For Quick Alerts
ALLOW NOTIFICATIONS  
For Daily Alerts

ಮುದ್ದು ಮುಖ ಕೆಡಿಸುವ ಮೊಡವೆಗೆ ಮನೆ ಮದ್ದೇ ಸಾಕು

By Super
|

ಮುಖದಲ್ಲಿ ಕಂಡುಬರುವ ಮೊಡವೆ ಹಾಗೂ ಅವುಗಳು ಉಳಿಸಿ ಹೋಗುವ ಕಲೆಗಳು ನಿಜಕ್ಕೂ ದು:ಸ್ವಪ್ನದ೦ತೆ ಕಾಡುವ೦ತಹವುಗಳಾಗಿರುತ್ತವೆ. ನಾಳೆಯೇ ನಿಮಗೆ ಯಾವುದೋ ಒ೦ದು ಮುಖ್ಯವಾದ ಕಾರ್ಯಕ್ರಮ ಅಥವಾ ಸಮಾರ೦ಭಕ್ಕೆ ತೆರಳಬೇಕಾಗಿದೆ ಎ೦ದು ಇಟ್ಟುಕೊಳ್ಳಿರಿ. ಅ೦ತಹ ಸ೦ದರ್ಭದಲ್ಲಿ ರಾತ್ರಿ ಬೆಳಗಾಗುವುದರೊಳಗಾಗಿ, ಸರಿಯಾಗಿ ನಿಮ್ಮ ಮೂಗಿನ ತುದಿಭಾಗದಲ್ಲಿ ಗುಳ್ಳೆಯೊ೦ದು ಉದ್ಭವಿಸಿದರೆ ನಿಮ್ಮ ಪರಿಸ್ಥಿತಿ ಹೇಗಾಗಿರಬೇಡ?

ಸಾಮಾನ್ಯವಾಗಿ ಮೊಡವೆ ಹೋದರೂ ಕೆಲವೊಮ್ಮೆ ಕಲೆ ಹಾಗೆಯೇ ಉಳಿದುಬಿಡುತ್ತವೆ. ಆದ್ದರಿಂದ ಮೊಡವೆಗಳಿಗೆಂದೇ ಇರುವ ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಿದರೆ ಖಂಡಿತವಾಗಿಯೂ ಇದನ್ನು ನಿಯಂತ್ರಿಸಬಹುದು. ಬನ್ನಿ ಹಾಗಾದರೆ ಮೊಡವೆ ನಿವಾರಣೆಗಾಗಿಯೇ ಹೇಳಿ ಮಾಡಿಸಿ ಅದ್ಭುತ ಮನೆಮದ್ದನ್ನು ಪ್ರಯತ್ನಿಸಿ ನೋಡಿ..! ಅಮೃತದಂತಹ ಮದ್ದಿರುವಾಗ ಮೊಡವೆಗೆ ಅಂಜುವುದೇಕೆ?

ಅಲೋವಿರಾ ಬಳಸಿ ನೋಡಿ

ಅಲೋವಿರಾ ಬಳಸಿ ನೋಡಿ

ಮೊಡವೆಗಳು ಒಡೆದು ಹೋದಾಗ ಅದರ ಮೇಲೆ ಅಲೋವಿರಾ ಅಥವಾ ಲೋಳೆಯನ್ನು ಬಳಸಿ. ಇದರಿಂದ ಆ ಮೊಡವೆಗಳು ಬೇಗ ಕೂಡಿಕೊಂಡು, ತ್ವಚೆ ಮರಳಿ ಮೊದಲಿನಂತಾಗುತ್ತದೆ. ಇದರಲ್ಲಿರುವ ಅಂಶಗಳು ಮೊಡವೆಗಳ ಊತ ಮತ್ತು ಕೆಂಪಾಗುವಿಕೆಯನ್ನು ತಡೆಯುತ್ತವೆ.

