For Quick Alerts
ALLOW NOTIFICATIONS  
For Daily Alerts

ಹೊಸ ಟ್ರಿಕ್ಸ್: ಮುಖದ ಕಾಂತಿಗೆ 'ಮೂಲಂಗಿ' ಫೇಸ್ ಪ್ಯಾಕ್

By Manu
|

ಸಾಮಾನ್ಯವಾಗಿ ಅಸಡ್ಡೆಗೊಳಗಾಗುವ ತರಕಾರಿಗಳು ಎಂದರೆ ಮೂಲಂಗಿ ಮತ್ತು ಕುಂಬಳಕಾಯಿ. ಏಕೆಂದರೆ ಹೆಚ್ಚಿನವರಿಗೆ ಇದರ ರುಚಿ ಅಷ್ಟೊಂದು ಹಿಡಿಸುವುದಿಲ್ಲ. ಮೂಲಂಗಿಯ ಕೊಂಚ ಖಾರವಾದ ರುಚಿ ಮತ್ತು ಕಮಟು ವಾಸನೆಯ ಕಾರಣ ಇದೊಂದು ಅದ್ಭುತ ತರಕಾರಿಯಾಗಿರಲು ಅರ್ಹವಾಗದಿದ್ದರೂ ಇದನ್ನು ಆಗಾಗ ತಿನ್ನುತ್ತಲೇ ಇರಬೇಕೆಂದು ನಮ್ಮ ಹಿರಿಯರು ಬಲವಂತವಾಗಿಯಾದರೂ ತಿನ್ನಿಸುತ್ತಿದ್ದರು. ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

ಏಕೆಂದರೆ ಇದರಲ್ಲಿರುವ ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತಿವೆ. ವಾಸ್ತವವೆಂದರೆ ಈ ಪೋಷಕಾಂಶಗಳು ಚರ್ಮದ ಆರೈಕೆಗೂ ಪೂರಕವಾಗಿವೆ.

 Amazing Radish Face Masks For Clear Skin!

ಮೂಲಂಗಿಯಲ್ಲಿ ವಿಟಮಿನ್ ಎ, ಸಿ, ಮತ್ತು ಕೆ ಉತ್ತಮ ಪ್ರಮಾಣದಲ್ಲಿದ್ದು ಚರ್ಮದ ಆರೈಕೆಗೆ ಉತ್ತಮವಾಗಿವೆ. ಅಲ್ಲದೇ ಇವು ಘಾಸಿಗೊಂಡ ಚರ್ಮದ ಜೀವಕೋಶಗಳನ್ನು ಪುನರ್ನಿಮಿಸಲು ನೆರವಾಗುವ ಮೂಲಕ ಸಹಜಕಾಂತಿಯನ್ನು ಪಡೆಯಲು ನೆರವಾಗುತ್ತದೆ.

ಮೂಲಂಗಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ಚರ್ಮದ ವರ್ಣವನ್ನು ಗಾಢಗೊಳಿಸುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಚರ್ಮದ ಕಲೆ ಮತ್ತು ಬಿಸಿಲಿನಿಂದಾಗಿ ಕಪ್ಪಗಾಗಿದ್ದ ಚರ್ಮವನ್ನು ಸಹಜವರ್ಣದತ್ತ ಕೊಂಡೊಯ್ಯಲು ನೆರವಾಗುತ್ತದೆ. ನಯಾ ಪೈಸೆ ಖರ್ಚಿಲ್ಲದೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ!

ಈಗ ಮೂಲಂಗಿಯ ಮುಖಲೇಪ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:
ಅಗತ್ಯವಿರುವ ಸಾಮಾಗ್ರಿಗಳು
*ಒಂದು ದೊಡ್ಡ ಚಮಚ ತುರಿದ ಮೂಲಂಗಿ
*4 ರಿಂದ 5 ಹನಿ ಆಲಿವ್ ಎಣ್ಣೆ
*½ ಚಿಕ್ಕ ಚಮಚ ಲಿಂಬೆ ರಸ

