For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಚರ್ಮದ ಕಾಂತಿ, ಕೋಮಲತೆಯನ್ನು ಕಾಯ್ದುಕೊಳ್ಳುವುದು ಹೇಗೆ?

By Arpitha Rao
|

ಕೊರೆಯುವ ಚಳಿ, ತಣ್ಣಗಿನ ಗಾಳಿ, ಕಡಿಮೆ ಆರ್ದ್ರತೆ ಇವುಗಳು ಮುಖ ಮತ್ತು ಮೈ ಕಾಂತಿಯನ್ನು ಕಳೆಗುಂದುವಂತೆ ಮಾಡುತ್ತವೆ. ಕೊರೆಯುವ ಚಳಿ ತುಟಿ ಒಡೆಯುವಂತೆ ಮಾಡಿ, ಚರ್ಮದ ತುರಿಕೆಯನ್ನು ಕೂಡ ಹೆಚ್ಚಿಸಬಹುದು. ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಣಗುವುದು ಮತ್ತು ನವೆ ಉಂಟಾಗುವುದು ಸಾಮಾನ್ಯ. ಎಷ್ಟೇ ಬಾಡಿ ಲೋಷನ್ ಮತ್ತು ಮಾಯಿಶ್ಚರೈಸರ್ ಅನ್ನು ನೀವು ಚರ್ಮಕ್ಕೆ ಹಚ್ಚಿದರೂ ಕೂಡ ಇದರ ತೊಂದರೆ ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಅದರ ಹೊಡೆತಕ್ಕೆ ಸಿಲುಕುವ ನಿಮ್ಮ ಶರೀರದ ಅಂಗವೆಂದರೆ ತುಟಿ ಹಾಗೂ ಕಾಲಿನ ಹಿಮ್ಮಡಿ ಹೊಡೆಯುವುದು.

ಹಾಗಾಗಿ ಸೂರ್ಯನ ವಿಕಿರಣಗಳಿಂದ, ಚರ್ಮದ ಒಣಗುವಿಕೆಯಿಂದ ತಪ್ಪಿಸಲು ಮತ್ತು ತಾರುಣ್ಯವನ್ನು ಕಾಪಾಡಲು ನಾವು ದಿನನಿತ್ಯ ಬಳಸುವ ಕೆಲವು ಆಹಾರಗಳು ಕೂಡ ಸಹಾಯಕವಾಗಬಲ್ಲದು. ಚಳಿಗಾಲದಲ್ಲಿ ಕೆಲವು ವಸ್ತುಗಳನ್ನು ಬಳಸುವುದರ ಮೂಲಕ ಮೈಕಾಂತಿಯನ್ನು ಸುಂದರವಾಗಿ ಕಾಪಾಡಿಕೊಳ್ಳಬಹುದು. ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ತ್ವಚೆ ಸಮಸ್ಯೆಗೆ ಮನೆಯಲ್ಲಿಯೇ ಮುಲಾಮ್!

ಅಲೀವ್ ಎಣ್ಣೆ

ಅಲೀವ್ ಎಣ್ಣೆ

ಚಳಿಗಾಲದಲ್ಲಿ ಚರ್ಮದ ಒಣಗುವಿಕೆಯನ್ನು ತಡೆಯಲು ಆಲೀವ್ ಎಣ್ಣೆ ಬಹಳ ಉಪಯುಕ್ತ. ವಿಟಮಿನ್ ಎ ಮತ್ತು ಇ ಜೊತೆಗೆ ಇತರ ಖನಿಜಾಂಶಗಳನ್ನೂ ಹೊಂದಿರುವ ಈ ಆಲೀವ್ ಎಣ್ಣೆಯು ಚರ್ಮದ ತೇವಾಂಶವನ್ನು ಕಾಪಾಡಿ ಮೃದು ಮತ್ತು ಕಾಂತಿಯುತವಾಗುವಂತೆ ಮಾಡುತ್ತದೆ.ಇದರ ಜೊತೆಗೆ ಚರ್ಮವು ಸುಕ್ಕುಗಟ್ಟುವುದನ್ನು ತಡೆದು ಮೈ ಕಾಂತಿಯನ್ನು ಇನ್ನಷ್ಟು ಹೆಚ್ಚಿಸಿ ತಾರುಣ್ಯವನ್ನು ಕಾಪಾಡುತ್ತದೆ. ಪ್ರತಿದಿನ ಸ್ನಾನ ಮಾಡುವ ಮೊದಲು ಮುಖ, ಮೊಣಕೈ, ಮೊಣಕಾಲು, ಭುಜಗಳಿಗೆ ಬೆಚ್ಚಗಿನ ಆಲೀವ್ ಎಣ್ಣೆ ಹಚ್ಚಿ ಮಸಾಜ್ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ನಂತರ ಅಧಿಕವಾದ ಎಣ್ಣೆಯನ್ನು ಹತ್ತಿಯಿಂದ ಒರೆಸಿದರೆ ಮುಖವು ಮೃದುವಾಗಿ,ಕಾಂತಿಯುತವಾಗಿ ಕಾಣುತ್ತದೆ.

