For Quick Alerts
ALLOW NOTIFICATIONS  
For Daily Alerts

ತ್ವಚೆಯ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ- ಕೆನೆಭರಿತ ಹಾಲು!

|

ಪ್ರತಿಯೊಬ್ಬ ಮಹಿಳೆಗೂ ಮೃದುವಾದ, ಹೊಳಪಿನಿಂದ ಕೂಡಿದ ತ್ವಚೆಯಿರಬೇಕು ಎಂಬುದು ಒಂದು ಕನಸಾಗಿರುತ್ತದೆ. ಅದಕ್ಕಾಗಿ ನಾವೆಲ್ಲರು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಮೊಯಿಶ್ಚರೈಸರ್‌ಗಳ ಜೊತೆ ಪ್ರಯೋಗಗಳನ್ನು ಮಾಡುತ್ತ ಇರುತ್ತೇವೆ. ಆದರೆ ಅದೇ ಕೆಲಸವನ್ನು ಕೆಲವೊಂದು ನೈಸರ್ಗಿಕ ಉತ್ಪನ್ನಗಳು ಮಾಡುತ್ತವೆ ಎಂದರೆ ಏಕೆ ಬಿಡಬೇಕು.

ರಾಸಾಯನಿಕಗಳಿಂದ ಕೂಡಿದ ಮೊಯಿಶ್ಚರೈಸರ್‌ಗಳು ಮತ್ತು ಸ್ವಾಭಾವಿಕ ಮೊಯಿಶ್ಚರೈಸರ್‌ಗಳು ಎರಡೂ ನಿಮ್ಮ ತ್ವಚೆಗೆ ಹೊಳಪನ್ನು ನೀಡುತ್ತವೆ. ಆದರೆ ಸ್ವಾಭಾವಿಕ ಉತ್ಪನ್ನಗಳು ನಿಮ್ಮ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮವನ್ನುಂಟು ಮಾಡುವುದಿಲ್ಲ. ಬನ್ನಿ ಇವುಗಳ ಕುರಿತು ಮತ್ತಷ್ಟು ಮಾಹಿತಿಯನ್ನು ನೋಡೋಣ. ಬೇಸಿಗೆಯ ಸುಡು ಬಿಸಿಲಿಗೆ ತ್ವಚೆಯ ಕಾಳಜಿ ವಹಿಸುವುದು ಹೇಗೆ?

Milk- The Ultimate Natural Moisturizer for Your Skin

ಹಾಲನ್ನು ಏಕೆ ಮೊಯಿಶ್ಚರೈಸರ್ ಆಗಿ ಬಳಸಬೇಕು
ಬಹುತೇಕ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಮೊಯಿಶ್ಚರೈಸಿಂಗ್ ಉತ್ಪನ್ನಗಳನ್ನು ಬಿಡುಗಡೆ ಮಾಡಿವೆ. ಆದರೆ ಇವುಗಳಿಗೆ ಹೋಲಿಸಿದಾಗ ಕಚ್ಛಾ ಹಾಲು ನಿಮ್ಮ ಮುಖಕ್ಕೆ ಅತ್ಯುತ್ತಮವಾದ ಮೊಯಿಶ್ಚರೈಸಿಂಗ್ ಒದಗಿಸುತ್ತದೆ ಎಂದು ತಿಳಿದುಬಂದಿದೆ.
*ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಮೊಯಿಶ್ಚರೈಸರ್‌ಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಆದರೆ ಹಾಲು ಸಂಪೂರ್ಣ ನೈಸರ್ಗಿಕ ಪರಿಹಾರವಾಗಿರುತ್ತದೆ. ಆದ್ದರಿಂದ ಇದು ತ್ವಚೆಗೆ ನೂರಕ್ಕೆ ನೂರರಷ್ಟು ನಿರಪಯಕಾರಿ.


