For Quick Alerts
ALLOW NOTIFICATIONS  
For Daily Alerts

ತ್ವಚೆಯ ಸಮಸ್ಯೆಗೆ ಕಕ್ಕಾಬಿಕ್ಕಿಯಾಗಬೇಡಿ, ಇಲ್ಲಿದೆ ಫಲಪ್ರದ ಚಿಕಿತ್ಸೆ!

|

ಸುಂದರ ಮುಖದಲ್ಲಿ ಮೊಡವೆ ಆದರೆ ಅದೊಂದು ದೊಡ್ಡ ಸಮಸ್ಯೆಯೇ ಸರಿ.ಮೊಡವೆ ಹೋಗಲಾಡಿಸಲು ಸಾಕಷ್ಟು ಕಷ್ಟ ಪಡಬೇಕು, ಒಮ್ಮೆ ಮೊಡವೆ ಮುಖದಲ್ಲಿ ಕಾಣಿಸಿಕೊಂಡರೆ ಕನಿಷ್ಠ ಒಂದು ವಾರ ಹೋಗಲಾರದು ಜೊತೆಗೆ ಕೆಲವೊಮ್ಮೆ ಕಲೆ ಆಗುವ ಸಾಧ್ಯತೆ ಕೂಡ ಹೆಚ್ಚು. ಮೊಡವೆರಹಿತ ನುಣುಪಾದ ಚರ್ಮ ತಮ್ಮದಾಗಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ.

ಸಾಮಾನ್ಯವಾಗಿ ಮೊಡವೆಗಳು, ಬ್ಲ್ಯಾಕ್ ಹೆಡ್‍ಗಳು ಮತ್ತು ವೈಟ್ ಹೆಡ್‍ಗಳು ಜಿಡ್ಡು ಅಥವಾ ಎಣ್ಣೆ ಚರ್ಮವನ್ನು ಹೊಂದಿರುವವರನ್ನು ಕಾಡುವಂತಹ ಸಮಸ್ಯೆಗಳಾಗಿರುತ್ತವೆ. ಇದಕ್ಕೆ ಕಾರಣ ಅವರ ಚರ್ಮವು ಜಿಡ್ಡಿನಿಂದ ಮುಚ್ಚಿ ಹೋಗಿ ಬಿಟ್ಟಿರುತ್ತದೆ.ಮೊಡವೆಗಳು ಒಡೆಯುವುದನ್ನು ಸಂಪೂರ್ಣವಾಗಿ ಹೋಗಲಾಡಿಸುವುದು ಅಥವಾ ನಿಯಂತ್ರಿಸುವುದು ಅಸಾಧ್ಯವಾದ ಕೆಲಸ, ಆದರೂ ಸಹ ಈ ಸಮಸ್ಯೆಯನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಸಾಧ್ಯ.

ಬನ್ನಿ ಈ ಮೊಡವೆ, ತ್ವಚೆಯ ಇತರ ಸಮಸ್ಯೆಗಳಿಗೆಲ್ಲಾ ಮನೆಯಲ್ಲಿಯೇ ಹಲವಾರು ಪ್ರಾಕೃತಿಕ ಮದ್ದುಗಳು ಸಿಗುತ್ತವೆ. ಇವುಗಳನ್ನು ನಿಮ್ಮ ಮುಖದಲ್ಲಿ ಇರುವ ಮೊಡವೆಗಳಿಗೆ ಲೇಪಿಸಿ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಕಡಲೆ ಹಿಟ್ಟು

