For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿ, ಕೋಮಲತೆಗಾಗಿ- ಕೊಬ್ಬರಿ ಎಣ್ಣೆ

|

ಶರೀರದ ಬಾಹ್ಯ ಅಂಗಳಾದ ಚರ್ಮ ಮತ್ತು ಕೂದಲಿನ ಆರೈಕೆಗೆ ಕೊಬ್ಬರಿ ಎಣ್ಣೆ ಅಥವಾ ತೆಂಗಿನಕಾಯಿ ಎಣ್ಣೆ ಬಹಳ ಹಿಂದಿನ ಕಾಲದಿಂದಲೂ ಉಪಯೋಗಿಸಲ್ಪಡುತ್ತಾ ಬಂದಿದೆ. ಇದರ ಅನುಪಮ ಸ್ವಾದ ಮತ್ತು ಸುವಾಸನೆಯಿಂದಾಗಿ, ನಮ್ಮ ನಿತ್ಯ ಜೀವನದಲ್ಲಿ ಮನೆ ಮಾತಾಗಿರುವುದು ತಿಳಿದಿರುವ ವಿಚಾರವೇ. ಇದನ್ನು ಹಲವಾರು ಸೌಂದರ್ಯದ ಉದ್ದೇಶಗಳಿಗಾಗಿ ಬಳಸುತ್ತಾರೆ. ತ್ವಚೆಗೆ ಮತ್ತು ಕೂದಲಿನ ಹಲವಾರು ಸಮಸ್ಯೆಗಳಿಗೆ ತೆಂಗಿನ ಎಣ್ಣೆಯು ಒಳ್ಳೆಯ ಮನೆಮದ್ದಾಗಿರುತ್ತದೆ. ತೆಂಗಿನ ಎಣ್ಣೆಯಿಂದ ತುಟಿಗಳ ಆರೈಕೆ

ತೆಂಗಿನ ಎಣ್ಣೆಯು ನಿಮ್ಮ ಕೂದಲನ್ನು ಆರೋಗ್ಯವಂತವಾಗಿ ಇಡುವುದಲ್ಲದೆ, ಮೊಡವೆಗಳಿಗೆ ತೆಂಗಿನ ಎಣ್ಣೆಯು ಒಳ್ಳೆ ಮನೆಮದ್ದಾಗಿ ಕೆಲಸ ಮಾಡುತ್ತದೆ. ಇದು ತ್ವಚೆಯಲ್ಲಿರುವ ಧೂಳು ಮತ್ತು ಕೊಳೆಯನ್ನು ತೆಗೆದುಹಾಕಿ, ಕಟ್ಟಿಕೊಂಡ ತ್ಚಚೆಯ ರಂಧ್ರಗಳನ್ನು ಸ್ವಚ್ಛ ಮಾಡುತ್ತದೆ. ಹಾಗಾಗಿ ತೆಂಗಿನ ಎಣ್ಣೆಯನ್ನು ಬಳಸಿ, ಮುಖ, ಕೂದಲು ಮತ್ತು ದೇಹವನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಇರಿಸಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ಆದ್ದರಿಂದ ಇದನ್ನು ಸದಾ ನಿಮ್ಮ ಮನೆಯ ಬಾತ್‍ರೂಮಿನಲ್ಲಿ ಇರಿಸಲು ಮರೆಯಬೇಡಿ. ಆಗ ಸ್ನಾನಕ್ಕೆ ಹೋಗುವಾಗ ನೀವು ಇದನ್ನು ಮರೆಯುವ ಸಾಧ್ಯತೆ ಕಡಿಮೆ ಇರುತ್ತದೆ. ಬನ್ನಿ ತೆಂಗಿನ ಎಣ್ಣೆಯಿಂದ ದೊರೆಯುವ ಪ್ರಯೋಜನಗಳು ಯಾವುವು ಎಂದು ತಿಳಿದುಕೊಳ್ಳೋಣ...

