For Quick Alerts
ALLOW NOTIFICATIONS  
For Daily Alerts

ಫೇಶಿಯಲ್ ಎಂದರೇನು? ತ್ವಚೆಯ ಆರೈಕೆಗೆ ಇದು ಸೂಕ್ತವೇ?

By Super
|

ಸೌಂದರ್ಯದ ಕಾಳಜಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸೌಂದರ್ಯ ಮಳಿಗೆಗಳು ತಲೆ ಎತ್ತುತ್ತಿವೆ. ಇವು ನೀಡುವ ಸೇವೆಗಳಲ್ಲಿ ಪೇಶಿಯಲ್ ಸಹಾ ಒಂದು. ಚರ್ಮದ ಆರೈಕೆಯ ಬಗ್ಗೆ ಹೆಚ್ಚು ಗಮನ ನೀಡುವ ಮಹಿಳೆಯರು ತಮ್ಮ ನೆಚ್ಚಿನ ಸ್ಪಾ ಅಥವಾ ಬ್ಯೂಟಿ ಪಾರ್ಲರುಗಳಿಗೆ ನಿಯಮಿತವಾಗಿ ಭೇಟಿ ಕೊಟ್ಟು ಅಗತ್ಯವಾದ ಸೇವೆ ಪಡೆದುಕೊಳ್ಳುತ್ತಿರುತ್ತಾರೆ. ಇವರ ತ್ವಚೆ ಆರೋಗ್ಯಕರ ಮತ್ತು ಸುಂದರವಾಗಿ ಕಾಣಲು

ಸೂಕ್ತ ವಿಧಾನದ ಫೇಶಿಯಲ್ ಪಡೆದಿರುವುದೇ ಕಾರಣ. ಆದರೆ ಇದಕ್ಕೂ ಮೊದಲು ಕೆಲವು ಮಾಹಿತಿಗಳನ್ನು ಅರಿತಿರುವುದು ಅಗತ್ಯ. ಬನ್ನಿ ಫೇಶಿಯಲ್ ಬಗ್ಗೆ ಇರುವ ಕೆಲವೊಂದು ಅಮೂಲ್ಯ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ ಮುಂದೆ ಓದಿ....

ಫೇಶಿಯಲ್ ಎಂದರೇನು?
ಇದನ್ನು ಅರಿಯಲು ನಮ್ಮ ತ್ವಚೆಯ ಬಗ್ಗೆ ತಿಳಿದುಕೊಳ್ಳುವುದು ಕೊಂಚ ಅಗತ್ಯ. ಎಲ್ಲರ ಚರ್ಮ ಒಂದೇ ತೆರನಾಗಿರುವುದಿಲ್ಲ. ಚರ್ಮ ಹೊರದೂಡುವ ಸ್ವಾಭಾವಿಕ ತೈಲಕ್ಕೆ ಅನುಗುಣವಾಗಿ ಒಣಚರ್ಮ, ಸಾಮಾನ್ಯ ಚರ್ಮ ಮತ್ತು ಎಣ್ಣೆ ಚರ್ಮವೆಂದು ಸ್ಥೂಲವಾಗಿ ವಿಂಗಡಿಸಬಹುದು. ಆದರೆ ಕೆಲವು ವಸ್ತುಗಳು ಅಲರ್ಜಿಕಾರಕವಾದುದರಿಂದ ಎಲ್ಲಾ ಪ್ರಸಾಧನಗಳು ಎಲ್ಲಾ ತರಹದ ಚರ್ಮಕ್ಕೆ ಸೂಕ್ತವೆಂದು ಹೇಳಲು ಬರುವುದಿಲ್ಲ. ಅಂತೆಯೇ ಇದರ ಆರೈಕೆಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

Tips To Choose The Right Facial For Skin

ಈ ಭಿನ್ನತೆಯನ್ನು ಅರಿತು ಚರ್ಮದ ಕಾಂತಿ ಹೆಚ್ಚಿಸಲು ಯಾವ ಪ್ರಸಾಧನ ಅತ್ಯಂತ ಸೂಕ್ತ ಎಂದು ಪರಿಗಣಿಸಿ ಆಯಾ ಪ್ರಸಾಧನವನ್ನು ಲೇಪನದ ಮೂಲಕ ಚರ್ಮಕ್ಕೆ ಒದಗಿಸುವುದೇ ಫೇಶಿಯಲ್! ಈ ಪ್ರಸಾಧನಗಳು ನೈಸರ್ಗಿಕವಾಗಿರಬಹುದು ಅಥವಾ ರಾಸಾಯನಿಕ ಮೂಲದ್ದೂ ಆಗಿರಬಹುದು. ಆದರೆ ಪರಿಣಿತರು ನಿಮಗೆ ಸೂಕ್ತವಾದ ಪ್ರಸಾಧನಗಳನ್ನು ಒದಗಿಸಬಲ್ಲರು. ಯಾವ ಕಾಲಕ್ಕೆ ಯಾವ ಫೇಶಿಯಲ್ ಸೂಕ್ತ?