ಕಡಲೆ ಹಿಟ್ಟು

ಒಂದು ಸಣ್ಣ ಬಟ್ಟಲಿನಲ್ಲಿ ಮೊಸರು ಮತ್ತು ಎರಡು ಚಮಚ ಕಡಲೆ ಹಿಟ್ಟು ಸೇರಿಸಿ ಒಂದು ಮಧ್ಯಮ ದಪ್ಪ ಹದದಲ್ಲಿ ಪೇಸ್ಟ್ ತಯಾರಿಸಿ. ಈ ಪ್ಯಾಕ್ ನ್ನು ನಿಮ್ಮ ಮುಖದ ಮೇಲೆ ಸಮವಾಗಿ ಹಚ್ಚಿ ಮತ್ತು 30-45 ನಿಮಿಷಗಳ ಕಾಲ ಒಣಗಲು ಬಿಡಿ. ಇದು ಸಂಪೂರ್ಣವಾಗಿ ಒಣಗಿದ ನಂತರ, ನೀರನ್ನು ಹಾಕಿ ನಿಮ್ಮ ಮುಖದ ಮೇಲೆ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ಚೆನ್ನಾಗಿ ಮುಖವನ್ನು ತೊಳೆದು ಉತ್ತಮ ನೈಸರ್ಗಿಕವಾದ ಮಾಯಿಶ್ಚರೈಸರ್ ಕ್ರೀಮ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ. ಒಳ್ಳೆಯ ಪರಿಣಾಮ ಪಡೆಯಲು ವಾರದಲ್ಲಿ 2 ಬಾರಿ ಪುನರಾವರ್ತಿಸಿ.

ಉಪ್ಪು ಮತ್ತು ನಿಂಬೆರಸ

ಉಪ್ಪು ಮತ್ತು ನಿಂಬೆರಸ

ನಿಂಬೆಯು ಒಂದು ಉತ್ತಮವಾದ ಒಣಗಿಸುವ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಒಂದು ವೇಳೆ ನಿಮಗೆ ಮತ್ತಷ್ಟು ಒಣಗಿಸುವ ಇಚ್ಛೆಯಿದ್ದಲ್ಲಿ ಎರಡು ಚಮಚ ನಿಂಬೆರಸಕ್ಕೆ ಅರ್ಧ ಚಮಚ ಉಪ್ಪನ್ನು ಬೆರೆಸಿ. ಅದನ್ನು ಮೊಡವೆ ಇರುವ ಭಾಗದಲ್ಲಿ ಉಜ್ಜಿ ಸುಮಾರು 20-30 ನಿಮಿಷ ಬಿಡಿ. ಆದರೆ ಒಂದು ವಿಚಾರ ನೆನಪಿನಲ್ಲಿಡಿ, ಈ ಮಿಶ್ರಣವನ್ನು ಹಚ್ಚಿದಾಗ ಯಾವುದೇ ಕಾರಣಕ್ಕು ಬಿಸಿಲಿನಲ್ಲಿ ಹೊರಗೆ ಹೋಗಬೇಡಿ. ಏಕೆಂದರೆ ನಿಂಬೆರಸಕ್ಕೆ ಬ್ಲೀಚಿಂಗ್ ಗುಣಗಳು ಇರುತ್ತವೆ. ಇದು ತನ್ನ ಸೂಕ್ಷ್ಮತೆಯಿಂದ ನಿಮಗೆ ಕಿರಿಕಿರಿಯನ್ನು ಅಥವಾ ಉರಿಯನ್ನು ತರಬಹುದು.

ಕೊತ್ತಂಬರಿ - ಪುದಿನಾ ರಸ

ಕೊತ್ತಂಬರಿ - ಪುದಿನಾ ರಸ

ಒಂದು ಟೀ ಚಮಚದಷ್ಟು ಕೊತ್ತಂಬರಿ ಅಥವಾ ಪುದಿನಾ ರಸವು ನಿಮ್ಮ ತ್ವಚೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಈ ರಸಕ್ಕೆ ಒಂದು ಚಿಟಿಕೆಯಷ್ಟು ಹಳದಿಯನ್ನು ಬೆರೆಸುವುದರಿಂದ ಮೊಡವೆ ಮತ್ತು ಬ್ಲ್ಯಾಕ್ ಹೆಡ್‍ಗಳನ್ನು ನಿವಾರಿಸಲು ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಮಿಶ್ರಣವನ್ನು ಪ್ರತಿದಿನ ಮಲಗುವ ಮೊದಲು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ.

