For Quick Alerts
ALLOW NOTIFICATIONS  
For Daily Alerts

ಸ್ಕಿನ್ ಲೋಷನ್ ಹಿಂದಿರುವ ಕರಾಳ ಸತ್ಯ

|

ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಇದಕ್ಕಾಗಿ ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಇದಕ್ಕಾಗಿ ಎಷ್ಟೇ ಹಣ ವ್ಯಯಿಸಲು ಕೂಡ ನಾವು ಸಿದ್ಧರಾಗಿರುತ್ತೇವೆ. ಹಾಗಾಗಿ ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತರಹೇವಾರಿ ಉತ್ಪನ್ನವನ್ನು ಬಿಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ.

ಅಷ್ಟೇ ಏಕೆ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ಸ್ಕಿನ್ ಲೋಷನ್ ಮತ್ತು ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುತ್ತೇವೆ. ಟಿವಿಯಲ್ಲಿ ಪದೇ ಪದೇ ತೋರಿಸಿವ ಜಾಹೀರಾತುಗಳಿಗೆ ಮರುಳಾಗಿ ಇಂತಹ ಸೌಂದರ್ಯವರ್ಧಕಗಳಿಗೆ ಮರುಳಾಗುತ್ತೇವೆ. ಚರ್ಮದ ಆರೈಕೆಯಲ್ಲಿ ಆರೋಗ್ಯ ಮತ್ತು ಸೌಂದರ್ಯದ ದೃಷ್ಟಿಯಿಂದ ಇದನ್ನು ಔಷಧೀಯ ಮತ್ತು ಕಾಸ್ಮೆಟಿಕ್ ಎರಡೂ ವಿಧದಿಂದ ಬಳಸಲಾಗುತ್ತದೆ.

ಸ್ಕಿನ್ ಮೊಶ್ಚಿರೈಸರ್‌ಗಳನ್ನು ತ್ವಚೆ ಒಣಗದಂತೆ ಹಾಗೂ ಒರಟಾಗುವುದನ್ನು ತಡೆಯಲು ಮತ್ತು ಚಿಕಿತ್ಸೆಗೆ ಬಳಸಲಾಗುತ್ತದೆ. ಇದು ಚರ್ಮ ಜೋತು ಬೀಳುವುದು ಮತ್ತು ಒಣಗುವುದರಿಂದ ಉಂಟಾಗುವಂತಹ ತುರಿಕೆಯನ್ನು ತಡೆಯುತ್ತದೆ. ಸನ್‌ಸ್ಕ್ರೀನ್ ಲೋಷನ್‪ನ ಗುಣ ಮತ್ತು ಅವಗುಣಗಳು

ಅಷ್ಟೇ ಏಕೆ ತ್ವಚೆಯ ಚರ್ಮದ ಮೇಲೆ ಸಣ್ಣ ಪದರವನ್ನು ಸೃಷ್ಟಿಸಿ ತೇವಾಂಶವನ್ನು ಕಾಪಾಡುತ್ತದೆ, ಜೊತೆಗೆ ಚರ್ಮದ ಇತರ ಸಮಸ್ಯೆಗಳಾದ ಸುಡುವುದು, ಕೆಂಪುಕಲೆ ಮೂಡುವುದನ್ನು ಇದು ತಡೆಯುತ್ತದೆ. ಸನ್ ಸ್ಕ್ರೀನ್ ಗುಣಗಳನ್ನು ಹೊಂದಿರುವಂತಹ ಸ್ಕಿನ್ ಲೋಷನ್‌ಗಳು ಸೂರ್ಯನಿಂದ ಬರುವಂತಹ ಅಲ್ಟ್ರಾ ವೆಲೆಟ್ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆದರೆ ಇದರಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂದು ನಿಮಗೆ ತಿಳಿದಿದೆಯಾ? ದೇಹದ ಮೇಲೆ ಸ್ಕಿನ್ ಲೋಷನ್ ನಿಂದ ಉಂಟಾಗುವಂತಹ ಕೆಲವೊಂದು ಸಾಮಾನ್ಯ ಅಡ್ಡಪರಿಣಾಮಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ, ಮುಂದೆ ಓದಿ

ಚರ್ಮಕ್ಕೆ ಕಿರಿಕಿರಿ

ಚರ್ಮಕ್ಕೆ ಕಿರಿಕಿರಿ

ಚರ್ಮ ಕೆಂಪಾಗುವುದು, ತುರಿಕೆ ಮತ್ತು ಸುಟ್ಟು ಹೋಗುವಂತಹ ಕೆಲವೊಂದು ಚರ್ಮದ ಕಿರಿಕಿರಿಗಳು ಸ್ಕಿನ್ ಲೋಷನ್ ನಿಂದಾಗಿ ದೇಹದ ಮೇಲಾಗುವ ಸಾಮಾನ್ಯ ಅಡ್ಡಪರಿಣಾಮಗಳು. ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಅದರ ಪರಿಣಾಮವು ಹೆಚ್ಚಾಗಿರುತ್ತದೆ.

