For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಹೆಚ್ಚಿಸುವ ಹಲಸಿನ ಉಪಯೋಗ ಹಲವಾರು..

By Su.Ra
|

ಸೌಂದರ್ಯ ಪ್ರತಿ ಮಹಿಳೆಯ ಕನಸು. ಆಕೆ ಸೌಂದರ್ಯವತಿಯಾಗಿರಬೇಕು ಅಂದ್ರೆ ಕೇವಲ ಆಕೆ ತೆಗೆದುಕೊಳ್ಳುವ ಆಹಾರ ಕ್ರಮದಿಂದ ಮಾತ್ರ ಸಾಧ್ಯವಲ್ಲ. ಸ್ವಲ್ಪ ಆಕೆಯ ಬಗ್ಗೆ ಸ್ವಯಂ ಕಾಳಜಿ ತೆಗೆದುಕೊಂಡಾಗ ಮಾತ್ರ ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಲು ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ನಮ್ಮ ಪ್ರಕೃತಿ ಆಯಾ ಕಾಲಕ್ಕೆ ನೀಡುವ ಕೊಡುಗೆಗಳನ್ನೇ ಬಳಸಿಕೊಳ್ಳಬಹುದು. ಆದ್ರೆ ಹಾಗೆ ಬಳಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಬಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರೋದಿಲ್ಲ. ಹಣ್ಣುಗಳು ಯಾವಾಗಲೂ ಕೂಡ ಸೌಂದರ್ಯ ವರ್ಧಕಗಳೇ. ಆ ನಿಟ್ಟಿನಲ್ಲಿ ಹಲಸಿನ ಹಣ್ಣಿನ ಕೊಡುಗೆ ಕೂಡ ಅಪಾರ..

ವರ್ಷದ ಕೆಲವೇ ತಿಂಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣುಗಳಲ್ಲಿ ಹಲಸು ಕೂಡ ಒಂದು.ಇನ್ನೇನು ಹಲಸಿನ ಸೀಸನ್ ಶುರುವಾಗಿದೆ. ವೆರೈಟಿ ಹಲಸುಗಳು, ಅದರ ವಾಸನೆ ಮೂಗಿಗೆ ಬಡಿಯುವ ಸಂದರ್ಭ ಇದು.. ಕೇವಲ ಹಲಸಿನ ವಾಸನೆ ಸವಿದ್ರೆ ಹೇಗೆ ಸಾಧ್ಯ ಹೇಳಿ. ಹಲಸು ಅಂದ ಕೂಡಲೇ ಬಾಯಲ್ಲಿ ಕೆಲವರಿಗೆ ನೀರೂರುತ್ತೆ. ಹಾಗಂತ ಬಾಯಲ್ಲಿ ನೀರೂರಿಸಿ, ತಿನ್ನಲು ಮಾತ್ರ ಟೇಸ್ಟಿಯಾಗಿರುವ ಹಣ್ಣು ಹಲಸು ಅಂತ ಅಂದುಕೊಳ್ಳಬೇಡಿ.. ಬದಲಾಗಿ ಹಲಸು ನಿಮ್ಮ ಸೌಂದರ್ಯ ವರ್ಧಕ ಕೂಡ ಹೌದು.. ಹಲಸಿನ ಹಣ್ಣನ್ನು ಬಳಸಿ ಹೇಗೆ ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು ಅನ್ನೋದನ್ನು ನಾವ್ ನಿಮಗೆ ಸಿಂಪಲ್ ಆಗಿ ತಿಳಿಸಿಕೊಡ್ತೀವಿ. ಅದಕ್ಕಾಗಿ ಈ ಲೇಖನವನ್ನು ಮುಂದೆ ಓದಿ..

