For Quick Alerts
ALLOW NOTIFICATIONS  
For Daily Alerts

ಚಿಟಿಕೆ ಹೊಡೆದಷ್ಟು ಸುಲಭದಲ್ಲಿ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಿ

|

ಇಂದು ಸೌಂದರ್ಯದ ಬಗ್ಗೆ ಕಾಳಜಿ ಕೇವಲ ಉಳ್ಳವರ ಸೊತ್ತಾಗಿ ಉಳಿದಿಲ್ಲ. ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು, ಚರ್ಮದ ಕಾಂತಿ ಬೆಳಗಿಸಲು ಹಾಗೂ ಕಲೆಗಳನ್ನು ನಿವಾರಿಸಲು ಇಂದು ಹಲವು ಮುಖಲೇಪಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಲ್ಲದೇ ಈ ಮುಖಲೇಪವನ್ನು ಹಚ್ಚುವ ಪರಿಣಿತರೂ ಇದ್ದಾರೆ.

ಅಷ್ಟೇ ಏಕೆ? ತ್ವಚೆಯ ಸೌಂದರ್ಯ ಹೆಚ್ಚಿಸುವ ಸಲುವಾಗಿ ಹಳ್ಳಿ ಹಳ್ಳಿಗಳಲ್ಲಿ ತಲೆಯೆತ್ತಿರುವ ಸೌಂದರ್ಯ ಮಳಿಗೆಗಳೇ ಇದಕ್ಕೆ ಸಾಕ್ಷಿ. ಇವುಗಳ ಸೇವೆ ಪಡೆಯುವ ಮೂಲಕ ನೈಸರ್ಗಿಕ ಮತ್ತು ಕಾಂತಿಯುತ ಮುಖವನ್ನು ಪಡೆಯುವುದು ಖಂಡಿತಾ ಸಾಧ್ಯ. ಆದರೆ ಹೆಚ್ಚಿನ ಮಳಿಗೆಗಳು ಉತ್ತಮ ಸೇವೆ ಒದಗಿಸಿದರೂ ಅದಕ್ಕೆ ತಕ್ಕನಾದ ಬೆಲೆಯನ್ನೂ ವಿಧಿಸುವುದು ಹೆಚ್ಚಿನವರಿಗೆ ಭರಿಸಲಾಗುವುದಿಲ್ಲ.

ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ.

ಅದ್ದರಿಂದ ರಾಸಾಯನಿಕ ವಸ್ತುಗಳನ್ನು ಬಳಸಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ತಪ್ಪಿಸಿ ನೈಸರ್ಗಿಕವಾಗಿ ದೊರೆಯುವ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ. ಇದಕ್ಕಾಗಿ ನೀವು ನಿಮ್ಮ ಸ್ವಲ್ಪ ಸಮಯವನ್ನು ಹಾಗೂ ಪ್ರಯತ್ನವನ್ನು ಅಥವಾ ಶ್ರಮವನ್ನು ಮೀಸಲಾಗಿ ಇಟ್ಟರೆ ಅಷ್ಟೇ ಸಾಕು... ತ್ವಚೆಯ ಕಾಂತಿ ಹೆಚ್ಚಬೇಕೇ? ಅಕ್ಕಿನೆನೆಸಿದ ನೀರನ್ನು ಬಳಸಿ

Natural Ways To Get An Instant Glow

ಓಟ್ಸ್ ಹಾಗೂ ಲಿಂಬೆಯ ಪ್ಯಾಕ್
ಓಟ್ಸ್ ಆಹಾರವನ್ನು ದಪ್ಪನಾದ ಪೇಸ್ಟ್ ಅನ್ನು ತಯಾರಿಸುವುದಕ್ಕಾಗಿ ಲಿ೦ಬೆ ಹಾಗೂ ಅರಿಶಿನದ ಪುಡಿಯೊ೦ದಿಗೆ ಮಿಶ್ರಗೊಳಿಸಲಾಗುತ್ತದೆ. ನಿಮ್ಮ ಮುಖವನ್ನು ತೊಳೆದುಕೊಳ್ಳುವುದಕ್ಕೆ ಮೊದಲು ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಾಗೆಯೇ ಕೆಲನಿಮಿಷಗಳ ಕಾಲ ಇರಗೊಡಿರಿ. ದಿಢೀರ್ ಮೈ ಹಾಗೂ ಮುಖದ ಕಾ೦ತಿಯನ್ನು ಹೊ೦ದಲು ಲಭ್ಯವಿರುವ ಮಾರ್ಗೋಪಾಯಗಳ ಪೈಕಿ ಇದೂ ಕೂಡ ಒ೦ದು. ಏಕೆ೦ದರೆ, ಈ ಪೇಸ್ಟ್, ಕೊಳೆ ಹಾಗೂ ಧೂಳನ್ನು ತ್ವಚೆಯ ರ೦ಧ್ರಗಳಿ೦ದ ಹೋಗಲಾಡಿಸುತ್ತದೆ.

ಅರಿಶಿನ ಪುಡಿ
ಸುಕ್ಕುಗಳನ್ನು ನಿವಾರಿಸುವುದರಲ್ಲಿ ಸಹ ಅರಿಶಿನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸ್ವಲ್ಪ ಅಕ್ಕಿಪುಡಿಯ ಜೊತೆಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಟೊಮೇಟೊ ರಸ ಹಾಗು ಒಂದು ಚಮಚ ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳ ಮೇಲೆ ಲೇಪಿಸಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ.

