For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ತ್ವಚೆಯ ಮೇಕಪ್‌ ಅನ್ನು ತೆಗೆಯಲು ಮರೆಯದಿರಿ!

|

ಮಲಗುವ ಮುನ್ನ ತ್ವಚೆಗೆ ನೀವು ಆರೈಕೆ ಮಾಡದಿದ್ದಲ್ಲಿ, ಬೆಳಗ್ಗೆ ಎದ್ದ ಕೂಡಲೆ ಇದರ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ. ಮಲಗಿದಾಗ ನಿಮ್ಮ ದೇಹ, ತ್ವಚೆ ಎಲ್ಲವೂ ವಿಶ್ರಾಂತಿ ತೆಗೆದುಕೊಳ್ಳುತ್ತವೆ. ನಿಮ್ಮ ತ್ವಚೆಯು ಮಲಗಿದಾಗ ತಾಜಾ ಆಗುತ್ತವೆ, ಜೊತೆಗೆ ಆಹ್ಲಾದಕತೆಯನ್ನು ಸಹ ಪಡೆಯುತ್ತದೆ.

ತ್ವಚೆಯ ಆರೋಗ್ಯದ ಮೇಲೆ ನೀವು ಮಾಡುವ ನಿದ್ದೆಯು ಸಹ ಪರಿಣಾಮ ಬೀರುತ್ತದೆ. ಇದರ ಜೊತೆಗೆ ನೀವು ನಿದ್ದೆಗೆ ಹೋಗುವ ಮುನ್ನ ತ್ವಚೆಗೆ ಮಾಡುವ ಆರೈಕೆಯು ಸಹ ನಿಮ್ಮ ತ್ವಚೆಯ ಆರೋಗ್ಯವನ್ನು ನಿರ್ಧರಿಸುತ್ತದೆ. ಬೆಳಗ್ಗೆ ನಮ್ಮ ತ್ವಚೆ ತಾಜಾ ಆಗಿ ಕಾಣಬೇಕೆಂದರೆ, ಅದಕ್ಕೆ ಬೇಕಾದ ಆರೈಕೆಯನ್ನು ನಾವು ತಪ್ಪದೆ ಮಾಡಬೇಕು.

ಈ ಸರಳವಾದ ನಿಯಮವನ್ನು ನಾವು ಮರೆತರೆ ಮರುದಿನ ಬೆಳಗ್ಗೆ ನಾವು ತ್ವಚೆ ಸೊರಗಿ ಹೋಗಿರುವುದನ್ನು ಕಾಣಬಹುದು. ಅದಕ್ಕಾಗಿ ಮಲಗುವ ಮುನ್ನ ತ್ವಚೆಗೆ ಅಗತ್ಯವಾದ ಸರಳ ಆರೈಕೆ ಕ್ರಮವನ್ನು ರೂಢಿಸಿಕೊಳ್ಳಿ, ನಿಮ್ಮ ತ್ವಚೆಯನ್ನು ಆಕರ್ಷಕಗೊಳಿಸಿ. ಆ ಆರೈಕೆ ಕ್ರಮವು ಈ ಕೆಳಕಂಡಂತಿದೆ. ಅಪ್ಪಿತಪ್ಪಿಯೂ ಮುಖಕ್ಕೆ ಇಂತಹ ಮೇಕಪ್‌ ಅನ್ನು ಬಳಸಬೇಡಿ!

ಟಾಕ್ಸಿನ್‌ಗಳನ್ನು ತೆಗೆದು ಹಾಕುವುದು

ಟಾಕ್ಸಿನ್‌ಗಳನ್ನು ತೆಗೆದು ಹಾಕುವುದು

ಇಡೀ ದಿನ ನೀವು ಮೇಕಪ್ ಹೊಂದಿದ್ದರೆ, ಅದರ ಮೇಲೆ ವಾತಾವರಣದಲ್ಲಿರುವ ಧೂಳು ಬಂದು ಕೂರುತ್ತದೆ. ಇದು ಸಂಜೆಯ ಹೊತ್ತಿಗೆ ಟಾಕ್ಸಿನ್ ಆಗಿ ಪರಿವರ್ತನೆಯಾಗಿರುತ್ತದೆ. ಇದನ್ನು ನೀವು ಮಲಗುವ ಮುನ್ನ ತೆಗೆಯಲಿಲ್ಲವಾದಲ್ಲಿ, ತ್ವಚೆಯ ರಂಧ್ರಗಳಿಗೆ ಅಗತ್ಯವಾದ ಉಸಿರಾಟ ಪ್ರಕ್ರಿಯೆಗೆ ಇದು ತೊಡಕುಂಟು ಮಾಡುತ್ತದೆ. ಆದ್ದರಿಂದ ಮಲುಗುವಾಗ ಮುಖದ ಮೇಲೆ ಟಾಕ್ಸಿನ್‌ಗಳನ್ನು ಇರಿಸಿಕೊಂಡು ಮಲಗಬೇಡಿ.

