For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚೆಯ ಕೋಮಲತೆಗೆ ಸೋಯಾ ಚಂಕ್ ಬ್ರಷಿಂಗ್

By Su.Ra
|

ಡ್ರೈ ಸ್ಕಿನ್ ಇರುವವರಿಗೆ ಚಳಿ ತಡೆದುಕೊಳ್ಳೋದು ಅಷ್ಟು ಸುಲಭವಲ್ಲ. ಡ್ರೈ ಸ್ಕಿನ್ ಇರುವವರು ಚಳಿಗಾಲವನ್ನು ಒಂದು ಶಾಪದಂತೆ ಆಲೋಚನೆ ಮಾಡ್ತಾರೆ. ಚರ್ಮ ಪೊರೆಪೊರೆಯಂತಾಗಿರುತ್ತೆ. ಬಿಳಿಯ ಪ್ಯಾಚಸ್‌ಗಳು ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತೆ. ಎಷ್ಟೇ ಕೇರ್ ತೆಗೆದುಕೊಂಡ್ರು ಚರ್ಮ ಬಿರುಕು ಬಿಟ್ಟಂತಾಗಿರುತ್ತೆ.

ಚರ್ಮವನ್ನು ಬ್ರಷ್ ಮಾಡ್ಕೊಂಡು, ಡೆಡ್ ಸೆಲ್ಗಳು ಚರ್ಮದ ಮೇಲ್ಪದರದಲ್ಲಿರುವುದನ್ನು ಕ್ಲೀನ್ ಮಾಡ್ಕೊಳ್ಳೋದು ಚರ್ಮದ ಹಿತದೃಷ್ಟಿಯಿಂದ ಒಳಿತು.. ಬಟ್ ಚರ್ಮದ ಡೆಡ್ಸೆಲ್ಗಳನ್ನು ತೆಗೆಯಲು ಪ್ಲಾಸ್ಟಿಕ್ ಬ್ರಷ್ ಇತ್ಯಾದಿ ಸ್ಕಬ್ಬಿಂಗ್ ಮೆಟಿರಿಯಲ್ಗಳನ್ನು ಬಳಸೋದು ಕಾಮನ್.. ಆದ್ರೆ ಅಂತಹ ಮೆಟಿರಿಯಲ್ಗಳು ಕೆಲವೊಮ್ಮೆ ನಿಮ್ಗೆ ಹಾರ್ಮ್ಫುಲ್ ಆಗಿ ಬಿಡ್ಬಹುದು. ಅದಕ್ಕಾಗಿ ಟೆಕ್ಷನ್ ಮಾಡ್ಕೋಬೇಡಿ. ಸಿಂಪಲ್ ಐಡಿಯಾ ಇದೆ..

ಚರ್ಮದ ಮೇಲ್ಪದರದಲ್ಲಿ ಶೇಖರಣೆಗೊಳ್ಳುವ ಸೆಲ್ಯುಲೈಟ್ಗಳನ್ನು ತೆಗೆದುಹಾಕಲು ಬ್ರಷ್ಶಿಂಗ್ ಅತ್ಯುತ್ತಮ ವಿಧಾನ. ಸ್ಕಿನ್ ಡ್ರೈ ಇದ್ದಾಗ ಮಾಡ್ಬೇಕಾದಾಗ ಟೆಕ್ನಿಕ್ ಇದು. ಆದ್ರೆ ಅದಕ್ಕಾಗಿ ನೀವು ಬಳಸುವ ಬ್ರಷ್ ಎಷ್ಟು ಸೇಫ್ ಆಗಿ ಇರುತ್ತೆ ಅನ್ನೋದನ್ನು ಹೇಳೋಕೆ ಆಗಲ್ಲ. ಹಾಗಾಗಿ ಸೋಯಾ ಚಂಕ್ಸ್ ಬಳಕೆ ಮಾಡೋದು ನೈಸರ್ಗಿಕ ವಿಧಾನಗಳಲ್ಲಿ ಒಂದು ಬೆಸ್ಟ್ ಮೆಥೆಡ್..

