For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ, ತಜ್ಞರ ಏಳು ಅಮೂಲ್ಯ ಸಲಹೆಗಳು

By Manjula Balaraj
|

ಬ್ಯೂಟಿ ಮ್ಯಾಗಜೀನ್‌ಗಳಲ್ಲಿ ತಾರೆಯರ ಸ್ಪುರದ್ರೂಪ ನೋಡಿ, ಆಶ್ಚರ್ಯ ಪಡುವವರೂ ಇದ್ದಾರೆ, ಅಸೂಯೆ ಪಡುವವರೂ ಇರುತ್ತಾರೆ.. ಪ್ರಮುಖವಾಗಿ ಸಿನಿಮಾ ರಂಗದಲ್ಲಿರುವವರು ದೇಹ ಮತ್ತು ಮುಖವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವುದು ಮುಖ್ಯ. ಈ ಲೇಖನದಲ್ಲಿ ಸುಂದರ ತ್ವಚೆಗಾಗಿ ಬೋಲ್ಡ್ ಸ್ಕೈ ತಜ್ಞರಿಂದ ಪಡೆದ ಕೆಲವೊಂದು ಉಪಯುಕ್ತ ಟಿಪ್ಸ್‌ಗಳನ್ನು ನಿಮ್ಮ ಮುಂಡಿಡುತ್ತಿದೆ.

ನಾವು ಫ್ಯಾಷನ್ ಮ್ಯಾಗಜೀನ್‌ಗಳು ಮತ್ತು ಚಲನಚಿತ್ರಗಳಲ್ಲಿ ತಾರೆಯರ ಕಾಂತಿಯುಕ್ತ ಮುಖಛಾಯೆಯನ್ನು ನೋಡಿ ಅದ್ಭುತ ಚರ್ಮ ಪಡೆಯುವುದು ಹೇಗೆ ಎಂದು ನಿಜವಾಗಿಯೂ ಆಶ್ಚರ್ಯ ಪಡುತ್ತಿರುತ್ತೇವೆ. ಸ್ಕಿನ್ ಕೇರ್ ಟಿಪ್ಸ್- ಮುಖದ ಅಂದಕ್ಕೆ ಫಲಪ್ರದ ಮನೆಮದ್ದು

ಫೋಟೋ ಎಡಿಟಿಂಗ್ ಮತ್ತು ಮೇಕಪ್ ಕೆಲವು ಮಟ್ಟಿಗೆ ನೆರವಾಗುತ್ತದೆ ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ ಕೆಲವರು ಒಬ್ಬರಿಗೆ ಅಸೂಯೆ ಬರುವಂತಹ ನೈಸರ್ಗಿಕವಾದ ಚರ್ಮವನ್ನು ಹೊಂದಿರುತ್ತಾರೆ. ತಾರೆಯರು ಮತ್ತು ಅನೇಕ ಖ್ಯಾತನಾಮರು ತಮ್ಮದೇ ಆದ ಚರ್ಮ ತಜ್ಞರನ್ನು ಹೊಂದಿರುತ್ತಾರೆ. ಅವರು ನೀಡುವ ಸಲಹೆಯಂತೆ ಅದ್ಭುತವಾದ ಚರ್ಮವನ್ನು ಪಡೆಯುವಲ್ಲಿ ಇದು ಅವರಿಗೆ ಸಹಕಾರಿಯಾಗುತ್ತದೆ.

ಆದರೆ ಜನಸಾಮಾನ್ಯರಿಗೆ ತ್ವಚೆ ಮತ್ತು ಸೌಂದರ್ಯದ ಬಗ್ಗೆ ಆಳವಾದ ಅರಿವು ಕಡಿಮೆ ಇರುವುದು ಸಹಜ. ಕೆಲವು ಸಲ ನಮಗೆ ಉತ್ತಮವಾದ ಬ್ಯೂಟಿ ಪಾರ್ಲರ್ ಗಳಿಗೆ ಹೋಗುವುದಕ್ಕೆ ಅನಾನುಕೂಲವಾಗಲೂ ಬಹುದು. ಅಲ್ಲಿಯ ಖರ್ಚುವೆಚ್ಚಗಳು ನಮಗೆ ದುಬಾರಿ ಅನಿಸಿ ತಜ್ಞರ ಸಲಹೆ ಪಡೆಯುವುದು ಅಸಾಧ್ಯವಾಗಬಹುದು. ಆದರೆ ಸಾಮಾನ್ಯ ಜನರೂ ಕೂಡ ತಾರೆಯರಂತೆ ಹೊಳೆಯುವಂತಹ ತ್ವಚೆಯನ್ನು ಪಡೆಯಬಹುದು.

