For Quick Alerts
ALLOW NOTIFICATIONS  
For Daily Alerts

ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!

By Super
|

ಚರ್ಮದ ಆರೈಕೆಯ ಉತ್ಪನ್ನಗಳ ಬೆಲೆಯ ಶೇಖಡಾ ಅರವತ್ತರಷ್ಟು ಅದರ ಜಾಹೀರಾತಿಗೆ ಖರ್ಚಾಗಿರುತ್ತದೆ. ಏಕೆಂದರೆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮುಂದುವರೆಯುವಂತೆ ಮಾಡಲು ಬಣ್ಣಬಣ್ಣದ ಭರವಸೆಯನ್ನು ಸುಳ್ಳಿನ ಸರಮಾಲೆಯ ಮೂಲಕ ಗ್ರಾಹಕರಿಗೆ ನೀಡಲಾಗುತ್ತದೆ. ಒಮ್ಮೆ ಇದನ್ನು ಬಳಸಿ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಬಿಸಾಡುವ ವೇಳೆಗೆ ಆ ಸಂಸ್ಥೆ ನಿಮ್ಮಂತಹ ಒಂದು ಕೋಟಿ ಜನರಿಂದ ತನ್ನ ಕಳಪೆ ಉತ್ಪನ್ನದಿಂದ ಕೋಟ್ಯಂತರ ರೂಪಾಯಿ ಬಾಚಿ ಆಗಿರುತ್ತದೆ.

ನಾಳೆ ಇದರ ಬದಲಿಗೆ ಇನ್ನೊಂದು 'ಹೊಸ' ಉತ್ಪನ್ನ ಬಂದಿರುತ್ತದೆ. ಕ್ರಿಯೆ ಮುಂದುವರೆಯುತ್ತಾ ಹೋಗುತ್ತದೆ. ಈ ಅನಗತ್ಯ ಪ್ರಸಾಧನಗಳ ಬದಲು ನಿಸರ್ಗ ನಮಗೆ ನೀಡಿರುವ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸೌಂದರ್ಯವನ್ನು ಪಡೆಯಬಹುದು...! ಹೌದು, ನಿಸರ್ಗಕ್ಕೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯದ ಕಾಳಜಿಯೂ ಇದೆ. ಸರಳವಾದ, ಮನೆಯ ಅಡುಗೆಯಲ್ಲಿ ನಿತ್ಯಬಳಕೆಯ ಆಹಾರ ಸಾಮಾಗ್ರಿಗಳಲ್ಲಿಯೇ ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಗುಣಗಳಿವೆ. ತ್ವಚೆಯ ಸೌಂದರ್ಯವನ್ನು ಇಮ್ಮಡಿಸುವ ಮನೆಮದ್ದು

ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಇದರ ಹಿರಿಮೆಯನ್ನು ಅರಿಯದೇ ಜಾಹೀರಾತುಗಳಿಗೆ ಮರುಳಾಗುತ್ತಿದ್ದೇವೆ. ಅಜ್ಜಿಯ ಮದ್ದು ಎಂದೇ ಜನಜನಿತವಾಗಿರುವ (ಹಿಂದಿಯಲ್ಲಿ ದಾದಿಮಾ ಕೇ ನುಸ್ಖೇ) ಈ ಸಾಮಾಗ್ರಿಗಳು ಶತಶತಮಾನಗಳಿಂದ ಬಳಸಲ್ಪಡುತ್ತಾ ಬಂದಿದ್ದು ಸೌಂದರ್ಯವನ್ನು, ಅದರಲ್ಲೂ ಸಹಜ ಸೌಂದರ್ಯವನ್ನು ಕಾಪಾಡಿಕೊಂದು ಬಂದಿವೆ. ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!

ಇವುಗಳ ಫಲ ತಕ್ಷಣವೇ ಗೊತ್ತಾಗದೇ ಇದ್ದರೂ ಕೊಂಚ ತಾಳ್ಮೆಯಿಂದ ಕಾದರೆ ನಿಜವಾದ ಮತ್ತು ಅಪ್ಪಟ ಸೌಂದರ್ಯ ನಿಮ್ಮದಾಗುತ್ತದೆ. ಈ ಬಗ್ಗೆ ಹಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಇವು ಅಗ್ಗವೂ, ಸುಲಭವಾಗಿ ಲಭ್ಯವಾಗುವಂತಹವೂ ಆಗಿದ್ದು, ನಿಮ್ಮ ಮನೆಯ ಅಥವಾ ಅಕ್ಕಪಕ್ಕದಲ್ಲಿರುವ ಹಿರಿಯರಿಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದು ಕೇವಲ ಕೆದಕುವ ಕೆಲಸ ನಿಮ್ಮಿಂದಾಗಬೇಕಾಗಿದೆ.

