For Quick Alerts
ALLOW NOTIFICATIONS  
For Daily Alerts

ಕಾಂತಿಯುತ ತ್ವಚೆಗಾಗಿ ಖರ್ಜೂರದ ಫೇಸ್ ಪ್ಯಾಕ್

By Su.Ra
|

ವಾರ ವಾರ ಪಾರ್ಲರ್‌ ಗೆ ಹೋಗು, ಒಂದಷ್ಟು ದುಡ್ಡು ಕೊಟ್ಟು ಫೇಶಿಯಲ್, ಟ್ಯಾನ್ ರಿಮೂವಿಂಗ್, ಹೀಗೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮಹಿಳೆಯರು ಸರ್ಕಸ್ ಮಾಡ್ತಲೇ ಇರ್ತಾರೆ. ಒಮ್ಮೆ ಯೋಚಿಸಿ ನೀವು ಪಾರ್ಲರ್ ಎಷ್ಟು ದುಡ್ಡು ಹಾಕ್ತಾ ಇದ್ದೀರಾ ಅಂತ. ಅದೇ ದುಡ್ಡನ್ನು ಉಳಿತಾಯ ಮಾಡಿದ್ರೆ ಏನೆಲ್ಲಾ ಖರೀದಿ ಮಾಡ್ಬಹುದು. ಎಷ್ಟು ಸ್ಟೈಲ್ ಮಾಡ್ಬಹುದು ಅಂತ. ಆದ್ರೆ ಮುಖವೇ ಸರಿ ಇಲ್ಲದೇ ಇದ್ರೆ ಸ್ಟೈಲ್ ಮಾಡೋದು ಎಲ್ಲಿಂದ ಬಂತು ಅಂತ ಯೋಚಿಸಿ ಪಾರ್ಲರ್ ಗೆ ದುಡ್ಡು ಹಾಕೋದೆ ಒಳಿತು ಅನ್ಕೊಳ್ತೀರ ಅಲ್ವಾ. ಡೋಂಟ್ ವರಿ. ನಿಮ್ಮ ಉಳಿತಾಯ ಖಾತೆಗಾಗಿ ನಾವ್ ನಿಮ್ಗೆ ಸಹಾಯ ಮಾಡ್ತೀವಿ. ಪಾರ್ಲರ್ ಹಾಕುವ ಹಣವನ್ನು ನಿಮ್ಮ ಖಜಾನೆಯಲ್ಲೇ ಉಳಿಯುವ ಹಾಗೆ ಮಾಡ್ತೀವಿ. ಅದಕ್ಕಾಗಿ ಸಿಂಪಲ್ ಐಡಿಯಾ ಕೊಡ್ತೀವಿ.

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಪಾರ್ಲರ್ ಗೆ ದುಡ್ಡು ನೀಡಿ, ಪಾರ್ಲರ್ ನಲ್ಲಿ ಸಮಯ ವ್ಯರ್ಥ ಮಾಡುವ ಬದಲು ಮನೆಯಲ್ಲೇ ಆ ಸಮಯವನ್ನು ನಿಮ್ಮ ತ್ವಚೆಯ ಆರೈಕೆಗೆ ಮೀಸಲಿಟ್ರೆ ಖಂಡಿತ ನೀವು ಬ್ಯೂಟಿಫುಲ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಅದಕ್ಕಾಗಿ ನಿಮ್ಗೆ ಬೇಕಾಗಿರೋದು ಖರ್ಜೂರ ಅಷ್ಟೇ.. ಖರ್ಜೂರದ ಹಣ್ಣು ನಿಮ್ಮ ಸೌಂದರ್ಯ ವರ್ಧಕವಾಗಿ ಹೇಗೆ ಕೆಲಸ ಮಾಡುತ್ತೆ. ಖರ್ಜೂರವನ್ನು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಬಳಸೋದು ಹೇಗೆ ಅನ್ನೋ ಡೀಟೈಲ್ಸ್ ಗಾಗಿ ಮುಂದೆ ಓದಿ.