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ರಾಡಿಕಲ್ ಹಾನಿಯನ್ನು ತಡೆಯುತ್ತದೆ. ಇದರಲ್ಲಿರುವ ಲೆಕೊಪೇನ್ ಎಂಬ ಅಂಶ ಚರ್ಮವನ್ನು ಹೊಳೆಯುವಂತೆ ಕಾಪಾಡುತ್ತದೆ. ಜೊತೆಗೆ ಇದರಲ್ಲಿರುವ ಪೊಟ್ಯಾಶಿಯಂ ಅಂಶ ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುವುದರ ಜೊತೆಗೆ ಸೂರ್ಯನ ವಿಕಿರಣದಿಂದ ಆಗುವ ಹಾನಿಯನ್ನು ಕೂಡ ತಡೆಯುವ ಶಕ್ತಿಯನ್ನು ಹೊಂದಿದೆ. ದ್ರಾಕ್ಷಿಯಲ್ಲಿರುವ ಅಮೇನೋ ಆಸಿಡ್ ಅಂಶವು ಚರ್ಮವನ್ನು ಹೆಚ್ಚು ಮೃದು ಮತ್ತು ಕಾಂತಿಯುತವಾಗಿಸುತ್ತದೆ.

ಬೆಣ್ಣೆ ಹಣ್ಣು (ಅವಕಾಡೋ)

ಬೆಣ್ಣೆ ಹಣ್ಣು (ಅವಕಾಡೋ)

ಬೆಣ್ಣೆ ಹಣ್ಣನ್ನು ಬಳಸಿ ಚಳಿಗಾಲದಲ್ಲಿ ಒಣಗಿದ ಚರ್ಮವನ್ನು ಮೃದುವಾಗಿಸಿಕೊಳ್ಳಬಹುದು. ವಿಟಮಿನ್ ಎ,ಸಿ,ಇ ಜೊತೆಗೆ ಸಮೃದ್ಧ ಕೊಬ್ಬನ್ನು ಹೊಂದಿರುವ ಬೆಣ್ಣೆಹಣ್ಣು ಚರ್ಮದ ಕಾಂತಿ ಹೆಚ್ಚಿಸಲು ಉಪಯುಕ್ತವಾಗಿದೆ.ಇದರ ಜೊತೆಗೆ ಮ್ಯಾಗ್ನಿಶಿಯಂ,ಪೊಟ್ಯಾಶಿಯಂ,ನಾರಿನ ಅಂಶ ಆರೋಗ್ಯಯುತ ಚರ್ಮ ನಿಮ್ಮದಾಗಿಸಲು ಸಹಕರಿಸುತ್ತದೆ. ಅವಕಾಡೋ ಹಣ್ಣನ್ನು ಬಳಸಿ ಫೇಸ್ ಮಾಸ್ಕ್ ಕೂಡ ಮಾಡಬಹುದು.ಈ ಹಣ್ಣಿನ ತಿರುಳನ್ನು ತೆಗೆದು ಸರಿಯಾಗಿ ನುರಿಯಿರಿ.ಇದಕ್ಕೆ ಒಂದು ಟೀ ಚಮಚ ಜೇನು ಮತ್ತು ಆಲೀವ್ ಎಣ್ಣೆ ಹಾಕಿ ಬೆರೆಸಿ.ಇದನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ.ನಂತರ ಬಿಸಿ ನೀರಿನಲ್ಲಿ ಮುಖವನ್ನು ತೊಳೆಯಿರಿ.ಈ ರೀತಿ ವಾರದಲ್ಲಿ ಒಂದೆರಡು ಬಾರಿ ಮಾಡುವುದರಿಂದ ಮೃದುವಾದ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ. ಅವಕಾಡೋ ಹಣ್ಣಿನಲ್ಲಿ ತೇವಾಂಶ ಅಧಿಕವಾಗಿರುತ್ತದೆ.ಚಳಿಗಾಲದಲ್ಲಿ ದೇಹಕ್ಕೆ ಸ್ನಾನಕ್ಕಿಂತ ಮೊದಲು ಹಚ್ಚುವುದರಿಂದ ಮೃದುವಾದ ಚರ್ಮ ಪಡೆಯಬಹುದು.

