For Quick Alerts
ALLOW NOTIFICATIONS  
For Daily Alerts

ತ್ವಚೆಗೆ ಸೋಪ್ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ!

|

ಬಹುತೇಕ ಜನ ಸಾಮಾನ್ಯವಾಗಿ ಮೈ ಸೋಪನ್ನು ಮುಖ ತೊಳೆಯಲು ಬಳಸುತ್ತಾರೆ. ಆದರೆ ಹೀಗೆ ಬಳಸುವಾಗ ಅವರಿಗೆ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಸೋಪ್ ಅವರ ಮೈಮೇಲಿನ ಇನ್‌ಫೆಕ್ಷನ್ ಮತ್ತು ಕೊಳೆಯನ್ನು ತೆಗೆಯುತ್ತದೆ ಎಂಬ ಭಾವನೆ ಅವರಲ್ಲಿರುತ್ತದೆ. ಆದರೆ ವಾಸ್ತವ ಎಂದರೆ ಈ ಸೋಪ್ ಅವರ ತ್ವಚೆಯನ್ನು ಶುಚಿಗೊಳಿಸುವ ಬದಲಿಗೆ ಹಾನಿ ಮಾಡುತ್ತದೆ. ಇನ್‌ಫೆಕ್ಷನ್ಹೋಗಲಾಡಿಸುವ ಬದಲಿಗೆ ಇನ್‌ಫೆಕ್ಷನ್ ಅನ್ನು ಒಳಗೆ ತರುತ್ತದೆ! ಹಾಗಾದರೆ ಸೋಪನ್ನು ಏಕೆ ಮುಖಕ್ಕೆ ಬಳಸಬಾರದು? ಯಾವ ಫೇಸ್ ವಾಶ್ ತ್ವಚೆಗೆ ಒಳ್ಳೆಯದು?

ಏಕೆಂದರೆ ಸೋಪನ್ನು ಸೋಡಿಯಂ ಲಾರೈಲ್ ಸಲ್ಫೇಟ್ ಎಂಬ ರಾಸಾಯನಿಕದಿಂದ ತಯಾರಿಸಿರುತ್ತಾರೆ. ಇದು ತ್ವಚೆಗೆ ಹಾನಿಕಾರಕದ ಜೊತೆಗೆ ಇದರಲ್ಲಿರುವ ಹಲವಾರು ರಾಸಾಯನಿಕಗಳು ಇರುತ್ತವೆ. ಅವುಗಳೆಂದರೆ, ಫೋಮಿಂಗ್ ಏಜೆಂಟ್, ಬಣ್ಣಗಳು, ಪ್ರಿಸರ್ವೇಟೀವ್‌ಗಳು, ಕೃತಕ ಸುಗಂಧ ದ್ರವ್ಯಗಳು, ಕಾಸ್ಟಿಕ್ ಸೋಡಾ ಇತ್ಯಾದಿಗಳು ಇದರಲ್ಲಿ ಇರುತ್ತವೆ. ಆದ್ದರಿಂದ ಇದನ್ನು ಮುಖಕ್ಕೆ ಬಳಸಬಾರದು.

ಕಾಸ್ಟಿಕ್ ಸೋಡಾವನ್ನು ಸೋಪಿಗೆ ಬೆರೆಸಲಾಗುವುದರಿಂದ ಇದು ತ್ವಚೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಸಾಮಾನ್ಯವಾಗಿ ಕಾಸ್ಟಿಕ್ ಸೋಡಾವನ್ನು ಕಾರ್ಖಾನೆಗಳಲ್ಲಿ ಬಣ್ಣದ ಕಲೆಗಳನ್ನು ತೆಗೆಯಲು ಬಳಸುತ್ತಾರೆ ಎಂದರೆ ನೀವೇ ಊಹಿಸಿ. ಸೋಪ್ ನಿಮ್ಮ ತ್ವಚೆಯ ಕಾಂತಿಯನ್ನು ಕುಗ್ಗಿಸುವುದರ ಜೊತೆಗೆ ನಿಮ್ಮ ತ್ವಚೆಯಲ್ಲಿ ತುರಿಕೆಯನ್ನು ತರುತ್ತದೆ. ಆದ್ದರಿಂದ ಕನಿಷ್ಠ ಪಕ್ಷ ಇಂದಿನಿಂದಲಾದರು ಸೋಪನ್ನು ಮುಖಕ್ಕೆ ಹಚ್ಚಿಕೊಳ್ಳುವುದನ್ನು ಬಿಡಿ. ಅದರ ಬದಲಿಗೆ ಸ್ವಾಭಾವಿಕ ಫೇಸ್ ವಾಶ್‌ಗಳನ್ನು ಬಳಸಿ. ಸೋಪ್‌ಗಳು ಅವಧಿ ಪೂರ್ವವಾಗಿ ನಿಮ್ಮ ತ್ವಚೆ ವಯಸ್ಸಾದ ಹಾಗೆ ತೋರುವಂತೆ ಮಾಡುತ್ತದೆ. ಬನ್ನಿ ಸೋಪಿನಿಂದ ಆಗುವ ಅಡ್ಡಪರಿಣಾಮಗಳ ಕುರಿತು ತಿಳಿದುಕೊಳ್ಳೋಣ ಬನ್ನಿ..

