For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ ದುಬಾರಿ ಬೆಲೆಯ ಉತ್ಪನ್ನ ಏತಕ್ಕೆ ಬೇಕು?

|

ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಉತ್ಪನ್ನಗಳ ಮೇಲೆ ಜನರ ಮೋಹ ಅಧಿಕಗೊಳ್ಳುತ್ತಿದೆ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಸೌಂದರ್ಯೋತ್ಪನ್ನಗಳು ತಮ್ಮ ಅಸ್ತಿತ್ವವನ್ನು ಮತ್ತು ಪ್ರಾಮುಖ್ಯತೆಯನ್ನು ಸಾರಿ ಸಾರಿ ಹೇಳುತ್ತಿವೆ. ಸಹಜವಾಗಿ ಇಂತಹ ಉತ್ಪನ್ನಗಳ ಬೇಡಿಕೆ ಮತ್ತು ಮಾರಾಟ ಇತ್ತೀಚೆಗೆ ಹೆಚ್ಚಾಗಿದೆ. ಜನರಲ್ಲಿ ಹೆಚ್ಚುತ್ತಿರುವ ಸೌಂದರ್ಯ ಪ್ರಜ್ಞೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಂಪೆನಿಗಳು ಅವರ ಬೇಡಿಕೆಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ತರಹೇವಾರಿ ಉತ್ಪನ್ನವನ್ನು ಬಿಟ್ಟು ಜನರನ್ನು ಮರಳು ಮಾಡುತ್ತಿದ್ದಾರೆ.

ಆದರೆ ಇಂತಹ ಉತ್ಪನ್ನಗಳಲ್ಲಿ ರಾಸಾಯನಿಕಗಳು ಅಧಿಕವಾಗಿದ್ದು, ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಅದಕ್ಕಾಗಿ ನಾವು ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸ್ವಾಭಾವಿಕ ಪರಿಹಾರಗಳ ಕಡೆಗೆ ಗಮನ ಹರಿಸಬೇಕಾದ ಕಾಲ ಬಂದಿದೆ. ಇಂತಹ ಸ್ವಾಭಾವಿಕ ಉತ್ಪನ್ನಗಳಲ್ಲಿ ಕೆಲವೊಂದನ್ನು ಇಲ್ಲಿ ಪರಿಚಯಿಸಲಾಗಿದ್ದು ಇದನ್ನು ಬಳಸುವುದರಿಂದ ನಮ್ಮ ತ್ವಚೆಗೆ ಅದ್ಭುತವಾದ ಹೊಳಪನ್ನು ನಾವು ನೀಡಬಹುದು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...

Natural homemade face packs for glowing skin

ಒಣ ತ್ವಚೆಯನ್ನು ನಿವಾರಿಸಲು ಆಲಿವ್ ಎಣ್ಣೆ ಎಣ್ಣೆಯ ಪಾತ್ರ
ಒಣ ಅಥವಾ ನಿರ್ಜೀವ ತ್ವಚೆಯನ್ನು ನಿವಾರಿಸಲು ಆಲಿವ್ ಎಣ್ಣೆಯು ಹೇಳಿ ಮಾಡಿಸಿದ ಔಷಧಿಯಾಗಿದೆ. ಆಲಿವ್ ಎಣ್ಣೆಯ ಜೊತೆಗೆ ಸ್ವಲ್ಪ ಉಪ್ಪನ್ನು ಬೆರೆಸಿ, ಒಣ ಅಥವಾ ನಿರ್ಜೀವ ತ್ವಚೆ ಇರುವ ಭಾಗಕ್ಕೆ ಲೇಪಿಸಿದರೆ ಸಾಕು, ನಿಮ್ಮ ತ್ವಚೆಯು ತನ್ನ ಒಣ ಅಥವಾ ನಿರ್ಜೀವತೆಯನ್ನು ಕಳಚಿಕೊಂಡು ನಳನಳಿಸುತ್ತದೆ. ಆಲಿವ್ ಎಣ್ಣೆಯನ್ನು ಸ್ವಲ್ಪ ಲ್ಯಾವೆಂಡರ್ ಎಣ್ಣೆಯ ಜೊತೆಗೆ ಬೆರೆಸಿ ಸ್ನಾನ ಮಾಡಿದರೆ, ನಿಮಗೆ ಮತ್ತಷ್ಟು ಲವಲವಿಕೆಯು ದೊರೆಯುತ್ತದೆ. ಇದು ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡಿ ಮೃದುಗೊಳಿಸುತ್ತದೆ. ಜೊತೆಗೆ ದೇಹದಲ್ಲಿನ ಜೀವಕೋಶಗಳಿಗೆ ವಿಶ್ರಾಂತಿಯನ್ನು ಮತ್ತು ಲವಲವಿಕೆಯನ್ನುಂಟು ಮಾಡುತ್ತದೆ

