For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳಿಗೆ ಫಲಪ್ರದ ಸಲಹೆ

By Arshad
|

ಮಳೆಗಾಲ ಮತ್ತೊಮ್ಮೆ ಬಂದಿದೆ. ಜೊತೆಗೇ ಶೀತ, ನೆಗಡಿ, ಕೆಮ್ಮು ಮತ್ತು ವಿವಿಧ ಚರ್ಮದ ತೊಂದರೆಗಳನ್ನೂ ತಂದಿದೆ. ಇದಕ್ಕೆ ಪ್ರಮುಖ ಕಾರಣ ಹವೆ ಒಣದಾಗುವುದು. ಇಷ್ಟೊಂದು ಮಳೆ ಬೀಳುತ್ತಿರುವಾಗ ಹವೆ ಒಣಗುವುದು ಹೇಗೆ ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಬೇಸಿಗೆಯಲ್ಲಿ ಬಟ್ಟೆ ಒಗೆದು ಒಣಗಿಸಿದ ಬಳಿಕ ಬಟ್ಟೆಯಲ್ಲಿದ್ದ ನೀರು ಎಲ್ಲಿ ಹೋಗುತ್ತದೆ? ಇದು ಆರ್ದ್ರತೆಯ ರೂಪ ತಾಳಿ ಗಾಳಿಯಲ್ಲಿ ಸೇರುತ್ತದೆ. ಚರ್ಮದ ಆರೈಕೆಗೆ ಈ ಆರ್ದ್ರತೆ ಅತಿ ಅವಶ್ಯ. ಮಳೆಗಾಲದಲ್ಲಿ ತ್ವಚೆಯ ಆರೈಕೆಗೆ ಸರಳ ಸೂತ್ರ

ಆದರೆ ಮಳೆಗಾಲದಲ್ಲಿ ನೀರು ಒಣಗದೇ ಬಟ್ಟೇ ಹಸಿಯಾಗಿಯೇ ಇರುವುದರಿಂದ ಗಾಳಿಗೆ ಆರ್ದ್ರತೆ ಅತಿ ಕಡಿಮೆ ಲಭ್ಯವಾಗುತ್ತದೆ (ಮಳೆಗಾಲದಲ್ಲಿ ಬಟ್ಟೆ ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುವುದನ್ನು ಗಮನಿಸಿ). ಆರ್ದ್ರತೆಯ ಕೊರತೆಯಿಂದ ಚರ್ಮ ವಿವಿಧ ತೊಂದರೆಗೆ ಎದುರಾಗುತ್ತದೆ. ಈ ಚರ್ಮಕ್ಕೆ ಕೊಂಚ ವಿಶೇಷವಾದ ಆರೈಕೆಯ ಅಗತ್ಯವಿದೆ. ಈ ಬಗ್ಗೆ ಕೆಲವು ಉಪಯುಕ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ..

ಚರ್ಮ ಒಡೆಯುವುದು

ಚರ್ಮ ಒಡೆಯುವುದು

ಮಳೆಗಾಲದಲ್ಲಿ ಆರ್ದ್ರತೆಯ ಕೊರತೆಯಿಂದ ಚರ್ಮ ಒಣಗಿ ಬಿರಿಬಿಡಲು (ಇದನ್ನೇ ಚರ್ಮ ಒಡೆಯುವುದು ಎನ್ನುತ್ತಾರೆ) ಪ್ರಾರಂಭಿಸುತ್ತದೆ. ಚರ್ಮದಲ್ಲಿ ತೇವಾಂಶ ಇಲ್ಲದೇ ಇರುವುದರಿಂದ ಮೇಲ್ಪದರ ಒಣಗಿ ಸೆಳೆಯಲು ಸಾಧ್ಯವಾಗದೇ ತೆಳ್ಳಗೆ ಪಾರದರ್ಶಕವಾಗುತ್ತದೆ. ಇದು ಕೊಂಚ ತುರಿಕೆಯನ್ನು ಉಂಟುಮಾಡಿ ಹೊಟ್ಟಿನಂತೆ ಪದರಪದರವಾಗಿ ಏಳುತ್ತದೆ. ಒಣಚರ್ಮ ಹೊಂದಿರುವವರು ಈ ತೊಂದರೆಗೆ ಬಹುಬೇಗನೇ ಗುರಿಯಾಗುತ್ತಾರೆ. ಆದ್ದರಿಂದ ಇದಕ್ಕೆ ಸೂಕ್ತವಾದ ಕ್ರೀಂ ಅಥವಾ ವ್ಯಾಸೆಲಿನ್ ಹಚ್ಚಿಕೊಳ್ಳುತ್ತಾ ಆರೈಕೆ ಮಾಡಿಕೊಳ್ಳಿ.

