For Quick Alerts
ALLOW NOTIFICATIONS  
For Daily Alerts

ತ್ವಚೆಯ ಸರ್ವ ರೋಗಕ್ಕೂ ಲೋಳೆ ಸರದ ಫೇಸ್ ಪ್ಯಾಕ್

By Manu
|

ಸುಂದರ ಮತ್ತು ಆರೋಗ್ಯಕರ ಶರೀರ ಹೊಂದಿರುವುದು ಎಲ್ಲರ ಕನಸು. ತಲೆಯಿಂದ ಕಾಲಿನ ಉಗುರಿನವರೆಗೆ ಶರೀರದ ಆರೈಕೆ ಮಾಡಿಕೊಳ್ಳಲು ಹಲವು ವಿಧಾನಗಳಿವೆ. ಇದರಲ್ಲಿ ತಮಗೆ ಅತ್ಯಂತ ಸೂಕ್ತವಾದುದನ್ನು ಎಲ್ಲರೂ ಅನುಸರಿಸಲು ಬಯಸುತ್ತಾರೆ. ಆದರೆ ಕೆಲವು ತೊಂದರೆಗಳು ನಮ್ಮ ಇಚ್ಛೆಗೆ ವಿರುದ್ಧವಾಗಿ ನಮ್ಮ ಶರೀರದಲ್ಲಿ ಉಳಿದಿರುತ್ತವೆ. ಚರ್ಮದಲ್ಲಿ ಕಲೆಗಳು, ಬಿಸಿಲಿಗೆ ಗಾಢವಾಗಿರುವ ಚರ್ಮ, ಕಣ್ಣಿನ ಕೆಳಭಾಗದ ಗಾಢವರ್ತುಲಗಳು, ಗೀರುಗಳ ಗುರುತುಗಳು, ಮೊಡವೆ ಮಾಗಿದ ಬಳಿಕ ಉಳಿದ ಗುಳಿಯಂತಹ ಭಾಗ ಮೊದಲಾದವು ಸಜಹಸೌಂದರ್ಯವನ್ನು ಕುಂಠಿತಗೊಳಿಸುತ್ತವೆ. ಆದರೆ ಇದಕ್ಕಾಗಿ ಹತಾಶರಾಗಬೇಕಿಲ್ಲ. ನಿಸರ್ಗ ಇದರ ಆರೈಕೆಗಾಗಿ ಹಲವು ಮೂಲಿಕೆಗಳನ್ನು ನೀಡಿದ್ದು ಇದರ ಸದ್ಭಳಕೆಕೆಯಿಂದ ಸಹಜಸೌಂದರ್ಯ ವೃದ್ಧಿಯಾಗುವುದು ಖಂಡಿತ. ಲೋಳೆಸರ-ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ನಿಸರ್ಗ ನೀಡಿರುವ ಗಿಡಮೂಲಿಕೆಗಳಲ್ಲಿ ಲೋಳೆಸರ ಅಥವಾ ಆಲೋವೆರಾ ಒಂದು ಉತ್ತಮ ಆಯ್ಕೆಯಾಗಿದ್ದು ಚರ್ಮದ ಹಲವು ತೊಂದರೆಗಳನ್ನು ನಿವಾರಿಸುವ ಕ್ಷಮತೆ ಪಡೆದಿದೆ. ಇದರ ಗರಿಮೆಯೆಂದರೆ ಇದನ್ನು ಇತರ ನೈಸರ್ಗಿಕ ಸಾಮಾಗ್ರಿಗಳ ಜೊತೆ ಬೆರೆಸಿ ಇದರ ಮೂಲ ಗುಣಗಳಿಗೆ ಬಾಧೆಯಾಗಂತೆ ಮತ್ತು ಆ ಸಾಮಾಗ್ರಿಯ ಉತ್ತಮ ಗುಣಗಳೂ ಕಳೆದುಕೊಳ್ಳದಂತೆ ಮಿಶ್ರಣವಾಗುವುದು. ಇದೇ ಕಾರಣಕ್ಕೆ ಮೊಸರು, ಲಿಂಬೆ, ಗುಲಾಬಿ ನೀರು ಮೊದಲಾದವುಗಳ ಜೊತೆಗೆ ಬೆರೆಸಿ ಬಳಸಿದಾಗ ಎಲ್ಲಾ ಸಾಮಾಗ್ರಿಗಳ ಉತ್ತಮ ಗುಣಗಳು ಚರ್ಮಕ್ಕೆ ಲಭ್ಯವಾಗುತ್ತವೆ....