ಸುಲಭವಾಗಿ ತುಂಡಾಗುವ ಕೂದಲಿಗಾಗಿ ಬೆಣ್ಣೆ ಹಣ್ಣು

ಸುಲಭವಾಗಿ ತುಂಡಾಗುವ ಕೂದಲಿಗಾಗಿ ಬೆಣ್ಣೆ ಹಣ್ಣು

ಬೆಣ್ಣೆಹಣ್ಣಿನಲ್ಲಿ ಕೊಬ್ಬಿನ ಆಮ್ಲಗಳು ಮತ್ತು ಖನಿಜಗಳು ಹೇರಳವಾಗಿವೆ. ಇವು ಕೂದಲ ದೃಢತೆಯನ್ನು ಹೆಚ್ಚಿಸುವ ಕ್ಷಮತೆ ಹೊಂದಿವೆ. ಈ ಗುಣಗಳು ಕೂದಲನ್ನು ಬಲಪಡಿಸಿ ತುಂಡಾಗುವುದರಿಂದ ರಕ್ಷಿಸುವ ಜೊತೆಗೇ ಹೊಳಪನ್ನೂ ಹೆಚ್ಚಿಸುತ್ತವೆ. ಇದಕ್ಕಾಗಿ ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ ತಿರುಳನ್ನು ಚಮಚದಿಂದ ತೆಗೆದು ನೇರವಾಗಿ ಈಗ ತಾನೇ ತೊಳೆದು ಒದ್ದೆಯಾಗಿರುವ ಕೂದಲುಗಳಿಗೆ ಬುಡದಿಂದ ತುದಿಯವರೆಗೂ ಬರುವಂತೆ ಹಚ್ಚಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸುಲಭವಾಗಿ ತುಂಡಾಗುವ ಕೂದಲಿಗಾಗಿ ಬೆಣ್ಣೆ ಹಣ್ಣು

ಸುಲಭವಾಗಿ ತುಂಡಾಗುವ ಕೂದಲಿಗಾಗಿ ಬೆಣ್ಣೆ ಹಣ್ಣು

ಇಡಿಯ ತಲೆ ಮತ್ತು ಕೂದಲಿಗೆ ಈ ತಿರುಳು ವ್ಯಾಪಿಸಲಿ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ತಿಂಗಳಿಗೆ ಮೂರು ಬಾರಿ ಈ ವಿಧಾನ ಅನುಸರಿಸುವ ಮೂಲಕ ಸೊಂಪಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ.

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಸಾಮಾನ್ಯವಾಗಿ ಚರ್ಮದ ಹೊರಪದರದ ಜೀವಕೋಶಗಳು ಸತ್ತು ಸೂಕ್ಷ್ಮ ಪುಡಿಯ ರೂಪದಲ್ಲಿ ಚರ್ಮಕ್ಕೆ ಅಂಟಿಕೊಂಡೇ ಇರುತ್ತವೆ. ಇದನ್ನು ನಿವಾರಿಸಲು ನಾವೆಲ್ಲಾ ಅನುಸರಿಸುತ್ತಾ ಬಂದಿರುವ ವಿಧಾನವೆಂದರೆ ಮೈಯುಜ್ಜುವ ಬ್ರಶ್ ಬಳಸಿ ಗಸಗಸ ತಿಕ್ಕುವುದು. ಇದು ಚರ್ಮಕ್ಕೆ ಸೂಕ್ಷ್ಮವಾದ ಗೀರುಗಳನ್ನುಂಟುಮಾಡುತ್ತವೆ. ಬಳಿಕ ಸೋಪು ಹಾಕಿಕೊಂಡಾಗ ಚಿಕ್ಕದಾಗಿ ಉರಿಯಲು ಇದೇ ಕಾರಣ! ಇದಕ್ಕಾಗಿ ಜಾಹೀರಾತುಗಳಿಗೆ ಮರುಳಾಗಿ ದುಬಾರಿ ವಸ್ತುಗಳನ್ನು ಖರೀದಿಸುವ ಅಗತ್ಯವೇ ಇಲ್ಲ. ಏಕೆಂದರೆ ನಿಮ್ಮ ಮನೆಯಲ್ಲಿರುವ ಸಕ್ಕರೆಯೇ ಆ ಕೆಲಸ ಮಾಡುತ್ತದೆ. ಕೈಯಲ್ಲಿ ಕೊಂಚ ಸಕ್ಕರೆಯನ್ನು ತೆಗೆದುಕೊಂಡು ಸ್ನಾನದ ಬಳಿಕ ತೇವವಾಗಿದ್ದ ಚರ್ಮಕ್ಕೆ ಹಚ್ಚುತ್ತಾ ಹೋಗಿ. ಇನ್ನೂ ಉತ್ತಮವೆಂದರೆ ಯಾವುದಾದರೂ ಅವಶ್ಯಕ ತೈಲದ ಕೆಲವು ಹನಿಗಳನ್ನು ಸಕ್ಕರೆಯ ಮೇಲೆ ಚಿಮುಕಿಸಿ ಮೈಯೆಲ್ಲಾ ಉಜ್ಜಿಕೊಳ್ಳಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮುಗಿಸಿ. ಇದು ಚರ್ಮವನ್ನು ನಯವಾಗಿಸಿ ನಿರಾಳ ಭಾವನೆಯನ್ನು ಮೂಡಿಸುತ್ತದೆ.

