For Quick Alerts
ALLOW NOTIFICATIONS  
For Daily Alerts

ಅಪ್ಸರೆಯಂತಹ ತ್ವಚೆಗಾಗಿ ನೈಸರ್ಗಿಕ ಫೇಸ್ ಪ್ಯಾಕ್

|

ಯಾವುದೇ ವ್ಯಕ್ತಿಯ ಸೌಂದರ್ಯದಲ್ಲಿ ಮುಖದ ಕಾಂತಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ಇತರ ಭಾಗಕ್ಕಿಂತ ಮುಖಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಮಹಿಳೆಯರೂ ಪುರುಷರೂ ಸಮಾನವಾಗಿ ನೀಡುತ್ತಾರೆ. ಇಂದು ಸೌಂದರ್ಯದ ಬಗ್ಗೆ ಕಾಳಜಿ ಕೇವಲ ಉಳ್ಳವರ ಸೊತ್ತಾಗಿ ಉಳಿದಿಲ್ಲ. ಹಳ್ಳಿ ಹಳ್ಳಿಗಳಲ್ಲಿ ತಲೆಯೆತ್ತಿರುವ ಸೌಂದರ್ಯ ಮಳಿಗೆಗಳೇ ಇದಕ್ಕೆ ಸಾಕ್ಷಿ. ಇವುಗಳ ಸೇವೆ ಪಡೆಯುವ ಮೂಲಕ ನೈಸರ್ಗಿಕ ಮತ್ತು ಕಾಂತಿಯುತ ಮುಖವನ್ನು ಪಡೆಯುವುದು ಖಂಡಿತಾ ಸಾಧ್ಯ. ಆದರೆ ಹೆಚ್ಚಿನ ಮಳಿಗೆಗಳು ಉತ್ತಮ ಸೇವೆ ಒದಗಿಸಿದರೂ ಅದಕ್ಕೆ ತಕ್ಕನಾದ ಬೆಲೆಯನ್ನೂ ವಿಧಿಸುವುದು ಹೆಚ್ಚಿನವರಿಗೆ ಭರಿಸಲಾಗುವುದಿಲ್ಲ. ತ್ಚಚೆಯ ಕಾಂತಿಯನ್ನು ಹೆಚ್ಚಿಸುವ ಶ್ರೀಗ೦ಧದ ಫೇಸ್ ಪ್ಯಾಕ್!

ಸೌಂದರ್ಯದ ಕಾಳಜಿಯನ್ನು ಮನಗಂಡ ಹಲವು ಚರ್ಮತಜ್ಞರೂ ಈ ಕ್ಷೇತ್ರದಲ್ಲಿ ಕಾಲಿಡುತ್ತಿರುವುದು ಸ್ವಾಗತಾರ್ಹವಾಗಿದೆ. ಈ ಮೂಲಕ ಮುಖದ ಸೌಂದರ್ಯಕ್ಕಾಗಿ ಹಲವು ಚಿಕಿತ್ಸೆ ಮತ್ತು ಮುಖಲೇಪನಗಳನ್ನು ಪ್ರಸ್ತುತಪಡಿಸಲಾಗಿದ್ದು ಸಾಕಷ್ಟು ಜನಪ್ರಿಯವಾಗಿವೆ. ಅದರಲ್ಲೂ ಆಯುರ್ವೇದೀಯ ಅಥವಾ ಹರ್ಬಲ್ ಬ್ಯೂಟಿ ಪಾರ್ಲರ್‌ಗಳಲ್ಲಿ ನೈಸರ್ಗಿಕ ಸಾಮಾಗ್ರಿಗಳನ್ನೇ ಉಪಯೋಗಿಸಿ ಉತ್ತಮ ಫಲಿತಾಂಶ ಪಡೆಯಲಾಗುತ್ತಿದೆ.

ಈ ಫಲಿತಾಂಶವನ್ನು ಪಡೆಯಲು ದುಬಾರಿ ಬೆಲೆಯ ಪಾರ್ಲರುಗಳಿಗೇ ಹೋಗಬೇಕೆಂದೇನಿಲ್ಲ, ಕಲವೊಂದು ಮುಖಲೇಪನವನ್ನು(ಫೇಸ್ ಪ್ಯಾಕ್) ನೀವೇ ಮನೆಯಲ್ಲಿಯೇ ನೀವು ತಯಾರಿಸಿಕೊಳ್ಳಬಹುದು. ಒಂದು ವೇಳೆ ನೀವು ಈಗಾಗಲೇ ಈ ಕ್ಷೇತ್ರದಲ್ಲಿದ್ದರೆ ನಿಮ್ಮ ಗ್ರಾಹಕರಿಗೆ ಭಿನ್ನವಾದ ಹೊಸ ಸೇವೆಯನ್ನಾಗಿಯೂ ಬಳಸಬಹುದು. ಬನ್ನಿ ಸ್ಲೈಡ್ ಶೋ ಮೂಲಕ ಇದರ ವಿವರಗಳನ್ನು ನೀಡಲಾಗಿದೆ ಮುಂದೆ ಓದಿ ..