ಎಲ್ಲರ ಚರ್ಮ ಒಂದೇ ಬಗೆಯದ್ದಾಗಿರುವುದಿಲ್ಲ. ಅಂತೆಯೇ ಚರ್ಮದ ಬಗೆಯನ್ನು ಆಧರಿಸಿ ಕೈಗೊಳ್ಳಬೇಕಾದ ಆರೈಕೆಯಲ್ಲಿಯೂ ಕೊಂಚ ವ್ಯತ್ಯಾಸವಿರುತ್ತದೆ. ಇಂದು ವಿವಿಧ ಬಗೆಯ ಚರ್ಮದದವರಿಗೆ ಯಾವ ಬಗೆಯ ಆರೈಕೆ ಸೂಕ್ತ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಬಿಸಿಲಿಗೆ ಗಾಢವಾದ ಬಣ್ಣ ಪಡೆದ ಚರ್ಮಕ್ಕೆ

ಬಿಸಿಲಿಗೆ ಗಾಢವಾದ ಬಣ್ಣ ಪಡೆದ ಚರ್ಮಕ್ಕೆ

ಬಿಸಿಲಿಗೆ ಒಡ್ಡುವ ಚರ್ಮದ ಭಾಗ ಸ್ವಾಭಾವಿಕವಾಗಿ ಬಿಸಿಲು ಬೀಳದ ಚರ್ಮದ ಭಾಗಕ್ಕಿಂತಲೂ ಹೆಚ್ಚು ಗಾಢವಾಗಿರುತ್ತದೆ. ಈ ಬದಲಾವಣೆಯನ್ನು ಸರಿಪಡಿಸಲು ಲೋಳೆಸರ ಸಮರ್ಥವಾಗಿದೆ. ಇದಕ್ಕಾಗಿ ಲೋಳೆಸರ ಮತ್ತು ಲಿಂಬೆರಸವನ್ನು ಸಮಪ್ರಮಾಣದಲ್ಲಿ ಅರೆದು ಬೆರೆಸಿ ಮಿಶ್ರಣ ತಯಾರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಿಸಿಲಿಗೆ ಗಾಢವಾದ ಬಣ್ಣ ಪಡೆದ ಚರ್ಮಕ್ಕೆ

ಬಿಸಿಲಿಗೆ ಗಾಢವಾದ ಬಣ್ಣ ಪಡೆದ ಚರ್ಮಕ್ಕೆ

ಈ ಲೇಪನವನ್ನು ಈಗತಾನೇ ತೊಳೆದು ಒರೆಸಿಕೊಂಡ ಮುಖದ ಮೇಲೆಲ್ಲಾ ಆವರಿಸಿ. ಕಣ್ಣುರೆಪ್ಪೆಗಳಿಗೆ ಬೇಡ, ಇದು ಕಣ್ಣಿಗೆ ಇಳಿದು ಉರಿ ತರಿಸಬಹುದು. ಇದನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಬಳಿಕ ಟವೆಲ್ ಒತ್ತಿಕೊಂಡು ಒರೆಸಿ. ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಅನುಸರಿಸಿ.

ಕಲೆಗಳಿರುವ ಚರ್ಮಕ್ಕೆ

ಕಲೆಗಳಿರುವ ಚರ್ಮಕ್ಕೆ

ಸಾಮಾನ್ಯವಾಗಿ ಮೊಡವೆಗಳನ್ನು ಅರಿಯದೇ ಚಿವುಟಿ ಒಡೆದದ್ದರ ಪರಿಣಾಮವಾಗಿ ಆ ಸ್ಥಳದಲ್ಲೊಂದು ಕಲೆ ಉಳಿಯುತ್ತದೆ. ಅಥವಾ ಬೇರೆ ಕಾರಣವೂ ಇರಬಹುದು. ಈ ಕಲೆಗಳನ್ನು ನಿವಾರಿಸಲು ಲೋಳೆಸರ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಗುಲಾಬಿನೀರು ಮತ್ತು ಅರೆದ ಲೋಳೆಸರವನ್ನು ಮಿಶ್ರಣ ಮಾಡಿ ದಪ್ಪನಾದ ಲೇಪನ ತಯಾರಿಸಿ. ಈ ಲೇಪನವನ್ನು ಕಲೆ ಇರುವ ಚರ್ಮದ ಮೇಲೆ ಹಚ್ಚುತ್ತಾ ಬನ್ನಿ... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಲೆಗಳಿರುವ ಚರ್ಮಕ್ಕೆ