ಹಳದಿಯಾಗಿರುವ ಉಗುರುಗಳಿಗಾಗಿ

ಹಳದಿಯಾಗಿರುವ ಉಗುರುಗಳಿಗಾಗಿ

ಉಗುರುಗಳಿಗೆ ಸದಾ ಬಣ್ಣ ಹಚ್ಚುವ ಅಭ್ಯಾಸವಿರುವವರಿಗೆ ಬಣ್ಣ ನಿವಾರಿಸಿದ ಬಳಿಕ ಉಗುರು ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡುಬರಬಹುದು. ಇದಕ್ಕೆ ಆ ಬಣ್ಣದಲ್ಲಿರುವ ಹಾನಿಕಾರಕ ರಾಸಾಯನಿಕದ ಸತತ ಬಳಕೆಯೇ ಕಾರಣವಾಗಿದೆ. ಇದಕ್ಕಾಗಿ ಹಲ್ಲುಗಳನ್ನು ಬಿಳಿಯಾಗಿಸುವ ಯಾವುದೇ ಟೂಥ್ ಪೇಸ್ಟ್ ಅನ್ನು ತೆಳುವಾಗಿ ರಾತ್ರಿ ಹಚ್ಚಿ ಬೆಳಗ್ಗೆ ತೊಳೆದುಕೊಳ್ಳಿ. ಇದು ನಿಧಾನವಾಗಿ ಹಳದಿಯಾಗಿದ್ದ ಪದರವನ್ನು ನಿವಾರಿಸಿ ಉಗುರು ಸಹಜಬಣ್ಣವನ್ನು ಪಡೆಯಲು ನೆರವಾಗುತ್ತದೆ. ಆ ಪೇಸ್ಟ್ ನಲ್ಲಿ hydrogen peroxide ಎಂಬ ಸಾಮಾಗ್ರಿ ಇದ್ದರೆ ಇನ್ನೂ ಉತ್ತಮವಾದ ಪರಿಣಾಮ ದೊರಕುತ್ತದೆ.

ಯೌವನದ ಕಳೆ ಬಹುಕಾಲ ಉಳಿಯಲು

ಯೌವನದ ಕಳೆ ಬಹುಕಾಲ ಉಳಿಯಲು

ವಿವಿಧ ಕಾರಣಗಳಿಂದ ಮುಖದ ಕಾಂತಿ ಮತ್ತು ತೇಜಸ್ಸು ವಯಸ್ಸು ಕಳೆಯುತ್ತಿದ್ದಂತೆ ಕುಂದುತ್ತಾ ಹೋಗುತ್ತದೆ. ಇದಕ್ಕಾಗಿ ಸಮಪ್ರಮಾಣದ ಕೋಕೋ ಪುಡಿ ಮತ್ತು ಮೊಸರನ್ನು ಮಿಶ್ರಣ ಮಾಡಿ ಇಡಿಯ ಮುಖಕ್ಕೆ ಹಚ್ಚಿ. ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ನಿಮ್ಮ ಮುಖದ ಚರ್ಮ ನಯವಾಗುವ ಜೊತೆಗೇ ಸೆಳೆತವನ್ನು ಹೆಚ್ಚಿಸಿ ನೆರಿಗೆ ಮೂಡದಂತೆ ರಕ್ಷಿಸುತ್ತದೆ. ಇದರಿಂದ ಬಹುಕಾಲದವರೆಗೆ ತಾರುಣ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.

