For Quick Alerts
ALLOW NOTIFICATIONS  
For Daily Alerts

ಚರ್ಮದ ಕಾಂತಿ, ಕೋಮಲತೆಗಾಗಿ - ದಾಳಿಂಬೆ ಜ್ಯೂಸ್

By Super
|

ಹಣ್ಣುಗಳು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಅಪಾರ ಪ್ರಯೋಜನಕಾರಿಯಾಗಿವೆ. ನೀವು ಪ್ರಬಲ ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ನೀವು ಪಥ್ಯಮಾಡುತ್ತಿದ್ದರೆ ಹಣ್ಣುಗಳ ಮಿಶ್ರಣ ಅಥವಾ ಹಣ್ಣುಗಳನ್ನು ರುಬ್ಬಿಮಾಡಿದ ರಸಾಯನ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಪ್ರತಿಯೊಂದು ಹಣ್ಣಿನಿಂದ ಸಹ ನಿಮ್ಮ ಆರೋಗ್ಯಕ್ಕೆ ಖಚಿತವಾದ ಪ್ರಯೋಜನಗಳಿವೆ.

ಬಾಳೆ ಹಣ್ಣು ಮಲಬದ್ಧತೆ ಗುಣಪಡಿಸಲು ಉತ್ತಮವಾದರೆ, ಸೇಬು ಹಣ್ಣು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಅದ್ಭುತ ರೀತಿಯಲ್ಲಿ ವರ್ಧಿಸಲು ಒಂದು ಅತ್ಯುತ್ತಮವಾಗಿದೆ. ದಾಳಿಂಬೆ ಹಣ್ಣು ಕೂಡ ಅಂತಹ ಅಂತ್ಯವಿಲ್ಲದ ಪ್ರಯೋಜನಗಳ ಪಟ್ಟಿ ಹೊಂದಿದೆ.

ಹಣ್ಣುಗಳನ್ನು ಸೇವಿಸಿದರೆ ನಿಮ್ಮ ವಿವಿಧ ಅರೋಗ್ಯದ ಸಮಸ್ಯೆಗಳನ್ನು ಪರಿಹರಿಸಬಹುದೆಂದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಆಶ್ಚರ್ಯವೆಂದರೆ ನಿಮ್ಮ ಚರ್ಮವನ್ನು ಹಣ್ಣುಗಳ ಬಳಕೆಯಿಂದ ಪ್ರಜ್ವಲಿಸುವ ಹಾಗೆ ಮಾಡಬಹುದು. ಹೌದು ನೀವು ಸಾಮಾನ್ಯವಾಗಿ ಚರ್ಮವನ್ನು ಪೋಷಿಸುವುದಕ್ಕೆ ಸಾಕಷ್ಟು ಮದ್ದುಗಳನ್ನು ಮತ್ತು ನಿಮ್ಮ ಸೌಂದರ್ಯದ ಹೆಚ್ಚಿಸಲು ಸಾಕಷ್ಟು ಹಣವನ್ನು ಖರ್ಚುಮಾಡುತ್ತೀರಿ. ಬನ್ನಿ ದಾಳಿಂಬೆ ಹಣ್ಣಿನ ಜ್ಯೂಸ್ ನ ಪ್ರಯೋಜನಗಳೇನು ಎಂಬುದನ್ನು ನೋಡೋಣ... ಸ್ವರ್ಗಲೋಕದ ಹಣ್ಣು ದಾಳಿಂಬೆ ಸಿಪ್ಪೆಯ ಔಷಧೀಯ ಗುಣಗಳೇನು?

Skin Care Benefits Of Pomegranate Juice

ಪ್ರಜ್ವಲಿಸುವ ಚರ್ಮಕ್ಕೆ ಫೇಸ್ ಪ್ಯಾಕ್
ಪ್ರಜ್ವಲಿಸುವ ಮತ್ತು ಆರೋಗ್ಯಕರ ಮುಖವು ಯಾರಿಗೆ ಬೇಕಾಗಿಲ್ಲ? ನಿಮಗೆ ಹಾಗಾಗಬೇಕಾದಲ್ಲಿ ಈ ದಾಳಿಂಬೆಹಣ್ಣು ಸಾಕಷ್ಟು ಸಹಾಯಮಾಡಬಲ್ಲುದು. ದಾಳಿಂಬೆಹಣ್ಣಿನ ರಸ, ದ್ರಾಕ್ಷಿ ಬೀಜದ ಎಣ್ಣೆ, ಕಚ್ಚಾ ಪಪ್ಪಾಯಿ ರಸ ಮತ್ತು ದ್ರಾಕ್ಷಿ ರಸ ಇವೆಲ್ಲವನ್ನೂ ಸೇರಿಸಿ ಒಂದು ಫೇಸ್ ಪ್ಯಾಕ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಚೆನ್ನಾಗೆ ತೊಳೆದುಕೊಳ್ಳಿ.

