For Quick Alerts
ALLOW NOTIFICATIONS  
For Daily Alerts

ಓಟ್ ಮೀಲ್ ಮ್ಯಾಜಿಕ್: ಏಳೇ ದಿನಗಳಲ್ಲಿ ಸೌಂದರ್ಯ ವೃದ್ಧಿ!

By Hemanth
|

ಬಿಳಿ ತೋಕೆ ಗೋಧಿಯಿಂದ ಮಾಡುವಂತಹ ಓಟ್ ಮೀಲ್ ಇಡೀ ಧಾನ್ಯವಾಗಿದ್ದು, ಇದರಲ್ಲಿ ಹೊಟ್ಟು ಹಾಗೂ ಮೊಳಕೆಯನ್ನು ಹಾಗೆ ಉಳಿಸಿಕೊಳ್ಳಲಾಗುತ್ತದೆ. ಈ ಕಾರಣದಿಂದಾಗಿ ಓಟ್ ಮೀಲ್ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ. ಓಟ್ ಮೀಲ್ ನಲ್ಲಿ ಹಲವಾರು ಆರೋಗ್ಯಕರ ಅನುಕೂಲಗಳಿದ್ದು, ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ, ಹೃದಯದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ದೇಹದ ಚಟುವಟಿಕೆ ಮತ್ತು ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುತ್ತದೆ.

An Ingredient That Offers Flawless Skin In A Week

ದೇಹವು ಅಧಿಕ ತೂಕ ಪಡೆಯದಂತೆ ತಡೆಯುವ ಕಾರಣದಿಂದಾಗಿ ಇದು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಹೌದು ಇಷ್ಟೆಲ್ಲಾ ಪೋಷಕಾಂಶಗಳು ಮತ್ತು ಆರೋಗ್ಯವೃದ್ಧಿಸುವ ಗುಣಗಳನ್ನು ಹೊಂದಿರುವ ಓಟ್ ಮೀಲ್ ಸೌಂದರ್ಯದ ವಿಷಯದಲ್ಲೂ ಹಿಂದೆ ಬಿದ್ದಿಲ್ಲಾ..! ನೈಸರ್ಗಿಕವಾಗಿ ದೊರೆಯುವ ನಾನಾ ಬಗೆಯ ಸಾಮಾಗ್ರಿಗಳನ್ನು ಬೆರೆಸಿಕೊಂಡು, ಓಟ್ ಮೀಲ್ ನಿಂದ ತಯಾರಿಸುವ ಮುಖ ಲೇಪನವು, ಬರೀ ಏಳೇ ದಿನದಲ್ಲಿ ಸೌಂದರ್ಯ ವೃದ್ಧಿಸುತ್ತದೆ! ಅಚ್ಚರಿಯಾಯಿತೇ?, ಹಾಗಾದರೆ ಮುಂದೆ ಓದಿ...

ಓಟ್ ಮೀಲ್, ಜೇನುತುಪ್ಪ ಮತ್ತು ರೋಸ್ ವಾಟರ್
ಚರ್ಮವನ್ನು ಸುಲಿದುಹಾಕಲು ಮತ್ತು ಪುನರ್ಜೀವನ ನೀಡಲು ಎರಡು ಚಮಚ ಓಟ್ ಮೀಲ್, ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ಅದನ್ನು ನಿಮ್ಮ ಮುಖದ ಮೇಲೆ ಚೆನ್ನಾಗಿ ಹಚ್ಚಿಕೊಂಡು, ಸುಮಾರು 15 ನಿಮಿಷಗಳ ಕಾಲ ಒಣಗಲು ಬಿಡಿ, ಬಳಿಕ ಮುಖವನ್ನು ತಣ್ಣಿರಿನಿಂದ ತೊಳೆದು ನಯವಾದ ಟವೆಲ್ ನಿಂದ ಮುಖವನ್ನು ಒರೆಸಿಕೊಳ್ಳಿ.

ಓಟ್ ಮೀಲ್, ಬಾದಾಮಿ ಎಣ್ಣೆ, ಪಪ್ಪಾಯಿ
ಕಪ್ಪುಕಲೆಗಳನ್ನು ನಿವಾರಿಸಲು 50 ಗ್ರಾಂ ಪಪ್ಪಾಯಿಯನ್ನು ಚೆನ್ನಾಗಿ ಹಿಚುಕಿಕೊಳ್ಳಿ. ಅದಕ್ಕೆ ಹುಡಿಮಾಡಿದ ಓಟ್ ಮೀಲ್ ಮತ್ತು ಒಂದು ಚಮಚ ಬಾದಾಮಿ ಎಣ್ಣೆ ಹಾಕಿ. ನಿಮಗೆ ಬೇಕೆನಿಸಿದರೆ ಅದಕ್ಕೆ 3-4 ಚಮಚ ನೀರನ್ನು ಹಾಕಬಹುದು. 5-10 ನಿಮಿಷ ಮುಖದ ಮೇಲೆ ಇದನ್ನು ಹಾಗೆ ಇಡಿ. ಕಪ್ಪು ಕಲೆಗಳು ಮಾಯವಾಗುವುದು.