ಒಣಚರ್ಮದ ಸಮಸ್ಯೆಗೆ

ಒಣಚರ್ಮದ ಸಮಸ್ಯೆಗೆ

ಒಡೆದ ಚರ್ಮದ ಹೊರಭಾಗದ ಜೀವಕೋಶಗಳು ಸತ್ತು ತೆಳುವಾದ ಪದರದಂತೆ ಅಂಟಿಕೊಂಡಿರುತ್ತದೆ. ಈ ಪದರ ಸ್ವಾಭಾವಿಕವಾಗಿ ಉದುರಬೇಕು. ಆದರೆ ಬೇಸಿಗೆಯಲ್ಲಿ ಒಣಗಿರುವ ಚರ್ಮದ ಕಾರಣ ಸುಲಭವಾಗಿ ಉದುರದೇ ಅಂಟಿಕೊಂಡೇ ಇರುತ್ತದೆ. ಇದನ್ನು ನಿವಾರಿಸಲು ಮೂರು ಚಮಚ ಸಕ್ಕರೆಗೆ ಒಂದು ಅಥವಾ ಎರಡು ಚಮಚ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿ ಉಜ್ಜಿಕೊಳ್ಳಿ. ಇದರಿಂದ ಸತ್ತ ಜೀವಕೋಶಗಳ ಪದರ ಸುಲಭವಾಗಿ ಹೊರಬರುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.

ತ್ವಚೆಯನ್ನು ಮೊಯಿಶ್ಚರೈಸ್ ಮಾಡುತ್ತದೆ

ತ್ವಚೆಯನ್ನು ಮೊಯಿಶ್ಚರೈಸ್ ಮಾಡುತ್ತದೆ

ಸ್ನಾನ ಆದ ನಂತರ ತೆಂಗಿನ ಎಣ್ಣೆಯನ್ನು ಲೇಪಿಸಿಕೊಳ್ಳುವುದರಿಂದ ತ್ವಚೆಯು ಮೃದುವಾಗುತ್ತದೆ ಮತ್ತು ಹೊಳಪಿನಿಂದ ಕಂಗೊಳಿಸುತ್ತದೆ. ಇದು ಸ್ಟ್ರೆಚ್ ಕಲೆಗಳನ್ನು ನಿವಾರಿಸುವುದಲ್ಲದೆ ತ್ವಚೆಯನ್ನು ಪುನಃ ಆಹ್ಲಾದಕರವಾಗಿ ಕಾಣುವಂತೆ ಮಾಡುತ್ತದೆ.

ತ್ವಚೆಯ ಜಿಡ್ಡನ್ನು ಹೊರಹಾಕುತ್ತದೆ

ತ್ವಚೆಯ ಜಿಡ್ಡನ್ನು ಹೊರಹಾಕುತ್ತದೆ

ತೆಂಗಿನ ಎಣ್ಣೆಯನ್ನು ಮುಖದ ಮೇಲೆ ಸಹ ಹಚ್ಚಿಕೊಳ್ಳಬಹುದು. ಇದು ಮುಖದಲ್ಲಿರುವ ಹೆಚ್ಚಿನ ಜಿಡ್ಡನ್ನು ನಿವಾರಿಸುತ್ತದೆ ಮತ್ತು ಮುಖದಲ್ಲಿರುವ ಧೂಳು ಹಾಗು ಕೊಳೆಯನ್ನು ನಿವಾರಿಸುತ್ತದೆ. ಜೊತೆಗೆ ತ್ವಚೆಯಲ್ಲಿ ಕಟ್ಟಿಕೊಂಡಿರುವ ತ್ವಚೆಯ ರಂಧ್ರಗಳನ್ನು ನಿವಾರಿಸಿ, ಮೊಡವೆಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕಾಲುಗಳ ಶೇವಿಂಗ್

ಕಾಲುಗಳ ಶೇವಿಂಗ್

ಕಾಲುಗಳನ್ನು ಶೇವ್ ಮಾಡಿಕೊಳ್ಳುವ ಮುನ್ನ ತೆಂಗಿನ ಎಣ್ಣೆಯನ್ನು ಸವರಿ. ಇದರಿಂದ ಕಾಲಿನ ಚರ್ಮ ಮೃದುವಾಗಿ, ತುರಿಕೆ ಬರದಂತೆ ಇದು ಕಾಪಾಡುತ್ತದೆ. ಜೊತೆಗೆ ತೆಂಗಿನ ಎಣ್ಣೆಯು ಶೇವ್ ಆದ ನಂತರ ತ್ವಚೆಯಲ್ಲಿ ಉರಿ ಬರದಂತೆ ಕಾಪಾಡುತ್ತದೆ.

