For Quick Alerts
ALLOW NOTIFICATIONS  
For Daily Alerts

ಚೆಂದುಳ್ಳಿ ಚೆಲುವೆಯರ ಸೌಂದರ್ಯದ ಗುಟ್ಟು-ರಟ್ಟು...

By Super
|

ಕಾಂತಿಯುಕ್ತ, ಕಲೆರಹಿತ, ಆರೋಗ್ಯಕರ ತ್ವಚೆ ಹೊಂದುವುರು ಪ್ರತಿಯೊಬ್ಬರ ಕನಸು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕಾಲನ ಹೊಡೆತಕ್ಕೆ ವರ್ಷಗಳೊಂದಿಗೇ ತ್ವಚೆಯೂ ಕಳಾಹೀನವಾಗುತ್ತಲೇ ಹೋಗುತ್ತದೆ. ಆದರೆ ಕೆಲವರು ಇದಕ್ಕೆ ತದ್ವಿರುದ್ಧವಾಗಿ ಕಾಲದ ಹೊಡೆತಕ್ಕೆ ತಗಲದವರಂತೆ ಸದಾ ತರುಣರಂತೆಯೇ ಇರುತ್ತಾರೆ. ಇವರ ಸಹಜ ಸೌಂದರ್ಯವನ್ನು ಸಹಿಸದ ಕೆಲವರು 'ಇದು ಮೇಕಪ್ಪಿನ ಪರಿಣಾಮ' ಎಂದು ಕುಹಕವಾಡಿದರೂ ಇದಕ್ಕೆ ಸೊಪ್ಪು ಹಾಕದೇ ಸದಾ ಹಸನ್ಮುಖರಾಗಿದ್ದು ತಮ್ಮ ಸಹಜಕಳೆಯಿಂದ ಎಲ್ಲರ ಗಮನ ಸೆಳೆಯುತ್ತಾ ಇರುತ್ತಾರೆ.

ಇದರ ಗುಟ್ಟನ್ನು ಅರಿಯಲು ಪ್ರಯತ್ನಿಸಿದರೆ ಅವರಿಂದ ಬರುವ ಉತ್ತರ ಉತ್ತಮ ಆಹಾರ, ಕಾಲಕಾಲಕ್ಕೆ ನೀಡುವ ಕಾಳಜಿ ಮತ್ತು ಉದ್ವೇಗ-ಒತ್ತಡರಹಿತ ಮನಸ್ಸು ಎಂಬ ಉತ್ತರ ಸಿಗುತ್ತದೆ. ಅಂತೆಯೇ ಯೌವನದಲ್ಲಿಯೇ ವೃದ್ಧಾಪ್ಯದ ಕುರುಹುಗಳನ್ನು ಪ್ರಕಟಿಸುವವರ ಅಭ್ಯಾಸಗಳನ್ನು ಕೊಂಚ ಅವಲೋಕಿಸಿದರೆ ಕೆಟ್ಟ ಆಹಾರಗಳನ್ನು ಸೇವಿಸುವುದು, ಸರಿಯಾದ ಪ್ರಮಾಣದಲ್ಲಿ ಕಾಲಕಾಲಕ್ಕೆ ನಿದ್ರಿಸದಿರುವುದು, ಸಿದ್ರಿಸುವ ಕಾಲದಲ್ಲಿ ಎಚ್ಚರಾಗಿರುವುದು ಮೊದಲಾದ ಕಾರಣಗಳು ಕಂಡುಬರುತ್ತವೆ. ಇದು ಚಿಕ್ಕವಯಸ್ಸಿನಲ್ಲಿಯೇ ನೆರಿಗೆಗಳಿಗೆ ಕಾರಣವಾಗಿವೆ. ಸೌಂದರ್ಯ ನಿಂತ ನೀರಲ್ಲ, ಎಚ್ಚರ ತಪ್ಪಿದರೆ ಮುಗಿಯಿತು..!

ಕಾಂತಿಯುಕ್ತ ತ್ವಚೆ ಹೊಂದುವುದು ಕಷ್ಟಕರವೇನೂ ಅಲ್ಲ, ಆದರೆ ನಿತ್ಯದ ಅಭ್ಯಾಸಗಳಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಅಷ್ಟೇ. ಉದಾಹರಣೆಗೆ ನಿತ್ಯವೂ ಬೆಳಿಗ್ಗೆ ಅಥವಾ ಸಂಜೆ ನಿಯಮಿತವಾಗಿ ಕೊಂಚ ಸಮಯ ನಡೆಯುವುದು, ಕಾಲಕಾಲಕ್ಕೆ ನೀರು ಸೇವಿಸುವುದು, ಸಿದ್ಧ ಆಹಾರಗಳಿಂದ ದೂರವಿರುವುದು, ಸುತ್ತಮುತ್ತಲಿನ ಆಕರ್ಷಣೆಗಳಿಗೆ ತಲಬಾಗದಿರುವುದು ಮೊದಲಾದವು ಆಕರ್ಷಕ ತ್ವಚೆಗೆ ಪೂರಕವಾಗಿವೆ. ಕಾಂತಿಯುಕ್ತ ತ್ವಚೆಯ ಒಡೆಯರು ತಮ್ಮ ಸಹಜ ಸೌಂದರ್ಯಕ್ಕಾಗಿ ಏನು ಮಾಡುತ್ತಾರೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಇವರು ಕೇವಲ ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸುತ್ತಾರೆ