ಕ್ಯಾರೆಟ್

ಕ್ಯಾರೆಟ್

ಕೊರೆಯುವ ಚಳಿಯಲ್ಲೂ ಕೂಡ ಆರೋಗ್ಯಯುತ, ಹೊಳೆಯುವ ಚರ್ಮ ನಿಮ್ಮದಾಗಿಸುವಲ್ಲಿ ವಿಟಮಿನ್ ಎ ಅಂಶ ಹೆಚ್ಚಿರುವ ಕ್ಯಾರೆಟ್ ಉಪಯುಕ್ತ. ಕ್ಯಾರೆಟ್ ಬಳಸುವುದರಿಂದ ಸುಕ್ಕು ಮತ್ತು ಚರ್ಮ ಒಣಗುವುದನ್ನು ತಡೆಯಬಹುದು. ಕ್ಯಾರೆಟ್ ನಲ್ಲಿರುವ ಬೀಟ ಕ್ಯಾರೋಟಿನ್ ಮತ್ತು ಲೈಕೊಪಿನ್ ಅಂಶ ಸೂರ್ಯನ ವಿಕಿರಣಕ್ಕೆ ಒಡ್ಡಿ ಚರ್ಮ ಹಾನಿಗೊಳಗಾಗುವುದನ್ನು ತಡೆಯುತ್ತದೆ. ಕ್ಯಾರೆಟ್ ಪೊಟ್ಯಾಶಿಯಂ ಅನ್ನು ಅಧಿಕವಾಗಿ ಒಳಗೊಂಡಿರುವುದರಿಂದ ಒಣ ಚರ್ಮದ ತೊಂದರೆಯನ್ನು ಕೂಡ ಹೋಗಲಾಡಿಸುತ್ತದೆ. ಪ್ರತಿದಿನ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಚರ್ಮದ ತೇವಾಂಶವನ್ನು ಕಾಪಾಡಬಹುದು. ಕ್ಯಾರೆಟ್ ಪ್ಯೂರಿಯನ್ನು ಒಂದು ಟೀ ಚಮಚ ಜೇನು ಮತ್ತು ಹಾಲಿನ ಕ್ರೀಂನೊಂದಿಗೆ ಬೆರೆಸಿ, ಒಂದೆರಡು ಹನಿ ಅಲೀವ್ ಎಣ್ಣೆ ಸೇರಿಸಿ. ಇದನ್ನು ಸ್ವಚ್ಛಗೊಳಿಸಿದ ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಹತ್ತು ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ.ವಾರದಲ್ಲಿ ಒಂದೆರಡು ಬಾರಿ ಹೀಗೆ ಮಾಡುವುದರಿಂದ ತೇವಾಂಶದಿಂದ ಕೂಡಿದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.