ಆದರೆ, ತ್ವಚೆಯ ರಕ್ಷಣೆ ಅಷ್ಟು ಸುಲಭವಾದುದಲ್ಲ. ಅದಕ್ಕಾಗಿ ಸ್ವಲ್ಪ ಸಮಯವನ್ನು ವ್ಯಯಿಸಬೇಕಾಗುತ್ತದೆ. ಕೆಳಗೆ ಹೇಳಿರುವಂತಹ ಕೆಲವು ಚರ್ಮ ಸಂರಕ್ಷಣೆಯ ವಿಧಾನಗಳು ಆರೋಗ್ಯವಂತ ಮತ್ತು ಸ್ವಚ್ಛವಾದ ಚರ್ಮವನ್ನು ಪಡೆಯಲು ತುಂಬಾ ಸಹಾಯಕಾರಿಯಾಗುತ್ತದೆ. ಬೋಲ್ಡ್ ಸ್ಕೈ ನಿಮಗೆ ಕೆಲವು ತಜ್ಞರಿಂದ ಸಲಹೆ ಪಡೆದಂತಹ ಮಾಹಿತಿಗಳನ್ನು ಹೊಳೆಯುವ ತ್ವಚೆಗಾಗಿ ನೀಡುತ್ತಿದೆ.

ಸಲಹೆ 1

ಸಲಹೆ 1

ಕೆಲವು ಸಂಶೋಧನೆಯ ಪ್ರಕಾರ ಡೈರಿ ಉತ್ಪನ್ನಗಳ ಪ್ರತೀನಿತ್ಯ ಬಳಕೆಯಿಂದ ಮೊಡವೆ ಉಂಟಾಗಲು ಕಾರಣವಾಗಬಹುದು ಎಂದು ಹೇಳಲಾಗಿದೆ. ಆದುದರಿಂದ ಮೊಡವೆಯ ತೊಂದರೆ ಇರುವವರು ಆದಷ್ಟು ಡೈರಿ ಉತ್ವನ್ನಗಳನ್ನು ಸೇವಿಸುವುದನ್ನು ತಪ್ಪಿಸುವುದು ಒಳಿತು.

ಸಲಹೆ2

ಸಲಹೆ2

ಚರ್ಮದ ಮೇಲೆ ದೊಡ್ಡ ರಂಧ್ರಗಳು ಹೊಂದಿದ್ದರೆ, ಅದನ್ನು ಮುಚ್ಚಲು ಮತ್ತು ರಂಧ್ರಗಳ ಆಳಕಡಿಮೆ ಮಾಡಲು ಉತ್ತಮವಾದ ಫೇಸ್ ವಾಶ್ ಗಳನ್ನು ಉಪಯೋಗಿಸಿ. ಇದರಲ್ಲಿರುವ ಸ್ಯಾಲಿಸಿಲಿಕ್ ಆಮ್ಲವು ರಂಧ್ರದ ಗಾತ್ರವನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗುತ್ತದೆ.

ಸಲಹೆ 3

ಸಲಹೆ 3

ಮುಖದಲ್ಲಿರುವ ಕಪ್ಪುಕಲೆ, ಬಿಳಿಕಲೆಗಳು ಮತ್ತು ಮೊಡವೆಗಳಂತಹ ತೊಂದರೆಗಳಿಂದ ಮುಕ್ತವಾಗಲು ದಿಂಬಿನ ಕವರ್, ಬೆಡ್ ಶೀಟ್ಸ್ ಮತ್ತು ಟವಲುಗಳನ್ನು ಬದಲಾಯಿಸುತ್ತಿರಬೇಕು ಯಾವಾಲೂ ಒಗೆಯುತ್ತಿರಬೇಕು. ಇಲ್ಲವಾದಲ್ಲಿ ಇದರಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡಬಹುದು.