ಫೇಶಿಯಲ್ ಯಾವಾಗ ಮಾಡಿಸಬೇಕು?
ಉತ್ತಮ ಪರಿಣಾಮಕ್ಕಾಗಿ ತಿಂಗಳಿಗೆ ಎರಡು ಬಾರಿ ಫೇಶಿಯಲ್ ಮಾಡಿಸಬೇಕು ಎಂದು ಪರಿಣಿತರು ಅಭಿಪ್ರಾಯ ಪಡುತ್ತಾರೆ. ನಿಮ್ಮ ಚರ್ಮಕ್ಕೆ ಎದುರಾಗಿರುವ ತೊಂದರೆಗಳನ್ನು ಅರಿತು ಅದರ ಪ್ರಕಾರ ಸೂಕ್ತ ಪ್ರಸಾಧನಗಳನ್ನು ಬಳಸಿದ ಬಳಿಕ ಅದರ ಪ್ರಭಾವ ಕಂಡುಬರಲು ಇಷ್ಟು ಸಮಯವಾದರೂ ಬೇಕು. ಒಂದು ವೇಳೆ ತ್ವಚೆಯ ತೊಂದರೆಗಳು ಗಂಭೀರವಲ್ಲದಿದ್ದರೆ, ಅಥವಾ ಮೊಡವೆಗಳ ಕಾಟ ಹೆಚ್ಚಿದ್ದರೆ ತಿಂಗಳಿಗೊಂದು ಬಾರಿ ಮಾಡಿಸಿಕೊಂಡರೂ ಸಾಕು. ಆದರೆ ಎಣ್ಣೆಯಂಶ ಹೆಚ್ಚಿದ್ದವರಿಗೆ ತಿಂಗಳಿಗೆ ಎರಡು ಫೇಶಿಯಲ್ ಅಗತ್ಯ.

ನೈಸರ್ಗಿಕ ಅಥವ ರಾಸಾಯನಿಕ, ಯಾವ ಪ್ರಸಾಧನ ಸೂಕ್ತ?
ಪರಿಣಿತರ ಅಭಿಪ್ರಾಯದ ಪ್ರಕಾರ ನೈಸರ್ಗಿಕ ವಿಧಾನ ಅತ್ಯಂತ ಸುರಕ್ಷಿತ ಮತ್ತು ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಇವುಗಳಲ್ಲಿ ಪೋಷಕಾಂಶಗಳು ಮತ್ತು ಚರ್ಮಕ್ಕೆ ಕಾಂತಿ ನೀಡುವ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇವುಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಅಲ್ಲದೇ ಇವು ಅಗ್ಗವೂ, ಸುಲಭವಾಗಿ ಸಿಗುವಂತಹವೂ ಆಗಿದೆ. ಆದರೆ ಇವುಗಳ ಒಂದೇ ತೊಂದರೆ ಎಂದರೆ ಇವುಗಳ ಪರಿಣಾಮ ಕೊಂಚ ನಿಧಾನವಾಗಿ ಆಗುತ್ತದೆ. ಒಂದು ವೇಳೆ ಕ್ಲುಪ್ತಕಾಲದಲ್ಲಿ ಅಗತ್ಯವಾದ ಪರಿಣಾಮ ಬೇಕೆಂದಿದ್ದರೆ (ಉದಾಹರಣೆಗೆ ವಿವಾಹದ ಸಮಯದಲ್ಲಿ) ಪರಿಣಿತರು ಸಲಹೆ ಮಾಡುವ ರಾಸಾಯನಿಕಗಳನ್ನು ಮಾತ್ರವೇ, ಅದೂ ಆ ಹೊತ್ತಿಗೆ ಮಾತ್ರ ಬಳಸುವುದು ಉತ್ತಮ. ಆದರೆ ಇದನ್ನು ಅಭ್ಯಾಸವಾಗಿಸಿದರೆ ಪರೋಕ್ಷ ಪರಿಣಾಮಗಳು ವಿಪರೀತವಾಗಬಹುದು.