ಬ್ರೋಕೋಲಿ

ಬ್ರೋಕೋಲಿ

ಬ್ರೋಕೋಲಿ ಚರ್ಮದ ಆರೋಗ್ಯಕ್ಕೆ ಇನ್ನೊಂದು ಉತ್ತಮ ತರಕಾರಿ. ವಿಟಮಿನ್ ಎ ಮತ್ತು ಸಿ ಅಂಶ ಹೆಚ್ಚಿರುವುದರಿಂದ ಇದು ಆರೋಗ್ಯಯುತ ಚರ್ಮ ನಿಮ್ಮದಾಗಿಸುತ್ತದೆ. ವಿಟಮಿನ್ ಸಿ, ತ್ಯಾಜ್ಯ ಅಂಶವನ್ನು ಹೊರಹಾಕಲು ಸಹಕರಿಸಿದರೆ ವಿಟಮಿನ್ ಎ,ಸೂರ್ಯನ ಕಿರಣಗಳಿಂದ ಚರ್ಮ ಹಾನಿಯಾಗುವುದನ್ನು ತಡೆಯುತ್ತದೆ. ಅದಲ್ಲದೆ ಚಳಿಗಾಲದಲ್ಲಿ ಹೆಚ್ಚಿನ ಜನರು ಪಡೆಯುವ ಒಣ ಚರ್ಮವನ್ನು ಹೋಗಲಾಡಿಸಲು ಈ ತರಕಾರಿ ಸಹಕರಿಸುತ್ತದೆ. ಚಳಿಗಾಲದಲ್ಲಿ ನಿರಂತರವಾಗಿ ಬ್ರೋಕೋಲಿ ಬಳಸಿ ಚರ್ಮದ ನೈಸರ್ಗಿಕ ಹೊಳಪನ್ನು ಹೆಚ್ಚಿಸಬಹುದು.

ಬಾದಾಮಿ

ಬಾದಾಮಿ

ತಣ್ಣಗಿನ ಚಳಿಗಾಲದ ದಿನಗಳಲ್ಲಿ ಬಾದಾಮಿಯು ಚರ್ಮದ ಕಾಂತಿ ಹೆಚ್ಚಿಸಲು ಸಹಕರಿಸುತ್ತದೆ. ಇದರಲ್ಲಿರುವ ವಿಟಮಿನ್ ಇ ಸೂರ್ಯನ ವಿಕಿರಣದಿಂದಾಗುವ ಹಾನಿಯನ್ನು ತಡೆಯುತ್ತದೆ. ತಾರುಣ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಬಾದಾಮಿ ಬೀಜದಿಂದ ಸುಕ್ಕುಗಟ್ಟುವಿಕೆಯನ್ನು ತಡೆಗಟ್ಟಬಹುದು. ಸ್ನಾನ ಮಾಡುವ ಮೊದಲು ಬಾದಾಮಿ ಎಣ್ಣೆ ಅಥವಾ ಬಾದಾಮಿ ಹಾಲನ್ನು ಬಳಸಿ.ಇದು ಚರ್ಮವು ಹೊಳೆಯುವಂತೆ ಮಾಡುವಲ್ಲಿ ಸಹಕರಿಸುತ್ತದೆ. ರಾತ್ರಿ ಮಲಗುವ ಮೊದಲು ಬಾದಾಮಿಯನ್ನು ನೆನೆಸಿಡಿ. ಮಾರನೆಯ ದಿನ ಸಿಪ್ಪೆ ಸುಲಿದು ರುಬ್ಬಿಕೊಳ್ಳಿ. ಹಾಲು ಅಥವಾ ಮೊಸರಿನ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ.ವಾರದಲ್ಲಿ ಒಂದೆರಡು ಬಾರಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಅಧಿಕವಾಗುತ್ತದೆ.

ಪಾಲಾಕ್ ಸೊಪ್ಪು

ಪಾಲಾಕ್ ಸೊಪ್ಪು

ಪಾಲಕ್ ಸೊಪ್ಪು ಆರೋಗ್ಯಯುತವಾದ ಚರ್ಮ ನೀಡುವಲ್ಲಿ ಸಹಕಾರಿ.ಈ ಹಸಿರು ತರಕಾರಿ ಅಕಾಲಿಕ ಮುಪ್ಪನ್ನು ತಡೆಯುತ್ತದೆ.ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿರುವ ವಿಟಮಿನ್ ಎ ಚರ್ಮದ ಕಾಂತಿಯನ್ನು ಹೆಚ್ಚಿಸಿ ಆರೋಗ್ಯಯುತವಾಗಿಸುವಲ್ಲಿ ಸಹಕರಿಸುತ್ತದೆ.ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ಚರ್ಮದ ಜೀವಕಣಗಳಿಗೆ ಜೀವತುಂಬಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ನಿಶ್ಯಕ್ತಿಯಾಗುವುದರ ಜೊತೆಗೆ ಚರ್ಮವೂ ಕೂಡ ಬಾಡಿಹೋಗುತ್ತದೆ. ಪಾಲಾಕ್ ಸೊಪ್ಪಿನಲ್ಲಿ ದೊರೆಯುವ ಹೇರಳ ಕಬ್ಬಿಣದ ಅಂಶ ದೇಹಕ್ಕೆ ಇನ್ನಷ್ಟು ಚೈತನ್ಯ ತುಂಬಿ ಚರ್ಮದ ಅಂದವನ್ನು ಹೆಚ್ಚಿಸುತ್ತದೆ. ಪ್ರತಿದಿನ ಅರ್ಧ ಲೋಟ ಪಾಲಾಕ್ ಸೊಪ್ಪಿನ ಜ್ಯೂಸ್ ಜೊತೆ ನಿಂಬೆಹಣ್ಣನ್ನು ಬೆರೆಸಿ ಕುಡಿಯುವುದರಿಂದ ಆರೋಗ್ಯಕರ ಚರ್ಮ ಪಡೆಯಬಹುದು.

