂ ನೀವು ಛಲಬಿಡದ ತ್ರಿವಿಕ್ರಮನಂತೆ ಪ್ರಯೋಗ ಕಾರ್ಯವನ್ನು ಮುಂದುವರಿಸುತ್ತಲೇ ಇರುತ್ತಾರೆ.

Ayurvedic Home Remedies To Get Fair Skin

ಹಾಗಾದರೆ ಸೌಂದರ್ಯದ ಕುಂದು ಕೊರತೆಗಳನ್ನು ಮಟ್ಟ ಹಾಕಲು ಬೇರೆ ಯಾವುದಾದರೂ ಮಾರ್ಗವಿದೆಯೇ ಎಂಬುದಾಗಿ ಯೋಚಿಸಿ ಕಂಗಾಲಾಗಿದ್ದೀರಾ? ಆಯುರ್ವೇದದಲ್ಲಿ ನಿಮ್ಮ ಯಾವುದೇ ತ್ವಚೆಯ ಸಮಸ್ಯೆಗಳಿಗೆ ಪರಿಹಾರವಿದ್ದು ಅವುಗಳನ್ನು ಪ್ರಯೋಗಿಸುವ ಮೂಲಕ ಸಂಪೂರ್ಣ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ. ಅನಾದಿ ಕಾಲದ ವಿಜ್ಞಾನ ಎಂದೆನಿಸಿರುವ ಆಯುರ್ವೇದದಲ್ಲಿ ಯಾವುದೇ ಬಗೆಯ ಸಮಸ್ಯೆಗಳಿಗೂ ಪರಿಹಾರವಿದೆ. ಅಂತೆಯೇ ಈ ಪರಿಹಾರಗಳು ರಾಸಾಯನಿಕ ಮುಕ್ತವಾಗಿದ್ದು ಶಾಶ್ವತವಾಗಿ ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತವೆ. ಮೊಡವೆಯ ಹುಟ್ಟಡಗಿಸುವ-ಅರಿಶಿನದ ಫೇಸ್ ಪ್ಯಾಕ್

ಈ ಆಯುರ್ವೇದ ಸಿದ್ಧೌಷಧಗಳನ್ನು ನೀವು ಹುಡುಕುತ್ತಾ ಕಾಡು ಮೇಡು ಅಲೆಯಬೇಕೆಂದೇನಿಲ್ಲ. ಅಂತೆಯೇ ನಿಮ್ಮ ಬಿಡುವಿಲ್ಲದ ಸಮಯವನ್ನು ವ್ಯಯಿಸುವ ಅವಶ್ಯಕತೆಯೂ ಇಲ್ಲ. ಮನೆಯಂಗಳದಲ್ಲೇ ದೊರೆಯುವ ಸಸ್ಯಸಂಪತ್ತನ್ನು ಬಳಸಿ ಗೌರವರ್ಣ ಪಡೆಯಬಹುದಾಗಿದೆ. ಮುಖದ ಮೊಡವೆ, ಕಲೆಗಳು ಮತ್ತು ತುರಿಕೆ ಮೊದಲಾದ ತ್ವಚೆಯ ನಾನಾ ಸಮಸ್ಯೆಗಳನ್ನು ನಿವಾರಿಸಿ ನಿಮ್ಮನ್ನು ಸುಂದರಿಯನ್ನಾಗಿಸುತ್ತದೆ. ಹಾಗಿದ್ದರೆ ಬನ್ನಿ ಆ ಸಸ್ಯಸಂಪತ್ತುಗಳು ಯಾವುವು ಮತ್ತು ಅವುಗಳ ಬಳಕೆ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಹಳದಿ (ಅರಿಶಿನ)
ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಅರಶಿನ ಒಳಗೊಂಡಿದ್ದು ನೈಸರ್ಗಿಕ ವರ್ಧಕ ಎಂದೆನಿಸಿದೆ. ಮೊಡವೆ, ತುರಿಕೆ ತ್ವಚೆಯ ಟ್ಯಾನ್ ಇದ್ದ ಸಂದರ್ಭದಲ್ಲಿ ಅರಶಿನವನ್ನು ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ.

ಅರಿಶಿನದ ಬಳಕೆ ಹೇಗೆ?
ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಕುತ್ತಿಗೆ ಮತ್ತು ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ನಿಮ್ಮ ಕಾಲುಗಳು ಮತ್ತು ಕೈಗಳಿಗೂ ಈ ಮಿಶ್ರಣವನ್ನು ಬಳಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ನಿಯಮಿತವಾಗಿ ಅರಿಶಿನವನ್ನು ಬಳಸುವುದು ನಿಮ್ಮ ತ್ವಚೆಗೆ ನೈಸರ್ಗಿಕ ಕಾಂತಿಯನ್ನು ತರಲಿದೆ.

ತ್ರಿವಿಯಾ
ಭಾರತೀಯ ವಿವಾಹ ಆಚರಣೆಗಳಲ್ಲಿ ಹಳದಿ ಶಾಸ್ತ್ರವಿದ್ದು ಅರಶಿನವನ್ನು ಇತರ ಆಯುರ್ವೇದಿಕ್ ಗಿಡಮೂಲಿಕೆಗಳೊಂದಿಗೆ ಬಳಸಿಕೊಳ್ಳಬಹುದು. ಈ ಮಿಶ್ರಣವನ್ನು ಹುಡುಗ ಮತ್ತು ಹುಡುಗಿಗೆ ಹಚ್ಚುತ್ತಾರೆ. ಅವರುಗಳ ಮಹತ್ವದ ದಿನದಂದು ಈ ಅರಿಶಿನ ಪ್ಯಾಕ್ ಸುಂದರ ಗೌರವರ್ಣವನ್ನು ನೀಡುತ್ತದೆ.