ತ್ವಚೆಗೆ ಹಾನಿ ಮಾಡುತ್ತದೆ

ತ್ವಚೆಗೆ ಹಾನಿ ಮಾಡುತ್ತದೆ

ಸೋಪ್ ಎಷ್ಟು ಹಾನಿಕಾರಕವೆಂದರೆ ತ್ವಚೆಯ ಹೊರ ಪದರವನ್ನು ಹಾನಿ ಮಾಡುವುದರ ಜೊತೆಗೆ ಅಲ್ಲಿರುವ ಸ್ವಾಭಾವಿಕ ಎಣ್ಣೆ ಅಂಶವನ್ನು ಹೀರಿಕೊಂಡು ಬಿಡುತ್ತದೆ. ಇದರಿಂದ ನಿಮ್ಮ ತ್ವಚೆಯು ಒಣಗುತ್ತದೆ ಮತ್ತು ತುರಿಕೆ ಬರುತ್ತದೆ. ಸೋಪನ್ನು ತುಂಬಾ ಸಮಯ ಹಚ್ಚಿಕೊಳ್ಳುವುದರಿಂದ ನಿಮ್ಮ ತ್ವಚೆಯು ಮತ್ತಷ್ಟು ಹಾನಿಗೊಳಗಾಗುತ್ತದೆ ಮತ್ತು ಅದು ದುರ್ಬಲಗೊಂಡು ವಿವಿಧ ಬ್ಯಾಕ್ಟೀರಿಯಾಗಳು ಅದರ ಮೇಲೆ ದಾಳಿ ಮಾಡಲು ಅವಕಾಶ ಮಾಡಿಕೊಡುತ್ತದೆ.

ಒಣ ತ್ವಚೆ

ಒಣ ತ್ವಚೆ

ಸೋಪಿನಲ್ಲಿ ಕಾಸ್ಟಿಕ್ ಸೋಡಾ ಇರುವುದರಿಂದ ಇದು ತ್ವಚೆಯಲ್ಲಿರುವ ಸ್ವಾಭಾವಿಕ ಎಣ್ಣೆ ಅಂಶವನ್ನು ಹೀರಿಕೊಂಡು ಬಿಡುವುದರಿಂದ ತ್ವಚೆಯಲ್ಲಿ ಸುಕ್ಕುಗಳನ್ನುಂಟಾಗುತ್ತದೆ. ಕಾಸ್ಟಿಕ್ ಸೋಡಾವು ತ್ವಚೆಯನ್ನು ತೆಳ್ಳಗೆ ಮಾಡುತ್ತದೆ ಮತ್ತು ತ್ವಚೆಯು ಸುಲಿದುಕೊಂಡು ಬರುವಂತೆ ಮಾಡುತ್ತದೆ.

ತ್ವಚೆಯ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ

ತ್ವಚೆಯ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ

ಸೋಪನ್ನು ಬಳಸುವುದರಿಂದ ತ್ವಚೆಯ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಆಗುತ್ತದೆ. ಆಗ ತ್ವಚೆಯ ಮೇಲೆ ಇನ್‌ಫೆಕ್ಷನ್‌ಗಳು ದಾಳಿ ಮಾಡುತ್ತವೆ. ನಿಯಮಿತವಾಗಿ ಸೋಪನ್ನು ಬಳಸುವುದರಿಂದ ನಿಮ್ಮ ತ್ವಚೆಯಲ್ಲಿರುವ ಕೊಬ್ಬಿನ ಪದರವು ಹಾನಿಗೊಳಗಾಗುತ್ತದೆ. ಈ ಕೊಬ್ಬಿನ ಪದರವು ನಿಮ್ಮ ತ್ವಚೆಗೆ ಹಲವಾರು ಇನ್‌ಫೆಕ್ಷನ್‌ಗಳಿಂದ ರಕ್ಷಣೆ ನೀಡುತ್ತಿರುತ್ತದೆ. ಇದರ ಪರಿಣಾಮವಾಗಿ ನಿಮ್ಮ ತ್ವಚೆಯು ಹಲವಾರು ಬ್ಯಾಕ್ಟೀರಿಯಾಗಳ ಮತ್ತು ವೈರಸ್‌ಗಳ ದಾಳಿಗೆ ಗುರಿಯಾಗುತ್ತದೆ.

ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ

ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ

ಸೋಪು ನಮ್ಮ ತ್ವಚೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಇದರಿಂದಲೂ ಇನ್‍ಫೆಕ್ಷನ್‌ಗಳು ನಿಮ್ಮ ತ್ವಚೆಯ ಮೇಲೆ ಹಾನಿ ಮಾಡುತ್ತವೆ. ಆಗ ನಿಮ್ಮ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇವುಗಳ ವಿರುದ್ಧ ಯಾವುದೇ ರಕ್ಷಣೆ ಇಲ್ಲದಿರುವುದರಿಂದ ಅವುಗಳು ಹೆಚ್ಚಾಗುತ್ತವೆ. ಇದು ಸೋಪ್ ಬಳಸುವುದರಿಂದ ಆಗುವ ಅಡ್ಡ ಪರಿಣಾಮಗಳಲ್ಲಿ ಒಂದಾಗಿದೆ.

