For Quick Alerts
ALLOW NOTIFICATIONS  
For Daily Alerts

ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

By Deepak
|

ಪ್ರಾಚೀನ ಕಾಲದಲ್ಲಿ ಹಾಲಿನ ಕೆನೆಯು ಪ್ರಮುಖವಾದ ಸೌಂದರ್ಯವರ್ಧಕ ಸಾಮಗ್ರಿಯಾಗಿತ್ತು. ಇದು ತ್ವಚೆಯನ್ನು ಒಣ ತ್ವಚೆಯಿಂದ ಮೃದು ತ್ವಚೆಯನ್ನಾಗಿ ಮಾಡಲು ಸಹಕರಿಸುತ್ತಿತ್ತು. ಹಾಲಿನಲ್ಲಿರುವ ಪ್ರತಿಯೊಂದು ಅಂಶಗಳು ಮುಖದ ಸೌಂದರ್ಯಕ್ಕೆ ಕಳೆಯನ್ನು ನೀಡುತ್ತವೆ. ಹಾಲಿನ ಕೆನೆಯಿಂದ ಹಲವಾರು ಪ್ರಯೋಜನಗಳು ತ್ವಚೆಗೆ ಲಭಿಸುತ್ತವೆ. ಇದು ತ್ವಚೆಗೆ ಸುರಕ್ಷಿತವಾದ ಮತ್ತು ಅಗ್ಗವಾದ ಮನೆ ಮದ್ದಾಗಿರುತ್ತದೆ.

ಹಾಲಿನ ಕೆನೆಯನ್ನು ಆರೋಗ್ಯದ ಕಾರಣಗಳಿಗಾಗಿ ಬಹುತೇಕ ಮಂದಿ ಸುಮ್ಮನೆ ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಅದರ ಪ್ರಯೋಜನ ತಿಳಿದಿದ್ದರೆ, ಪವಾಡಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಲಿನ ಕೆನೆಯ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ, ಮೊಡವೆಗಳನ್ನು ನಿವಾರಿಸುತ್ತದೆ, ಜೊತೆಗೆ ತ್ವಚೆಯನ್ನು ಮೃದುವಾಗಿಸುತ್ತದೆ.

ಅಲ್ಲದೆ ಇದು ತ್ವಚೆಯಲ್ಲಿರುವ ಸುಕ್ಕುಗಳು ಮತ್ತು ಗೆರೆಗಳನ್ನು ನಿವಾರಿಸುತ್ತದೆ. ಆದ್ದರಿಂದ ಪ್ರತಿದಿನ ಮುಖಕ್ಕೆ ಕೆನೆಯನ್ನು ಹಚ್ಚಿಕೊಳ್ಳುವ ಅಭ್ಯಾಸವನ್ನು ಇರಿಸಿಕೊಳ್ಳಿ. ಇದರಿಂದ ಅಂದವಾದ ಮುಖ ನಿಮ್ಮದಾಗುತ್ತದೆ. ಹಾಗಾದರೆ ಹಾಲಿನ ಕೆನೆಯ ಫೇಸ್ ಪ್ಯಾಕ್ ಅನ್ನು ಹೇಗೆ ಮಾಡುವುದು? ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಅದಕ್ಕೆ ನಾವು ಇಂದು ಹಾಲಿನ ಕೆನೆಯ ಫೇಸ್ ಪ್ಯಾಕ್ ಮಾಡುವ ಬಗೆಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಮುಂದೆ ಓದಿ...

ಹೊಳಪಿಗಾಗಿ ಹಾಲಿನ ಕೆನೆ

ಹೊಳಪಿಗಾಗಿ ಹಾಲಿನ ಕೆನೆ

ಇದು ಸಾಮಾನ್ಯವಾದ ತ್ವಚೆಗಾಗಿ ಬಳಸಲಾಗುವ ಫೇಸ್ ಪ್ಯಾಕ್ ಆಗಿರುತ್ತದೆ. ಎರಡು ಟೀ.ಚಮಚ ಹಾಲಿನ ಕೆನೆಯ ಜೊತೆಗೆ ಒಂದು ಟೀ.ಚಮಚ ಗಂಧದ ಪುಡಿ, ಒಂದು ಟೀ.ಚಮಚ ಕಡಲೆ ಹಿಟ್ಟು, ಒಂದು ಚಿಟಿಕೆ ಅರಿಶಿನವನ್ನು ಬೆರೆಸಿಕೊಳ್ಳಿ. ಇದರ ಮೇಲೆ ಕೆಲವು ಹನಿಗಳಷ್ಟು ರೋಸ್ ವಾಟರ್ ಚಿಮುಕಿಸಿ. ಇವನ್ನೆಲ್ಲ ಸೇರಿಸಿ, ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ ಲೇಪಿಸಿ ಉಜ್ಜಿಕೊಳ್ಳಿ. 10 ನಿಮಿಷ ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.