ಸಲಹೆ 4

ಸಲಹೆ 4

ಒಣಗಿದ ಚರ್ಮ ಹೊಂದಿರುವವರು ಆಗಾಗ್ಗೆ ಮುಖ ತೊಳೆಯುವುದನ್ನು ತಪ್ಪಿಸಬೇಕು ಮತ್ತು ಹಾನಿಕಾರಕವಲ್ಲದ ಫೇಸ್ ವಾಶ್ ನ್ನು ಉಪಯೋಗಿಸಬೇಕು. ಪ್ರತಿಸಲ ಮುಖ ತೊಳೆದ ನಂತರ ಮುಖದ ಮಾಶ್ಚ್ರೈಸರ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತ.

ಸಲಹೆ 5

ಸಲಹೆ 5

ಹೊರಗಡೆ ಮೋಡದ ವಾತಾವರಣ ಇದ್ದರೋ ಸನ್ಸ್ಕ್ರೀನ್ ಬಳಸಿ, ಹೆಚ್ಚಿನ ಜನರು ಹೊರಗಡೆ ತುಂಬಾ ಬಿಸಿಲು ಇಲ್ಲವಾದಲ್ಲಿ ಸನ್ಸ್ಕ್ರೀನ್ ಬಳಸುವುದಿಲ್ಲ ಆದರೆ ಹೀಗೆ ಮಾಡುವುದರಿಂದ ಯುವಿ ವಿಕಿರಣಗಳು ಚರ್ಮವನ್ನು ಹಾನಿಗೊಳಗಾಗುವಂತೆ ಮಾಡುತ್ತದೆ.

ಸಲಹೆ 6

ಸಲಹೆ 6

ಬಳಸುವ ಸೌಂದರ್ಯವರ್ಧಕ ಉತ್ಪನ್ನಗಳು ಪರಿಮಳ ರಹಿತವೇ ಎಂದು ಪರಿಶೀಲಿಸಿ. ಯಾಕೆಂದರೆ ಪರಿಮಳಯುಕ್ತ ಉತ್ಪನ್ನಗಳಲ್ಲಿ ಕೃತಕ ಪರಿಮಳವನ್ನು ಸೇರಿಸಿರುವುದರಿಂದ ಇದು ಕೆಲವರಲ್ಲಿ ಅಲರ್ಜಿಗೆ ಮತ್ತು ಕೆಲವು ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು.

ಸಲಹೆ 7

ಸಲಹೆ 7

ಯಾವಾಗಲೂ ಗಿಡಮೂಲಿಕೆಯ ಉತ್ಪನ್ನಗಳು ಅಥವಾ ನೈಸರ್ಗಿಕ ತ್ವಚೆಯ ಪರಿಹಾರಗಳನ್ನೇ ಉಪಯೋಗಿಸುವುದು ಒಳಿತು. ಏಕೆಂದರೆ ಇವುಗಳಲ್ಲಿ ಯಾವುದೇ ರಾಸಾಯನಿಕ ಪದಾರ್ಥಗಳಿರುವುದಿಲ್ಲ, ಹಾಗಾಗಿ, ಇದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಕಮ್ಮಿ ಜೊತೆಗೆ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ.

English summary

7 Tips By Skin Care Experts That You Should Follow

Most of the celebrities have skin care experts by their side, giving them professional advice on how to take care of their complexions and make themselves look amazing! As laymen, we would not be aware of certain skin care tips and ideas that can up our beauty quotient to a considerable extent. Boldsky gives you a list of tips that are suggested by skin care experts, which can give you an amazing complexion. Here you go!
X
Desktop Bottom Promotion