ಗ್ರೀನ್ ಟೀ

ಗ್ರೀನ್ ಟೀ

ಚರ್ಮದ ಹಾನಿಯನ್ನು ತಡೆಯಲು ಗೀನ್ ಟೀಯಲ್ಲಿರುವ ಉತ್ಕರ್ಷಣ ಅಂಶ ಸಹಾಯಕ.ಪ್ರತಿದಿನ ಹಸಿರು ಚಹಾ ಸೇವನೆಯಿಂದ ಚರ್ಮದ ಹೊಳಪು ಹೆಚ್ಚಿಸಿಕೊಳ್ಳಬಹುದು.ಅದಲ್ಲದೆ ಗ್ರೀನ್ ಟೀಯಲ್ಲಿರುವ ಪಾಲಿಪೆನಾಲ್ಸ್ ಅಂಶ ಸುಕ್ಕುಗಟ್ಟುವುದು ಮತ್ತು ಚರ್ಮದಲ್ಲಿ ನೆರಿಗೆ ಬೀಳುವುದನ್ನು ತಡೆದು ತಾರುಣ್ಯ ಕಾಪಾಡುವ ಶಕ್ತಿಯನ್ನು ಹೊಂದಿದೆ. ತಣ್ಣಗಿನ ಚಹಾ ಕಣ್ಣನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ತೊಳೆದರೆ ಚರ್ಮ ಕಳೆಪಡೆಯುತ್ತದೆ. ಮನೆಯಲ್ಲಿಯೇ ಫೇಸ್ ಮಾಸ್ಕ್ ಮಾಡಲು ಉಪಯೋಗಿಸಿದ ಟೀ ಬ್ಯಾಗ್ ಗೆ ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿ ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿ.ಹತ್ತು ನಿಮಿಷ ಬಿಟ್ಟು ಮುಖ ತೊಳೆಯಿರಿ.ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಈ ರೀತಿ ಮಾಡಿನೋಡಿ.ಜೊತೆಗೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಗ್ರೀನ್ ಟೀ ಕುಡಿಯುವುದನ್ನು ಮರೆಯಬೇಡಿ.