ಪಪ್ಪಾಯಿ ಹಣ್ಣಿನ ಪ್ಯಾಕ್

ಪಪ್ಪಾಯಿ ಹಣ್ಣಿನ ಪ್ಯಾಕ್

ನೀವು ಒಂದು ಹಣ್ಣು ಅನೇಕ ಹಣ್ಣುಗಳನ್ನು ಬಳಾಸಿ ಫೇಸ್ ಪ್ಯಾಕ್ ತಯಾರಿಸಬಹುದು. ಅವುಗಳ ಲಭ್ಯತೆಗಳಿಗನುಗುಣವಾಗಿ ಬಾಳೆಹಣ್ಣು, ಪಪ್ಪಾಯಿ, ಆವಕಾಡೊ, ಕಲ್ಲಂಗಡಿ ಮೊದಲಾದ ಹಣ್ಣುಗಳನ್ನು ಮುಖಕ್ಕೆ ಹಚ್ಚಲು ಆಯ್ದುಕೊಳ್ಳಬಹುದು. ಒಂದು ಅಥ್ಯವಾ ಎರಡು ಹಣ್ಣುಗಳನ್ನು ಮ್ಯಾಶ್ ಮಾಡಿ ಜೇನು ಮತ್ತು ಮೊಸರಿನ ಜೊತೆ ಮಿಶ್ರಣ ಮಾಡಿ. ಈ ಫೇಸ್ ಮಾಸ್ಕ್ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ.

ಸೌತೆಕಾಯಿ ಫೇಸ್ ಮಾಸ್ಕ್

ಸೌತೆಕಾಯಿ ಫೇಸ್ ಮಾಸ್ಕ್

ಸೌತೆಕಾಯಿ ಸಾರಗಳು, ದೇಹದ ಶಾಖವನ್ನು ಕಾಯ್ದುಕೊಳ್ಳುವ ಮೂಲಕ, ಮೊಡವೆ ಮತ್ತು ಉರಿಯೂತದೊಂದಿಗೆ ಹೋರಾಡುವ ಸೂಕ್ತ ಫೇಸ್ ಪ್ಯಾಕ್ ಆಗಿದೆ. ಇದು ಮುಖದಲ್ಲಿನ ಮೊಡವೆ ಗುಳ್ಳೆಗಳನ್ನು ಕಡಿಮೆ ಮಾಡುವಲ್ಲಿಯೂ ಸಹಾಯಕಾರಿ. ಇದನ್ನು ಮಾಡುವ ಪ್ರಕ್ರಿಯೆ ಸಾಕಷ್ಟು ಸುಲಭ. ಸೌತೆಕಾಯಿಯನ್ನು ರಸ ತೆಗೆದು/ ತುರಿದು ಮುಖಕ್ಕೆ ಲೇಪಿಸುವುದಕ್ಕಿಂತ ಮೊದಲು ಸುಮಾರು 30-40 ನಿಮಿಷಗಳ ಕಾಲ ರೆಫ್ರೀಜರೇಟರ್ ನಲ್ಲಿ ಇಡಿ. ಇದು ಸಾಕಷ್ಟು ತಂಪಾದ ಸಂದರ್ಭದಲ್ಲಿ, ರಸದಲಿರುವ ತಿರುಳನ್ನು ಆಯ್ಕೆ ಮಾಡಿಕೊಂಡು ಮುಖಕ್ಕೆ ಹಚ್ಚಿ. ಮೊಡವೆ ಭಾಗಗಳಲ್ಲಿ ಸೌತೆಕಾಯಿ ತಿರುಳನ್ನು ಇಟ್ಟು ಕೈಯಾಡಿಸಿ. ಮತ್ತೆ ಮತ್ತೆ ಈ ಕ್ರಮವನ್ನು ಪುನರಾವರ್ತಿಸಿ.

English summary

Natural Face Packs for all types of Skin problem

Pimples, blackheads, and whiteheads appear usually on oily skin due to clogged skin pores. So Face packs help in moisturising and rejuvenating your facial skin and help in treating as well as avoiding facial acne, So how Face packs works have a look
X
Desktop Bottom Promotion