ತ್ವಚೆಯ ಹೊಳಪಿಗಾಗಿ ಖರ್ಜೂರದ ಫೇಸ್ ಪ್ಯಾಕ್

ತ್ವಚೆಯ ಹೊಳಪಿಗಾಗಿ ಖರ್ಜೂರದ ಫೇಸ್ ಪ್ಯಾಕ್

ಹೊಳೆಯುವ ಮುಖ ಯಾರಿಗೆ ತಾನೆ ಬೇಡ ಹೇಳಿ. ಪ್ರತಿ ಮಹಿಳೆಯೂ ಫಳಫಳ ಹೊಳೆಯುವ ತ್ವಚೆ ತನ್ನದಾಗಿರಬೇಕು ಅಂತ ಆಸೆ ಪಡುವವಳೇ. ಇನ್ನು ಮುಖ ಸ್ಮೂತ್ ಆಗಿದ್ರೆ ಎಲ್ಲರಿಗೂ ಇಷ್ಟ. ಆದ್ರೆ ಈ ಪೊಲ್ಯೂಷನ್ ಅದಕ್ಕೆ ಅವಕಾಶ ನೀಡುವುದೇ ಇಲ್ಲ. ಆದ್ರೆ ನೀವು ತೆಗೆದುಕೊಳ್ಳುವ ಸ್ವಲ್ಪ ಕಾಳಜಿ ನಿಮ್ಮ ಮುಖವನ್ನು ಸುಂದರವಾಗಿರುವಂತೆ ಮಾಡುತ್ತೆ. ಅದಕ್ಕಾಗಿ ನೀವು ಬಳಸಬೇಕಾಗಿರುವುದು ಖರ್ಜೂರ.