Natural Face Packs for all Skin Types – Face Masks for Clear Skin

ಹಸಿರು ಚಹಾ, ಓಟ್ಸ್ ಮತ್ತು ಹಾಲಿನ ಫೇಸ್ ಪ್ಯಾಕ್
ಒಂದು ಚಮಚ ಹಸಿರು ಚಹಾ, ಮೂರು ದೊಡ್ಡ ಚಮಚ ಹಾಲು ಮತ್ತು ಒಂದು ದೊಡ್ಡಚಮಚ ಓಟ್ಸ್ ಸೇರಿಸಿ ಚೆನ್ನಾಗಿ ಅರೆಯಿರಿ. ಈ ಲೇಪನವನ್ನು ಮುಖದ ಮೇಲೆ ಸಮನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಖದ ಕಾಂತಿ ರಾತ್ರಿ ಬೆಳಗಾಗುವುದರೊಳಗೆ ಹೊಸ ರೂಪವನ್ನು ನೀಡಿರುವುದನ್ನು ಕಂಡು ದಂಗಾಗುತ್ತೀರಿ.

ಸೌತೆಕಾಯಿ ರಸ

ಒಂದು ವೇಳೆ ನಿಮ್ಮ ಚರ್ಮ ಬಿಸಿಲು ಅಥವಾ ಇನ್ನಾವುದೋ ಕಾರಣಕ್ಕೆ ತನ್ನ ಸಹಜ ಕಳೆ ಮತ್ತು ವರ್ಣವನ್ನು ಕಳೆದುಕೊಂಡಿದ್ದರೆ ಸೌತೆಯ ಲೇಪನದ ಸತತ ಬಳಕೆಯಿಂದ ನಿಮ್ಮ ಸಹಜ ವರ್ಣವನ್ನು ಮರಳಿ ಪಡೆಯಬಹುದು.
ಇದಕ್ಕಾಗಿ ಅರ್ಧ ಎಳೆಸೌತೆಕಾಯಿಯನ್ನು ಸಿಪ್ಪೆಸಹಿತ ತುರಿದು ಎರಡು ಚಮಚ ಬೆಟ್ಟದ ತಾವರೆ (witch hazel)(ಮರದ ಮೇಲೆ ಬೆಳೆಯುವ ಹಳದಿ ಬಣ್ಣದ ಹೂವುಗಳಂತೆ ತೋರುವ ಗಿಡ) ಮತ್ತು ಎರಡು ಚಮಚ ನೀರು ಸೇರಿಸಿ ಅರೆಯಿರಿ. ಈ ಲೇಪನವನ್ನು ಪ್ರತಿದಿನ ಸ್ವಚ್ಛವಾಗಿ ಮುಖ ತೊಳೆದುಕೊಂಡ ಬಳಿಕ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಲೇಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮ ತನ್ನ ಸಹಜ ವರ್ಣವನ್ನು ಪಡೆಯತೊಡಗುತ್ತದೆ.

ಓಟ್ಸ್ + ಜೇನು+ ಮೊಸರು

ಈ ಫೇಸ್ ಪ್ಯಾಕ್ ಎಲ್ಲಾ ರೀತಿಯ ತ್ವಚೆಗೂ ಒಳ್ಳೆಯದು. ತ್ವಚೆಯಲ್ಲಿನ ಡೆಡ್ ಸ್ಕಿನ್ (ಸತ್ತ ಜೀವಕೋಶ) ಗಳನ್ನು ಹೋಗಲಾಡಿಸಿ ಕಾಂತಿಯನ್ನು ನೀಡುವ ಉತ್ತಮ ಮಾಯಿಶ್ಚರೈಸರ್ ನಂತೆಯೂ ಇದು ಕೆಲಸಮಾಡುತ್ತದೆ. ಇದಕ್ಕಿಂತ ಇನ್ನೇನು ಬೇಕು? ಯಾರು ಕಲೆರಹಿತ ತ್ವಚೆಯನ್ನು ಇಷ್ಟಪಡುತ್ತಾರೋ ಅಂತವರಿಗೆ ಈ ಫೇಸ್ ಪ್ಯಾಕ್ ಖಂಡಿತವಾಗಿಯೂ ಬಹಳ ಪ್ರಯೋಜನಕಾರಿ. ಓಟ್ಸ್ ಹಾಗೂ ಮೊಸರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ನಂತರ ಅದಕ್ಕೆ ಕೆಲವು ಹನಿ ಜೇನುತುಪ್ಪವನ್ನು ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿ ಅದು ಒಣಗುವವರೆಗೆ ಹಾಗೆಯೇ ಬಿಡಿ. 15 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದಲ್ಲಿನ ರಂಧ್ರಗಳನ್ನು ಮುಚ್ಚಲು ಸಹಾಯಮಾಡುತ್ತದೆ.

