For Quick Alerts
ALLOW NOTIFICATIONS  
For Daily Alerts

ತ್ವಚೆಯ ಮೊಡವೆ ಸಮಸ್ಯೆಗೆ ಸೂಕ್ತ ಮನೆಮದ್ದು

|

ಟೀನೇಜ್ ಮತ್ತು ಹದಿಹರೆಯದವರಿಗೆ ಮೊಡವೆ ಎನ್ನುವುದು ದೊಡ್ಡ ಚಿಂತೆಯ ವಿಷಯವಾಗಿರುತ್ತದೆ. ಇದು ಅವರ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುವುದು ಖಚಿತ. ಮೊಡವೆ ಮತ್ತು ಅದರ ಸೋಂಕಿನಿಂದ ಪಾರಾಗಲು ಹಲವಾರು ರೀತಿಯ ಮನೆಮದ್ದುಗಳಿವೆ

ಮೊಡವೆ ಹದಿಹರೆಯದ ಯುವಕರು ಹಾಗೂ ಯುವತಿಯರನ್ನು ಭಾದಿಸುವ ಅತ್ಯಂತ ಕೆಟ್ಟ ಚರ್ಮದ ರೋಗ. ವೈದ್ಯಕೀಯ ಅಧ್ಯಯನದ ಪ್ರಕಾದ ಚರ್ಮದ ಗ್ರಂಥಿಗಳನ್ನು ಬ್ಯಾಕ್ಟೀರಿಯಾದ ಸೋಂಕು ತಗುಲಿದಾಗ ಮತ್ತು ಕಲ್ಮಶದಿಂದ ಮೊಡವೆ ಕಾಣಿಸಿಕೊಳ್ಳುತ್ತದೆ. ಈ ರೀತಿಯಾದರೆ ಮೊಡವೆಗಳು ಕಾಣಿಸಿಕೊಳ್ಳುವುದು ಸಹಜ. ಮುಖ, ಎದೆ ಮತ್ತು ಬೆನ್ನಿನಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಅತ್ಯಧಿಕ ಲಾಭ ಪಡೆಯಲು ನೀವು ಅರಶಿನವನ್ನು ಕೆಲವೊಂದು ವಿಧಾನಗಳಲ್ಲಿ ಬಳಸಿಕೊಳ್ಳುವುದು ಹೇಗೆಂದು ನಾವು ಕೆಳಗೆ ತಿಳಿಸಿದ್ದೇವೆ.

ಅರಿಶಿನ ಪುಡಿ ಹಾಗೂ ಹಾಲಿನ ಮಿಶ್ರಣ
ನಾಲ್ಕು ಚಮಚ ಅರಿಶಿನ ಪುಡಿ ಮತ್ತು ಒಂದು ಚಮಚ ಹಾಲನ್ನು ಸರಿಯಾಗಿ ಮಿಶ್ರಣ ಮಾಡಿ ಮೃದುವಾದ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ನೀವು ಜೇನನ್ನು ಸೇರಿಸಬಹುದು. ಸ್ವಚ್ಚವಾಗಿರುವ ಡಬ್ಬದಲ್ಲಿ ಹಾಕಿ ಈ ಮಿಶ್ರಣವನ್ನು ಶೇಖರಿಸಿಡಿ ಮತ್ತು ನಿಯಮಿತವಾಗಿ ಮೊಡವೆಯಿರುವ ಜಾಗಕ್ಕೆ ಹಚ್ಚಿ. ಭವಿಷ್ಯದಲ್ಲಿ ಬಳಸಲು ಈ ಮಿಶ್ರಣವನ್ನು ಫ್ರಿಡ್ಜ್ ನಲ್ಲಿಡಬಹುದು.