*ಹಾಲು ನೈಸರ್ಗಿಕ ಉತ್ಪನ್ನವಾಗಿರುವುದರಿಂದ ಇದು ತ್ವಚೆಯನ್ನು ಕೋಮಲಗೊಳಿಸುತ್ತದೆ. ಮುಖದ ತ್ವಚೆಯು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಇದರ ಮೇಲೆ ಹಾಲು ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಬೀರುವುದಿಲ್ಲ.
* ಹಾಲು ಮೆದುವಾಗಿರುವುದರಿಂದ, ಇದು ತ್ವಚೆಯ ಮೇಲೆ ಪರಿಣಾಮಕಾರಿ ಮೊಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದು ತ್ವಚೆಯ ಆಳಕ್ಕೆ ಇಳಿದು, ಅದಕ್ಕೆ ಹೊಳಪನ್ನು ನೀಡುತ್ತದೆ.
* ಹಾಲು ನಾವು ಪ್ರತಿ ನಿತ್ಯ ಬಳಸುವ ಪದಾರ್ಥವಾಗಿರುವುದರಿಂದ ಇದು ಸುಲಭವಾಗಿ ನಮಗೆ ದೊರೆಯುತ್ತದೆ.
* ಮಾರುಕಟ್ಟೆಯಲ್ಲಿ ದೊರೆಯುವ ಇತರೆ ಉತ್ಪನ್ನಗಳಿಗೆ ಹೋಲಿಸಿದರೆ, ಹಾಲು ಅಗ್ಗದ ಉತ್ಪನ್ನವಾಗಿರುತ್ತದೆ.

ಹಾಲನ್ನು ಮೊಯಿಶ್ಚರೈಸರ್ ಆಗಿ ಹೇಗೆ ಬಳಸುವುದು
ಹಾಲನ್ನು ಮುಖವನ್ನು ಒಳಗೊಂಡಂಟೆ ಇಡೀ ದೇಹಕ್ಕೆ ಮೊಯಿಶ್ಚರೈಸರ್ ಆಗಿ ಬಳಸಬಹುದು. ಬನ್ನಿ ಅದನ್ನು ಬಳಸುವ ಬಗೆ ಹೇಗೆಂದು ತಿಳಿಯೋಣ:

ಫೇಸ್ ವಾಶ್ ಆಗಿ ಹಾಲು
ಎರಡು ಚಮಚ ಹಾಲನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಮುಖದ ಮೇಲೆ ಚೆನ್ನಾಗಿ ಉಜ್ಜಿ, ನಂತರ ಬೆರಳುಗಳಿಂದ ಮೃದುವಾಗಿ ಮಸಾಜ್ ಮಾಡಿ. ಕೊನೆಯದಾಗಿ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖ ತಾಜ ಆಗಿ ಕಾಣುತ್ತದೆ. ಇದನ್ನು ಪ್ರತಿನಿತ್ಯ ಸ್ನಾನ ಮಾಡುವ ಮುನ್ನ ಮಾಡಿ. ಅರೆ ಇದೇನಿದು? ತ್ವಚೆಯ ಸೌಂದರ್ಯಕ್ಕೆ ಬೆಣ್ಣೆಯನ್ನು ಬಳಸಬಹುದೇ?

ಹಾಲಿನ ಫೇಸ್ ಪ್ಯಾಕ್
2 ಅಥವಾ 3 ಟೇಬಲ್ ಚಮಚ ಹಾಲನ್ನು ತೆಗೆದುಕೊಳ್ಳಿ. ಕೊಬ್ಬಿನಂಶ ಇರುವ ಕಚ್ಛಾ ಹಾಲು ಇದಕ್ಕೆ ಒಳ್ಳೆಯದು. ಇದನ್ನು ಮುಖಕ್ಕೆ ಹಚ್ಚಿಕೊಂಡು ಬೆರಳುಗಳಿಂದ ಮೃದುವಾಗಿ ಮಸಾಜ್ ಮಾಡಿ. ಇದರ ಜೊತೆಗೆ ನೀವು ಕೆಲವೊಂದು ತ್ಚಚೆ-ಸ್ನೇಹಿ ಸ್ವಾಭಾವಿಕ ಪದಾರ್ಥಗಳನ್ನು ಬಳಸಿಕೊಳ್ಳಬಹುದು. ಅವು ಜೇನು ತುಪ್ಪ, ಬಾದಾಮಿ ಪೇಸ್ಟ್, ಇತ್ಯಾದಿ ಆಗಿರಬಹುದು. ಅದನ್ನು ಮಿಶ್ರಣ ಮಾಡಿ ಫೇಸ್ ಪ್ಯಾಕ್ ಆಗಿ ಬಳಸಿ. ಇದನ್ನು ಮುಖಕ್ಕೆ ಲೇಪಿಸಿ ಒಣಗಲು ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ.