ಮೊಟ್ಟೆಯ ಬಿಳಿಯ ಭಾಗ + ಮೊಸರು
ಮೊಟ್ಟೆಯ ಬಿಳಿಯ ಭಾಗ ನಿಮ್ಮ ದೇಹಕ್ಕೆ ಮಾತ್ರವಲ್ಲ, ನಿಮ್ಮ ತ್ವಚೆಗೂ ಅಷ್ಟೇ ಒಳ್ಳೆಯದು. ತ್ವಚೆಗೆ ಅತ್ಯಗತ್ಯವಾದ ಜೀವಸತ್ವ ಮತ್ತು ಖನಿಜಾಂಶಗಳು ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಮೊಟ್ಟೆ ಹಾಗೂ ಮೊಸರಿನ ಮಿಶ್ರಣ ಒಂದು ಉತ್ತಮ ಸೌಂದರ್ಯವರ್ಧಕ. ಮೊಟ್ಟೆಯ ಬೆಳಿಯ ಭಾಗ ಮತ್ತು ಮೊಸರನ್ನು ಮಿಶ್ರಣಮಾಡಿ. ಇದನ್ನು ಪೇಸ್ಟ್ ನಂತೆ ಮಾಡಿ ಮುಖಕ್ಕೆ ಹಚ್ಚಿ 15 -20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿ.

ಅರಿಶಿನ + ಮೊಸರು
ನೀವು ಪರಿಪೂರ್ಣ ಸೌಂದರ್ಯವನ್ನು ಬಯಸಿದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ಇದು! ಅರಿಶಿನ ಮತ್ತು ಮೊಸರನ್ನು ಬೆರೆಸಿದ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಹೊಳಪು ನೀಡುವುದು ಮಾತ್ರವಲ್ಲದೆ, ಕಲೆಮುಕ್ತ ತ್ವಚೆ ನಿಮ್ಮದಾಗುತ್ತದೆ. ಮಯಸ್ಸಾದ ಕಳೆಯನ್ನು ಹೋಗಲಾಡಿಸುವುದರ ಜೊತೆಗೆ ಮುಖದಲ್ಲಿನ ಮೊಡವೆಗಳನ್ನೂ ಕಡಿಮೆಗೊಳಿಸುತ್ತದೆ. ಒಂದು ಚಮಚ ಅರಿಶಿನವನ್ನು ಒಂದು ಚಮಚ ಮೊಸರಿನೊಂದಿಗೆ ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ತ್ವಚೆಯ ಮೃದುತ್ವಕ್ಕಾಗಿ ಜೇನುತುಪ್ಪವನ್ನೂ ಕೂಡ ಬೆರೆಸಬಹುದು. ಹೀಗೆ ಮನೆಯಲ್ಲಿಯೇ ಅಡಗಿರುವ ಪದಾರ್ಥಗಳು ನಿಮ್ಮ ಪರಿಪೂರ್ಣ ಸೌಂದರ್ಯಕ್ಕೆ ಸಹಾಯಕವಾಗಬಲ್ಲವು. ನೀವೆ ಪ್ರಯತ್ನಿಸಿ. ಪರಿಣಾಮ ಗಮನಿಸಿ.

English summary

Natural Face Packs for all Skin Types – Face Masks for Clear Skin

Natural tips for healthy skin always emphasis on the use of natural skin whiteners and face packs for healthy glowing skin. There are various skin types like dry skin, oily skin, normal skin and combination skin that require a different type of skin care. In this article, we have listed the best natural face masks for acne, pimples, oily skin and dry skin.
Story first published: Monday, October 19, 2015, 9:33 [IST]
X
Desktop Bottom Promotion