ಯಾವ ತ್ವಚೆಗೆ ಯಾವ ಫೇಶಿಯಲ್ ಸೂಕ್ತ?
ಒಣಚರ್ಮದವರಿಗೆ ಹಣ್ಣುಗಳನ್ನು ಆಧರಿಸಿದ ಪ್ರಸಾಧನಗಳೇ ಸೂಕ್ತ. ಹಣ್ಣುಗಳಲ್ಲಿ ಪೋಷಕಾಂಶಗಳೂ ಇರುವುದರಿಂದ ಚರ್ಮ ಇವನ್ನು ನೇರವಾಗಿ ಹೀರುವಂತಾಗಿ ಸೌಮ್ಯ ಮತ್ತು ಕೋಮಲವಾಗುತ್ತದೆ. ಅಲ್ಲದೇ ಒಣಚರ್ಮದ ಹೊರಪದರ ವಿಪರೀತ ಒಣಗಿದ್ದು ಅತಿ ಸೂಕ್ಷ್ಮವಾದ ಬಿರುಕುಗಳು ಬಿಟ್ಟಿರುತ್ತವೆ. ಹಣ್ಣುಗಳ ರಸ ಈ ಬಿರುಕುಗಳಲ್ಲಿ ಇಳಿದು ಅವನ್ನು ತುಂಬಿಸಲು ನೆರವಾಗುತ್ತದೆ. ಅದೇ ಎಣ್ಣೆ ಚರ್ಮದವರಿಗೆ ಒಣಫಲಗಳನ್ನು ಆಧರಿಸಿದ ಪ್ರಸಾಧನಗಳು ಸೂಕ್ತವಾಗಿದೆ. ಏಕೆಂದರೆ ಚರ್ಮದಲ್ಲಿ ಎಣ್ಣೆಯಂಶ ವಿಪರೀತವಾಗಿದ್ದು ಇದನ್ನು ಹೀರಿಕೊಳ್ಳುವ ಅಂಶಗಳು ಬೇಕಾಗಿದೆ. ಒಣಫಲಗಳಲ್ಲಿ ಇವು ಹೇರಳವಾಗಿದ್ದು ಇವು ಎಣ್ಣೆಯಂಶವನ್ನು ಹೀರಿ ಚರ್ಮವನ್ನು ಕೋಮಲವಾಗಿಸುತ್ತವೆ.

ಇದಕ್ಕಾಗಿ ಸುಮಾರು ಒಂದು ಮುಷ್ಠಿಯಷ್ಟು ಒಣದ್ರಾಕ್ಷಿ ಮತ್ತು ಒಣ ನೇರಳೆ ಹಣ್ಣುಗಳನ್ನು (blackcurrant) ಅರೆದು ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ನೇರವಾಗಿ ಈಗ ತಾನೇ ತಣ್ಣೀರಿನಲ್ಲಿ ತೊಳೆದ ಮುಖಕ್ಕೆ ಲೇಪಿಸಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಎಣ್ಣೆಯಂಶವನ್ನೆಲ್ಲಾ ಇವು ಹೀರಿಬಿಟ್ಟಿರುತ್ತವೆ. ಮೊಡವೆಗಳಿರುವ ಚರ್ಮಕ್ಕೆ ಹೂವುಗಳ ದಳಗಳನ್ನು ಅರೆದು ಮಾಡಿದ ಲೇಪನ ಉತ್ತಮವಾಗಿದೆ. ಇದಕ್ಕಾಗಿ ಸುಮಾರು ಒಂದು ಮುಷ್ಟಿಯಷ್ಟು ಗುಲಾಬಿ ಹೂವುಗಳ ದಳಗಳನ್ನು ಮೂರು ದೊಡ್ಡಚಮಚ ಗುಲಾಬಿ ನೀರಿನೊಂದಿಗೆ ಅರೆದು ನಯವಾದ ಲೇಪನ ತಯಾರಿಸಿ.

ಇದನ್ನು ಈಗತಾನೇ ತೊಳೆದ ಮುಖಕ್ಕೆ ದಪ್ಪನಾಗಿ ಲೇಪಿಸಿ. ಮೊಡವೆಗಳಿರುವಲ್ಲಿ ಹೆಚ್ಚು ದಟ್ಟನಾಗಿರಲಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ತಿಂಗಳಿಗೆ ಎರಡು ಬಾರಿ ಹಚ್ಚಿರಿ. ಸಾಮಾನ್ಯ ಚರ್ಮದವರಿಗೆ ಹಣ್ಣು ಮತ್ತು ತರಕಾರಿಗಳನ್ನು ಅರೆದು ತಯಾರಿಸಿದ ಲೇಪನ ಸೂಕ್ತ. ಇದಕ್ಕಾಗಿ ನಾರು ಹೆಚ್ಚಿರುವ ತರಕಾರಿಗಳನ್ನೇ ಆಯ್ದುಕೊಳ್ಳಿ. ಓಟ್ಸ್, ಸೌತೆಕಾಯಿ, ಆಲುಗಡ್ಡೆ ಮೊದಲಾದವು ಸೂಕ್ತ ಆಯ್ಕೆಯಾಗಿದೆ. ಇದರೊಂದಿಗೆ ಹಾಲು ಮತ್ತು ಮೊಸರನ್ನೂ ಕೊಂಚ ಪ್ರಮಾಣದಲ್ಲಿ ಸೇರಿಸುವ ಮೂಲಕ ಇನ್ನೂ ಉತ್ತಮ ಪರಿಣಾಮವನ್ನು ಪಡೆಯಬಹುದು.

English summary

Tips To Choose The Right Facial For Skin

If your going in for a facial, it is necessary to choose the right one depending on the skin type. Here are some of the tips to follow, take a lookSkin care is important for everyone. Pampering your skin and treating it with care will promote better skin in no time. For women who love their skin and visits spas and saloons to pamper their skin, here are some tips to follow before getting a facial done.
Story first published: Thursday, November 19, 2015, 11:25 [IST]
X
Desktop Bottom Promotion