ಮೇಕಪ್ ನಿವಾರಿಸಲು

ಮೇಕಪ್ ನಿವಾರಿಸಲು

ಸಿಂಗಾರಕ್ಕಾಗಿ, ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉಪಯೋಗಿಸುವ ಮೇಕಪ್ ನಿವಾರಣೆಗೂ ಕೊಬ್ಬರಿ ಎಣ್ಣೆ ಅತ್ಯುತ್ತಮವಾಗಿದೆ. ಇದರಲ್ಲಿ ಯಾವುದೇ ಅಡ್ಡಪರಿಣಾಮ ಇಲ್ಲದಿರುವುದರಿಂದ ಯಾವುದೇ ಅಳುಕಿಲ್ಲದೇ ಉಪಯೋಗಿಸಬಹುದು. ಇದಕ್ಕಾಗಿ ಮೇಕಪ್ ಮಾಡಿದ ಸ್ಥಳವನ್ನು ಕೊಬ್ಬರಿ ಎಣ್ಣೆಯಲ್ಲಿ ತೋಯಿಸಿ ಕೆಲವು ನಿಮಿಷ ಬಿಡಿ. ಬಳಿಕ ಟವೆಲ್ ಅಥವಾ ಹತ್ತಿಯ ಉಂಡೆಯಿಂದ ನಿಧಾನವಾಗಿ ಒರೆಸುತ್ತಾ ಬನ್ನಿ. ಕಡೆಗೆ ಉಳಿದಿರುವ ತೆಳುವಾದ ಪದರವನ್ನು ಹತ್ತಿಯ ಉಂಡೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮುಳುಗಿಸಿ ಒರೆಸಿ ತೆಗೆಯಿರಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ಮೊದಲು ಬಳಿಕ ಸೌಮ್ಯವಾದ ಮುಖದ ಸೋಪು (facewash) ಉಪಯೋಗಿಸಿ ತೊಳೆದುಕೊಳ್ಳಿರಿ

ಆರೋಗ್ಯಕರವಾದ ಕೇಶ

ಆರೋಗ್ಯಕರವಾದ ಕೇಶ

ಕೂದಲು ಉದುರುವುದಕ್ಕೆ ಮುಖ್ಯ ಕಾರಣ ತಲೆಯ ಮೇಲಿನ ಚರ್ಮದಲ್ಲಿ ತೇವಾಂಶ ಕಡಿಮೆಯಾಗಿ ಒಣಗುವುದು. ಪರಿಣಾಮವಾಗಿ ಚರ್ಮದ ಮೇಲ್ಪದರ ಪಕಳೆಗಳಂತೆ ಒಣಗಿ ಮೇಲೇಳುತ್ತದೆ. ಇದೇ ತಲೆಹೊಟ್ಟು.ಒಣಗಿದ ಚರ್ಮ ದೃಢವಾಗಿ ಕೂದಲ ಬುಡ ಸಡಿಲವಾಗುತ್ತದೆ. ಈಗ ಕೂದಲು ಸುಲಭವಾಗಿ ಉದುರುತ್ತದೆ. ಎಷ್ಟು ಸುಲಭ ಎಂದರೆ ಆಡುತ್ತಿರುವ ಗಾಳಿಗೆ ತಲೆಯೊಡ್ಡಿದರೇ ಕೆಲವು ಕೂದಲುಗಳು ಉದುರಿ ಬೀಳುತ್ತವೆ. ಕೂದಲ ಬುಡಕ್ಕೆ ಪ್ರತಿದಿನ ಕೊಬ್ಬರಿ ಎಣ್ಣೆಯ ನಿಯಮಿತ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಅಗತ್ಯವಾದ ತೇವಾಂಶ ದೊರೆತು ಕೂದಲು ಉದುರುವುದನ್ನು ತಡೆಗಟ್ಟಬಹುದು.


English summary

Reasons To Keep Coconut Oil In Your Bathroom

Coconut oil has many health benefits and skin nourishing properties. Coconut also has exotic and taste and an alluring smell. It can be used for many beauty purposes. Coconut oil is one of the best home remedy to get a flawless skin and healthy hair, Here are some beauty benefits of coconut oil.
Story first published: Monday, May 25, 2015, 12:20 [IST]
X
Desktop Bottom Promotion