ಹಾಲಿನ ಕೆನೆಯ ಫೇಸ್ ಪ್ಯಾಕ್

ಹಾಲಿನ ಕೆನೆಯ ಫೇಸ್ ಪ್ಯಾಕ್

ಒಣ ತ್ವಚೆಯ ಸಮಸ್ಯೆಯಿಂದ ಬಳಲುತ್ತಿರುವವರು ಈ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಇದಕ್ಕಾಗಿ ನಾಲ್ಕು ಟೀ.ಚಮಚ ಹಾಲಿನ ಕೆನೆಯ ಜೊತೆಗೆ ಎರಡು ಟೀ.ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ. ಇದನ್ನು ಕಾಲುಗಳು, ಕೈಗಳು ಮತ್ತು ಮುಖದ ಮೇಲೆ ಹಚ್ಚಿಕೊಂಡು, ನಂತರ ಸ್ನಾನ ಮಾಡಿ.

ಸುಂದರವಾದ ತ್ವಚೆಗಾಗಿ ಹಾಲಿನ ಕೆನೆಯ ಫೇಸ್ ಪ್ಯಾಕ್

ಸುಂದರವಾದ ತ್ವಚೆಗಾಗಿ ಹಾಲಿನ ಕೆನೆಯ ಫೇಸ್ ಪ್ಯಾಕ್

ಒಂದು ಚಿಟಿಕೆ ಕೇಸರಿಯನ್ನು ಒಂದು ಟೀ.ಚಮಚ ಜೇನು ತುಪ್ಪ ಮತ್ತು ಒಂದು ಟೀ.ಚಮಚ ಹಾಲಿನ ಕೆನೆಯ ಜೊತೆಗೆ ಮಿಶ್ರಣ ಮಾಡಿಕೊಳ್ಳಿ.ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಬಿಟ್ಟು, ನಂತರ ತೊಳೆಯಿರಿ. ಇದು ಅತ್ಯಂತ ಪರಿಣಾಮಕಾರಿಯಾದ ಫೇಸ್ ಪ್ಯಾಕ್ ಆಗಿದ್ದು, ಇದರಿಂದ ತ್ವಚೆ ಸುಂದರವಾಗಿ ಕಾಣುತ್ತದೆ.

ಪ್ರತಿನಿತ್ಯದ ಹಾಲಿನ ಕೆನೆ ಫೇಸ್ ಪ್ಯಾಕ್

ಪ್ರತಿನಿತ್ಯದ ಹಾಲಿನ ಕೆನೆ ಫೇಸ್ ಪ್ಯಾಕ್

ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಸದಾ ಯೌವನದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮೊಡವೆಗಳಂತವು ನಿಮ್ಮ ತ್ವಚೆಯನ್ನು ಕಾಡದಂತೆ ನೋಡಿಕೊಳ್ಳುತ್ತವೆ. ಇದನ್ನು ತಯಾರಿಸುವುದು ಸುಲಭ. ಒಂದು ಟೀ.ಚಮಚ ಜೇನು ತುಪ್ಪಕ್ಕೆ, ಒಂದು ಟೀ.ಚಮಚ ಹಾಲಿನ ಕೆನೆಯನ್ನು ಬೆರೆಸಿ. ಇದಕ್ಕೆ ಬೇಕಾದಲ್ಲಿ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು.ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಲೇಪಿಸಿ. 15 ನಿಮಿಷ ಬಿಟ್ಟು, ನಂತರ ತೊಳೆಯಿರಿ.

ಸ್ವಚ್ಛ ತ್ವಚೆಗಾಗಿ ಹಾಲಿನ ಫೇಸ್ ಪ್ಯಾಕ್

ಸ್ವಚ್ಛ ತ್ವಚೆಗಾಗಿ ಹಾಲಿನ ಫೇಸ್ ಪ್ಯಾಕ್

ಒಂದು ಟೀ.ಚಮಚ ಹಾಲಿನ ಕೆನೆಯ ಜೊತೆಗೆ ಒಂದು ಟೀ.ಚಮಚ ಓಟ್ಸ್, ಒಂದು ಟೀ.ಚಮಚ ಅರಿಶಿನ ಮತ್ತು ಒಂದು ಟೀ.ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಐದು ನಿಮಿಷಗಳ ಕಾಲ ಉಜ್ಜಿ. ಇದನ್ನು 15 ನಿಮಿಷ ಬಿಟ್ಟು, ನಂತರ ತೊಳೆಯಿರಿ.

English summary

Milk Cream (Malai) Face Packs For Skin

In ancient times milk cream (malai) was one of the major beauty ingredient. It was used for making the skin fair and for treating dryness. Milk cream contains all the essential ingredients that are needed to enhance your facial beauty. Take a look at some of the best homemade face pack with milk cream.
X
Desktop Bottom Promotion