ಸಾಲ್ಮನ್

ಸಾಲ್ಮನ್

ಚಳಿಗಾಲದ ದಿನಗಳಲ್ಲಿ ಚರ್ಮದ ತೊಂದರೆಯನ್ನು ತಡೆಯಲು ಸಾಲ್ಮನ್ ಮೀನು ಅತ್ಯುತ್ತಮ.ಆಹಾರದಲ್ಲಿ ಸಾಲ್ಮನ್ ಬಳಸುವುದರಿಂದ ಇದರಲ್ಲಿರುವ ಒಮೇಗಾ -೩ ಅಂಶ ಚರ್ಮವನ್ನು ಅಂದಗೊಳಿಸಲು ಸಹಕರಿಸುತ್ತದೆ. ಸಾಲ್ಮನ್ ದೇಹದಲ್ಲಿರುವ ಕೊಬ್ಬನ್ನು ಸಮತೋಲನಗೊಳಿಸುತ್ತದೆ ಮತ್ತು ಚಳಿಯಿಂದಾಗಿ ಚರ್ಮ ಒಣಗುವುದನ್ನು ತಪ್ಪಿಸಿ ತೇವಾಂಶ ಕಾಪಾಡುತ್ತದೆ.ಇದೆಲ್ಲದರ ಜೊತೆಗೆ ಸೂರ್ಯನ ವಿಕಿರಣಗಳಿಂದ ಚರ್ಮಕ್ಕೆ ಹಾನಿಯಾಗುವುದನ್ನು ತಡೆಯುವ ಸಲೆನಿಯಂ ಮತ್ತಿತರ ಖನಿಜಾಂಶಗಳು ಇದರಲ್ಲಿವೆ.ಇದರಲ್ಲಿರುವ ಸತುವಿನ ಅಂಶ ಹೊಸ ಚರ್ಮವನ್ನು ಪಡೆಯಲು ಸಹಕರಿಸುತ್ತದೆ. ಮೃದುವಾದ ಸುಂದರ ಚರ್ಮ ನಿಮ್ಮದಾಗಿಸಿಕೊಳ್ಳಲು ಗ್ರಿಲ್ ಮಾಡಿದ ಅಥವಾ ಬೇಕ್ ಮಾಡಿದ ಸಾಲ್ಮನ್ ಮೀನಿನ ಖಾದ್ಯಗಳನ್ನು ತಿನ್ನಿ.

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್

ಶೇಖಡಾ ೭೦ ರಷ್ಟು ಕೋಕೋ ಬಳಸಿರುವ ಡಾರ್ಕ್ ಚಾಕೊಲೇಟ್ ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ.ಇದರಲ್ಲಿರುವ ಫ್ಲಾವೋನಲ್ಸ್ ಅಂಶ ಕೊರೆಯುವ ಚಳಿಯಲ್ಲಿ ಚರ್ಮ ಹದಗೆಡುವುದನ್ನು ಕೂಡ ತಡೆಯುತ್ತದೆ. ಸೂರ್ಯನ ವಿಕಿರಣಗಳಿಂದಾಗುವ ಹಾನಿಯನ್ನು ತಪ್ಪಿಸಲು ಈ ಫ್ಲಾವೋನಲ್ಸ್ ಸಹಕಾರಿ.ಇದು ಚರ್ಮವನ್ನು ಮೃದುಗೊಳಿಸಿ, ರಕ್ತ ಸಂಚಾರ ಹೆಚ್ಚಿಸಿ ಆರೋಗ್ಯ ಕಾಪಾಡುತ್ತದೆ. ಹೊಳೆಯುವ ಸುಂದರ ಚರ್ಮಕಾಂತಿ ಪಡೆಯಲು ವಾರದಲ್ಲಿ ಎರಡರಿಂದ ಮೂರು ಔನ್ಸ್ ಚಾಕೊಲೇಟ್ ಬಳಸಿ. ಡಾರ್ಕ್ ಚಾಕೊಲೇಟ್ ಫೇಸ್ ಮಾಸ್ಕ್ ಮಾಡಿ ಮುಖಕ್ಕೆ ಬಳಸುವುದರಿಂದ ಮುಖದ ಚರ್ಮವನ್ನು ಕೂಡ ಹೊಳೆಯುವಂತೆ ಮಾಡಬಹುದು. ಡಾರ್ಕ್ ಚಾಕೊಲೇಟ್ ಕರಗಿಸಿ ಅದಕ್ಕೆ ಒಂದು ಚಮಚ ಕಡಲೆ ಹಿಟ್ಟು ಮತ್ತು ಹಾಲನ್ನು ಬೆರೆಸಿ,ಜೊತೆಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ ಮುಖಕ್ಕೆ ಹಚ್ಚಿ.೨೦ ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಆರೋಗ್ಯಯುತವಾದ,ಹೊಳೆಯುವ ಚರ್ಮವನ್ನು ಪಡೆಯಬಹುದು.

English summary

Top 10 Superfoods to Make Your Skin Glow This Winter

It can leave your skin dry and flaky as well as cause a dull complexion, cracked lips, itchiness and skin irritation. Along with a proper skin care routine, you need to keep a close eye on what you are eating to maintain a healthy glow throughout the winter season. Here are the top 10 superfoods to make your skin glow this winter.
Story first published: Tuesday, January 13, 2015, 19:13 [IST]
X
Desktop Bottom Promotion