For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದಕ್ಕೆ ಹಿತ್ತಲ ಗಿಡದ ತರಕಾರಿ ಜ್ಯೂಸ್ ಸಾಕು

By Deepak
|

ಸೌಂದರ್ಯಪ್ರಜ್ಞೆ ಇರುವ ಎಲ್ಲರಿಗೂ ತಮ್ಮ ತ್ವಚೆ ಗೌರವರ್ಣದ್ದಾಗಿರಬೇಕೆಂಬ ಬಯಕೆಯಿರುತ್ತದೆ. ಆದರೆ ಚರ್ಮದ ಬಣ್ಣವನ್ನು ಬದಲಿಸುವುದು ಸಾಧ್ಯವಿಲ್ಲ. ಜಾಣತನವೆಂದರೆ ಚರ್ಮವನ್ನು ಉತ್ತಮ ಆರೋಗ್ಯದಿಂದ, ಕಾಂತಿಯಿಂದ ಕೂಡಿರುವಂತೆ ಮಾಡುವ ಮೂಲಕ ಕಲೆಯಿಲ್ಲದ ಮತ್ತು ನೆರಿಗೆಯಿಲ್ಲದಂತೆ ಕಾಪಾಡಿಕೊಳ್ಳುವ ಮೂಲಕ ಸಹಜ ಸೌಂದರ್ಯವನ್ನು ಬೆಳಗುವಂತೆ ಮಾಡಬಹುದು. ಆದರೆ ಇದು ಅಷ್ಟು ಸುಲಭವಲ್ಲ. ಇದಕ್ಕೆ ಸತರ ಆರೈಕೆ ಮತ್ತು ಪೋಷಣೆ ಅಗತ್ಯ.

ಹಾಗಾಂತ ಇದಕ್ಕಾಗಿ ವರ್ಷಗಟ್ಟಲೇ ಆರೈಕೆ ನೀಡುವುದು ಅಗತ್ಯವಿಲ್ಲ, ಕೆಲವೊಂದು ನೈಸರ್ಗಿಕವಾದ ಮನೆಮದ್ದನ್ನು ನಿಯಮಿತವಾಗಿ ಪಾಲಿಸಿಕೊಂಡು ಬಂದರೆ ಖಂಡಿತಗಿಯೂ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು, ಅದು ಹೇಗೆ ಎಂಬುದು ಅಚ್ಚರಿವಾಯಿತೇ? ಬನ್ನಿ ಇಂದು ಬೋಲ್ಡ್ ಸ್ಲೈ ಕೆಲವೊಂದು ಆರೋಗ್ಯಕರವಾದ ಹಿತ್ತಲ ಗಿಡದ ತರಕಾರಿಗಳ ಜ್ಯೂಸ್‌ಗಳ ಪಟ್ಟಿಯನ್ನು ನಿಮಗೆ ಒದಗಿಸುತ್ತಿದ್ದು ಇದನ್ನು ಓದಿ, ಅನುಸರಿಸಿ, ನಿಮ್ಮ ತ್ವಚೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ನೀವೇ ನೋಡಿ....! ಬೇವಿನ ಸೌಂದರ್ಯವರ್ಧಕ ಗುಣಗಳು ಒಂದೇ, ಎರಡೇ?

ಕ್ಯಾರೆಟ್ ಜ್ಯೂಸ್
ಹೊಳೆಯುವ ತ್ವಚೆಗೆ ನಿಮ್ಮ ತ್ವಚೆಯು ಸದಾ ಹೊಳಪಿನಿಂದ ಮತ್ತು ಆರೋಗ್ಯದಿಂದ ಕೂಡಿರಬೇಕೇ? ಹಾಗಾದರೆ ಪ್ರತಿ ನಿತ್ಯ ಕ್ಯಾರೆಟ್ ಜ್ಯೂಸ್ ಸೇವಿಸಿ. ಏಕೆಂದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ. ಕ್ಯಾರೆಟನ್ನು ಪೇಸ್ಟ್ ಮಾಡಿಕೊಂಡು ಜೇನು ತುಪ್ಪದ ಜೊತೆಗೆ ನಿಮ್ಮ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಸಹ ಬಳಸಬಹುದು. ಸುಮ್ಮನೆ ಕಾಸ್ಮೆಟಿಕ್‍ಗಳ ಮೇಲೆ ಹಣ ಚೆಲ್ಲುವ ಬದಲು ಕ್ಯಾರೆಟ್ ಜ್ಯೂಸ್ ಸೇವಿಸಲು ಆರಂಭಿಸಿ.