ಓಟ್ ಮೀಲ್, ಲಿಂಬೆರಸ ಮತ್ತು ಬಾದಾಮಿ
ನಿಮ್ಮ ತ್ವಚೆಯು ಕಾಂತಿಯುತವಾಗಲು ಮತ್ತು ಬಿಳಿಯಾಗಲು ಇದನ್ನು ಬಳಸಿಕೊಳ್ಳಿ. ಮೂರು ಚಮಚ ಓಟ್ ಮೀಲ್, ಒಂದು ಚಮಚ ಲಿಂಬೆ ರಸ ಮತ್ತು ಒಂದು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ. ಇದರಿಂದ ನೀವು ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖ ಹಾಗೂ ಕುತ್ತಿಗೆ ಸುತ್ತ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ಬಳಿಕ ಹತ್ತಿ ಉಂಡೆಯಿಂದ ಮುಖವನ್ನು ಒರೆಸಿಕೊಳ್ಳಿ. ಇದರ ಬಳಿಕ ನೀರಿನಲ್ಲಿ ತೊಳೆದು ಮೃದುವಾದ ಟವೆಲ್ ನಿಂದ ಒರೆಸಿಕೊಳ್ಳಿ.

ಓಟ್ ಮೀಲ್ ಮತ್ತು ಹಾಲು
ಚರ್ಮವು ಜಿಡ್ಡಿನಿಂದ ಕೂಡಿದ್ದರೆ ಅದಕ್ಕಾಗಿ ನೀವು ಮೂರು ಚಮಚ ಓಟ್ ಮೀಲ್ ಮತ್ತು ಏಳು ಚಮಚ ಹಾಲವನ್ನು ಹಾಕಿ ಬಿಸಿ ಮಾಡಿ. 15 ನಿಮಿಷಗಳ ಕಾಲ ಇದನ್ನು ಕುದಿಸಬೇಕು. ಬಳಿಕ ಇದನ್ನು ತಣ್ಣಗಾಗಲು ಬಿಡಿ. ದಪ್ಪಗಿನ ಪೇಸ್ಟ್ ನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ ಮತ್ತು ಹಾಗೆ ಬಿಡಿ. 15 ನಿಮಿಷಗಳ ಬಳಿಕ ಅದನ್ನು ತೊಳೆಯಿರಿ.

ಓಟ್ ಮೀಲ್ ಮಾಸ್ಕ್ ನಿಂದ ಹೆಚ್ಚಿನ ಫಲಿತಾಂಶ ಹೇಗೆ?
ನೀವು ಒಂದು ರೀತಿಯ ಓಟ್ ಮೀಲ್ ಮಾಸ್ಕ್ ಅನ್ನು ಏಳು ದಿನಗಳ ಕಾಲ ಬಳಸಬೇಕು ಅಥವಾ ಒಂದೊಂದು ದಿನ ಒಂದೊಂದು ರೀತಿಯ ಮಾಸ್ಕ್ ಗಳನ್ನು ಬಳಸಬಹುದು. ಇದನ್ನು ಮುಖದ ಮೇಲೆ ಹಚ್ಚಿಕೊಂಡ ಬಳಿಕ ಉಜ್ಜಬಾರದು. ಮೃದುವಾಗಿ ಹಚ್ಚಿ ಬಳಿಕ ತೆಗೆಯಬೇಕು.

English summary

An Ingredient That Offers Flawless Skin In A Week

There are many foods that are breakfast delights. Oatmeal is just one of these, but by far the most popular. There are many good reasons why people prefer this breakfast food over plain cornflakes. Oatmeal is practically a superfood, as it has the right combination of various nutrients. Oatmeal has both high quantities of fibre and calcium, which are good for the digestive tract and bones. Oatmeal also contains potassium that can effectively lower the blood pressure. If youare impressed already, then hold on, as that's not it! This very healthy ingredient can come in handy when you require the best benefits out of it. Be it for your health or beauty.
Story first published: Wednesday, April 27, 2016, 19:52 [IST]
X
Desktop Bottom Promotion