For Quick Alerts
ALLOW NOTIFICATIONS  
For Daily Alerts

ಪದೇ ಪದೇ ಕಾಡುವ ತ್ವಚೆಯ ಸಮಸ್ಯೆಗೆ ಇನ್ನು ಗುಡ್ ಬೈ ಹೇಳಿ!

|

ಕೆಲವರ ಹೊಳೆಯುವ ತ್ವಚೆ, ಆಕರ್ಷಕ ಕೂದಲು ನೋಡುವಾಗ ಎಷ್ಟು ನುಣಪಾಗಿ, ಸುಂದರವಾಗಿದೆ ಅನಿಸುತ್ತದೆ. ಈ ರೀತಿ ತ್ವಚೆ ಮತ್ತು ಕೂದಲಿನ ಸೌಂದರ್ಯ ನಮಗೂ ಬೇಕು ಅನಿಸುವುದು ಸಹಜ.
ಮೇಕಪ್ ಮಾಡಲು ಯಾವುದೇ ನೀತಿ ನಿಯಮಗಳು ಇಲ್ಲವೆಂದು ಮೊದಲು ತಿಳಿಯಬೇಕಾದ ಸತ್ಯ. ಅದೊಂದು ಕಲೆ! ಸೌಂದರ್ಯ ಪ್ರಜ್ಞೆ ಅನ್ನುವುದು ಈಗಿನಿಂದ ಮಾತ್ರವಲ್ಲ ಅನಾದಿ ಕಾಲದಿಂದಲೂ ಇದೆ. ಈಗ ನಾವು ಕೆಮಿಕಲ್ ಇರುವ ಸೌಂದರ್ಯ ವರ್ಧಕ ಕ್ರೀಮ್‌ಗಳನ್ನು ಬಳಸುತ್ತಿದ್ದರೆ ಹಿಂದೆ ನೈಸರ್ಗಿಕವಾದ ವಸ್ತುಗಳಿಂದ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

ಚರಿತ್ರೆ ಓದುವಾಗ ಗ್ರೀಕ್ ಜನಾಂಗದವರ ಸೌಂದರ್ಯದ ಕುರಿತಾದ ವರ್ಣನೆಯನ್ನು ಕೇಳುತ್ತೇವೆ. ಇಲ್ಲಿ ನಾವು ಪುರಾತನ ಗ್ರೀಕ್ ಜನರು ಸೌಂದರ್ಯ ಹೆಚ್ಚಿಸಲು ಅನುಸರಿಸುತ್ತಿದ್ದ ಮಾರ್ಗವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇವೆ. ಅವರು ಅನುಸರಿಸುತ್ತಿದ್ದ ವಿಧಾನವನ್ನು ನಾವೂ ಪಾಲಿಸಿದರೆ ತಾರುಣ್ಯಭರಿತವಾದ ತ್ವಚೆಯನ್ನು ಪಡೆಯಬಹುದು. ಬನ್ನಿ ಸೌಂದರ್ಯದ ರಹಸ್ಯಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ......

Top Natural beauty secrets should know for sure

ಜಿಡ್ಡಿನಿಂದ ಕೂಡಿದ ಕೂದಲಿಗೆ ರಾಮಬಾಣ
ನಿಮ್ಮ ಕೂದಲಿನ ಹೊಳಪನ್ನು, ಆರೋಗ್ಯವನ್ನು ಮತ್ತು ತಾಜಾತನವನ್ನು ಕಾಯ್ದುಕೊಳ್ಳಲು ಪ್ರತಿ ಎರಡು ದಿನಕ್ಕೆ ಒಮ್ಮೆ ನಿಮ್ಮ ಕೂದಲನ್ನು ತೊಳೆಯಿರಿ. ಇದರಿಂದ ನಿಮ್ಮ ಕೂದಲು ಅತಿಯಾಗಿ ಒಣಗುವುದನ್ನು ತಪ್ಪಿಸಬಹುದು ಮತ್ತು ಅದಕ್ಕೆ ಹೆಚ್ಚಿನ ರಾಸಾಯನಿಕಗಳ ಸೇರ್ಪಡೆಯನ್ನು ಸಹ ತಡೆಯಬಹುದು. ಹಾಗೆಂದು ನಿಮ್ಮ ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಕಡೆಗಣಿಸಬೇಡಿ. ಅದಕ್ಕಾಗಿಯೇ ಡ್ರೈ ಶಾಂಪೂಗಳು ಸಹ ದೊರೆಯುತ್ತವೆ. ಇದಕ್ಕಾಗಿ ನೀವು ಬೇಬಿ ಪೌಡರನ್ನು ಸಹ ಬಳಸಬಹುದು. ಮುಂದೆ ನೀವು ತಲೆಗೆ ಸ್ನಾನ ಮಾಡುವಾಗ ಈ ಸಲಹೆಯನ್ನು ಜಾರಿಗೆ ತನ್ನಿ, ಆಗ ನೀವೇ ನೋಡುವಿರಿ ಇದರ ಚಮತ್ಕಾರವನ್ನು!