ತಯಾರಿಸುವ ವಿಧಾನ:
*ಮೂಲಂಗಿಯನ್ನು ತುರಿಯುವ ಮುನ್ನ ಸಿಪ್ಪೆಯನ್ನು ನಿವಾರಿಸಿ ಒಳಗಿನ ತಿರುಳನ್ನು ಪ್ರತ್ಯೇಕಿಸಿ ಚೆನ್ನಾಗಿ ತೊಳೆದ ಬಳಿಕ ತುರಿಯಿರಿ.
*ಇದಕ್ಕೆ ಈಗತಾನೇ ಹಿಂಡಿದ ಲಿಂಬೆರಸ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ ನುಣ್ಣಗೆ ಅರೆಯಿರಿ.
*ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖಕ್ಕೆ ತೆಳುವಾಗಿ ಲೇಪಿಸಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ಎಚ್ಚರಿಕೆ
ಈ ಲೇಪನ ಹಚ್ಚಿಕೊಂಡ ಬಳಿಕ ಕೊಂಚ ಉರಿಯಾಗುವುದು ಸಹಜ. ಇದರಿಂದ ಏನೂ ಅಪಾಯವಿಲ್ಲ. ಆದರೆ ಉರಿ ವಿಪರೀತ ಎನಿಸಿದರೆ ಮಾತ್ರ ಹದಿನೈದು ನಿಮಿಷಕ್ಕೂ ಮೊದಲೇ ತೊಳೆದುಕೊಳ್ಳಿ.
*ಇದರಲ್ಲಿರುವ ಲಿಂಬೆರಸ ಕೊಳೆಯನ್ನು ತೊಳೆದು ಸೂಕ್ಷ್ಮರಂಧ್ರಗಳನ್ನು ತೆರೆದ ಬಳಿಕ ಮೂಲಂಗಿಯ ಪೋಷಕಾಂಶಗಳು ಚರ್ಮದ ಗಾಢವರ್ಣವನ್ನು ತಿಳಿಯಾಗಿಸಲು ಸಾಧ್ಯವಾಗುತ್ತದೆ.

ಮೊಡವೆಗಳ ಚರ್ಮಕ್ಕೆ
ಮೊಡವೆಗಳಿರುವ ಚರ್ಮಕ್ಕೆ ಕೊಂಚ ಸೌಮ್ಯ ಪೋಷಣೆ ಬೇಕಾಗುತ್ತದೆ. ಮೂಲಂಗಿಯಲ್ಲಿರುವ ಪೋಷಕಾಂಶಗಳು ಮೊಡವೆಗಳ ಒಳಗೆ ಇಳಿದು ಬ್ಯಾಕ್ಟೀರಿಯಾ ಮತ್ತು ಗಟ್ಟಿಯಾಗಿದ್ದ ತೈಲಗಳನ್ನು ನಿವಾರಿಸಿ ಮೊಡವೆಗಳನ್ನು ಇಲ್ಲದಂತಾಗಿಸಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
*ಒಂದು ಚಿಕ್ಕ ಚಮಚ ಮೂಲಂಗಿ ಬೀಜಗಳು
*ಕೊಂಚ ನೀರು ಮೂಲಂಗಿಯಲ್ಲಿದೆ ಪ್ರಮುಖ ಆರೋಗ್ಯಕರ ಗುಣಗಳು

ತಯಾರಿಕಾ ವಿಧಾನ:
*ಮೊದಲು ಬೀಜಗಳನ್ನು ಒಣದಾಗಿ ಪುಡಿಮಾಡಿ
*ಈ ಪುಡಿಯನ್ನು ಕೊಂಚ ನೀರಿನೊಂದಿಗೆ ಬೆರೆಸಿ ನಯವಾದ ಲೇಪನ ತಯಾರಿಸಿ. ಈಗತಾನೇ ತೊಳೆದ ಮುಖಕ್ಕೆ ಈ ಲೇಪವನ್ನು ತೆಳುವಾಗಿ ಹೆಚ್ಚಿ. ಮೊಡವೆಗಳಿರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ ಒಣಗಲು ಬಿಡಿ
*ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ
*ಒಂದು ವೇಳೆ ಮುಖ ಹೆಚ್ಚು ಎಣ್ಣೆಪಸೆ ಹೊಂದಿದ್ದರೆ ಮೂಲಂಗಿಯನ್ನು ಹೆಚ್ಚು ನೀರಿನೊಂದಿಗೆ ಗೊಟಾಯಿಸಿ ಈ ನೀರನ್ನು ಮುಖದ ಮೇಲೆ ಸಿಂಪಡಿಸಿಕೊಂಡು ತೊಳೆದುಕೊಳ್ಳುವ ಮೂಲಕ ಎಣ್ಣೆಪಸೆಯನ್ನು ಹೆಚ್ಚು ಕಾಲದವರೆಗೆ ಇರದಂತೆ ತಡೆಗಟ್ಟಬಹುದು.

English summary

Amazing Radish Face Masks For Clear Skin!

Radish is not exactly our favourite vegetable as far as vegetables go. It has a non-appetizing colour, no matter how you cook it, it has a bland taste to it and the pungent smell is something we can do without. And like the grumpy kid, we ate it anyway! Why you ask? Because eliminating radish also known as mooli is like denying your body a host of powerful vitamins and minerals. And when it comes to beauty it can pretty much transform your skin.
Story first published: Monday, August 22, 2016, 10:50 [IST]
X
Desktop Bottom Promotion