For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ತ್ವಚೆಯ ಆರೈಕೆಗೆ ಸರಳ ಸೂತ್ರ

|

ಮಳೆಗಾಲ ಶುರುವಾಗಿ ಬಿಟ್ಟಿದೆ, ನಾನಾ ಬಗೆಯ ರೋಗರುಜಿನಗಳ ಜೊತೆ ಚರ್ಮದ ಸೊಂಕು ಕೂಡ ಈ ಋತುವಿನಲ್ಲಿ ಬಾಧಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಇಂತಹ ಸಮಯದಲ್ಲಿ ರಾಸಾಯನಿಕಗಳಿರುವ ಪ್ರಸಾಧನಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ವಿಧಾನವನ್ನು ನಿಮ್ಮದಾಗಿಸಿಕೊಂಡು ಸೌಂದರ್ಯವನ್ನು ಇನ್ನಷ್ಟು ವರ್ಧಿಸಬಹುದಾಗಿದೆ. ಅಂತೆಯೇ ಆಯಾಯ ಕಾಲಕ್ಕೆ ಅನುಸಾರವಾಗಿ ನಿಮ್ಮ ಸೌಂದರ್ಯದ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಹೌದು, ಮಳೆಗಾಲದಲ್ಲಿ ಮುಖದ ಸೌಂದರ್ಯ ಹಾಳಾಗುವುದು ಬಹುಬೇಗ. ಅಂತೆಯೇ ತ್ವಚೆಗೆ ಬಳಸುವ ಸೌಂದರ್ಯವರ್ಧಕ ಸಾಮಾಗ್ರಿಗಳು ನೀರಿನ ಹಾನಿಗೆ ಒಳಪಟ್ಟಾಗ ಇದು ಕೂಡ ನಿಮ್ಮ ತ್ವಚೆಯ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದು. ಆದರೆ ಇದಕ್ಕೆಲ್ಲಾ ಚಿಂತೆ ಮಾಡುವ ಅಗತ್ಯವೇ ಇಲ್ಲ. ಸುಂದರ ತ್ವಚೆ ಮತ್ತು ತ್ವಚೆಯನ್ನು ಆರೋಗ್ಯವಾಗಿಡಲು ನಮ್ಮಲ್ಲಿ ಕೆಲವೊಂದು ಟಿಪ್ಸ್ ಮತ್ತು ಟ್ರಿಕ್ಸ್‌ಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ತ್ವಚೆಯ ಶುಚಿತ್ವದ ಪ್ರಾಮುಖ್ಯತೆ ನೀಡಿ

ತ್ವಚೆಯ ಶುಚಿತ್ವದ ಪ್ರಾಮುಖ್ಯತೆ ನೀಡಿ

ಈ ಋತುವಿನಲ್ಲಿ ತೇವಾಂಶವು ಅಧಿಕವಾಗಿರುತ್ತದೆ ಮತ್ತು ಇದು ತ್ವಚೆಯ ರಂಧ್ರಗಳನ್ನು ಮುಚ್ಚಿಬಿಡಬಹುದು. ತ್ವಚೆಯ ರಂಧ್ರಗಳು ಮುಚ್ಚಲ್ಪಟ್ಟರೆ ಅದರಿಂದ ಮೊಡವೆಗಳು ಬರುತ್ತದೆ. ನಿಮ್ಮ ತ್ವಚೆಯನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾಮುಖ್ಯ. ತ್ವಚೆಯು ಎಣ್ಣೆಯಂಶವನ್ನು ಹೊಂದಿದ್ದರೆ ತೇವಾಂಶದೊಂದಿಗೆ ಧೂಳು ಮತ್ತು ಕಲ್ಮಶದೊಂದಿಗೆ ತ್ವಚೆಯಲ್ಲಿ ಮೊಡವೆಗಳು ಉಂಟಾಗಬಹುದು. ನಿಯಮಿತವಾಗಿ ತ್ವಚೆಯನ್ನು ತೊಳೆಯುವುದರಿಂದ ಕಲ್ಮಶ ದೂರವಾಗಿ ಆರೋಗ್ಯಕರ ತ್ವಚೆಯನ್ನು ಪಡೆಯಬಹುದಾಗಿದೆ.