ತ್ವಚೆಯಿಂದ ವಿಟಮಿನ್ ಡಿಯನ್ನು ತೆಗೆದು ಹಾಕುತ್ತದೆ

ತ್ವಚೆಯಿಂದ ವಿಟಮಿನ್ ಡಿಯನ್ನು ತೆಗೆದು ಹಾಕುತ್ತದೆ

ವಿಟಮಿನ್ ಡಿಯು ತ್ವಚೆಯಲ್ಲಿ ಸಂಗ್ರಹಗೊಂಡಿರುತ್ತದೆ. ಇದು ತ್ವಚೆಯು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಅದರಲ್ಲಿ ಶೇಖರಣೆಯಾಗಿರುತ್ತದೆ. ಸೋಪ್ ಬಳಸುವುದರಿಂದ ಇದು ಹಾನಿಗೊಳಗಾಗುತ್ತದೆ. ವಿಟಮಿನ್ ಡಿ ಸಹ ಆರೋಗ್ಯಕರ ತ್ವಚೆಗೆ ಅತ್ಯಾವಶ್ಯಕ. ಜೊತೆಗೆ ಇದು ಮೂಳೆಗಳಿಗು ಸಹ ಸಹಕಾರಿ.

ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕುತ್ತದೆ

ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕುತ್ತದೆ

ಸೋಪಿನಲ್ಲಿರುವ ಪ್ರಾಣಿ ಮತ್ತು ಸಸ್ಯ ಜನ್ಯ ಅಂಶಗಳು ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕುತ್ತವೆ. ಇದರಿಂದಾಗಿ ಕಪ್ಪು ತಲೆಗಳು ಮತ್ತು ಇನ್‌ಫೆಕ್ಷನ್‌ಗಳು ಉಂಟಾಗುತ್ತವೆ. ಆಗ ಈ ರಂಧ್ರಗಳಲ್ಲಿ ಧೂಳು ಮತ್ತು ಎಣ್ಣೆ ಅಂಶವು ಕಟ್ಟಿಕೊಳ್ಳುವುದರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

ತ್ವಚೆಯ ಪಿಎಚ್‌ಗೆ ಹಾನಿ ಮಾಡುತ್ತದೆ

ತ್ವಚೆಯ ಪಿಎಚ್‌ಗೆ ಹಾನಿ ಮಾಡುತ್ತದೆ

ಸೋಪಿನಲ್ಲಿ ಅಲ್ಕಾಲೈನ್ ಪಿಎಚ್ ಇರುವುದರಿಂದಾಗಿ ಅದು ತ್ವಚೆಯ ಪಿಎಚ್‌ಗೆ ಹಾನಿ ಮಾಡುತ್ತದೆ. ಆಗ ತ್ವಚೆಯಲ್ಲಿ ಬ್ಯಾಕ್ಟೀರಿಯಾಗಳು ಅಭಿವೃದ್ಧಿಯಾಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದರೆ ಸಾಮಾನ್ಯವಾದ ತ್ವಚೆಯಲ್ಲಿ ಆಸಿಡಿಕ್ ಪಿಎಚ್ ಇರುತ್ತದೆ. ಅದು ಬ್ಯಾಕ್ಟೀರಿಯಾಗಳನ್ನು ಬೆಳೆಯಲು ಬಿಡುವುದಿಲ್ಲ.

ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ನಿಮ್ಮ ಬೆವರಿನಲ್ಲಿ ಫೆರ್ಮೋನ್‌ಗಳು ಎಂದು ಕರೆಯುವ ರಾಸಾಯನಿಕ ಅಂಶ ಇರುತ್ತದೆ. ಇದು ವಿರುದ್ಧ ಲಿಂಗಿಗಳನ್ನುನಿಮ್ಮತ್ತ ಆಕರ್ಷಿತರಾಗುವಂತೆ ಮಾಡುತ್ತದೆ. ಯಾವಾಗ ನಿಮ್ಮ ಸೋಪ್ ಈ ಅಂಶವನ್ನು ನಾಶ ಮಾಡುತ್ತದೆಯೋ, ಆಗ ನಿಮ್ಮ ಸಂಗಾತಿ ನಿಮ್ಮಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇದು ಸಹ ಸೋಪಿನಿಂದ ಉಂಟಾಗುವ ಅಡ್ಡಪರಿಣಾಮಗಳಲ್ಲಿ ಒಂದಾಗಿದೆ.

English summary

Why You Should Not Use Soap On Your Face

Many people prefer to use usual soap bars on their face, not knowing their harmful effects. People might be thinking that soaps make their clean and infection free. But the case is opposite they damage their skin by using soap and invite many infections. Why soap should not be used on face?
Story first published: Wednesday, May 13, 2015, 10:25 [IST]
X
Desktop Bottom Promotion