For Quick Alerts
ALLOW NOTIFICATIONS  
For Daily Alerts

ಅಪ್ಸರೆಯಂತಹ ತ್ವಚೆಗಾಗಿ ಬಳಸಿ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್‍

By Deepak
|

ಫುಲ್ಲರ್ಸ್ ಅರ್ಥ್ ಎಂದು ಕರೆಯಲ್ಪಡುವ ಮುಲ್ತಾನಿ ಮಿಟ್ಟಿಯಲ್ಲಿ ಚರ್ಮದ ಸೌಂದರ್ಯವರ್ಧಕ ಗುಣಗಳಿವೆ. ಮುಲ್ತಾನಿ ಮಿಟ್ಟಿ ಚರ್ಮವನ್ನು ಶುದ್ದೀಕರಣ ಮತ್ತು ಸ್ವಚ್ಛಗೊಳಿಸುತ್ತದೆ. ಮುಲ್ತಾನಿ ಮಿಟ್ಟಿಯಲ್ಲಿರುವ ಮೆಗ್ನಿಶಿಯಂ ಕ್ಲೋರೈಡ್ ಚರ್ಮದಲ್ಲಿರುವ ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ. ಕೆಲವೊಂದು ಫೇಸ್ ಪ್ಯಾಕ್ ಮತ್ತು ಫೇಸ್ ಮಾಸ್ಕ್‌ಗಳು ಮುಲ್ತಾನಿ ಮಿಟ್ಟಿಯನ್ನು ಪ್ರಮುಖವಾಗಿ ಬಳಸುತ್ತಾರೆ.

ಇದು ತ್ವಚೆಯಲ್ಲಿರುವ ಜಿಡ್ಡು, ಧೂಳು ಮತ್ತು ತ್ವಚೆಯ ರಂಧ್ರಗಳಲ್ಲಿರುವ ಎಣ್ಣೆಯಂಶವನ್ನು ಹೀರಿಕೊಂಡು, ಕಪ್ಪು ತಲೆಗಳನ್ನು ನಿವಾರಿಸುತ್ತದೆ. ಇದು ತ್ವಚೆಯ ಮೇಲೆ ಉಪಶಮನಕಾರಿ ಗುಣವನ್ನು ತೋರಿಸುತ್ತದೆ. ಇದೆಲ್ಲ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ, ಇದರ ಫೇಸ್ ಪ್ಯಾಕ್ ಅನ್ನು ನೀವು ಉಪಯೋಗಿಸಬೇಕಾಗುತ್ತದೆ. ಮುಲ್ತಾನಿ ಮಿಟ್ಟಿಯನ್ನು ತ್ವಚೆಗೆ ಲೇಪಿಸಿದರೆ, ಅದರಿಂದ ತುರಿಕೆ ನಿವಾರಣೆಯಾಗುವುದರ ಜೊತೆಗೆ ಸನ್ ಬರ್ನ್ ಸಹ ಹೋಗುತ್ತವೆ. ಸುಂದರ ತ್ವಚೆ ಬಯಸುವವರಿಗೆ ನೈಸರ್ಗಿಕ ಟಿಪ್ಸ್

ಇದರಲ್ಲಿರುವ ಖನಿಜಾಂಶಗಳು ತ್ವಚೆಯಲ್ಲಿರುವ ಗಾಯಗಳನ್ನು ಮತ್ತು ಕಲೆಗಳನ್ನು ಸಹ ಹೋಗಲಾಡಿಸುತ್ತವೆ. ತ್ವಚೆಯಲ್ಲಿರುವ ರಂಧ್ರಗಳ ಗಾತ್ರವನ್ನು ಸಹ ಇವು ಕಡಿಮೆ ಮಾಡುತ್ತವೆ. ಇದು ನಿಮ್ಮ ಮುಖದಲ್ಲಿರುವ ಸುಕ್ಕು ಮತ್ತು ಗೆರೆಗಳನ್ನು ನಿವಾರಿಸಿ, ಆಂಟಿ ಏಜಿಂಗ್ ಪರಿಣಾಮಗಳನ್ನು ಸಹ ಒದಗಿಸುತ್ತದೆ. ವಿವಿಧ ಬಗೆಯ ಫೇಸ್ ಪ್ಯಾಕ್‍ಗಳು ನಿಮ್ಮ ತ್ವಚೆಗೆ ವಿವಿಧ ಚಿಕಿತ್ಸೆಗಳನ್ನು ನೀಡುತ್ತವೆ.

ಮುಲ್ತಾನಿ ಮಿಟ್ಟಿಯನ್ನು ಮುಖದ ಹೊಳಪಿಗೆ ಹೇಗೆ ಬಳಸುವುದು? ನಾವು ಇಂದು ಅದರ ಕುರಿತಾದ ಮಾಹಿತಿಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇವೆ. ಈ ಫೇಸ್ ಪ್ಯಾಕ್‍ಗಳು ನಿಮ್ಮ ತ್ವಚೆಯ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಬನ್ನಿ ಮುಲ್ತಾನಿ ಮಿಟ್ಟಿಯ ಪೇಸ್ ಪ್ಯಾಕ್‌ಗಳ ಕುರಿತು ಒಂದು ನೋಟ ಹರಿಸೋಣ. ಮುಖದಲ್ಲಿ ಕಂದು ಅಥವಾ ಕಪ್ಪು ಚುಕ್ಕಿ ಬಿದ್ದಿದೆಯೇ?