ಅಲರ್ಜಿ

ಅಲರ್ಜಿ

ಸ್ಕಿನ್ ಲೋಷನ್‌ಗೆ ಬಳಸಲಾಗಿರುವ ಕೆಲವೊಂದು ರಾಸಾಯನಿಕಗಳು ಅಲರ್ಜಿಯನ್ನು ಉಂಟು ಮಾಡಬಹುದು. ಇದು ಕೇವಲ ನಿಮ್ಮ ಚರ್ಮದ ಮೇಲ್ಭಾಗದ ಮೇಲೆ ಮಾತ್ರವಲ್ಲದೆ ಗಂಭೀರವಾದ ಅಲರ್ಜಿ ಸಮಸ್ಯೆ ಉಂಟಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಗುತ್ತದೆ. ತುರಿಕೆ, ಮೈಕೈ ಊದುವುದು, ಉಸಿರಾಟದಂತಹ ಸಮಸ್ಯೆಗಳು ಉಂಟಾಗಬಹುದು.

ಕ್ಯಾನ್ಸರ್

ಕ್ಯಾನ್ಸರ್

ದೀರ್ಘಕಾಲ ಮತ್ತು ನಿಯಮಿತವಾಗಿ ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ಬಳಸುವುದರಿಂದ ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು. ಸ್ಕಿನ್ ಲೋಷನ್ ಅನ್ನು ಕೆಡದಂತೆ ಕಾಪಾಡಲು ಮತ್ತು ಸುವಾಸನೆಗಾಗಿ ಬಳಸುವ ರಾಸಾಯನಿಕಗಳಿಂದ ಗಂಭೀರ ಸಮಸ್ಯೆ ಉಂಟಾಗಬಹುದು. ಕಾನೂನುಬದ್ಧವಾಗಿ ಅನುಮತಿಯಿರುವ ರಾಸಾಯನಿಕಗಳನ್ನು ಹೊಂದಿರುವಂತಹ ಉತ್ಪನ್ನಗಳನ್ನೇ ಬಳಸಲು ಯಾವಾಗಲೂ ಪ್ರಯತ್ನಿಸಿ.

ಗಂಟಲು ಊದಿಕೊಳ್ಳುವುದು

ಗಂಟಲು ಊದಿಕೊಳ್ಳುವುದು

ಚರ್ಮ, ಗಂಟಲು ಮತ್ತು ನಾಲಗೆ ಊದಿಕೊಳ್ಳುವುದು ಸ್ಕಿನ್ ಲೋಷನ್‌ನ ಅಡ್ಡಪರಿಣಾಮಗಳು. ಅಲರ್ಜಿಯಿಂದ ಉಂಟಾಗುವ ಉರಿಯೂತದಿಂದ ಹೀಗೆ ಆಗುತ್ತದೆ. ಸ್ಕಿನ್ ಲೋಷನ್ ಬಳಸಿದ ಬಳಿಕ ನಿಮಗೆ ಈ ರೀತಿಯ ಅನುಭವವಾಗಿದ್ದರೆ ಆಗ ಆದಷ್ಟು ಬೇಗ ಸ್ಪೆಷಲಿಸ್ಟ್‌ನ್ನು ಸಂಪರ್ಕಿಸಿ.

ಇಸುಬಿನ ಕೆಟ್ಟ ಪರಿಣಾಮ

ಇಸುಬಿನ ಕೆಟ್ಟ ಪರಿಣಾಮ

ಸ್ಕಿನ್ ಲೋಷನ್‌ನಲ್ಲಿ ಇರುವಂತಹ ರಾಸಾಯನಿಕವು ಚರ್ಮದಲ್ಲಿ ಎಸ್ಜಿಮಾ ಮತ್ತು ಸೋರಿಯಾಸಿಸ್ ನಂತಹ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸಬಹುದು. ಹೊಸ ಸ್ಕಿನ್ ಉತ್ಪನ್ನವನ್ನು ಬಳಸುವಾಗ ಜಾಗೃತೆ ವಹಿಸಿ. ಸ್ಕಿನ್ ಲೋಷನ್ ಬಳಸುವ ಮೊದಲು ಚರ್ಮದ ಒಂದು ಭಾಗಕ್ಕೆ ಸ್ವಲ್ಪವೇ ಹಚ್ಚಿ ಇದನ್ನು ಪರೀಕ್ಷಿಸಿ.

English summary

Side Effects Of Using Skin Lotions

We all use skin lotions for one or the other skin care purpose. But, are skin lotions a healthy choice for your skin care? Skin lotions are used for various purposes involved in skin care, related to both health and beauty. They can be used for both medicinal and cosmetic use. Skin moisturisers are used to prevent and treat dry and rough skin. This will avoid scaly skin and itching of the skin due to extreme dryness. 
X
Desktop Bottom Promotion