Vegetable Juices To Drink For A Glowing Skin!

ಪಾಲಾಕ್ ಸೊಪ್ಪಿನ ಜ್ಯೂಸ್
ಪಾಲಾಕ್ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ತಡೆಯುವ ಗುಣಗಳೆರಡೂ ಇರುವುದರಿಂದ ಇದು ಆರೋಗ್ಯಕರ ಚರ್ಮ ಪಡೆಯಲು ಸಹಾಯಕ. ಪಾಲಾಕ್ ಸೊಪ್ಪಿನ ಜ್ಯೂಸ್ ಮಾಡಿ ಪ್ರತಿದಿನ ಸೇವಿಸುವುದರಿಂದ ಕಾಂತಿಯುತ ಚರ್ಮ ಪಡೆಯಬಹುದು. ಹಾಗಾಗಿ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ ಕಾಫಿ ಕುಡಿಯುವ ಬದಲು ಪಾಲಕ್ ಸೊಪ್ಪಿನ ಜ್ಯುಸ್ ಕುಡಿಯಿರಿ, ಮೊಡವೆಗಳಿಂದ ಮುಕ್ತರಾಗುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ತ್ವಚೆಯ ಅಂದಕ್ಕೆ-ಮೂಸಂಬಿ ಜ್ಯೂಸ್‌ನ ಲೇಪನ!

ಟೊಮೇಟೊ ಜ್ಯೂಸ್
ಕಲೆ ನಿವಾರಣೆ ಚಿಕಿತ್ಸೆಗೆ ಕೆಂಪು ಮತ್ತು ರಸ ಹೊಂದಿರುವ ಈ ಹಣ್ಣು ತುಂಬಾ ಉಪಯೋಗಿ. ಟೊಮೇಟೊ ಜ್ಯೂಸ್ ತೆಗೆದು ಅದನ್ನು ಕಲೆ ಮೇಲೆ ಹಚ್ಚಬೇಕು. ಇದನ್ನು 10-15 ನಿಮಿಷ ಹಾಗೆ ಬಿಟ್ಟು ಬಳಿಕ ನೀರಿನಲ್ಲಿ ತೊಳೆಯಿರಿ. ಟೊಮೇಟೊದಲ್ಲಿ ಕಲೆಗಳನ್ನು ನಿವಾರಿಸುವಂತಹ ನೈಸರ್ಗಿಕ ಗುಣಗಳಿವೆ. ಟೊಮೇಟೊವನ್ನು ನಿಯಮಿತವಾಗಿ ಬಳಸುವುದು ತ್ವಚೆಗೆ ಒಳ್ಳೆಯದು. ಟೊಮೇಟೊ ಕೇವಲ ಮಚ್ಛೆ ನಿವಾರಿಸುವುದು ಮಾತ್ರವಲ್ಲದೆ, ಚರ್ಮವು ಆರೋಗ್ಯಕರ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!

ಸೌತೆಕಾಯಿ ರಸ
ಸೌತೆಕಾಯಿಯಲ್ಲಿ ವಿಟಮಿನ್ A ಹಾಗೂ ವಿಟಮಿನ್ C ಗಳಿದ್ದು ಇವು ನಿಮ್ಮ ಆರೋಗ್ಯಕ್ಕೆ ಬಹಳ ಹಿತಕಾರಿಯಾಗಿವೆ. ಈ ವಿಟಮಿನ್‌ಗಳು ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ದೇಹದಿಂದ ಟಾಕ್ಸಿನ್‌ಗಳನ್ನು ಕೂಡ ಹೊರ ಹಾಕುತ್ತದೆ. ಆ ಮೂಲಕ ತ್ವಚೆಯನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ.

English summary

Vegetable Juices To Drink For A Glowing Skin!

Everyone wants their skin to be clear and radiant with a youthful glow! Not all of us are gifted with a clear skin. We strive hard in order to attain clear and glowing skin. Proper hydration and intake of nutritious foods are the two key factors for a healthy skin. It is necessary to include lots of fruits and vegetables in our daily routine for a healthy skin and body. 
Story first published: Friday, September 25, 2015, 17:26 [IST]
X
Desktop Bottom Promotion