ಟೊಮೇಟೊ

ಟೊಮೇಟೊ

ಟೊಮೇಟೊ ರಸವು ಸಹ ಮೊಡವೆಗಳನ್ನು ನಿವಾರಿಸುತ್ತದೆ. ಇದು ಮುಖದಲ್ಲಿ ಮೊಡವೆಗಳಿಗೆ ಕಾರಣವಾಗುವ ಜಿಡ್ಡಿನಂಶವನ್ನು ಹೀರಿಕೊಳ್ಳುವ ಸಾಮರ್ತ್ಯವನ್ನು ಹೊಂದಿದೆ. ಟೊಮೇಟೊ ರಸವನ್ನು, ಮೊಸರು ಮತ್ತು ಅರಿಶಿನದ ಜೊತೆಗೆ ಸೇರಿಸಿ, ಪೇಸ್ಟ್ ಮಾಡಿ. ಈ ಪೇಸ್ಟನ್ನು ಮೊಡವೆಗಳ ಮೇಲೆ ಲೇಪಿಸಿ ಮತ್ತು ಅದನ್ನು 20 ನಿಮಿಷ ಹಾಗೆ ಬಿಡಿ. ನಂತರ ತಣ್ಣೀರಿನಲ್ಲಿ ಇದನ್ನು ತೊಳೆಯಿರಿ.

ಲಿಂಬೆರಸ

ಲಿಂಬೆರಸ

ಲಿಂಬೆರಸವು ಮೊಡವೆಗಳ ಮೇಲೆ ರಾಮ ಬಾಣದ ರೀತಿ ಕೆಲಸ ಮಾಡುತ್ತದೆ. ಲಿಂಬೆರಸವನ್ನು ಸ್ವಲ್ಪ ರೋಸ್ ವಾಟರ್ ಜೊತೆಗೆ ಬೆರೆಸಿ, ಅದನ್ನು ಮೊಡವೆ ಮೇಲೆ ಲೇಪಿಸಿ. ಲಿಂಬೆರಸ ಮೊಡವೆಗಳ ಮೇಲೆ ಉತ್ತಮವಾಗಿ ಕೆಲಸ ಮಾಡುತ್ತದೆ, ಜೊತೆಗೆ ಇದು ಮೊಡವೆಗಳ ಕಲೆಯನ್ನು ಸಹ ನಿವಾರಿಸುತ್ತದೆ. ಜೊತೆಗೆ ಇದು ಮೊಡವೆಗಳಿಗೆ ಕಾರಣವಾಗುವ ಜಿಡ್ಡಿನಂಶವು ತ್ವಚೆಯಲ್ಲಿ ಉತ್ಪಾದನೆಯಾಗುವುದನ್ನು ತಡೆಯುತ್ತದೆ.ಒ೦ದಿಷ್ಟು ಲಿ೦ಬೆಯ ರಸವನ್ನು ನೀರಿರುವ ಬಟ್ಟಲೊ೦ದರಲ್ಲಿ ಹಿ೦ಡಿರಿ ಹಾಗೂ ಲಿ೦ಬೆ ರಸವನ್ನು ತಿಳಿಗೊಳಿಸಲು ಅದನ್ನು ನೀರಿನೊಡನೆ ಚೆನ್ನಾಗಿ ಮಿಶ್ರಗೊಳಿಸಿರಿ. ಹತ್ತಿಯ ಉ೦ಡೆಯೊ೦ದನ್ನು ಈ ಮಿಶ್ರಣದಲ್ಲಿ ಅದ್ದಿ, ಅದನ್ನು ಭಾದಿತ ಜಾಗಗಳಿಗೆ ಹಚ್ಚಿಕೊಳ್ಳಿರಿ. ಹಾಗೆ ಮಾಡುವಾಗ ಲಿ೦ಬೆರಸವು ನಿಮ್ಮ ಮೊಡವೆಯನ್ನು ಉರಿಗೊಳಪಡಿಸದ೦ತೆ ಎಚ್ಚರವಹಿಸಿರಿ.ಒ೦ದು ವೇಳೆ ಅ೦ತಹ ಅನುಭವವೇನಾದರೂ ಆದಲ್ಲಿ, ಮಿಶ್ರಣಕ್ಕೆ ಮತ್ತಷ್ಟು ನೀರನ್ನು ಸೇರಿಸುವುದರ ಮೂಲಕ ಅದನ್ನು ಒ೦ದು ತೆಳ್ಳಗಿನ ದ್ರಾವಣದ ರೂಪಕ್ಕೆ ತ೦ದುಕೊ೦ಡು ಅದನ್ನು ಹಚ್ಚಿಕೊಳ್ಳಿರಿ. ಹೀಗೆ ಹಚ್ಚಿಕೊ೦ಡ ದ್ರಾವಣವನ್ನು ಒ೦ದು ರಾತ್ರಿಯಿಡೀ ಹಾಗೆಯೇ ಇರಗೊಟ್ಟು ಮರುದಿನ ಬೆಳಗ್ಗೆ ನೀರಿನಿ೦ದ ತೊಳೆದು ಬಿಡಿರಿ.ಅತ್ಯುತ್ತಮವಾದ ಫಲಿತಾ೦ಶಗಳಿಗಾಗಿ, ನೀವು ಈ ಪರಿಹಾರಕ್ರಮವನ್ನು ಅಥವಾ ಚಿಕಿತ್ಸೆಯನ್ನು ನಿಯಮಿತವಾಗಿ ವಾರಕ್ಕೆರಡು ಬಾರಿ ಪುನರಾವರ್ತಿಸಬೇಕು.