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

. 10 ರಿಂದ 11 ಖರ್ಜೂರ

. ಅರ್ಧ ಲಿಂಬೆಹಣ್ಣು ಅಥ್ವಾ ಮೂಸಂಬಿ ಹಣ್ಣಿನ ರಸ

ಮೊದಲಿಗೆ ಖರ್ಜೂರದ ಬೀಜ ತೆಗೆದು ಪೇಸ್ಟ್ ತಯಾರಿಸಿಕೊಳ್ಳಿ. ಬೀಜ ಮಾತ್ರ ತೆಗೆಯಿರಿ. ಖರ್ಜೂರದ ಮೇಲ್ಬಾಗದ ಸಿಪ್ಪೆಯನ್ನು ತೆಗೆಯುವ ಅಗತ್ಯವಿಲ್ಲ. ಆ ಸಿಪ್ಪೆ ಗಟ್ಟಿ ಪೇಸ್ಟ್ ತಯಾರಿಸಿಕೊಳ್ಳಲು ನೆರವಾಗುವುದೂ ಅಲ್ಲದೇ ಮುಖಕ್ಕೆ ಹೆಚ್ಚಿನ ಹೊಳಪು ನೀಡುವಲ್ಲಿ ಸಹಕಾರಿಯಾಗಿದೆ. ಅದಕ್ಕೆ ಅರ್ಥ ಲಿಂಬೆಹಣ್ಣಿನ ರಸ ಅಥ್ವಾ ಮೂಸಂಬಿ ಹಣ್ಣಿನ ರಸ ಸೇರಿಸ್ಬೇಕು. ಎರಡರಲ್ಲಿ ಯಾವುದಾದ್ರೂ ಒಂದನ್ನು ಮಾತ್ರ ಮಿಕ್ಸ್ ಮಾಡಿ. ಎರಡೂ ಮಿಕ್ಸ್ ಮಾಡುವ ಅಗತ್ಯವಿಲ್ಲ. ಯಾಕಂದ್ರೆ ಎರಡೂ ಹಣ್ಣುಗಳೂ ಕೂಡ ಸಿಟ್ರಿಕ್ ಫ್ಯಾಮಿಲಿಗೆ ಸೇರುವ ಹಣ್ಣುಗಳೇ.. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಇವೆರಡರ ಮಿಶ್ರಣದಿಂದಲೇ ಗಟ್ಟಿ ಪೇಸ್ಟ್ ತಯಾರಿಸಿಕೊಳ್ಳಬಹುದು. ನೀರು ಹಾಕುವ ಅಗತ್ಯವಿರುವುದಿಲ್ಲ. ಒಂದು ವೇಳೆ ಪೇಸ್ಟ್ ತೀರಾ ದಪ್ಪವಾಗಿದ್ದಲ್ಲಿ ಸ್ವಲ್ಪ ನೀರನ್ನೂ ಕೂಡ ಮಿಕ್ಸ್ ಮಾಡ್ಬಹುದು. ನಂತ್ರ ಮುಖಕ್ಕೆ ಅಪ್ಲೈ ಮಾಡಿ. ನೆನಪಿರಲಿ ಮುಖದಲ್ಲಿ ಈ ಪೇಸ್ಟ್ ತೀರಾ ಡ್ರೈ ಆಗಲು ಬಿಡಬೇಡಿ. ಆಗಾಗ ಸ್ವಲ್ಪ ನೀರು ಚಿಮುಕಿಸಿ ಅರ್ಧಗಂಟೆಯ ನಂತ್ರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಎಫೆಕ್ಟ್ ಏನು ಅನ್ನೋದನ್ನು ನೀವೇ ಗಮನಿಸಿಕೊಳ್ಳಬಹುದು. ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ ಹಚ್ಚಿಕೊಂಡು ಕಾಂತಿಯುತವಾದ ಮೃದುವಾದ ತ್ವಚೆಯನ್ನು ಮನೆಯಲ್ಲೇ ಪಡೆದುಕೊಳ್ಳಿ.

ಡ್ಯಾಮೇಜ್ ಆಗಿರುವ ಮುಖಕ್ಕಾಗಿ ಖರ್ಜೂರದ ಫೇಸ್ ಪ್ಯಾಕ್

ಡ್ಯಾಮೇಜ್ ಆಗಿರುವ ಮುಖಕ್ಕಾಗಿ ಖರ್ಜೂರದ ಫೇಸ್ ಪ್ಯಾಕ್

ಮುಖದಲ್ಲಿ ಧೂಳು ಕೂತು ಮುಖ ಆಯಿಲಿ ಆಗೋದು, ಬೆಳಿಗ್ಗೆ ಫ್ರೆಶ್ ಆಗಿ ಹೋಗಿದ್ರೂ ಕೂಡ ಸಂಜೆ ಅನ್ನೋಷ್ಟರಲ್ಲಿ ಮುಖದ ಕಾಂತಿ ಕಳೆಗುಂದಿ ಬೋರಿಂಗ್ ಫೇಸ್ ಅನ್ನಿಸುವ ತ್ವಚೆ ನಿಮ್ಮದಾಗಿದ್ರೆ ಖಂಡಿತ ನೀವು ಈ ಫೇಸ್ ಪ್ಯಾಕ್ ಟ್ರೈ ಮಾಡಲೇಬೇಕು.