ಇವರು ಕೇವಲ ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸುತ್ತಾರೆ

ಈ ವ್ಯಕ್ತಿಗಳು ತಮ್ಮ ತ್ವಚೆಗೆ ಎಂದಿಗೂ ಕೃತಕ ರಾಸಾಯನಿಕಗಳಿರುವ ಪ್ರಬಲ ಪ್ರಸಾಧನಗಳನ್ನು ಉಪಯೋಗಿಸುವುದಿಲ್ಲ. ಇವು ತಕ್ಷಣಕ್ಕೆ ಉತ್ತಮ ಪರಿಣಾಮ ನೀಡುತ್ತವಾದರೂ ಸತತ ಬಳಕೆಯಿಂದ ಹಾನಿಯನ್ನೇ ಎಸಗುತ್ತವೆ. ಈ ವ್ಯಕ್ತಿಗಳು ಕೇವಲ ನೈಸರ್ಗಿಕ ಪ್ರಸಾಧನಗಳನ್ನೇ ಬಳಸುತ್ತಾರೆ. ಇವುಗಳ ಪರಿಣಾಮ ನಿಧಾನವಾದರೂ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವ ಕಾರಣ ಇವರ ತ್ವಚೆ ಸದಾ ಉತ್ತಮ ಆರೋಗ್ಯದಲ್ಲಿರುತ್ತದೆ. ಇವರು ತಮ್ಮ ತ್ವಚೆಗಾಗಿ ಜೇನು, ನೈಸರ್ಗಿಕ ಎಣ್ಣೆಗಳು, ಹಣ್ಣುಗಳ ತಿರುಳು ಮತ್ತಿತರ ನೈಸರ್ಗಿಕ ವಸ್ತುಗಳನ್ನೇ ಬಳಸುತ್ತಾರೆ. ಇದಕ್ಕಾಗಿ ಸೂಕ್ತ ಸಮಯವನ್ನೂ ಮೀಸಲಿಡುತ್ತಾರೆ.

ಇವರು ಸಾಕಷ್ಟು ನಿದ್ದೆಯನ್ನೂ ಮಾಡುತ್ತಾರೆ

ಇವರು ಸಾಕಷ್ಟು ನಿದ್ದೆಯನ್ನೂ ಮಾಡುತ್ತಾರೆ

ಕಾಂತಿಯುಕ್ತ ತ್ವಚೆಯ ವ್ಯಕ್ತಿಗಳು ಸದಾ ಸೂಕ್ತಕಾಲಕ್ಕೆ ನಿದ್ದೆ ಹೋಗುತ್ತಾರೆ. ಪ್ರತಿದಿನ ನಿದ್ದೆಯ ಸಮಯದಲ್ಲಿ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ. ಹಾಗೂ ಎಚ್ಚರಿರಬೇಕಾದ ಸಮಯದಲ್ಲಿ ಎಚ್ಚರಿರುತ್ತಾರೆ. ಇದರಿಂದ ಇವರ ತ್ವಚೆ ಕಳೆದುಕೊಂಡ ಕಣಗಳನ್ನು ಪುನರುತ್ಪನ್ನಗೊಳಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ನೆರಿಗೆ, ಸೂಕ್ಷ್ಮ ಗೆರೆಗಳು, ವೃದ್ಧಾಪ್ಯದ ಸಂಕೇತಗಳು, ಕಲೆಗಳು ಇಲ್ಲವಾಗುತ್ತವೆ. ನಿದ್ದೆ ಕಡಿಮೆಯಾದವರಲ್ಲಿ ಕಣ್ಣುಗಳ ಕೆಳಭಾಗದಲ್ಲಿ ಕಪ್ಪು ವರ್ತುಲಗಳು ಮೂಡುತ್ತವೆ. ಇದು ಹೆಚ್ಚಾದರೆ ಕಣ್ಣುಗಳ ಕೆಳಭಾಗದಲ್ಲಿ ಚಿಕ್ಕ ಚೀಲದಂತೆ ಉಬ್ಬಿಕೊಳ್ಳುವುದೂ ಇದೆ. ಇದು ವ್ಯಕ್ತಿ ಸುಸ್ತಾಗಿರುವಂತೆ ತೋರುತ್ತದೆ.

