For Quick Alerts
ALLOW NOTIFICATIONS  
For Daily Alerts

'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

By Manasa K M
|

ಅಲೋವೆರಾ (ಲೋಳೆಸರ) ಎಂಬ ಈ ಅದ್ಭುತ ಗಿಡದ ಬಗ್ಗೆ ಈಗಾಗಲೇ ಬಹಳಷ್ಟು ಕೇಳಿದ್ದೇವೆ. ನಮ್ಮ ಆಯುರ್ವೇದದಲ್ಲಿಯೇ ಅಲ್ಲ ಪ್ರಾಚೀನ ಈಜಿಪ್ಚಿಯನ್ನರು ಕೂಡ ಈ ಗಿಡದ ಅಭಿಮಾನಿಗಳು ಆಗಿದ್ದರು.

ಈ ಗಿಡವನ್ನು ಅವರು "ಅಮರತ್ವದ ಗಿಡ" ಎಂದು ಕರೆಯುತ್ತಿದ್ದರು. ಅಲೋವೇರ ಗಿಡದ ಔಪಚಾರಿಕ ಹಾಗೂ ಗುಣಪಡಿಸುವ ಶಕ್ತಿ ಈ ಗಿಡವನ್ನು ಹಾಗೆ ಕರೆಯಲು ಒಂದು ಮುಖ್ಯ ಕಾರಣ. ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ಈ ಗಿಡವನ್ನು ನಾವು ನಮ್ಮ ಮನೆಗಳಲ್ಲಿ, ಬಾಲ್ಕನಿಯಲ್ಲಿ, ಅಂಗಳದಲ್ಲಿ ಬಹಳ ಸುಲಭವಾಗಿ ಬೆಳೆಸಬಹುದು. ಇದರಿಂದ ನಮಗೆ ಇದು ಕೈಗೆ ಎಟುಕುವಂತೆಯೇ ಇದ್ದು ಬೇಕೆಂದಾಗ ಬಳಸಲು ಬಹಳ ಅನುಕೂಲ. ಇದನ್ನು ಬಹಳ ಸುಲಭವಾಗಿ ಮಣ್ಣಿನ ಕುಂಡದಲ್ಲಿ (ಪಾಟ್) ನಲ್ಲಿ ಬೆಳೆಸಬಹುದು. ತ್ವಚೆಯ ಸರ್ವ ರೋಗಕ್ಕೂ ಲೋಳೆ ಸರದ ಫೇಸ್ ಪ್ಯಾಕ್

ಇದು ಸುಮಾರು ಒಂದರಿಂದ ಮೂರು ಅಡಿಯವರೆಗೂ ಬೆಳೆಯುತ್ತದೆ. ಇದರ ಎಲೆಗಳು ಬಹಳ ದಪ್ಪನಾಗಿ ಒಳಗೆ ಅರೆ ಪಾರದರ್ಶಕ ಲೋಳೆಯನ್ನು ಹೊಂದಿರುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಈ ಅಲೋವೆರಾ ಬಳಸಿ ನಾವು ಮನೆಯೆಲ್ಲೆ ಮಾಡಿಕೊಳ್ಳಬಹುದಾದ ಕೆಲವು ಫೇಸ್ ಪ್ಯಾಕ್‍ಗಳನ್ನು ನೋಡೋಣ....

ಮೊದಲಿಗೆ ಅಲೋವೆರಾ ರಸ ತೆಗೆಯುವ ಬಗೆ

ಮೊದಲಿಗೆ ಅಲೋವೆರಾ ರಸ ತೆಗೆಯುವ ಬಗೆ

ಒಂದು ಸಣ್ಣ ಎಲೆಯನ್ನು ಅಥವಾ ಎಲೆಯ ಮೇಲಿನ ಭಾಗವನ್ನು ಕತ್ತಿಯಿಂದ ಕತ್ತರಿಸಿ. ಇದನ್ನು ಮತ್ತೆ ಹುಷಾರಾಗಿ ಮಧ್ಯಕ್ಕೆ ಸೀಳಿ ಎರಡು ಭಾಗವನ್ನಾಗಿ ಮಾಡಿಕೊಳ್ಳಿ. ನಂತರ ಒಂದು ಚಮಚವನ್ನು ಬಳಸಿ ಒಳಗಿರುವ ಲೋಳೆಯನ್ನು ತೋಡಿ ತೆಗೆದುಕೊಳ್ಳಿ. ಇದೆ ಅಲೋವೆರಾ ರಸ.

ಅಲೋವೆರಾ ಹಾಗೂ ಅರಿಶಿನ

ಅಲೋವೆರಾ ಹಾಗೂ ಅರಿಶಿನ

ಚಿನ್ನದ ದೇವತೆ 'ಅರಿಶಿನದ' ಸೌಂದರ್ಯ ಗುಣಗಳು

ಕಪ್ಪು ಕಲೆಗಳ ನಿವಾರಣೆಗೆ

ಕಪ್ಪು ಕಲೆಗಳ ನಿವಾರಣೆಗೆ

ಅಲೋವೆರಾ ರಸವನ್ನು ಒಂದು ಚಮಚ ಜೇನು ತುಪ್ಪ ಹಾಗೂ ಅರ್ಧ ನಿಂಬೆ ಹಣ್ಣಿನ ರಸಕ್ಕೆ ಕಲೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ದೂರ ಆಗುತ್ತವೆ.