ಮುಲ್ತಾನಿ ಮಿಟ್ಟಿ ಟೊಮೇಟೊ ಮತ್ತು ಕಡಲೆ ಹಿಟ್ಟು ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ ಟೊಮೇಟೊ ಮತ್ತು ಕಡಲೆ ಹಿಟ್ಟು ಫೇಸ್ ಪ್ಯಾಕ್

ಹಣ್ಣಾದ ಟೊಮೇಟೊವನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಹಾಗು ಒಂದು ಟೀ.ಚಮಚ ಕಡಲೆ ಹಿಟ್ಟಿನ ಜೊತೆಗೆ ಬೆರೆಸಿ ಗಟ್ಟಿಯಾದ ಪೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ. ಈ ಪ್ಯಾಕ್ ನಿಮ್ಮ ತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ನಿವಾರಿಸುತ್ತದೆ.

ಮುಲ್ತಾನಿ ಮಿಟ್ಟಿ ಕಾರ್ನ್ ಫ್ಲೋರ್ ಮತ್ತು ಮೊಟ್ಟೆಯ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ ಕಾರ್ನ್ ಫ್ಲೋರ್ ಮತ್ತು ಮೊಟ್ಟೆಯ ಫೇಸ್ ಪ್ಯಾಕ್

ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿಯನ್ನು ಒಂದು ಟೀ.ಚಮಚ ಯೋಗರ್ಟ್ ಜೊತೆಗೆ ಬೆರೆಸಿ, ಇದಕ್ಕೆ ಒಂದು ಮೊಟ್ಟೆಯ ಬಿಳಿ ಭಾಗವನ್ನು ಮತ್ತು ಒಂದು ಟೀ.ಚಮಚ ಕಾರ್ನ್ ಫ್ಲೋರ್ ಪುಡಿಯನ್ನು ಬೆರೆಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಈ ಪ್ಯಾಕ್ ತ್ವಚೆಗೆ ಹೊಳಪನ್ನು ನೀಡುತ್ತದೆ.

ಮುಲ್ತಾನಿ ಮಿಟ್ಟಿ, ಸೌತೆಕಾಯಿ ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ, ಸೌತೆಕಾಯಿ ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್

5-6 ಸೌತೆಕಾಯಿ ತುಂಡುಗಳನ್ನು ತೆಗೆದುಕೊಂಡು, ಅದನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಟೀ.ಚಮಚ ರೋಸ್ ವಾಟರ್ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ 15 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಸಹ ಮುಖಕ್ಕೆ ಹೊಳಪನ್ನು ನೀಡುತ್ತದೆ.

ಮುಲ್ತಾನಿ ಮಿಟ್ಟಿ ಮತ್ತು ಕಿತ್ತಳೆ ರಸದ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ ಮತ್ತು ಕಿತ್ತಳೆ ರಸದ ಫೇಸ್ ಪ್ಯಾಕ್

ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿಯ ಜೊತೆಗೆ ನಾಲ್ಕು ಟೀ.ಚಮಚ ತಂಪಾದ ಕಿತ್ತಳೆ ರಸವನ್ನು ಬೆರೆಸಿಕೊಂಡು ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಂಡು 20 ನಿಮಿಷ ಬಿಡಿ. ಈ ಪ್ಯಾಕ್ ನಿಮ್ಮ ಮುಖಕ್ಕೆ ಹೊಳಪನ್ನು ತರುವುದದಲ್ಲದೆ, ಸುಸ್ತಾಗಿರುವ ನಿಮ್ಮ ತ್ವಚೆಗೆ ಲವಲವಿಕೆಯನ್ನು ನೀಡುತ್ತದೆ.

ಮುಲ್ತಾನಿ ಮಿಟ್ಟಿ ದ್ರಾಕ್ಷಿ ಮತ್ತು ಜೇನು ತುಪ್ಪದ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿ ದ್ರಾಕ್ಷಿ ಮತ್ತು ಜೇನು ತುಪ್ಪದ ಫೇಸ್ ಪ್ಯಾಕ್

ಸ್ವಲ್ಪ ದ್ರಾಕ್ಷಿಗಳನ್ನು ಜಜ್ಜಿಕೊಮ್ಡು, ಅದಕ್ಕೆ ಒಂದು ಟೀ.ಚಮಚ ಮುಲ್ತಾನಿ ಮಿಟ್ಟಿ ಹಾಗು ಒಂದು ಟೀ.ಚಮಚ ಜೇನು ತುಪ್ಪ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಂಡು 20 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಈ ಪ್ಯಾಕ್ ನಿಮ್ಮ ಮುಖಕ್ಕೆ ಹೊಳಪನ್ನು ತರುತ್ತದೆ.

English summary

Multani Mitti Face Packs For Intense White Glow

Multani mitti or Fuller's earth is an age old beauty remedy used mostly by Indian women. This yellowish brown mud is rich in minerals and makes your skin glowing and healthy. Multani mitti has any benefits for skin beauty. It also lightens your skin tone and makes it younger looking.. have a look 
X
Desktop Bottom Promotion