How You Can Use Turmeric for Acne

ಆಲೀವ್ ಎಣ್ಣೆ- ಅರಿಶಿನದ ಮಿಶ್ರಣ
ಐದು ಚಮಚ ಆಲಿವ್ ಆಯಿಲ್ ಮತ್ತು 8 ಚಮಚ ಅರಿಶಿನ ಪುಡಿಯನ್ನು ಬಳಸಿ ಮಾಡುವ ಮದ್ದು ಮೊಡವೆಯ ಸಮಸ್ಯೆಗೆ ಮತ್ತೊಂದು ಪರಿಣಾಮಕಾರಿ ಮದ್ದು. ಆಲಿವ್ ಆಯಿಲ್ ಬದಲಿಗೆ ಎಳ್ಳೆಣ್ಣೆಯನ್ನು ಬಳಸಬಹುದು. ಮೃದುವಾದ ಪೇಸ್ಟ್ ಮಾಡಿ ಮತ್ತು ಸ್ವಚ್ಛವಾಗಿರುವ ಪಾತ್ರೆಯಲ್ಲಿ ಹಾಕಿ ಮೊಡವೆ ಇರುವ ಜಾಗಕ್ಕೆ ಹಚ್ಚಿ. ಹದಿಹರೆಯದಲ್ಲಿ ಕಾಡುವ ಮೊಡವೆಗೆ ಅದ್ಭುತ ಜ್ಯೂಸ್

ಅರಿಶಿನ ಪುಡಿ ಹಾಗೂ ಜೇನಿನ ಮಿಶ್ರಣ
ಮೊಡವೆ ಸಮಸ್ಯೆಯನ್ನು ನಿವಾರಿಸಲು ನೀವು ಅರಿಶಿನದ ಮಾಸ್ಕ್ ನ್ನು ತಯಾರಿಸಬಹುದು. ಎರಡು ಚಮಚ ಮೊಸರು, ಒಂದು ಚಮಚ ಅರಿಶಿನಪುಡಿ ಮತ್ತು ಸ್ವಲ್ಪ ಜೇನು ಸೇರಿಸಿ. ಇದನ್ನು ಸರಿಯಾಗಿ ಕಲಸಿ ಮತ್ತು ಅದು ಮೃದುವಾಗಲಿ. ಇದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ, ಬಳಿಕ ತೊಳೆಯಿರಿ. ಈ ಮಾಸ್ಕ್ ನ್ನು ವಾರದಲ್ಲಿ ಎರಡು ಸಲ ಬಳಸಿದರೆ ಮೊಡವೆಯ ಸಮಸ್ಯೆಯಿಂದ ದೂರವಾಗಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ಮೊಡವೆ ನಿವಾರಿಸಲು ಪರಿಣಾಮಕಾರಿ. ಮೊಡವೆ ರಹಿತ ತ್ವಚೆ ಪಡೆಯಲು ಸರಳ ಮಾರ್ಗೋಪಾಯಗಳು!

ಎರಡು ಚಮಚ ಅರಿಶಿನಪುಡಿ ಮತ್ತು ಒಂದು ಚಮಚ ಓಟ್ಸ್ ಸೇರಿಸಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ಮೊಡವೆ ಇರುವ ಜಾಗಕ್ಕೆ ಇದನ್ನು ಮಲಗುವ ಮೊದಲು ಹಚ್ಚಬೇಕು. 7-10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ ಮತ್ತು ರಾತ್ರಿಯಿಡಿ ಹಾಗೆ ಇರಲಿ. ಈ ಪೇಸ್ಟ್ ನ್ನು ಕೆಲವು ದಿನಗಳ ಕಾಲ ಹಚ್ಚಿದರೆ ಮೊಡವೆಯ ಗಾತ್ರ ಕಡಿಮೆಯಾಗುತ್ತದೆ.

English summary

How You Can Use Turmeric for Acne

For teenagers and adolescents, acne and pimples are a big worry that can result in serious side effects in both personal and social life. To get rid of acne and its inflammation, various home remedies and methods with natural ingredients are widely used, including turmeric, mint, basil and more.
X
Desktop Bottom Promotion