ಕಡಿಮೆ ಕಾರ್ಬೋಹೈಡ್ರೇಟ್ ಇರುವ ಊಟ ಸೇವಿಸಿ

ಕಡಿಮೆ ಕಾರ್ಬೋಹೈಡ್ರೇಟ್ ಇರುವ ಊಟ ಸೇವಿಸಿ

ನೀವು ಎದ್ದ ಕೂಡಲೆ, ಮೊದಲು ನೀವು ಕನ್ನಡಿಯನ್ನು ನೋಡುತ್ತೀರಿ. ಆಗ ಜೋತುಬಿದ್ದ ನಿಮ್ಮ ಮುಖವನ್ನು ನೋಡಿ ನಿಮಗೆ ಅಸಹ್ಯವಾಗುವುದಿಲ್ಲವೇ. ಅದಕ್ಕಾಗಿ ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಿ ಅಥವಾ ರಾತ್ರಿಯ ಊಟದ ನಂತರ ಸಲಾಡ್ ಮತ್ತು ಜ್ಯೂಸ್ ಸೇವಿಸಿ. ಆಗ ನೋಡಿ ನೀವು ಯಾವುದೇ ಕಾರಣಕ್ಕು ಮರುದಿನ ಕನ್ನಡಿಯನ್ನು ನೋಡಿಕೊಂಡು ನಿರಾಸೆಗೊಳಗಾಗುವುದಿಲ್ಲ.

ನಿಮ್ಮ ಕೂದಲಿನ ಆರೈಕೆ ಬಗ್ಗೆ?

ನಿಮ್ಮ ಕೂದಲಿನ ಆರೈಕೆ ಬಗ್ಗೆ?

ಹೌದು, ನಿಮ್ಮ ಕೂದಲು ಸಹ ತ್ವಚೆಯ ಜೊತೆಗೆ ಟಾಕ್ಸಿನ್‌ಗಳಿಗೆ ಗುರಿಯಾಗುತ್ತದೆ. ಅದಕ್ಕಾಗಿ ಅದಕ್ಕೆ ಪಿನ್ ಹಾಕಿ. ಸಾಮಾನ್ಯವಾಗಿ ಕೂದಲು ಜಿಡ್ಡಿನಿಂದ ಕೂಡಿರುತ್ತದೆ. ಅದಕ್ಕೆ ಧೂಳು ತಕ್ಷಣ ಅಂಟಿಕೊಳ್ಳುತ್ತದೆ.ಯಾವಾಗ ನಿಮ್ಮ ಕೂದಲು ತ್ವಚೆಯನ್ನು ಸ್ಪರ್ಶಿಸುತ್ತದೆಯೋ, ಆಗ ಅದರಲ್ಲಿರುವ ಧೂಳು ತ್ವಚೆಗೆ ಅಂಟಿಕೊಳ್ಳುತ್ತದೆ. ಅದಕ್ಕಾಗಿ ಇದಕ್ಕೆ ಪಿನ್ ಹಾಕಿ ಭದ್ರಪಡಿಸಬಾರದೇಕೆ?

ಕಣ್ಣುಗಳು

ಕಣ್ಣುಗಳು

ಒಂದು ವೇಳೆ ನೀವು ಕಣ್ಣಿನ ಕ್ರೀಮ್ ಬಳಸುತ್ತಿದ್ದಲ್ಲಿ, ಅದನ್ನು ಮಲಗುವ ಮುನ್ನ ಬಳಸಿ. ಬೆಳಗ್ಗೆ ಎದ್ದಾಗ ಆಹ್ಲಾದಕರವಾದ ತ್ವಚೆಯೊಂದಿಗೆ ನೀವು ಏಳಬಹುದು. ಇದು ಸಹ ರಾತ್ರಿ ಮಲಗುವ ಮುನ್ನ ಮಾಡಿಕೊಳ್ಳಬೇಕಾದ ತ್ವಚೆಯ ರಕ್ಷಣೆಗಳಲ್ಲಿ ಒಂದು.

ಕೈಗಳು ಮತ್ತು ಕಾಲುಗಳು

ಕೈಗಳು ಮತ್ತು ಕಾಲುಗಳು

ರಾತ್ರಿಯ ಹೊತ್ತು ಕೈ ಕಾಲುಗಳಿಗೆ ಮೊಯಿಶ್ಚರ್ ಹಚ್ಚಿಕೊಳ್ಳಲು ಪ್ರಶಸ್ತವಾದ ಸಮಯವಾಗಿರುತ್ತದೆ. ಹೀಗೆ ಮಾಡುವುದರಿಂದ ಕೈ ಮತ್ತು ಕಾಲುಗಳು ಮರುದಿನ ಹೊಳಪಿನಿಂದ ಕೂಡಿರುತ್ತವೆ. ರಾತ್ರಿ ಮಲಗುವ ಮುನ್ನ ಮಾಡಬೇಕಾದ ತ್ವಚೆಯ ಆರೈಕೆಗಳಲ್ಲಿ ಮೊಯಿಶ್ಚರ್ ಮಾಡಿಕೊಳ್ಳುವುದು ಸಹ ಸೇರಿರುತ್ತದೆ ಎಂಬುದನ್ನು ಮರೆಯಬೇಡಿ.

English summary

Skin Care Before Going To Bed

Neglecting skin care before going to bed may disappoint you every morning. When you sleep, your body relaxes and then heals itself. Your skin gets fresh and rejuvenated after a good night's sleep. Choosing a simple routine that doesn't eat away much of your bed time may help you make things better.
Story first published: Friday, April 24, 2015, 19:56 [IST]
X
Desktop Bottom Promotion