ಈ ಪರಿಹಾರವನ್ನು ವಾರಕ್ಕೊಮ್ಮೆ ಮಾಡಿ. ಆಗ ನೋಡಿ, ನಿಮ್ಮ ಸುಕ್ಕಿಗೆ ಪರಿಹಾರ ದೊರೆಯಿತೆ ಇಲ್ಲವೇ, ಎಂದು. ಅಲ್ಲದೆ ಅರಿಶಿನದಲ್ಲಿರುವ ಆಂಟಿ-ಸೆಪ್ಟಿಕ್ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳು ಹೆಚ್ಚಾಗಿರುವುದರಿಂದ ಇದನ್ನು ಮೊಡವೆಗಳ ನಿವಾರಣೆಗಾಗಿ ಫೇಸ್‌ ಪ್ಯಾಕ್‌ನಂತೆ ಕೂಡ ಬಳಸಬಹುದು. ಅರಿಶಿನ ಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯದ ರಹಸ್ಯ

ಜೇನುತುಪ್ಪ ಹಾಗೂ ಸೌತೆಕಾಯಿಯ ರಸ
ಜೇನುತುಪ್ಪ ಹಾಗೂ ಸೌತೆಕಾಯಿಯ ರಸದ ಮಿಶ್ರಣವು ಶುಷ್ಕವಾದ ತ್ವಚೆಯ ಮೇಲೆ ಉತ್ತಮವಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇವುಗಳ ಮಿಶ್ರಣವನ್ನು ಬಳಸಿಕೊ೦ಡು ಪರಿಣಾಮಕಾರಿಯಾದ ಫೇಸ್ ಪ್ಯಾಕ್ ಅನ್ನು ತಯಾರಿಸಲು ಇವೆರಡನ್ನೂ ಕೂಡ ಸಮಪ್ರಮಾಣದಲ್ಲಿ ಮಿಶ್ರಗೊಳಿಸಬೇಕು. ತೈಲಯುಕ್ತ ತ್ವಚೆಯುಳ್ಳವರು ಹಾಲು ಮತ್ತು ಜೇನಿನ ಮಿಶ್ರಣವನ್ನೂ ಕೂಡ ತತ್ ಕ್ಷಣದ ಮೈಕಾ೦ತಿಗಾಗಿ ಬಳಸಬಹುದು.

ಹಾಲು, ಎಣ್ಣೆ, ಹಾಗೂ ಲಿ೦ಬೆ
ಈ ಮೂರು ವಸ್ತುಗಳ ಸ೦ಯೋಜನೆಯು ನಿಮ್ಮ ತ್ವಚೆಯ ಮೇಲೆ ಚಮತ್ಕಾರವನ್ನೇ ಎಸಗಬಲ್ಲದು. ಹಾಲಿನ ಪುಡಿ, ಲಿ೦ಬೆಯ ರಸ, ಹಾಗೂ ಬಾದಾಮಿ ಎಣ್ಣೆ - ಇವುಗಳ ಮಿಶ್ರಣವನ್ನೂ ಕೂಡ ತ್ವಚೆಯನ್ನು ತಿಳಿಯಾಗಿಸುವ ವಸ್ತುವಿನ ರೂಪದಲ್ಲಿ ತ್ವಚೆಗೆ ಬಳಸಿಕೊಳ್ಳಬಹುದು. ಆರೋಗ್ಯಕ್ಕೆ ಮಾರಕವಾದ ವೋಡ್ಕಾ ಸೌಂದರ್ಯಕ್ಕೆ ಪೂರಕ!

ನುಗ್ಗೆ ಎಲೆ
ತ್ವಚೆಯ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುವ ಆಂಟಿ ಆಕ್ಸಿಡೆಂಟುಗಳು ನುಗ್ಗೆ ಎಲೆಗಳಲ್ಲಿ ಆಗಾಧ ಪ್ರಮಾಣದಲ್ಲಿ ಇರುವುದರಿಂದ, ಇಂತಹ ನುಗ್ಗೆ ಎಲೆಯ ಹಸಿ ಎಲೆಗಳನ್ನು ಅರೆದು ತ್ವಚೆಯ ಚರ್ಮಕ್ಕೆ ದಿನ ನಿತ್ಯ ಲೇಪಿಸಿಕೊಳ್ಳಿ, ಇಲ್ಲದಿದ್ದರೆ ಇದರ ಎಲೆಗಳನ್ನು ಒಣಗಿಸಿ ಹಿಂಡಿ ತೆಗೆದ ತೈಲವನ್ನೂ ಹಚ್ಚಿಕೊಳ್ಳಬಹುದು.

English summary

Natural Ways To Get An Instant Glow

The skin is the most delicate part of the body. The use of harsh chemicals may be harmful to the skin. But, the use of natural products on the face will not only be safer but healthy as well. Hence, when you go for instant glow, you've to be careful of some aspects. You can use products off-the-shelves, but natural and home-made products are always beneficial for your face. There are some easy ways to get an instant glow. have a look 
Story first published: Monday, July 20, 2015, 19:28 [IST]
X
Desktop Bottom Promotion