ದ್ರಾಕ್ಷಿ ರಸ ಸೇವಿಸಿ
ನೀವು ದ್ರಾಕ್ಷಿ ರಸ ಸೇವಿಸಿದರೆ ಅದು ತ್ವಚೆಯ ಹೊಳಪನ್ನು ಹೆಚ್ಚುವಂತೆ ಮಾಡುತ್ತದೆ. ನಿಮ್ಮ ಚರ್ಮದ ಮೇಲೆ ದ್ರಾಕ್ಷಿ ರಸವನ್ನು ಅನ್ವಯಿಸಿದರೆನೇ ಮುಖದಲ್ಲಿ ವಯಸ್ಸಾದ ಕಳೆಯನ್ನು ಹೋಗಲಾಡಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಇದು ಅನಗತ್ಯ/ಮೃತ ಜೀವಕೋಶಗಳನ್ನು ನಾಶಮಾಡಿ ನಿಮ್ಮ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ರಕ್ತ ಚಲನೆಯನ್ನು ಸುಧಾರಿಸಿ, ನಿಮ್ಮ ಚರ್ಮದ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ನಿಮ್ಮ ತ್ವಚೆಯಲ್ಲಿ ತೇವಾಂಶವನ್ನು ಉಳಿಸಲು ದ್ರಾಕ್ಷಿ ರಸವನ್ನು ಸೇವಿಸಬೇಕು. ತ್ಚಚೆಯ ಕಾಂತಿಯನ್ನು ಹೆಚ್ಚಿಸುವ ಶ್ರೀಗ೦ಧದ ಫೇಸ್ ಪ್ಯಾಕ್!

ಐಲೈನರನ್ನು ಬಳಸುವುದನ್ನು ನಿಯಂತ್ರಿಸಿ
ಐಲೈನರ್ ನಿಂದ ಸಮಸ್ಯೆಯನ್ನು ಅನುಭವಿಸುತ್ತಿರುವವರಲ್ಲಿ ನೀವು ಸಹ ಒಬ್ಬರೇ? ಅದಕ್ಕಾಗಿ ನಿಮ್ಮ ಐಲೈನರನ್ನು ಹಚ್ಚುವ ಮೊದಲು ಎಣ್ಣೆಯನ್ನು ಈರುವ ಕಾಗದದಿಂದ ನಿಮ್ಮ ಕಣ್ಣೀನ ಸುತ್ತ ಇರುವ ಜಿಡ್ಡಿನಂಶವನ್ನು ತೆಗೆಯಿರಿ. ಇದರ ಜೊತೆಗೆ ಐಲೈನರನ್ನು ಕೊಳ್ಳುವಾಗ ಸ್ಟೇ-ಪ್ರೂಫ್ ವಿಯರ್- ಸಾಮರ್ಥ್ಯವನ್ನು ಹೊಂದಿರುವ ಐಲೈನರನ್ನು ಕೊಳ್ಳಿರಿ.