ಅಲೋವೆರಾದ ಐಸ್ ಗಡ್ಡೆಗಳು

ಅಲೋವೆರಾದ ಐಸ್ ಗಡ್ಡೆಗಳು

ನಿಮ್ಮ ರೆಫ್ರಿಜರೇಟರ್ ನ ಐಸ್ ಟ್ರೆ ಯನ್ನು ಚೆನ್ನಾಗಿ ತೊಳೆದು ಅದರಲ್ಲಿ ಅರ್ಧ ಭಾಗಕ್ಕೆ ಶುದ್ಧವಾದ ನೀರನ್ನು ತುಂಬಿ. ಇನ್ನೂ ಅರ್ಧಕ್ಕೆ ಅಲೊವೆರ ರಸವನ್ನು ಹಾಗೆಯೇ ಮೇಲೆ ಹಾಕಿ ಫ್ರೀಜ಼ರ್ ನಲ್ಲಿ ಇಡಿ. ಇದು ಗಡ್ಡೆ ಕಟ್ಟಿಕೊಂಡ ನಂತರ ಚೆನ್ನಾಗಿ ಮುಖ ತೊಳೆದು ಈ ಮಂಜುಗಡ್ಡೆ ಇಂದ ಹಾನಿಗೊಳಗಾದ ಚರ್ಮದ ಮೇಲೆ ಮೆತ್ತಗೆ ಉಜ್ಜಿ. ಇದರಿಂದ ಚರ್ಮಕ್ಕೆ ತಣ್ಣಗೆ ಹಾಯ್ ಎನಿಸುವುದೇ ಅಲ್ಲದೆ ಹಾಗೆಯೇ ಚರ್ಮದ ದುರಸ್ತಿಯು ಆಗಲಿದೆ.

ಅಲೋವೆರಾ ಮತ್ತು ವಿಟಮಿನ್ ಇ

ಅಲೋವೆರಾ ಮತ್ತು ವಿಟಮಿನ್ ಇ

ಎರಡು ವಿಟಮಿನ್ ಈ ಕ್ಯಾಪ್ಸೂಲ್ ಗಳನ್ನು ಸಣ್ಣಗೆ ಕತ್ತರಿಸಿ ಅಥವಾ ಚುಚ್ಚಿ ತೂತು ಮಾಡಿ ಅದರಲ್ಲಿರುವ ಎಣ್ಣೆಯನ್ನು ಹೊರಗೆ ತೆಗೆಯಿರಿ. ಇದಕ್ಕೆ ಸ್ವಲ್ಪ ಅಲೋವೆರಾ ರಸವನ್ನು ಸೇರಿಸಿ ಕಲೆಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಚರ್ಮವು ಯವ್ವನ ಭರಿತವಾಗಿ ಕಾಣುತ್ತದೆ.

ಅಲೋವೆರಾ ಮತ್ತು ಸೌತೆಕಾಯಿ

ಅಲೋವೆರಾ ಮತ್ತು ಸೌತೆಕಾಯಿ

ಸೌತೆ ಕಾಯಿಯನ್ನು ತೊಳೆದು ಒಂದು ಚಿಕ್ಕ ತುಂಡು ಕತ್ತರಿಸಿಕೊಳ್ಳಿ. ಇದನ್ನು ಅಲೋವೆರಾ ರಸದೊಂದಿಗೆ ಮಿಕ್ಸಿಯಲ್ಲಿ ಆಡಿಸಿ ರಸ ಮಾಡಿಕೊಳ್ಳಿ. ಈ ರಸವನ್ನು ಕ್ರಮವಾಗಿ ವಾರಕ್ಕೆ ಎರಡು ಅಥವಾ ಮೂರು ಸಾರಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಬಿಡುವುದರಿಂದ ಕಲೆಗಳು ಕೂಡ ಮಾಯಾ ವಾಗುತ್ತವೆ.

ಅಲೋವೆರಾ ಹಾಗೂ ಮುಲ್ತಾನಿ ಮಿಟ್ಟಿ

ಅಲೋವೆರಾ ಹಾಗೂ ಮುಲ್ತಾನಿ ಮಿಟ್ಟಿ

ಮುಲ್ತಾನಿ ಮಿಟ್ಟಿ ಯನ್ನು ಅಲೊವೆರ ರಸದ ಜೊತೆ ಕಲೆಸಿ ನಾವು ಮುಖಕ್ಕೆ ಹಚ್ಚಬೇಕು. ಇದನ್ನು ಕಲೆಸಲು ಬೇಕಾದರೆ ಸ್ವಲ್ಪ ಗುಲಾಬಿ ನೀರನ್ನು ಕೂಡ ಸೇರಿಸಬಹುದು.ಇವು ಏನು ಇಲ್ಲದೆ ನಾವು ಬಾರಿ ಅಲೊವೆರ ರಸವನ್ನು ಕೂಡ ಮುಖಕ್ಕೆ ಹಚ್ಚಬಹುದು. ಇದು ಒಂದೇ ಪದಾರ್ಥವು ನಮಗೆ ಈ ತೊಂದರೆಯಿಂದ ವಿಮುಕ್ತಿ ನೀಡಬಲ್ಲುದಾಗಿದೆ.

English summary

Aloe Vera Face Packs For Perfect Skin!

Aloe Vera is considered to be the best ayurvedic medicines for both health as well as skin. It is a natural home remedy for skin care. Aloe vera can be used raw or mixed with other natural ingredients to make facial packs at home. By using aloe vera you prevent your skin from sun damage, swelling and acne. If applied regularly, your skin pores open up and this brightens your complexion. For a shiny and glowing complexion, try these aloe vera face packs.
X
Desktop Bottom Promotion