ಕುತ್ತಿಗೆಯ ಭಾಗದ ನೆರಿಗೆಗಳ ನಿವಾರಣೆಗೆ

ಕುತ್ತಿಗೆಯ ಭಾಗದ ನೆರಿಗೆಗಳ ನಿವಾರಣೆಗೆ

ವಯಸ್ಸಾದಂತೆ ನೆರಿಗೆ ಕಾಣಿಸಿಕೊಳ್ಳೋದು ಸರ್ವೇಸಾಮಾನ್ಯ. ಆದರೆ ಕೆಲವರಿಗೆ ವಯಸಲ್ಲದ ವಯಸ್ಸಲ್ಲಿ ನೆರಿಗೆಗಳು ಕಾಣಿಸಿಕೊಳ್ಳುತ್ತೆ. ಅದರಲ್ಲೂ ಕುತ್ತಿಗೆಯ ಭಾಗದಲ್ಲಿ ಕೆಲವರಿಗೆ ನೆರಿಗೆ ಹೆಚ್ಚು ಕಾಣಿಸಿಕೊಳ್ಳೋದಿದೆ. ಅಂತವರು ನಿಮ್ಮ ನೆರಿಗೆ ಸಮಸ್ಯೆ ನಿವಾರಣೆಗೆ ಹಲಸಿನ ಹಣ್ಣನ್ನು ಬಳಕೆ ಮಾಡಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕುತ್ತಿಗೆಯ ಭಾಗದ ನೆರಿಗೆಗಳ ನಿವಾರಣೆಗೆ

ಕುತ್ತಿಗೆಯ ಭಾಗದ ನೆರಿಗೆಗಳ ನಿವಾರಣೆಗೆ

ಅರ್ಧ ಹಲಸಿನ ಹಣ್ಣಿನ ತಿರುಳು, 1 ಬಾಳೆಹಣ್ಣು, 1 ಗ್ರಾಂ ಕಡಲೆಹಿಟ್ಟು, ಹಾಲು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಯ ಭಾಗಕ್ಕೂ ಅಪ್ಲೈ ಮಾಡಿ. ಈ ಮಿಶ್ರಣ ಬೇಗನೇ ಡ್ರೈ ಆಗಲ್ಲ. ಹಾಗಾಗಿ ಮುಖದಲ್ಲಿ ಪೂರ್ತಿ ಒಣಗುವವರೆಗೆ ಹಾಗೆಯೇ ಇಡಿ. ಸುಮಾರು ಅರ್ಧ ಗಂಟೆಯ ನಂತ್ರ ವಾಷ್ ಮಾಡಿ..ಪರಿಣಾಮವನ್ನು ನೀವೇ ಗಮನಿಸಿಕೊಳ್ಳಬಹುದು. ವಾರಕ್ಕೆ ಎರಡು ಬಾರಿ ನೀವಿದನ್ನು ಮಾಡಿಕೊಳ್ಳೋದು ಉತ್ತಮ.

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಆಗಿ, ಅದೇ ಕ್ರಮೇಣ ನೆರಿಗೆಗಳಂತೆ ಕಾಣಿಸಿಕೊಳ್ಳೋದಿದೆ. ನಿಮ್ಮ ಸೌಂದರ್ಯ ಹಾಳು ಮಾಡುವ ಇಂತಹ ನೆರಿಗೆಗಳ ನಿವಾರಣೆಗೆ ನೀವು ಹಲಸಿನ ಹಣ್ಣನ್ನು ಬಳಸಿಕೊಳ್ಳಬಹುದು. ಕೆಲವು ಹಲಸಿನ ಹಣ್ಣಿನ ತುಂಡು, ತಣ್ಣನೆಯ ಹಾಲು ಮಿಕ್ಸ್ ಮಾಡಿ ಅಪ್ಲೈ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಕಣ್ಣಿನ ಸುತ್ತ ಅಪ್ಲೈ ಮಾಡಿ.

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಕಣ್ಣಿನ ಸುತ್ತಲಿನ ನೆರಿಗೆಯ ನಿವಾರಣೆಗೆ

ಇದರಿಂದಕಣ್ಣಿಗೆ ತಂಪು ಫೀಲಿಂಗ್ ಆಗೋದು ಮಾತ್ರವಲ್ಲ, ಕಣ್ಣಿನ ಸುತ್ತಲಿನ ಕಪ್ಪು ವರ್ತುಲವನ್ನು ನಿವಾರಿಸಿ, ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತಲಿನ ನೆರಿಗೆಗಳು ಕೂಡ ನಂತರ ವಾಷ್ ಮಾಡಿ.