ಎಣ್ಣೆಚರ್ಮ ಬೇಗನೇ ಕೊಳಕಾಗುತ್ತದೆ

ಎಣ್ಣೆಚರ್ಮ ಬೇಗನೇ ಕೊಳಕಾಗುತ್ತದೆ

ಮಳೆಗಾಲದಲ್ಲಿ ಬೆವರು ಹರಿಯುವುದು ಕಡಿಮೆಯಾಗುವುದರಿಂದ ಚರ್ಮದ ಎಣ್ಣೆಗ್ರಂಥಿಗಳ ಸ್ರಾವ ಹೊರಹರಿಯದೇ ಚರ್ಮದ ಮೇಲ್ಮೈ ಹೆಚ್ಚು ಹೆಚ್ಚಾಗಿ ಅಂಟು ಅಂಟಾಗಿರುತ್ತದೆ. ಗಾಳಿಯಲ್ಲಿನ ಧೂಳು ಈ ಎಣ್ಣೆಗೆ ಅಂಟಿಕೊಂಡು ಶೀಘ್ರವೇ ಕೊಳಕಾಗಲು ತೊಡಗುತ್ತದೆ. ಆಗಾಗ್ಗೆ ಸ್ವಚ್ಛಗೊಳಿಸದೇ ಇದ್ದಲ್ಲಿ ಗಾಳಿಯಲ್ಲಿ ತೇಲಿಬಂದ ಬ್ಯಾಕ್ಟೀರಿಯಾಗಳು ಇಲ್ಲಿ ಮನೆಮಾಡಿ ತಮ್ಮ ಸಂಸಾರವನ್ನು ಪ್ರಾರಂಭಿಸಿಬಿಡುತ್ತವೆ. ಕೆಳಗೆ ಚರ್ಮದ ಎಣ್ಣೆಗ್ರಂಥಿಯ ಎಣ್ಣೆ ಹೊರಹರಿಯಲು ಸ್ಥಳಾವಕಾಶ ಇಲ್ಲದಿರುವುದರಿಂದ ಒಳಗೇ ಗಟ್ಟಿಯಾಗಿ ಕೀವುಗುಳ್ಳೆಗಳು ಪ್ರಾರಂಭವಾಗುತ್ತವೆ. ಕೆಲವು ದೊಡ್ಡದಾಗಿ ಮೊಡವೆ, ದದ್ದುಗಳಾಗಿ ಬೆಳವಣಿಗೆ ಪಡೆಯುತ್ತವೆ. ಈ ಸ್ಥಿತಿಗೆ ಬಾರದಿರಲು ಮಳೆಗಾಲದಲ್ಲಿ ಬೇಸಿಗೆಗಿಂತಲೂ ಹೆಚ್ಚಾಗಿ ಚರ್ಮವನ್ನು ತೊಳೆದುಕೊಳ್ಳುತ್ತಿರಿ. ಪ್ರತಿದಿನದ ಸ್ನಾನ ಅವಶ್ಯ.

ಸೋಂಕು ರೋಗಗಳು ಹೆಚ್ಚಾಗುತ್ತವೆ

ಸೋಂಕು ರೋಗಗಳು ಹೆಚ್ಚಾಗುತ್ತವೆ

ಒಂದು ವೇಳೆ ನಿಮಗೆ ಅರಿವಿಲ್ಲದೇ ನಿಮ್ಮ ದೇಹದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸೋಂಕು ಉಂಟಾಗಿದ್ದರೆ ಮಳೆಗಾಲದಲ್ಲಿ ಈ ಸೋಂಕು ಶೀಘ್ರವಾಗಿ ಉಲ್ಬಣಾವಸ್ಥೆಗೆ ಪ್ರವೇಶಿಸುತ್ತದೆ. ಈ ಸ್ಥಿತಿ ಬರುವ ಮುನ್ನವೇ ಇಡಿಯ ದೇಹವನ್ನು ಅತಿ ಸ್ವಚ್ಛವಾಗಿರಿಸಿಕೊಳ್ಳಿ. ಕೊಂಚ ಅನುಮಾನವಿದ್ದರೂ ವೈದ್ಯರಲ್ಲಿ ತಪಾಸಣೆಗೊಳಗೊಂಡು ಸೋಂಕಿನಿಂದ ರಕ್ಷಿಸಿಕೊಳ್ಳಲು ಸೂಕ್ತವಾದ ಔಷಧಿಗಳನ್ನು ಸೇವಿಸಿರಿ.