ಸ್ವಚ್ಛಗೊಳಿಸುವ ವಸ್ತು
ಧೂಳು, ಸತ್ತ ಚರ್ಮದ ಕೋಶಗಳು, ಇತ್ಯಾದಿ ಇವೆಲ್ಲಾ ಸೇರಿ ನಿಮ್ಮ ಮುಖದ ಚರ್ಮವನ್ನು ಮಂಕಾಗಿ ಕಾಣುವ ಹಾಗೆ ಮಾಡುತ್ತದೆ ಮತ್ತು ಮುಖದ ಮೇಲೆ ಗುಳ್ಳೆಗಳು ಮತ್ತು ತುರಿಕೆ ಸೃಷ್ಟಿಸಬಹುದು.ಚರ್ಮವನ್ನು ಶುದ್ಧಗೊಳಿಸಲು ದಾಳಿಂಬೆ ಹಣ್ಣಿನ ರಸ ಒಂದು ಉತ್ತಮ ಆಯ್ಕೆ. ಒಂದು ಹತ್ತಿಯ ಉಂಡೆಯನ್ನು ಈ ರಸದಲ್ಲಿ ಅದ್ದಿ ನೆನೆಸಿ ನಿಮ್ಮ ಮುಖ ಮತ್ತು ಕತ್ತುಗಳ ಭಾಗವನ್ನು ಒರಸಿ. ಹಾಗೆ ಒರಸುವಾಗ ಜಾಗರೂಕತೆಯಿಂದ ಮಾಡಿ, ಕಠಿಣವಾಗಿ ಉಜ್ಜಬೇಡಿ. ತ್ವಚೆಗೆ ಸೋಪ್ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ!

ಮೃದುವಾದ ಚರ್ಮಕ್ಕೆ ಫೇಸ್ ಪ್ಯಾಕ್
ದಾಳಿಂಬೆ ಹಣ್ಣಿನ ರಸದಿಂದ ಚರ್ಮವನ್ನು ಸುಧಾರಿಸಲು ಇನ್ನೂ ಕೆಲವು ಪ್ರಯೋಜನಗಳಿಗೆ ಒಂದು ಫೇಸ್ ಪ್ಯಾಕ್ ಮಾಡಿ ನೋಡಿ. ಸಾಧಾರಣವಾಗಿ ನೀವು ಮಣ್ಣಿನ ಫೇಸ್ ಪ್ಯಾಕ್ ಮಾಡಿಕೊಳ್ಳುವಾಗ ಅದರೊಂದಿಗೆ ಮಿಶ್ರಮಾಡಲು ನೀರು ಅಥವ ರೋಸ್ ವಾಟರ್ ಸೇರಿಸುತ್ತೀರಿ. ಈಗ ನೀರು ಮತ್ತು ರೋಸ್ ವಾಟರ್ ಬದಲಿಗೆ ದಾಳಿಂಬೆ ಹಣ್ಣಿನ ರಸವನ್ನು ಮಿಶ್ರ ಮಾಡಿ. ಅದರ ಪರಿಮಳ ನಿಮ್ಮನ್ನು ಮೋಡಿ ಮಾಡುವುದು ಮತ್ತು ನಿಮಗೆ ಮೃದುವಾದ ಮತ್ತು ಸುಂದರ ಚರ್ಮವನ್ನು ಪಡೆಯುತ್ತೀರಿ.

ಸ್ಕ್ರಬ್ಬರ್ (ಗುಂಜು)
ದಾಳಿಂಬೆ ಹಣ್ಣಿನ ರಸ ಗುಂಜಿನ ಜೊತೆ ಉಜ್ಜಲು ಒಂದು ಪರಿಣಾಮಕಾರಿ ನೈಸರ್ಗಿಕ ಮೂಲವಾಗಿದೆ. ಈ ರಸವು ನಿಮ್ಮ ಮುಖದ ಮೇಲಿರಬಹುದಾದ ಬಿಳಿ ಮತ್ತು ಕಪ್ಪು ಗುಳ್ಳೆಗಳ (Black Heads) ಸಮಸ್ಯೆಯನ್ನು ಪರಿಹರಿಸುತ್ತದೆ. ದಾಳಿಂಬೆ ಹಣ್ಣಿನ ಬೀಜವನ್ನು ಪುಡಿಮಾಡಿಕೊಂಡು ರಸದ ಜೊತೆ ಸೇರಿಸಿ ಮೆಲ್ಲಗೆ ನಿಮ್ಮ ಮುಖದ ಮೇಲೆ ಉಜ್ಜಿ. ಕಣ್ಣುಗಳ ಹತ್ತಿರ ಹಚ್ಚಬೇಡಿ.

English summary

Skin Care Benefits Of Pomegranate Juice

Fruits have immense benefit on your health & skin. It is said that you must have every seasonal fruit to get strong immunity. Every fruits have certain benefits for your health but Pomegranate is such kind of fruit which have endless list of benefits.
X
Desktop Bottom Promotion