ನಿಮ್ಮ ತ್ವಚೆಯ ಬಗ್ಗೆ ಕಾಳಜಿವಹಿಸಿ
ನೀವು ನಿಮ್ಮ ತ್ವಚೆಯ ಬಗ್ಗೆ ಕಾಳಜಿವಹಿಸಲಿಲ್ಲವಾದಲ್ಲಿ ಯಾವ ಬಗೆಯ ಮೇಕಪ್ ಹಚ್ಚಿದರು ಅದು ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ ನಿಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿ. ಉತ್ತಮವಾದ ಮೊಯಿಶ್ಚರೈಸರನ್ನು ಮೇಕಪ್ ಮಾಡುವ ಮೊದಲು ಹಚ್ಚಿ. ಆದರೆ ಮಲಗುವ ಮುನ್ನ ರಾತ್ರಿಯ ಸಮಯದಲ್ಲಿ ನಿಮ್ಮ ಮೇಕಪ್ ತೆಗೆದು ಮುಖವನ್ನು ತೊಳೆಯುವುದನ್ನು ಮರೆಯಬೇಡಿ.

ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ
ನೀರು, ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕಾಗಿ ಬಳಸಬಹುದಾದ ಅತ್ಯಂತ ಅನುಕೂಲಕರ ಉತ್ಪನ್ನಗಳಲ್ಲಿ ಒಂದು. ನಿಮ್ಮ ದೇಹದ ವ್ಯವಸ್ಥೆಯನ್ನ ಶುದ್ಧೀಕರಿಸಿ ಜೀವಾಣುಗಳನ್ನು ಹೋಗಲಾಡಿಸಲು ಮತ್ತು ಅತ್ಯುತ್ತಮ ಚರ್ಮವನ್ನು ಪಡೆಯಲು ಪ್ರತಿ ದಿನ ಕನಿಷ್ಠ 8 ಲೋಟ ನೀರನ್ನು ಕುಡಿಯಿರಿ. ಇದು ನಿಮ್ಮ ಕೂದಲಿಗೂ ತುಂಬಾ ಒಳ್ಳೆಯದು.

ನಿಮ್ಮ ಕೂದಲಿನ ಬಗ್ಗೆ ಕಾಳಜಿಯನ್ನು ವಹಿಸಿ
ಒಂದೇ ಬಗೆಯ ಶಾಂಪೂ ಳಸುವುದನ್ನು ಆದಷ್ಟು ಕಡಿಮೆ ಮಾಡಿ ಏಕೆಂದರೆ ಅವರ ಪ್ರಕಾರ ಒಂದೇ ಬಗೆಯ ಶಾಂಪೂವನ್ನು ಬಳಸಿದರೆ ಅದು ಕೂದಲಿನ ಮೇಲೆ ತನ್ನ ಪ್ರಭಾವವನ್ನು ಕಳೆದುಕೊಂಡು ಕೂದಲನ್ನು ಮಂಕಾಗಿ ಕಾಣಿಸುವಂತೆ ಮಾಡುತ್ತದೆಯಂತೆ. ಇದು ಎಷ್ಟರ ಮಟ್ಟಿಗೆ ನಿಜ ಎಂದು ತಿಳಿದಿಲ್ಲ. ಆದರೆ ಪ್ರತಿ ಬಾರಿ ನಾನು ಶಾಂಪೂವನ್ನು ಬದಲಾಯಿಸಿದಾಗಲು ಕೂದಲು ಮತ್ತಷ್ಟು ತಾಜಾತನದಿಂದ ಕಂಗೊಳಿಸಿದ್ದಂತು ಸಂಶೋಧನೆಯಿಂ ಧೃಢಪಟ್ಟಿದೆ. ಹಾಗಾಗಿ ನೀವು ಸಹ ಆಗಾಗ್ಗೆ ನಿಮ್ಮ ಶಾಂಪೂವನ್ನು ಬದಲಾಯಿಸಿ ನೋಡಿ, ಆಗ ನಿಮ್ಮ ಕೂದಲಿಗೆ ಯಾವ ಶಾಂಪೂ ಉತ್ತಮವೆಂಬುದನ್ನು ನೀವೇ ತಿಳಿದುಕೊಳ್ಳುವಿರಿ.

English summary

Top Natural beauty secrets should know for sure

In the list of beauty advice below Beauty High breaks down all those tips to make the industry less scary for women from makeup artists, hairstylists, skincare gurus and of course, our beauty staff. Remember, beauty should always be fun! have a look
Story first published: Friday, January 9, 2015, 14:39 [IST]
X
Desktop Bottom Promotion