 Soya chunk brushing for dry skin during winter

ಸೋಯಾ ಚಂಕ್‌ಗಳಿಂದ ಚರ್ಮದ ಬ್ರಷಿಂಗ್
ಎಲ್ಲರಿಗೂ ಗೊತ್ತಿರೋ ಹಾಗೆ ಸೋಯಾ ಒಂದು ಅತ್ಯುತ್ತಮ ಬ್ಯೂಟಿ ರೆಮಿಡಿ.. ಸೋಯಾ ಚಂಕ್‌ಗಳು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಲು ನಿಮ್ಗೆ ನೆರವಾಗುತ್ತೆ. ಒಂದು ಮುಷ್ಠಿಯಷ್ಟು ಸೋಯಾ ಚೆಂಕ್ ತೆಗೆದುಕೊಳ್ಳಿ.. ಅದ್ರಿಂದ ನಿಮ್ಮ ಚರ್ಮದಲ್ಲಿ ಬಿಳಿಬಿಳಿ ಪ್ಯಾಚಸ್ ಆದ ಜಾಗವನ್ನು ಲೈಟಾಗಿ ಉಜ್ಜಿಕೊಳ್ಳಿ.. ಸೋಯಾ ಚಂಕ್ ನಿಮ್ಮ ಚರ್ಮದ ಮೇಲ್ಪದರಲ್ಲಿರುವ ಡೆಡ್ಸೆಲ್ಗಳನ್ನು ತೊಡೆದು ಹಾಕುತ್ತೆ. ನೆನಪಿರಲಿ ಯಾವುದೇ ಕಾರಣಕ್ಕೂ ನೀರಿನಲ್ಲಿ ನೆನೆಸಿದ ಚಂಕ್ಗಳನ್ನು ಬಳಕೆ ಮಾಡ್ಬೇಡಿ.. ನೀರಿನಲ್ಲಿ ನೆನಸಿದ ಮೇಲೆ ಚಂಕ್ಗಳು ಮೃದುಗೊಂಡು ಸ್ಕ್ರಬ್ಬರ್ನಂತೆ ಕೆಲಸ ನಿರ್ವಹಿಸೋದಿಲ್ಲ. ಹಾಗಾಗಿ ಡ್ರೈ ಆಗಿರುವ ಚಂಕ್ಗಳನ್ನು ಬಳಕೆ ಮಾಡಿ..

ಸೋಯಾ ಚಂಕ್ ಪೌಡರ್ ಬಳಕೆ
ಚೋಯಾ ಚಂಕ್ಗಳಿಂದ ನಿಮ್ಗೆ ಮಸಾಜ್ ಅಥ್ವಾ ಸ್ಕ್ರಬ್ಬಿಂಗ್ ಮಾಡಿಕೊಳ್ಳೋದು ಕಷ್ಟವೆನಿಸಿದ್ರೆ ನಾಲ್ಕೈದು ಸೋಯಾ ಚಂಕ್ಗಳನ್ನ ಪೌಡರ್ ಮಾಡಿಕೊಳ್ಳಿ. ಮಿಕ್ಸಿಯಲ್ಲಿ ಪೌಡರ್ ಮಾಡಿಕೊಳ್ಳೋಕೆ ಅಸಾಧ್ಯವಾಗ್ಬಹುದು. ಮಿಕ್ಸಿ ಬ್ಲೇಡ್ಗಳು ಹಾಳಾಗ್ಬಹುದು ಯಾಕಂದ್ರೆ ಡ್ರೈ ಆಗಿರುವ ಸೋಯಾ ಚಂಕ್ಗಳು ಡ್ರೈ ಆಗಿರುತ್ತೆ. ಹಾಗಾಗಿ ಯಾವುದಾದ್ರೂ ಕುಟ್ಟುವ ಸಾಧನಗಳಿಂದ ಚಂಕ್ಗಳನ್ನು ಪೌಡರ್ ಮಾಡಿಕೊಳ್ಳಿ. ಪೌಡರ್ ಬಳಸಿ ಕೂಡ ಡ್ರೈ ಚರ್ಮವನ್ನು ಉಜ್ಜಿಕೊಳ್ಳಬಹುದು.

ನೆನಪಿನಲ್ಲಿ ಇಡಬೇಕಾದ ಅಂಶಗಳು
ಸೋಯಾ ಚಂಕ್ಗಳಿಂದ ಚರ್ಮವನ್ನು ಉಜ್ಜಿಕೊಳ್ಳುವಾಗ ಹೃದಯದ ದಿಕ್ಕಿನತ್ತ ಬ್ರಷ್ ಮಾಡುವ ದಿಕ್ಕು ಇರಬೇಕು. ಉದಾಹರಣೆಗೆ ಕಾಲನ್ನು ಬ್ರಷ್ ಮಾಡೋದಾದ್ರೆ ಪಾದದಿಂದ ಸ್ಟಾರ್ಟ್ ಮಾಡಿ.. ಕೈಗಳನ್ನು ಬ್ರಷ್ ಮಾಡೋದಾದ್ರೆ ತೋಳಿನ ಭಾಗದಿಂದ ಸ್ಟಾರ್ಟ್ ಮಾಡಿ ಬೆರಳಿನತ್ತ ಎಂಡ್ ಮಾಡಿ. ಹೊಟ್ಟೆಯ ಭಾಗದಲ್ಲಿ ಪ್ರದಕ್ಷಿಣಾಕಾರದಲ್ಲಿ ಬ್ರಷಿಂಗ್ ಮಾಡಿಕೊಳ್ಳಬೇಕು. ಹೆಚ್ಚು ಪ್ರೆಷರ್ ಹಾಕದೆ ಲೈಟ್ ಮಸಾಜ್ ಮಾಡಿಕೊಂಡ್ರೆ ಒಳಿತು.. ಒಂದು ವೇಳೆ ಈ ರೂಲ್ಸ್ ಫಾಲೋ ಮಾಡದೇ ಇದ್ರೆ ಚರ್ಮಕ್ಕೆ ತೊಂದರೆ ಆಗ್ಬಹುದು. ಉರಿ ಸ್ಟಾರ್ಟ್ ಆಗ್ಬಹುದು..

X
Desktop Bottom Promotion