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ಹಲಸಿನ ಹಣ್ಣು ನಿಮ್ಮ ತುಟಿಗಳಿಗೆ ಬೆಸ್ಟ್ ಲಿಪ್ ಕೇರ್ ಆಗಲಿದೆ..ಈಗಿನ ಶುಷ್ಕ ವಾತಾವರಣದ ಪರಿಣಾಮವಾಗಿ ತುಟಿಗಳಲ್ಲಿ ಸೀಳು ಕಾಣಿಸಿಕೊಳ್ಳೋದು, ಒಡೆದು ರಕ್ತ ಸೋರುವ ಹಂತಕ್ಕೂ ಹೋಗಬಹುದು. ನಂತ್ರ ಅದು ತುಟಿಯ ಸುತ್ತ ಕಪ್ಪು ಕಲೆಗಳಿಗೆ ಕಾರಣವಾಗುತ್ತೆ. ಇನ್ನು ಕೆಲವರಿಗೆ ರಾತ್ರಿ ಮಲಗಿದ ಸಂದರ್ಬದಲ್ಲಿ ಜೊಲ್ಲು ಸೋರಿ, ಕಪ್ಪು ಕಲೆಗಳಾಗುವ ಸಾಧ್ಯತೆ ಇರುತ್ತೆ.

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ..

ಅಂತವರು ಕೆಲವು ಹಲಸಿನ ಹಣ್ಣುಗಳನ್ನು ತುಟಿಗಳಿಗೆ ತಿಕ್ಕಿಕೊಳ್ಳೋದ್ರಿಂದ ಉತ್ತಮ ಪರಿಣಾಮವನ್ನು ಪಡೆದುಕೊಳ್ಳಬಹುದು.. ಯಾವುದೇ ಇತರೆ ವಸ್ತುಗಳನ್ನು ಇದಕ್ಕೆ ಮಿಶ್ರಣ ಮಾಡುವ ಅಗತ್ಯವಿಲ್ಲ. ಹಲಸಿನ ಹಣ್ಣಿನ ತಿರುಳನ್ನು ನೀಟಾಗಿ ತೆಗೆದುಕೊಳ್ಳಿ. ಇಲ್ಲದೇ ಇದ್ರೆ ತುಟಿಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳಿರುತ್ತೆ.

ಮೊಡವೆಗಳ ನಿವಾರಣೆಗೆ ಹಲಸು

ಮೊಡವೆಗಳ ನಿವಾರಣೆಗೆ ಹಲಸು

ಕೆಲವು ಹಲಸಿನ ಹಣ್ಣನ್ನು ತೆಗೆದುಕೊಂಡು ಅದನ್ನು ಗ್ರೈಂಡ್ ಮಾಡ್ಕೊಳ್ಳಿ. ಬಲಿತಿರುವ ಹಣ್ಣು ಚೆನ್ನಾಗಿ ಪೇಸ್ಟ್ ಆಗುತ್ತೆ. ಪಲ್ಪ್ ನ್ನು ಮೊಡವೆಗಳಿರುವ ಜಾಗಕ್ಕೆ ಅಪ್ಲೈ ಮಾಡಿ.. ಮೊಡವೆಗಳನ್ನು ಬೇಗನೆ ನಿವಾರಸಿ, ಮತ್ತೆ ಮೊಡವೆಗಳು ಏಳದಂತೆ ನೋಡಿಕೊಳ್ಳುವ ಸಾಮರ್ಥ್ಯ ಹಲಸಿನ ಹಣ್ಣುಗಳಿಗಿದೆ.

English summary

Amazing Beauty Benefits of Jackfruit

Jackfruits are no doubt yummy to eat. If you love to gorge on this exotic juicy fruit, here we have some more good news for you to cherish. Did you know that this fruit is extremely effective in enhancing your beauty? Want to know more? Read below and get yourself enhanced about the amazing beauty benefits of jackfruit that you were unaware of till date.
X
Desktop Bottom Promotion