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

. ಖರ್ಜೂರ - 6 ರಿಂದ 7

. ಹಾಲು - ಒಂದು ಸಣ್ಣ ಕಪ್

. ಗೋಧಿಹಿಟ್ಟು - ನಾಲ್ಕರಿಂದ ಐದು ಸ್ಪೂನ್

ಮೊದಲು ಆರರಿಂದ ಏಳು ಖರ್ಜೂರದ ಬೀಜವನ್ನು ತೆಗೆದುಕೊಳ್ಳಿ,. ಹೊರಗಿನ ಧೂಳಿನಿಂದ ಹೇಗೆ ನಿಮ್ಮ ಮುಖದಲ್ಲಿ ಕೊಳೆ ಕೂರುತ್ತೋ ಹಾಗೆಯೇ ಖರ್ಜೂರದ ಹಣ್ಣಿನಲ್ಲಿ ಕೊಳೆ ಕೂರುವ ಸಾಧ್ಯತೆ ಇರುತ್ತೆ, ಹಾಗಾಗಿ ಮೊದಲು ಖರ್ಜೂರನ್ನು ನೀರಿನಲ್ಲಿ ಸ್ವಲ್ಪ ಸ್ವಚ್ಛಗೊಳಿಸಿ ಆದ್ರೆ ಖರ್ಜೂರದ ಮೇಲ್ಬಾಗದ ಚರ್ಮ ಕಿತ್ತುಹೋಗದಂತೆ ನೋಡಿಕೊಳ್ಳಿ. ನಂತ್ರ ಸ್ವಚ್ಛಗೊಳಿಸಿದ ಖರ್ಜೂರವನ್ನು ಹಾಲಿನಲ್ಲಿ ಮುಳುಗಿಸಿ ಇಡಿ. ನೀವು ಎಲ್ಲಾ ಖರ್ಜೂರವೂ ಮುಳುಗುವಷ್ಟು ಹಾಲನ್ನು ತೆಗೆದುಕೊಳ್ಳಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ

ಸುಮಾರು ಒಂದು ಗಂಟೆ ನೆನಸಿದ್ರೆ ಹಾಲಿನಲ್ಲಿ ಖರ್ಜೂರ ಬೆರೆತು ಸ್ಮೂತ್ ಆಗಿರುತ್ತೆ. ನಂತ್ರ ಅವೆರಡರ ಮಿಶ್ರಣದ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಗೆ ನಾಲ್ಕರಿಂದ ಐದು ಸ್ಪೂನ್ ಗೋಧಿಹಿಟ್ಟನ್ನು ಸೇರಿಸಿ ಗಟ್ಟಿಯಾಗಿ ಕಲಸಿ ಪೇಸ್ಟ್ ರೆಡಿ ಮಾಡಿ. ಈ ಪೇಸ್ಟನ್ನು ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಸುಮಾರು ಅರ್ಥಗಂಟೆ ಮುಖದಲ್ಲಿ ಹಾಗೆಯೇ ಇರಲಿ. ಈ ಫೇಸ್ ಪ್ಯಾಕ್ ಒಂದು ರೀತಿಯ ಸ್ಕ್ರಬ್ ರೀತಿಯೂ ಕೆಲ್ಸ ಮಾಡುತ್ತೆ. ಹಾಗಾಗಿ ಆಗಾಗ ಸ್ವಲ್ಪ ಮಸಾಜ್ ಕೂಡ ಮಾಡ್ಕೊಳ್ಳಿ. ಟ್ಯಾನ್ ತೆಗೆದುಹಾಕಲು ಕೂಡ ಈ ಫೇಸ್ ಪ್ಯಾಕ್ ನೆರವಾಗಲಿದೆ. ನಂತ್ರ ತಣ್ಣನೆಯ ನೀರಿನಿಂದ ಮುಖವನ್ನು ವಾಷ್ ಮಾಡಿ.ರಿಸಲ್ಟ್ ಏನು ಅನ್ನೋದನ್ನು ನೀವೇ ಗಮನಿಸಿಕೊಳ್ಳಬಹುದು. ಟ್ರೈ ಮಾಡಿ ನೋಡಿ.

English summary

Surprising Beauty Uses of Dates Fruit Face PacK

Dates are often considered as a regular dry fruit by most of us. But many of you might be unaware about how good this fruit is for your skin. Dates are highly beneficial for our body and are a rich source of vitamins and minerals. Because of this it is very important that we try to promote the habit of consuming dates on a frequent basis. Let us see some of the important benefits of dates for our skin,,,
X
Desktop Bottom Promotion