ಇವರು ಸದಾ ಸಂತೋಷವಾಗಿರುತ್ತಾರೆ

ಇವರು ಸದಾ ಸಂತೋಷವಾಗಿರುತ್ತಾರೆ

ಈ ವ್ಯಕ್ತಿಗಳು ಸದಾ ತಮಗೆ ಸಂತೋಷ ನೀಡುವ ಕೆಲಸದಲ್ಲಿ ಮಗ್ನರಾಗಿ ಪ್ರತಿ ಕ್ಷಣವನ್ನೂ ಸಂತಸದಲ್ಲಿ ಕಳೆಯುತ್ತಾರೆ. ಇತರರಿಂದ ಹೆಚ್ಚೇನನ್ನೂ ಅಪೇಕ್ಷಿಸದೇ ತಮ್ಮಿಂದಾದ ಸಹಾಯ ಮತ್ತು ಸೇವೆಯನ್ನು ನೀಡುತ್ತಾ ಮನಸ್ಸನ್ನು ನಿರಾಳವಾಗಿರಿಸಿಕೊಂಡಿರುತ್ತಾರೆ. ವಯಸ್ಸಿನೊಂದಿಗೇ ವೃದ್ಧಾಪ್ಯದ ಚಿಹ್ನೆಗಳು ಇವರಲ್ಲಿ ಮೂಡದಿರುವುದಕ್ಕೆ ಸುಖ ಮತ್ತು ಸಂತೋಷವೇ ಕಾರಣವಾಗಿದೆ.

ಇವರು ಚಲನಶೀರರು

ಇವರು ಚಲನಶೀರರು

ಇವರ ದಿನಚರಿಯನ್ನು ಗಮನಿಸಿದರೆ ಇವರು ಹೆಚ್ಚಿನ ಸಮಯವನ್ನು ತಿರುಗಾಡುತ್ತಾ ಜನರೊಂದಿಗೆ ಬೆರೆಯುತ್ತಾ ಒಂದಲ್ಲಾ ಒಂದು ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಪರ್ಯಾಯವಾಗಿ ಸೋಮಾರಿಗಳಾಗಿ ಮನೆಯಲ್ಲಿಯೇ ಕಳೆಯುವ ವ್ಯಕ್ತಿಗಳು ವರ್ಷಕಳೆದಂತೆ ವೃದ್ಧಾಪ್ಯದ ಚಿಹ್ನೆಗಳನ್ನು ಪಡೆಯುತ್ತಾ ಹೋಗುತ್ತಾರೆ. ಚಲನಶೀಲತೆಯಿಂದ ದೇಹದ ಇತರ ಭಾಗಗಳ ಜೊತೆಗೇ ಮುಖಕ್ಕೂ ಉತ್ತಮ ರಕ್ತಪರಿಚಲನೆ ದೊರೆತು ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆತು ಮುಖದ ಸೂಕ್ಷ್ಮ ತ್ವಚೆ ಕಾಂತಿಯುಕ್ತವಾಗುತ್ತದೆ.

ಇವರು ಹೆಚ್ಚು ನೀರನ್ನು ಕುಡಿಯುತ್ತಾರೆ

ಇವರು ಹೆಚ್ಚು ನೀರನ್ನು ಕುಡಿಯುತ್ತಾರೆ

ದೇಹದ ಇತರ ಭಾಗಗಳಿಗಿಂತ ಚರ್ಮಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಬೆವರು ಮತ್ತು ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿಡಲು ಚರ್ಮ ಆರ್ದ್ರತೆ ಕಳೆದುಕೊಳ್ಳುವುದರಿಂದ ದೇಹಕ್ಕೆ ಸತತವಾಗಿ ನೀರಿನ ಪೂರೈಕೆ ಅಗತ್ಯ. ಇವರು ಪ್ರತಿದಿನ ಕನಿಷ್ಠ ಎರಡು ಲೀಟರುಗಳಷ್ಟು ನೀರನ್ನು ನಿಯಮಿತವಾಗಿ ಕುಡಿಯುತ್ತಾ ತಮ್ಮ ದೇಹಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಇದು ದೇಹದಿಂದ ಕಲ್ಮಷ ಮತ್ತು ವಿಷಕಾರಿ ವಸ್ತುಗಳನ್ನು ಹೊರಹಾಕಿ ಚರ್ಮದ ಕಾಂತಿ ಹೆಚ್ಚಿಸುವ ಗುಟ್ಟಾಗಿದೆ.

English summary

Things People With Beautiful Skin Always Do

We always wonder how some women have young and glowing skin without doing much for it. However, we don't know that some simple habits can benefit our skin and make it look younger, brighter and more glowing. Our skin reacts to what we eat, drink and to our mental state.
X
Desktop Bottom Promotion