ಮೊಡವೆಗಳಿಗಾಗಿ ಕಿತ್ತಳೆ ಸಿಪ್ಪೆ

ಮೊಡವೆಗಳಿಗಾಗಿ ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯು ತ್ವಚೆಗೆ ವಿಟಮಿನ್ ಸಿಯನ್ನು ತಕ್ಷಣದಲ್ಲಿ ಒದಗಿಸುತ್ತದೆ. ಇದು ಮೊಡವೆಗಳ ಊತವನ್ನು ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಮಾಡಲು ನಿಮಗೆ ಕಿತ್ತಳೆ ಹಣ್ಣಿನ ಸಿಪ್ಪೆಗಳ ಅವಶ್ಯಕತೆ ಇರುತ್ತದೆ. ಇದನ್ನು ಮೊದಲು ರುಬ್ಬಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಫೇಸ್ ಮಾಸ್ಕ್ ಆಗಿ ಬಳಸಿ. ಇದನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಬಿಡಿ. ಒಂದು ವೇಳೆ ನಿಮಗೆ ವಿಟಮಿನ್ ಸಿ ಅಲರ್ಜಿ ಇದ್ದಲ್ಲಿ, ಇದನ್ನು ಬಳಸಬೇಡಿ.

ಪುದಿನಾ ರಸವನ್ನು ಲೇಪಿಸಿ

ಪುದಿನಾ ರಸವನ್ನು ಲೇಪಿಸಿ

ಪುದಿನಾ ರಸದಲ್ಲಿ ಅದ್ಭುತವಾದ ಆಂಟಿಸೆಪ್ಟಿಕ್ ಅಂಶಗಳು ಇರುತ್ತವೆ. ಇದನ್ನು ನೇರವಾಗಿ ಮೊಡವೆಗಳ ಮೇಲೆ ಲೇಪಿಸಿದಾಗ, ಅದರಿಂದ ಇನ್‌ಫೆಕ್ಷನ್‌ಗಳನ್ನು ನಿವಾರಿಸಿಕೊಳ್ಳಬಹುದು. ಇದನ್ನು ಕಜ್ಜಿ ಮತ್ತು ರ‍್ಯಾಷಸ್ ಅಥವಾ ಗುಳ್ಳೆಗಳು ಮುಂತಾದ ತ್ವಚೆಯ ಸಮಸ್ಯೆಗಳಿಗು ಸಹ ಬಳಸಬಹುದು.

English summary

Natural Ways To Treat Acne

How to Heal Acne Fast and Naturally? Here are Natural ways to cure Acne compiled by Boldsky..
X
Desktop Bottom Promotion