ಹಾಲಿನ ಫೇಸ್ ಮಾಸ್ಕ್
ಇದಕ್ಕಾಗಿ 2 ಅಥವಾ 3 ಟೇಬಲ್ ಚಮಚ ಹಾಲನ್ನು ತೆಗೆದುಕೊಳ್ಳಿ.(ಕೊಬ್ಬಿನಂಶ ಇರುವ ಅಥವಾ ಕೆನೆಯಿರುವ ಹಾಲು ಇದಕ್ಕೆ ಒಳ್ಳೆಯದು) ಇದರ ಜೊತೆಗೆ ಹತ್ತಿಯ ಸಣ್ಣ ಉಂಡೆಗಳನ್ನು ತೆಗೆದುಕೊಳ್ಳಿ. ಹತ್ತಿಯ ಉಂಡೆಗಳನ್ನು ಸಂಪೂರ್ಣವಾಗಿ ಹಾಲಿನಲ್ಲಿ ಅದ್ದಿ, ನೆನೆಯಲು ಬಿಡಿ. ನಂತರ ಆ ನೆಂದ ಹತ್ತಿಯ ಉಂಡೆಗಳನ್ನು ನಿಮ್ಮ ಮುಖದ ಮೇಲೆ ಇರಿಸಿಕೊಳ್ಳಿ. ಈ ಹಾಲನ್ನು ನಿಮ್ಮ ಮುಖದ ತ್ವಚೆಯು ಹೀರಿಕೊಳ್ಳಲು ಬಿಡಿ. 15 ನಿಮಿಷಗಳ ನಂತರ ಒಂದು ಬಟ್ಟೆಯನ್ನು ತೆಗೆದುಕೊಂಡು ನಿಮ್ಮ ಮುಖದ ಮೇಲೆ ಸ್ಕ್ರಬ್ ಮಾಡಿಕೊಳ್ಳಿ. ಹಾಲಿನ ಅಂಶವನ್ನು ನಿಮ್ಮ ಮುಖದಿಂದ ತೆಗೆಯಿರಿ. ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಚಮತ್ಕಾರಿಕ ಬೀಟ್‌ರೂಟ್‌ನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ಹಾಲಿನ ಸ್ನಾನ
ಕುದಿಸದ ಕಚ್ಛಾ ಹಾಲನ್ನು ಸ್ನಾನಕ್ಕೆ ವಾರಕ್ಕೊಮ್ಮೆಯಾದರು ಬಳಸಿದರೆ ಒಳ್ಳೆಯದು. ಇದು ತ್ವಚೆಗಷ್ಟೇ ಅಲ್ಲ, ಸಂಪೂರ್ಣ ದೇಹಕ್ಕೆ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಬಾತ್ ಟಬ್‌ನಲ್ಲಿ ಇದಕ್ಕಾಗಿ ಬಿಸಿ ನೀರನ್ನು ಶೇಖರಿಸಿ, ಅದಕ್ಕೆ ಕಾಲು ಭಾಗ ಹಾಲನ್ನು ಬೆರೆಸಿ. ಅದರಲ್ಲಿ ನೀವು 20-30 ನಿಮಿಷ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನಂತರ ನಿಮ್ಮ ಇಡೀ ದೇಹವನ್ನು ಮೃದುವಾದ ಹತ್ತಿಯ ಬಟ್ಟೆಯಿಂದ ಸ್ಕ್ರಬ್ ಮಾಡಿ.
ಕೊನೆಯದಾಗಿ, ಉಗುರು ಬೆಚ್ಚಗಿನ ನೀರಿನಿಂದ ಶವರ್ ಮಾಡಿ. ಇವೆಲ್ಲವು ನಿಮ್ಮ ತ್ವಚೆಯನ್ನು ಮೃದು ಮಾಡುವುದರ ಜೊತೆಗೆ ಹೊಳಪನ್ನು ಸಹ ಒದಗಿಸುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಇಡೀ ದೇಹಕ್ಕೆ ಮೊಯಿಶ್ಚರೈಸ್ ಸಹ ಒದಗಿಸುತ್ತದೆ.

English summary

Milk- The Ultimate Natural Moisturizer for Your Skin

Though not all synthetic or natural skincare products work the same way, you can rely on milk for this purpose surely. It is considered as the ultimate natural moisturizer for our skin. Let us dig deep into the fact:
Story first published: Monday, March 30, 2015, 19:58 [IST]
X
Desktop Bottom Promotion