ಅಲೋವೆರಾ (ಲೋಳೆಸರ)
ಆಯುರ್ವೇದದಲ್ಲಿ ಗಿರಿತ್ ಕುಮಾರಿ ಎಂಬ ಹೆಸರನ್ನು ಪಡೆದುಕೊಂಡಿರುವ ಅಲೋವೇರಾ ನಿಮ್ಮ ತ್ವಚೆಗೆ ಕಮಾಲಿನ ಪರಿಣಾಮವನ್ನುಂಟು ಮಾಡುತ್ತದೆ. ನಿಮ್ಮ ತ್ವಚೆಯನ್ನು ಪುನರ್ಯವ್ವನಗೊಳಿಸುವುದು ಮಾತ್ರವಲ್ಲದೆ ನೈಸರ್ಗಿಕ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.

ಅಲೋವೆರಾವನ್ನು ಬಳಸುವುದು
ಕ್ರೀಮ್ ಮತ್ತು ಅಲೋವೆರಾದ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಶಿನವನ್ನು ಹಾಕಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಈ ಮಿಶ್ರಣವನ್ನು ಹಚ್ಚಿ. ಈ ಜೆಲ್‎ನಲ್ಲಿ ವಿಟಮಿನ್ ಸಿ ಇದ್ದು ಇದು ಬಿಳಿ ಕಾಂತಿಯನ್ನು ನಿಮಗೆ ದಯಪಾಲಿಸುತ್ತದೆ ಮತ್ತು ಪರಿಣಾಮಕಾರಿಯಾಗಿ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ. ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ಕೇಸರಿ
ಭಾರತೀಯರು ಹಲವಾರು ತಲೆಮಾರುಗಳಿಂದ ಕೇಸರಿಯನ್ನು ಬಳಸುತ್ತಿದ್ದೇವೆ ನಮ್ಮ ಆಹಾಕ್ಕೆ ಸುವಾಸನೆಯನ್ನು ಒದಗಿಸುವ ಕೇಸರಿಯು ಹೊಳೆಯುವ ತ್ವಚೆಯನ್ನು ದಯಪಾಲಿಸುವಲ್ಲೂ ಸಹಕಾರಿಯಾದುದು. ಇದರ ಒಂದೆರಡು ಎಸಳುಗಳನ್ನು ಬಳಸಿ ಸುಂದರ ಕಾಂತಿಯುಕ್ತ ತ್ವಚೆಯನ್ನು ಪಡೆದುಕೊಳ್ಳಬಹುದಾಗಿದೆ.

ಬಳಕೆ
ರಾತ್ತಿ ಪೂರ್ತಿ ಕೇಸರಿಯ ದಳವನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ, ಇದನ್ನು ಆಲೀವ್ ಆಯಿಲ್ ಅಥವಾ ಬಾದಾಮಿ ಎಣ್ಣೆ ಮತ್ತು ಹಾಲಿನಲ್ಲಿ ಮಿಶ್ರ ಮಾಡಿಕೊಳ್ಳಿ. ಹತ್ತಿಯುಂಡೆಯನ್ನು ಬಳಸಿ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ತರುವಾಯ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ 2-3 ಸಲ ಬಳಸುವುದರಿಂದ ನಿಮಗೆ ಹೊಳೆಯುವ ಕಾಂತಿಯುಕ್ತ ತ್ವಚೆಯನ್ನು ಇದು ಒದಗಿಸುತ್ತದೆ. ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ಕುಂಕುಮಾದಿ ತೈಲಂ
16 ಎಣ್ಣೆಗಳ ಮಿಶ್ರಣವಾಗಿ ಈ ತೈಲ. ಇದನ್ನು ಬಳಸುವುದರಿಂದ ಮುಖದಲ್ಲಿನ ಕಲೆಗಳು ಮಾಯವಾಗಿ ಟ್ಯಾನ್ ಹೋಗಿಬಿಡುತ್ತದೆ ನಿಮಗೆ ಹೊಳೆಯುವ ತ್ವಚೆಯನ್ನು ಇದು ನೀಡುತ್ತದೆ. ಈ ಎಣ್ಣೆಯನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಈ ಎಣ್ಣೆಯನ್ನು ಬಳಸಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಹಾಗೆಯೇ 20 ನಿಮಿಷಗಳ ಕಾಲ ಬಿಡಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಆಯುರ್ವೇದ ಉತ್ಪನ್ನಗಳ ಪ್ರಯೋಜನಗಳನ್ನು ಈ ಲೇಖನದಲ್ಲಿ ನಾವು ನೀಡಿದ್ದು ಇವುಗಳ ಬಳಕೆಯ ಮಹತ್ವವವನ್ನು ನೀವು ತಿಳಿದುಕೊಂಡಿರುತ್ತೀರಿ ಅಲ್ಲವೇ? ಹಾಗಿದ್ದರೆ ಇವುಗಳನ್ನು ಬಳಸಿ ಸುಂದರ ಮೈಕಾಂತಿಯನ್ನು ಪಡೆಯಲು ಮಾತ್ರ ಮರೆಯದಿರಿ.

English summary

Ayurvedic Home Remedies To Get Fair Skin

Switch any channel and you are sure to come across fairness cream ads claiming to give you beautiful and fair skin. Today, the market is replete with chemical creams that promise to enhance your fairness. These creams and masks often contain harmful bleaching agents that can harm skin in the long term. So today, boldsky will unearth some hidden secrets for glowing skin given to us by our forefathers. Here are some of the DIY Ayurvedic remedies to enhance your skin's complexion.
Story first published: Thursday, June 16, 2016, 20:34 [IST]
X
Desktop Bottom Promotion