ಪಪ್ಪಾಯಿ ಮತ್ತು ಮೊಸರು
ಒಂದು ಚಿಕ್ಕ ತುಂಡು ಪಪ್ಪಾಯಿಯನ್ನು ತುರಿದು ಒಂದು ಕಪ್ ಮೊಸರಿಗೆ ಸೇರಿಸಿ ಮಿಕ್ಸಿಯಲ್ಲಿ ಅತಿ ನಯವಾಗದಷ್ಟು ಗೊಟಾಯಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮೊದಲು ಮುಖಕ್ಕೆ ತೆಳುವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದರಿಂದ ಪಪ್ಪಾಯಿಯಲ್ಲಿರುವ ಆಮ್ಲೀಯ ಅಂಶ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ.

ಹುಣಸೆಹಣ್ಣಿನ್ನು ಫೇಸ್‍ ವಾಶ್ ಆಗಿ ಬಳಸಿ
ಹುಣಸೆಹಣ್ಣಿನ ಫೇಸ್ ವಾಶ್ ತ್ವಚೆಗೆ ತುಂಬಾ ಒಳ್ಳೆಯದು. ಆದ್ದರಿಂದ ಮೊದಲು ಇದನ್ನು ಫೇಸ್ ವಾಶ್ ಆಗಿ ಬಳಸಿ ನೋಡಿ. ಇದಕ್ಕಾಗಿ ನೀವು ಹುಣಸೆಹಣ್ಣನ್ನು ಮೊದಲು ನೀರಿನಲ್ಲಿ ನೆನೆಸಿ, ನಂತರ ಆ ನೀರಿನಲ್ಲಿ ಮುಖವನ್ನು ತೊಳೆಯಿರಿ. ಅದಾದ ಮೇಲೆ ಚೆನ್ನಾಗಿ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಬಾಳೆ ಹಣ್ಣನ್ನು ಪ್ರಯತ್ನಿಸಿ ನೋಡಿ


ಬಾಳೆಹಣ್ಣೊ೦ದನ್ನು ತೆಗೆದುಕೊ೦ಡು, ಅದನ್ನು ಜಜ್ಜಿ, ಸ್ವಲ್ಪ ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಆಲಿವ್ ತೈಲದೊಡನೆ ಅದನ್ನು ಬೆರೆಸಿರಿ. ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ಮುಖದ ತ್ವಚೆಯ ಮೇಲಿರಬಹುದಾದ ನೆರಿಗೆಗಳು ಹಾಗೂ ಢಾಳಾಗಿರುವ ವೃದ್ದಾಪ್ಯ ರೇಖೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ, ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಆಗಿದ್ದು, ಇದು ನಿಮ್ಮ ತ್ವಚೆಯನ್ನು ನವನಾವೀನ್ಯದಿ೦ದಿರಿಸುತ್ತದೆ ಹಾಗೂ ತ್ವಚೆಯು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುತ್ತದೆ.
English summary

Natural homemade face packs for glowing skin

There are many beauty products being sold in the market, many of them have a negative effect on the skin in the long run. So it is best to go for natural remedies for skin to keep it healthy, youthful and glowing. Take a look at some of the homemade face packs:
Story first published: Monday, May 11, 2015, 19:24 [IST]
X
Desktop Bottom Promotion