For Quick Alerts
ALLOW NOTIFICATIONS  
For Daily Alerts

ಏನಾಶ್ಚರ್ಯ, ಸಿಹಿ ಗೆಣಸಿನಿಂದ ಸೌಂದರ್ಯ ವೃದ್ಧಿ..!

By Deepak
|

ಸಿಹಿ ಗೆಣಸು, ಮನೆಯ ಕೈತೋಟದಲ್ಲಿ ಸುಲಭವಾಗಿ ಬೆಳೆದುಕೊಳ್ಳಬಹುದಾದ ಗಿಡಗಳಲ್ಲಿ ಒಂದು. ಅಲ್ಲದೆ ತರಕಾರಿ ಅಂಗಡಿಗಳಲ್ಲಿ ಸಹ ಇದು ಸುಲಭವಾಗಿ ಸಿಕ್ಕುತ್ತದೆ. ಬೇಯಿಸಿಕೊಂಡು ತಿನ್ನಲು ಭಾರೀ ಇಷ್ಟಪಡುವ ಈ ಗೆಣಸನ್ನು ಆರೋಗ್ಯದ ಮತ್ತು ಸೌಂದರ್ಯದ ದೃಷ್ಟಿಯಿಂದ ಸಹ ನಮ್ಮ ಲಾಭಕ್ಕೆ ಬಳಸಿಕೊಳ್ಳಬಹುದು. ಅರೆ ತಿನ್ನಲು ಮಾತ್ರ ಪ್ರಯೋಜನಕಾರಿಯಾದ ಇದರಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ, ಎಂಬುದು ನಿಮ್ಮ ಪ್ರಶ್ನೆಯೇ?

ಅದಕ್ಕೆ ನಮ್ಮ ಉತ್ತರ, ಹೌದು, ಸಿಹಿಗೆಣಸಿನಲ್ಲಿ ಹಲವಾರು ಸೌಂದರ್ಯದ ಪ್ರಯೋಜನಗಳು ಅಡಗಿರುತ್ತವೆ. ಜೊತೆಗೆ ಇದರಲ್ಲಿ ಆರೋಗ್ಯದ ಪ್ರಯೋಜನಗಳು ಸಹ ಹೆಚ್ಚಾಗಿರುತ್ತವೆ. ಇದರಲ್ಲಿ ಮೆಗ್ನಿಶಿಯಂ, ಫಾಸ್ಫರಸ್, ಪೊಟಾಶಿಯಂ, ಸೋಡಿಯಂ, ಸತು, ಬಯೋಟಿನ್, ನಾರಿನಂಶ ಮತ್ತು ಒಮೆಗಾ 3 ಕೊಬ್ಬಿನ ಆಮ್ಲವು ಹೆಚ್ಚಾಗಿದ್ದು, ವಿಟಮಿನ್ ಎ,ಬಿ,ಸಿ ಮತ್ತು ಕೆ ಅಗಾಧ ಪ್ರಮಾಣದಲ್ಲಿದೆ, ಅಲ್ಲದೆ ಯಥೇಚ್ಛವಾಗಿ ಬೀಟಾ ಕೆರೋಟಿನ್ ಮತ್ತು ಅಂಥೊಸೈಯಾನಿನ್‌ನಿಂದ ಕೂಡ ಸಮೃದ್ಧವಾಗಿದೆ. ಅದರಲ್ಲೂ ಇದರಲ್ಲಿರುವ ಅಂಥೊಸೈಯಾನಿನ್ ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಪಿಗ್‌ಮೆಂಟೇಶನ್ ಮೇಲೆ ಹೋರಾಡಿ, ತ್ವಚೆಯು ಹೊಳಪಿನಿಂದ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಇದರಲ್ಲಿ ಉರಿಬಾವು ನಿರೋಧಕ ಅಂಶಗಳು ಸಹ ಇರುತ್ತವೆ, ಇವು ತ್ವಚೆಗೆ ಮತ್ತಷ್ಟು ಪ್ರಯೋಜನವನ್ನು ನೀಡುತ್ತವೆ. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಈ ಉರಿಬಾವು ನಿರೋಧಕ ಅಂಶಗಳು ರ‍್ಯಾಡಿಕಲ್‌ಗಳು ಹಾನಿಯಾಗುವುದನ್ನು ತಪ್ಪಿಸುತ್ತವೆ. ಹೀಗಾಗಿ ಇವು ನೀವು ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತವೆ. ಅಷ್ಟೇ ಅಲ್ಲದೆ ಇದರಲ್ಲಿರುವ ಪೋಷಕಾಂಶಗಳು ತ್ವಚೆಗೆ ಪೋಷಣೆಯನ್ನು ನೀಡಿ, ತ್ವಚೆಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಪ್ರಯೋಜನಗಳನ್ನು ದೂರ ಮಾಡುತ್ತವೆ. ಬನ್ನಿ ಸಿಹಿ ಗೆಣಸಿನಿಂದ ನಿಮಗೆ ದೊರೆಯುವ ಹಲವಾರು ಸೌಂದರ್ಯ ಪ್ರಯೋಜನಗಳ ಕುರಿತು ತಿಳಿಸುತ್ತೇವೆ ಮುಂದೆ ಓದಿ..