ಚರ್ಮಕ್ಕೆ ಆರ್ದತೆ ನೀಡಲು

ಚರ್ಮಕ್ಕೆ ಆರ್ದತೆ ನೀಡಲು

ಗಾಳಿಯಲ್ಲಿ ಆರ್ದ್ರತೆಯ ಪ್ರಮಾಣ ಕಡಿಮೆಯಾಗುತ್ತಾ ಹೋದಂತೆ ಚರ್ಮ ಒಡೆಯಲು ಪ್ರಾರಂಭಿಸುತ್ತದೆ. ಚರ್ಮದ ಆರೈಕೆಗೆ ಆರ್ದ್ರತೆ ಅತ್ಯಗತ್ಯವಾಗಿದೆ. ಈ ಕೊರತೆಯನ್ನು ನೀಗಿಸಲು ಮಜ್ಜಿಗೆ ಅತ್ಯುತ್ತಮವದ ಪರಿಹಾರವಾಗಿದೆ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲ ಆರ್ದತೆಯನ್ನು ಚರ್ಮ ಹೀರಿಕೊಳ್ಳಲು ಸಹಕರಿಸುವ ಜೊತೆಗೇ ಸೆಳೆತವನ್ನು ಹೆಚ್ಚಿಸಿ ಕಾಂತಿಯುಕ್ತವಾಗುವಂತೆ ಮಾಡುತ್ತದೆ. ಇದಕ್ಕಾಗಿ ಸ್ವಚ್ಛವಾದ ಹತ್ತಿಯ ಬಟ್ಟೆ ಅಥವಾ ಉಂಡೆಯನ್ನು ಮಜ್ಜಿಗೆಯಲಿ ಮುಳುಗಿಸಿ ನಯವಾಗಿ, ಹೆಚ್ಚಿನ ಒತ್ತಡವಿಲ್ಲದೇ ಕೆಳಗಿನಿಂದ ಮೇಲೆ ಬರುವಂತೆ ಒರೆಸಿಕೊಂಡರಾಯಿತು ಅಷ್ಟೇ ಸಾಕು. ದಿನಕ್ಕೆ ಎರಡು ಬಾರಿ ಈ ವಿಧಾನ ಅನುಸರಿಸುವುದರಿಂದ ಚಳಿಗಾಲದಲ್ಲೂ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರಕುತ್ತದೆ.

