For Quick Alerts
ALLOW NOTIFICATIONS  
For Daily Alerts

ಲಿಂಬೆ ಹಣ್ಣಿನ ಸಿಪ್ಪೆ- ತ್ವಚೆಯ ಸರ್ವರೋಗಕ್ಕೂ ರಾಮಬಾಣ

|

ಲಿಂಬೆರಸದ ಮಹತ್ವವನ್ನು ನಾವೆಲ್ಲಾ ಬಲ್ಲೆವು. ಆದರೆ ರಸ ಹಿಂಡಿದ ಬಳಿಕ ಉಳಿದ ಸಿಪ್ಪೆ? ಇದು ನಮ್ಮ ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ ಎಂದು ನಿಮಗೆ ತಿಳಿದಿತ್ತೇ? ಲಿಂಬೆ ಸಿಪ್ಪೆಯಲ್ಲಿಯೂ ಹೇರಳವಾಗಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಚರ್ಮಕ್ಕೆ ಸಹಜ ಕಾಂತಿ ಮತ್ತು ಸಹಜವರ್ಣ ಪಡೆಯಲು ನೆರವಾಗುತ್ತವೆ.

ಆದ್ದರಿಂದ ಮುಂದಿನ ಬಾರಿ ಲಿಂಬೆರಸವನ್ನು ಹಿಂಡಿದ ಬಳಿಕ ಸಿಪ್ಪೆಯನ್ನು ಎಸೆಯಬೇಡಿ. ಬದಲಿಗೆ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿಯೂ ಚರ್ಮದ ಆರೈಕೆಯಲ್ಲಿ ಉತ್ತಮ ಪಾತ್ರ ವಹಿಸುತ್ತದೆ.

ನಿಮ್ಮ ಚರ್ಮಕ್ಕೆ ನಿಯಮಿತ ಆರೈಕೆ ನೀಡಲು ಸಾಕಷ್ಟು ಪ್ರಮಾಣದಲ್ಲಿ ಸಿಪ್ಪೆಯ ಪುಡಿಯನ್ನು ಶೇಖರಿಸಿಟ್ಟುಕೊಳ್ಳಿ. ಬಿಸಿಲಿನಿಂದ ಕಪ್ಪಗಾಗಿದ್ದ ಚರ್ಮದ ವರ್ಣವನ್ನು ಸಹಜವರ್ಣದತ್ತ ತರಲು ನೆರವಾಗುವ ಈ ಪುಡಿಯ ಇತರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಮೊಡವೆ ನಿವಾರಣೆಗೆ

ಮೊಡವೆ ನಿವಾರಣೆಗೆ

ಕೊಂಚ ಲಿಂಬೆಸಿಪ್ಪೆಯಪುಡಿಯನ್ನು ಎಳನೀರಿನಲ್ಲಿ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ರಾತ್ರಿ ಮಲಗುವ ಮುನ್ನ ಮೊಡವೆಗಳಿರುವಲ್ಲಿ ಹಚ್ಚಿ ಒಣಗಲು ಬಿಡಿ. ಇಡಿಯ ರಾತ್ರಿ ಹೀಗೇ ಇರಲಿ. ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮೊಡವೆಗಳು ಪೂರ್ತಿಯಾಗಿ ಹಣ್ಣಾಗಿ ಕೀವಿನ ಮುಖಾಂತರ ಹೊರಬಂದು ಚರ್ಮ ಸಹಜವಾಗಿ ತನ್ನ ಮೂಲ ಸ್ವರೂಪವನ್ನು ಪಡೆಯಲು ನೆರವಾಗುತ್ತದೆ.