ಜಿಡ್ಡಿನ ತ್ವಚೆಗೆ ಆರೈಕೆ ನೀಡುತ್ತದೆ

ಜಿಡ್ಡಿನ ತ್ವಚೆಗೆ ಆರೈಕೆ ನೀಡುತ್ತದೆ

ಸಿಹಿಗೆಣಸು ಜಿಡ್ಡಿನ ತ್ವಚೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಸಿಹಿ ಗೆಣಸನ್ನು ಬೇಯಿಸಿ, ಅದನ್ನು ನುಣ್ಣಗೆ ಮಾಡಿಕೊಳ್ಳಿ. ತದನಂತರ ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಬೆರೆಸಿ ಲೇಪನ ಮಾಡಿಕೊಂಡು, ತ್ವಚೆಗೆ ಲೇಪಿಸಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬಿಸಿ ನೀರಿನಿಂದ ಮುಖ ತೊಳೆದುಕೊಳ್ಳಿ ಜಿಡ್ಡಿನ ತ್ವಚೆಯಿಂದ ನಿವಾರಣೆ ಪಡೆಯಿರಿ.

ಒಡೆದ ಹಿಮ್ಮಡಿಯನ್ನು ನಿವಾರಿಸಲು

ಒಡೆದ ಹಿಮ್ಮಡಿಯನ್ನು ನಿವಾರಿಸಲು

ಸಿಹಿ ಗೆಣಸುಗಳು ಒಡೆದ ಹಿಮ್ಮಡಿಯನ್ನು ನಿವಾರಿಸುವ ಅತ್ಯುತ್ತಮ ಔಷಧಿ ಎಂದು ಹೇಳಬಹುದು. ನಿಮ್ಮ ಪಾದವನ್ನು ಸಿಹಿ ಗೆಣಸನ್ನು ಬೇಯಿಸಿರುವ ನೀರಿನಲ್ಲಿ ಚೆನ್ನಾಗಿ ನೆನೆಸಿ. ಈ ಪ್ರಕ್ರಿಯೆಯನ್ನು ಕೆಲವು ನಿಮಿಷಗಳವರೆಗೆ ಮುಂದುವರಿಸಿ. ಇದು ಒಡೆದ ಹಿಮ್ಮಡಿಗಳನ್ನು ಸ್ವಾಭಾವಿಕವಾಗಿ ಗುಣಪಡಿಸಲು, ಸಹಾಯ ಮಾಡುತ್ತದೆ.

ಕಪ್ಪು ಕಲೆಗಳನ್ನು ನಿವಾರಿಸುತ್ತದೆ

ಕಪ್ಪು ಕಲೆಗಳನ್ನು ನಿವಾರಿಸುತ್ತದೆ

ಸಿಹಿಗೆಣಸಿನಲ್ಲಿರುವ ಅಂಥೋಸೈಯಾನಿನ್ ಅಂಶಗಳು ಪಿಗ್‌ಮೆಂಟೇಶನ್ ಅನ್ನು ಕಡಿಮೆ ಮಾಡುತ್ತವೆ ಮತ್ತು ಇವುಗಳಲ್ಲಿ ಉರಿ ಬಾವು ನಿರೋಧಕ ಅಂಶಗಳು ಸಹ ಇದ್ದು, ಇವು ಕಪ್ಪು ಕಲೆಗಳನ್ನು, ಸುಕ್ಕುಗಳನ್ನು ಮತ್ತು ಊದಿಕೊಂಡ ಕಣ್ಣುಗಳನ್ನು ನಿವಾರಿಸುತ್ತವೆ. ಇದಕ್ಕಾಗಿ ಎರಡು ತುಂಡು ಸಿಹಿಗೆಣಸನ್ನು ನಿಮ್ಮ ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಇಲ್ಲವೇ ಸಿಹಿ ಗೆಣಸನ್ನು ಪೇಸ್ಟ್ ರೀತಿ ಮಾಡಿಕೊಂಡು ನಿಮ್ಮ ಕಣ್ಣುಗಳ ಅಡಿಯಲ್ಲಿ ಲೇಪಿಸಿ.