ಮಳೆಗಾಲದಲ್ಲಿ ಒಣ ತ್ವಚೆ ಕಂಡುಬಂದರೆ

ಮಳೆಗಾಲದಲ್ಲಿ ಒಣ ತ್ವಚೆ ಕಂಡುಬಂದರೆ

ಗಾಳಿಯಲ್ಲಿ ತೇವಾಂಶವಿದ್ದರೂ ಒಣ ತ್ವಚೆಯವರಿಗೆ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಹೌದು ಮಳೆಗಾಲದಲ್ಲಿ ಇಂತಹ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಒಣ ತ್ವಚೆ ಹೊಂದಿರುವವರು ಪ್ರತೀ ರಾತ್ರಿ ಜೇನು ಮತ್ತು ಹಾಲಿನ ಮಿಶ್ರಣವನ್ನು ಹಚ್ಚಿಕೊಂಡರೆ ತ್ವಚೆಯಲ್ಲಿ ತೇವಾಂಶವು ನಿಯಂತ್ರಣದಲ್ಲಿರುತ್ತದೆ. ಆದರೆ ಒಂದು ಮಾತು ನೆನಪಿಡಿ ಸೋಪ್ ಅಥವಾ ಸೋಪ್‌ನಿಂದ ಮಾಡಲ್ಪಟ್ಟಿರುವಂತಹ ಫೇಸ್ ವಾಶ್ ಗಳನ್ನು ಯಾವತ್ತೂ ಬಳಸಬಾರದು. ಇದು ಒಣ ತ್ವಚೆಯ ತುರಿಕೆ ಮತ್ತು ಒಣಗುವಿಕೆ ಹೆಚ್ಚಿಸುತ್ತದೆ.

ಪುದೀನ ಫೇಶಿಯಲ್

ಪುದೀನ ಫೇಶಿಯಲ್

ಮಳೆಗಾಲದಲ್ಲಿ ಪುದೀನ ಅಥವಾ ಪಪ್ಪಾಯ ಫೇಶಿಯಲ್ ಮಾಡಿಸಿಕೊಂಡರೆ ಒಳ್ಳೆಯ ಪರಿಣಾಮವಿರುತ್ತದೆ. ಪುದೀನ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ಚರ್ಮವನ್ನು ಮೃದುಗೊಳಿಸಿ ಮುಚ್ಚಿಹೋಗಿರುವ ರಂಧ್ರಗಳನ್ನೂ ಸಹ ಶುದ್ಧಿ ಮಾಡಿ ಆ ರಂಧ್ರಗಳ ಗಾತ್ರವನ್ನು ಕಡಿಮೆಮಾಡುತ್ತದೆ. ಅಲ್ಲದೆ ಪಪ್ಪಾಯಿ ಹಣ್ಣಿ‌ನಿಂದ ಪೋಷಣೆ ಮಾಡಿದರೆ ಮುಖವು ತೇವಾಂಶದಿಂದ ಕಾಂತಿಯುತವಾಗಿ ಕಾಣುತ್ತದೆ.

ರಾಸಾಯನಿಕ ಕ್ರೀಮ್‌ಗಳಿಂದ ದೂರವಿರಿ

ರಾಸಾಯನಿಕ ಕ್ರೀಮ್‌ಗಳಿಂದ ದೂರವಿರಿ

ಮಳೆಗಾಲದಲ್ಲಿ ಆರ್ದ್ರತೆ (Humidity) ಮಟ್ಟವು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ರಾಸಾಯನಿಕ ಲೋಶನ್‌ಗಳು ಅಥವ ಕ್ರೀಮ್‌ಗಳನ್ನು ಹಚ್ಚುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ಸೈಸರ್ಗಿಕ ಫೇಸ್ ಕ್ರೀಮ್ ಅನ್ನು ಆಯ್ದುಕೊಳ್ಳಿ

ತ್ವಚೆಯಲ್ಲಿ ಕಾಣಿಸಿಕೊಳ್ಳುವ ಮೊಡವೆ

ತ್ವಚೆಯಲ್ಲಿ ಕಾಣಿಸಿಕೊಳ್ಳುವ ಮೊಡವೆ

ನೀವು ಈಗಾಗಲೇ ಮೊಡವೆಯಿಂದ ತೊಂದರೆಗೆ ಒಳಗಾಗಿದ್ದೀರಿ ಎಂದು ನಿಮಗನಿಸಿದರೆ ಅದರಿಂದ ನಿವಾರಣೆ ಪಡೆಯಲು ನಾವು ನಿಮಗೆ ಕೆಲವೊಂದು ಸಾಮಾನ್ಯ ಮನೆಮದ್ದನ್ನು ತಿಳಿಸುತ್ತೇವೆ. ಚಿಂತೆ ಬೇಡ. ಮಣ್ಣು, ಬೇವು,ಪುದೀನಾ,ಕರ್ಪೂರ ಮತ್ತು ರೋಸ್ ವಾಟರನ್ನು ಮಿಶ್ರಣ ಮಾಡಿ ಮತ್ತು ಇದನ್ನು ನಿಮ್ಮ ತ್ವಚೆಗೆ 15 ನಿಮಿಷ ಹಚ್ಚಿಕೊಳ್ಳಿ. ತದನಂತರ ತಂಪಾದ ನೀರಿನಿಂದ ಇದನ್ನು ತೊಳೆದು ತೆಗೆಯಿರಿ.

English summary

Skin Care Hacks For Monsoon

Monsoon is a season which can take a toll on your skin. It can be very difficult to take care of your skin during this weather. It is very important to know some skin tips and tricks to maintain a beautiful skin and shun those skin problems that may occur during this season.
X
Desktop Bottom Promotion