ಹುಳಕಡ್ಡಿ ಎದುರಾಗಬಹುದು

ಹುಳಕಡ್ಡಿ ಎದುರಾಗಬಹುದು

ರಿಂಗ್ ವರ್ಮ್ ಅಥವಾ ಹುಳಕಡ್ಡಿ ಎಂದು ಕರೆಯಲ್ಪಡುವ ಸೋಂಕು ವೃತ್ತಾಕಾರದಲ್ಲಿ ಚಿಕ್ಕದಾಗಿ ಪ್ರಾರಂಭವಾಗಿ ಹರಡುತ್ತಾ ಹೋಗುತ್ತದೆ. ಅತೀವ ತುರಿಕೆ ಮತ್ತು ಇತರರಿಗೂ ಹರಡಬಹುದಾದ ಇದರ ಪ್ರಕೋಪ ಮಳೆಗಾಲದಲ್ಲಿ ಗರಿಷ್ಟವಾಗಿರುತ್ತದೆ. ಇದನ್ನು ತಡೆಯಲು ಪ್ರಾರಂಭದ ಹಂತದಲ್ಲಿಯೇ ವೈದ್ಯರಿಂದ ಸೂಕ್ತವಾದ ಔಷಧಿಗಳನ್ನು ಪಡೆದುಕೊಳ್ಳಿ. ನಿಮ್ಮ ಉಡುಪುಗಳನ್ನು ಕಳಚಿದ ಬಳಿಕ ಆದಷ್ಟು ಶೀಘ್ರವೇ ಒಗೆಯಲು ಹಾಕಿ. ಹುಳಕಡ್ಡಿ ಒಣಗುವವರೆಗೂ ನೀರು ತಾಕದಂತೆ ಜಾಗ್ರತೆ ವಹಿಸಿದರೆ ಬೇಗನೇ ಗುಣವಾಗಲು ಸಾಧ್ಯವಾಗುತ್ತದೆ.

ತಲೆಹೊಟ್ಟು ತಲೆನೋವಾಗಿ ಪರಿಣಮಿಸುತ್ತದೆ

ತಲೆಹೊಟ್ಟು ತಲೆನೋವಾಗಿ ಪರಿಣಮಿಸುತ್ತದೆ

ಆರ್ದ್ರತೆಯ ಕೊರತೆಯಿಂದ ತಲೆಯ ಮೇಲಿನ ಚರ್ಮವೂ ಒಣಗಿ ಚಿಕ್ಕದಾಗಿ ಪದರವೇಳುತ್ತದೆ. ಇದೇ ತಲೆಹೊಟ್ಟು. ಎಣ್ಣೆಚರ್ಮದವರಿಗೆ ತಲೆಯಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳನ್ನೂ ತರಿಸಬಹುದು. ಇದಕ್ಕಾಗಿ ಸೂಕ್ತವಾದ ಚಿಕಿತ್ಸೆ ಮತ್ತು ಆರೈಕೆ ಅಗತ್ಯ.

ಉಗುರಿನಲ್ಲಿಯೂ ಸೋಂಕು ತಗುಲಬಹುದು

ಉಗುರಿನಲ್ಲಿಯೂ ಸೋಂಕು ತಗುಲಬಹುದು

ತೇವಗೊಂಡ ಉಗುರು ಒಣಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಉಗುರಿನ ಸಂದಿಯಲ್ಲಿಯೂ ಸೋಂಕು ಉಂಟಾಗಬಹುದು.ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಈ ಸೋಂಕು ತಗಲುವುದರಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಉಗುರಿನ ಸಂದಿಯಲ್ಲಿ ತುರಿಕೆ ಉಂಟಾದರೆ ಉಪ್ಪುನೀರಿನಲ್ಲಿ ತೊಳೆದುಕೊಳ್ಳಿ, ಸರ್ವಥಾ ಕಡ್ಡಿ ಅಥವಾ ಬೇರೆ ಸಾಧನಗಳಿಂದ ತುರಿಸಿಕೊಳ್ಳಲು ಯತ್ನಿಸಬೇಡಿ. ಉಗುರಿನ ಸಂದಿಯಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣ ಕಂಡುಬಂದರೆ ತಡಮಾಡದೇ ವೈದ್ಯರಲ್ಲಿ ತೋರಿಸಿ.

English summary

Monsoon Skin Problems

The rainy season cools down the heat of the summer and helps you relax a bit. But what abut the monsoon skin problems? They never let you relax. If you love dancing in the rain to really live the joys of monsoon, you must know a bit about the monsoon skin care.Now, let us get into the topic of monsoon skin problems.
X
Desktop Bottom Promotion