ವಯಸ್ಸಾದಂತೆ ಕಾಣುವುದನ್ನು ನಿವಾರಿಸುತ್ತದೆ

ವಯಸ್ಸಾದಂತೆ ಕಾಣುವುದನ್ನು ನಿವಾರಿಸುತ್ತದೆ

ಸಿಹಿಗೆಣಸು ಒಣ ತ್ವಚೆಗೆ ಆಹ್ಲಾದಕತೆಯನ್ನು ನೀಡುತ್ತದೆ ಮತ್ತು ವಯಸ್ಸಾದಂತೆ ಕಾಣುವ ಪ್ರಕ್ರಿಯೆಯನ್ನು ಹೊಡೆದೋಡಿಸುತ್ತದೆ. ಇದಕ್ಕಾಗಿ ಸಿಹಿ ಗೆಣಸಿನ ಪೇಸ್ಟ್ ಮಾಡಿಕೊಳ್ಳಿ, ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಮತ್ತು ಹಾಲನ್ನು ಬೆರೆಸಿ. ಈ ಮಿಶ್ರಣವನ್ನು ತ್ವಚೆಯ ಮೇಲೆ ಲೇಪಿಸಿ ಸ್ವಲ್ಪ ಹೊತ್ತಿನ ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ವಯಸ್ಸಾದಂತೆ ಕಾಣುವುದನ್ನು ತಡೆಯಬಹುದು

ತ್ವಚೆಗೆ ತೇವಾಂಶವನ್ನು ನೀಡುತ್ತದೆ

ತ್ವಚೆಗೆ ತೇವಾಂಶವನ್ನು ನೀಡುತ್ತದೆ

ಸಿಹಿಗೆಣಸು ತ್ವಚೆಗೆ ಆಳವಾದ ತೇವಾಂಶವನ್ನು ನೀಡುತ್ತದೆ. ಒಂದು ಟೇಬಲ್ ಚಮಚ ಮೊಸರು ಜೊತೆಗೆ ಸಿಹಿಗೆಣಸನ್ನು ಸೇರಿಸಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಮುಖದ ಮೇಲೆ ಲೇಪಿಸಿ ಮತ್ತು ಸ್ವಲ್ಪ ಸಮಯದ ನಂತರ ಇದನ್ನು ತೊಳೆದುಕೊಳ್ಳಿ.

ಒಣ ಕೂದಲಿಗೆ ಹಾರೈಕೆ ನೀಡುತ್ತದೆ

ಒಣ ಕೂದಲಿಗೆ ಹಾರೈಕೆ ನೀಡುತ್ತದೆ

ಸಿಹಿ ಗೆಣಸು ಕೂದಲಿಗೆ ಸಹ ಪೋಷಕಾಂಶವನ್ನು ನೀಡುತ್ತದೆ. ಸಿಹಿಗೆಣಸಿನಲ್ಲಿರುವ ಪೋಷಕಾಂಶಗಳು ಹೇರ್ ಮಾಸ್ಕ್‌ಗೆ ಹೇಳಿ ಮಾಡಿಸಿದ ಗುಣಗಳನ್ನು ಹೊಂದಿರುತ್ತವೆ. ಮೊಸರು, ಜೇನು ತುಪ್ಪ, ಬಾದಾಮಿ ಎಣ್ಣೆ ಮತ್ತು ಸಿಹಿ ಗೆಣಸನ್ನು ಸರಿ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಸ್ವಲ್ಪ ಸಮಯದ ನಂತರ ಇದನ್ನು ತೊಳೆಯಿರಿ.

ಕೂದಲು ಬೆಳೆಯಲು ಸಹಕರಿಸುತ್ತದೆ

ಕೂದಲು ಬೆಳೆಯಲು ಸಹಕರಿಸುತ್ತದೆ

ವಿಟಮಿನ್ ಎ ಅಥವಾ ಬೀಟಾ ಕೆರೋಟೀನ್ ಕೂದಲ ಟಾನಿಕ್‌ಗೆ ಹೇಳಿ ಮಾಡಿಸಿದ ಅಂಶವಾಗಿರುತ್ತದೆ. ಇದನ್ನು ದಿನಲೂ ಸೇವಿಸುವುದರಿಂದ, ಕೂದಲಿಗೆ ಬೇಕಾದ ಪೋಷಕಾಂಶಗಳೂ ದೊರೆಯುತ್ತವೆ. ಇದರಿಂದ ಒಣ ಹಾಗೂ ನಿರ್ಜೀವ ಕೂದಲು ಮತ್ತು ತಲೆಹೊಟ್ಟು ನಿವಾರಣೆಯಾಗುತ್ತವೆ.

English summary

Incredible Beauty Benefits Of Sweet Potatoes

Sweet potatoes is one of the nutritious foods which offers countless beauty and health benefits. It is packed with magnesium, phosphorous, potassium, sodium, zinc, copper, biotin, fibre and omega 3 fatty acids. It is also rich in vitamin A, B, C and K and an excellent source of beta-carotene and anthocyanin.
Story first published: Thursday, November 5, 2015, 13:11 [IST]
X
Desktop Bottom Promotion