ಕಲೆಗಳಿರುವ ಚರ್ಮಕ್ಕೆ

ಕೊಂಚ ಹೊತ್ತು ಕಳೆದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಕಲೆ ಪೂರ್ಣವಾಗಿ ಮಾಯವಗಲು ದೀರ್ಘಕಾಲ ಬೇಕಾಗುವುದರಿಂದ ಕೊಂಚ ತಾಳ್ಮೆ ವಹಿಸುವುದು ಅಗತ್ಯ. ಆದರೆ ತಾಳ್ಮೆಯ ಫಲ ಎಂದಿಗೂ ಸಿಹಿಯಾಗಿರುತ್ತದೆ.

ಎಣ್ಣೆಚರ್ಮಕ್ಕೆ

ಎಣ್ಣೆಚರ್ಮಕ್ಕೆ

ಎಣ್ಣೆಪಸೆ ಸದಾ ಇರುವ ಚರ್ಮದವರಿಗೆ ಲೋಳೆಸರ ಒಂದು ವರದಾನವಾಗಿದೆ. ಚರ್ಮದಿಂದ ಹೊರಸೂಸುವ ಎಣ್ಣೆಯ ಪ್ರಮಾಣವನ್ನು ತಗ್ಗಿಸಿ ಚರ್ಮಕ್ಕೆ ಪುನರ್ಚೇತನ ನೀಡುವಲ್ಲಿ ಲೋಳೆಸರ ಸಮರ್ಥವಾಗಿದೆ. ಇದಕ್ಕಾಗಿ ಲೋಳೆಸರವನ್ನು ಅರೆದ ಲೇಪನ ಮತ್ತು ಇದಕ್ಕೆ ಕೊಂಚವೇ ಜೇನು, ಅಂದರೆ ಸುಮಾರು ಒಂದು ಚಮಚ ಲೋಳೆಸರಕ್ಕೆ ಕಾಲು ಚಮಚ ಜೇನು ಸೇರಿಸಿ ಈಗತಾನೇ ತೊಳೆದು ಒತ್ತಿಕೊಂಡು ಒರೆಸಿದ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಣ್ಣೆಚರ್ಮಕ್ಕೆ

ಎಣ್ಣೆಚರ್ಮಕ್ಕೆ

ವಿಶೇಷವಾಗಿ ಮೂಗಿನ ಪಕ್ಕ ಮತ್ತು ಹಣೆಯ ಮೇಲೆ, ಅಂದರೆ ಎಣ್ಣೆ ಪಸೆ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ. ಕೊಂಚ ಕಾಲ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸರಿಸುಮಾರು ಇಡಿಯ ದಿನ ಎಣ್ಣೆ ಪಸೆ ಇಲ್ಲದೇ ಚರ್ಮ ತಾಜಾತನದಿಂದ ಕೂಡಿರುತ್ತದೆ.