ಬಿಸಿಲಿಗೆ ಒಣಗಿದ್ದ ಚರ್ಮದ ಆರೈಕೆಗಾಗಿ

ಬಿಸಿಲಿಗೆ ಒಣಗಿದ್ದ ಚರ್ಮದ ಆರೈಕೆಗಾಗಿ

ಬಿಸಿಲಿಗೆ ಒಡ್ಡಿದ್ದ ಚರ್ಮದಲ್ಲಿ ಉರಿ ಪ್ರಾರಂಭವಾಗಿದ್ದರೆ ಆಲುಗಡ್ಡೆ ಇದಕ್ಕೆ ತಕ್ಕ ಪರಿಹಾರವಾಗಿದೆ. ಆಲುಗಡ್ಡೆಯಲ್ಲಿರುವ ಪೋಷಕಾಂಶಗಳು ಉರಿಯನ್ನು ಶಮನಗೊಳಿಸಿ ಬಿಸಿಲಿನ ಪ್ರಭಾವಕ್ಕೊಳಗಾಗಿದ್ದ ಚರ್ಮದ ಜೀವಕೋಶಗಳನ್ನು ಹೊಸತಾಗಿ ಹುಟ್ಟುವಂತೆ ಮಾಡಲು ಸಹಕರಿಸುತ್ತದೆ. ಇದಕ್ಕಾಗಿ ಆಲುಗಡ್ಡೆಯನ್ನು ತೆಳುವಾದ ಪದರದಂತೆ ಕತ್ತರಿಸಿ ನೇರವಾಗಿ ಚರ್ಮದ ಮೇಲೆ ಇಟ್ಟುಕೊಳ್ಳಬಹುದು ಅಥವಾ ಆಲುಗಡ್ಡೆಯ ಸಿಪ್ಪೆ ಸುಲಿದು ಚಿಕ್ಕ ತುಂಡುಗಳಾಗಿಸಿ ಮಿಕ್ಸಿಯಲ್ಲಿ ಕೊಂಚವೇ ನೀರಿನೊಂದಿಗೆ ಕಡೆದು ರಸ ಹಿಂಡಿ ಈ ರಸವನ್ನು ಹತ್ತಿಯುಂಡೆ ಬಳಸಿ ಪ್ರಭಾವಿತ ಭಾಗಕ್ಕೆ ನಾಲ್ಕಾರು ಬಾರಿ ಹಚ್ಚಿಕೊಂಡರೂ ಆಗುತ್ತದೆ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಉರಿ ವಿಪರೀತವಾಗಿದ್ದರೆ ಈ ರಸವನ್ನು ರಾತ್ರಿ ಮಲಗುವ ಮುನ್ನ ಒಂದು ಬಾರಿ ಹಚ್ಚಿ ಒಣಗಿದ ಬಳಿಕ ಇನ್ನೊಂದು ಬಾರಿ ಹಚ್ಚಿ ಮಲಗಿ ಬೆಳಿಗ್ಗೆದ್ದು ತಣ್ಣೀರಿನಿಂದ ತೊಳೆದುಕೊಳ್ಳಿ.

ಹಲ್ಲಿನ ಬಿಳುವು ಹೆಚ್ಚಿಸಲು

ಹಲ್ಲಿನ ಬಿಳುವು ಹೆಚ್ಚಿಸಲು

ಹಲ್ಲಿನ ಹಳದಿತನವನ್ನು ಕಡಿಮೆಯಾಗಿಸಿ ಬಿಳುಪನ್ನು ಹೆಚ್ಚಿಸಲು ಅಡುಗೆ ಸೋಡಾ ಮತ್ತು ಲಿಂಬೆರಸ ಉತ್ತಮವಾಗಿದೆ. ಲಿಂಬೆಯ ಆಮ್ಲೀಯತೆ ನೈಸರ್ಗಿಕವಾದ ಬಿಳಿಚಿಸುವ ಕಾರ್ಯ ನಿರ್ವಹಿಸುತ್ತದೆ. ಇದಕ್ಕಾಗಿ ಒಂದು ಚಮಚ ಅಡುಗೆ ಸೋಡಾ ಮತ್ತು ಕೆಲವು ಹನಿ ಲಿಂಬೆ ರಸ ಸೇರಿಸಿ ನಯವಾದ ಪೇಸ್ಟ್ ತಯಾರಿಸಿ ನಿತ್ಯದ ಪೇಸ್ಟ್ ಬದಲಿಗೆ ಬಳಸಿ ಹಲ್ಲುಜ್ಜಿಕೊಳ್ಳಿ. ಲಿಂಬೆರಸ ಇಲ್ಲದಿದ್ದರೆ ಬರೆಯ ನೀರೂ ಸಾಕು.

ಇವು ಅಜ್ಜಿಯ ಬತ್ತಳಿಕೆಯಲ್ಲಿರುವ ಕೇವಲ ಕೆಲವೇ ವಿಧಾನಗಳಾಗಿದ್ದು ಆಕೆಯ ಭಂಡಾರದಲ್ಲಿ ಇನ್ನೂ ಸಾವಿರಾರು ಇಂತಹ ಉಪಯುಕ್ತ ಸಲಹೆಗಳಿವೆ. ನಿಮ್ಮ ಅಜ್ಜಿಯಿಂದ ಪಡೆದ ಇಂತಹ ಅಮೂಲ್ಯ ಮಾಹಿತಿಗಳನ್ನು ಖಂಡಿತಾ ನಮ್ಮೊಂದಿಗೆ ಹಂಚಿಕೊಳ್ಳಿ, ಇದು ಉಳಿಯದವರಿಗೂ ಉಪಯುಕ್ತವಾಗಬಹುದು.

English summary

Natural Healthy Beauty Tips

Spending tones of money on beauty products might make you cry. Try some of the natural and homemade remedies to get a better and a lasting effect than the commercial products. In this article today, we are here to discuss about the seven different healthy beauty tips which are just natural and they do not need the extra buck as they are readily available in your kitchen. Read on to know more about these natural and healthy beauty tips mentioned below.
X
Desktop Bottom Promotion