ಮೃದುವಾದ ಚರ್ಮಕ್ಕೆ

ಮೃದುವಾದ ಚರ್ಮಕ್ಕೆ

ಮೃದುವಾದ ರೇಷ್ಮೆಯಂತಹ ಚರ್ಮಕ್ಕಾಗಿ ಈ ವಿಧಾನವನ್ನು ಅನುಸರಿಸಿ. ಒಂದು ಚಿಕ್ಕ ಚಮಚ ಲಿಂಬೆರಸ, ಒಂದು ಚಮಚ ಲಿಂಬೆಪುಡಿ ಮತ್ತು ಒಂದು ಚಮಚ ಕಿತ್ತಳೆ ಹಣ್ಣಿನ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖದ ಮೇಲೆ ಹಚ್ಚಿ ಅರ್ಧಘಂಟೆ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ನೆರಿಗೆ ಬರುವುದನ್ನು ತಪ್ಪಿಸಲು

ನೆರಿಗೆ ಬರುವುದನ್ನು ತಪ್ಪಿಸಲು

ಲಿಂಬೆಪುಡಿ, ಪಪ್ಪಾಯಿಹಣ್ಣಿನ ರಸವನ್ನು ಸಮಪ್ರಮಾಣದಲ್ಲಿ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಯ ಮೇಲೆ ಹಚ್ಚಿ ಒಣಗಲು ಬಿಡಿ. ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಬಳೀಕ ಕೊಂಚ ಆಲಿವ್ ಎಣ್ಣೆಯನ್ನು ಹಚ್ಚಿ ಚರ್ಮವನ್ನು ನಯವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರಕುತ್ತದೆ ಹಾಗೂ ನೆರಿಗೆಗಳು ಬರುವುದನ್ನು ತಪ್ಪಿಸುತ್ತದೆ.

ಮುಖದ ಚರ್ಮದಿಂದ ಸತ್ತ ಜೀವಕೋಶಗಳನ್ನು ನಿವಾರಿಸಲು

ಮುಖದ ಚರ್ಮದಿಂದ ಸತ್ತ ಜೀವಕೋಶಗಳನ್ನು ನಿವಾರಿಸಲು

ಸಮಪ್ರಮಾಣದಲ್ಲಿ ಉಪ್ಪು, ಲಿಂಬೆಪುಡಿ ಮತ್ತು ಕೆಲವು ಹನಿ ಗುಲಾಬಿನೀರನ್ನು ಮಿಶ್ರಣಮಾಡಿ. ಈ ಮಿಶ್ರಣವನ್ನು ಉಪಯೋಗಿಸಿ ಮುಖ, ಕೈ ಮತ್ತು ಕುತ್ತಿಗೆಯ ಚರ್ಮವನ್ನು ಉಜ್ಜಿಕೊಳ್ಳುವುದರಿಂದ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಇದನ್ನು ವಾರಕ್ಕೊಮ್ಮೆ ಬಳಸುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

ಎಣ್ಣೆಚರ್ಮದ ಪಸೆಯನ್ನು ನಿವಾರಿಸಲು

ಎಣ್ಣೆಚರ್ಮದ ಪಸೆಯನ್ನು ನಿವಾರಿಸಲು

ಒಂದು ಮೇಳೆ ನಿಮ್ಮ ಚರ್ಮ ಎಣ್ಣೆಚರ್ಮವಾಗಿದ್ದರೆ ಲಿಂಬೆಪುಡಿಯಲ್ಲಿರುವ ಸಿಟ್ರಿಕ್ ಆಮ್ಲ ನೆರವಿಗೆ ಬರುತ್ತದೆ. ಸಮಪ್ರಮಾಣದಲ್ಲಿ ಹಸಿಹಾಲು ಮತ್ತು ಲಿಂಬೆಪುಡಿಯನ್ನು ಮಿಶ್ರಣ ಮಾಡಿ ಎಣ್ಣೆಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಅರ್ಧಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

English summary

Tips To Use Lemon Peel For Skin

Most of us have used lemon juice for various skin remedies but seldom do we use lemon peel for beauty. As lemon peels are also rich in vitamin C and many other nutrients, you can't rule out the skin whitening and bleaching properties of these peels. Now, let us discuss about some tips that help us exploit the lemon peel benefits for skin.
X
Desktop Bottom Promotion