ಸೂಕ್ಷ್ಮಸಂವೇದಿ ಚರ್ಮಕ್ಕೆ

ಸೂಕ್ಷ್ಮಸಂವೇದಿ ಚರ್ಮಕ್ಕೆ

ಒಂದು ವೇಳೆ ನಿಮ್ಮ ಚರ್ಮ ಸೂಕ್ಷ್ಮಸಂವೇದಿಯಾಗಿದ್ದರೆ ಲೋಳೆಸರ ಮತ್ತು ಸೌತೆಕಾಯಿ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಕೆಲವು ಸೌತೆಕಾಯಿಯ ಬಿಲ್ಲೆಗಳನ್ನು ಅರೆದು ರಸ ಸಂಗ್ರಹಿಸಿ. ಸಮಪ್ರಮಾಣದಲ್ಲಿ ಲೋಳೆಸರವನ್ನು ಅರೆದ ಲೇಪನ ಬೆರೆಸಿ ಒಂಚ ಮೊಸರು ಮತ್ತು ಗುಲಾಬಿ ಎಣ್ಣೆಯನ್ನು ಬೆರೆಸಿ. ಈ ಲೇಪನವನ್ನು ದಪ್ಪನಾಗಿ ಈಗತಾನೇ ತೊಳೆದು ಒರೆಸಿಕೊಂಡ ಮುಖಕ್ಕೆ ಆವರಿಸುವಂತೆ ಹಚ್ಚಿ. ಕೊಂಚ ಹೊತ್ತು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಸೂಕ್ಷ್ಮಸಂವೇದಿ ಚರ್ಮದವರು ಚರ್ಮದ ಸೂಕ್ಷ್ಮ ಗೀರುಗಳು, ಕಲ್ಮಶಗಳು, ಧೂಳು ಮೊದಲಾದ ತೊಂದರೆಗಳಿಂದ ಪಾರಾಗಬಹುದು.

ಚರ್ಮದ ಕಲ್ಮಶಗಳನ್ನು ಹೊರಹಾಕಲು

ಚರ್ಮದ ಕಲ್ಮಶಗಳನ್ನು ಹೊರಹಾಕಲು

ಚರ್ಮದ ಅಡಿಯಲ್ಲಿ ಸಂಗ್ರಹವಾದ ಕಲ್ಮಶಗಳು ಸುಲಭವಾಗಿ ಹೋಗುವುದಿಲ್ಲ. ಇದಕ್ಕಾಗಿ ಕೊಂಚ ಲೋಳೆಸರವನ್ನು ಅರೆದ ಲೇಪನ ಮತು ಸಮಪ್ರಮಾಣದಲ್ಲಿ ಮಾವಿನ ಹಣ್ಣಿನ ತಿರುಳನ್ನು ಸೇರಿಸಿ ಮಿಶ್ರಣ ತಯಾರಿಸಿ. ಇದಕ್ಕೆ ಕೊಂಚವೇ ಲಿಂಬೆಯ ರಸವನ್ನು ಸೇರಿಸಿ ಈಗತಾನೇ ತೊಳೆದು ಒರೆಸಿಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಂದು ಬಾರಿ ಅನುಸರಿಸಿ.

ಸತ್ತ ಜೀವಕೋಶಗಳನ್ನು ನಿವಾರಿಸಲು

ಸತ್ತ ಜೀವಕೋಶಗಳನ್ನು ನಿವಾರಿಸಲು

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇವು ಹೊರಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುತ್ತವೆ. ಮೊದಲು ಇವನ್ನು ಸಡಿಲಿಸಬೇಕು. ಬಳಿಕ ಕೆಳಗಿನ ಚರ್ಮಕ್ಕೆ ಘಾಸಿಯಾಗದಂತೆ ಕೆರೆದು ತೆಗೆಯಬೇಕು. ಈ ಕೆಲಸವನ್ನು ಲೋಳೆಸರ ಸಮರ್ಥವಾಗಿ ನಿಭಾಯಿಸುತ್ತದೆ ಹಾಗೂ ಚರ್ಮದ ಬಣ್ಣ ತಿಳಿಗೊಳ್ಳಲೂ ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸತ್ತ ಜೀವಕೋಶಗಳನ್ನು ನಿವಾರಿಸಲು

ಸತ್ತ ಜೀವಕೋಶಗಳನ್ನು ನಿವಾರಿಸಲು

ಇದಕ್ಕಾಗಿ ಸಮಪ್ರಮಾಣದಲ್ಲಿ ಲೋಳೆಸರ ಮತ್ತು ಎಳೆ ಸೌತೆಕಾಯಿಯನ್ನು ಅರೆದು ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ದಪ್ಪನಾಗಿ ಹಚ್ಚಿ. ಕೊಂಚ ಕಾಲ ಕಳೆದು ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Aloe Vera Packs For All Skin Problems

Aloe vera is one such ingredient that comes in use to treat all sorts of skin problems. The natural property of aloe vera is efficient in making the skin look radiant by reducing blemishes, dark spots and dullness. Therefore, in this article, we at Boldsky will be listing out some of the aloe vera face packs that treat all sorts of skin problems. Read on to know more about it.
X
Desktop Bottom Promotion