For Quick Alerts
ALLOW NOTIFICATIONS  
For Daily Alerts

ತ್ವಚೆಯ ಸರ್ವರೋಗಕ್ಕೂ ಹುಣಸೆ ಹಣ್ಣು ರಾಮಬಾಣ!

By deepak
|

ನಿಮ್ಮ ತ್ವಚೆಯ ಬಣ್ಣವನ್ನು ಮತ್ತಷ್ಟು ಸುಧಾರಿಸಲು ಹುಣಸೆ ಹಣ್ಣು ನಿಮಗೆ ಉಪಯೋಗಕ್ಕೆ ಬರುತ್ತದೆ. ತ್ವಚೆಗಾಗಿ ಹುಣಸೆ ಹಣ್ಣು ಬಳಸುವುದರಿಂದ, ತ್ವಚೆಯಲ್ಲಿರುವ ಹಲವಾರು ಲೋಪ ದೋಷಗಳು ನಿವಾರಣೆಯಾಗುತ್ತವೆ. ಆದರೂ ನಿಮಗೆ ಒಂದು ವೇಳೆ ಸೂಕ್ಷ್ಮ ತ್ವಚೆಯಿದ್ದಲ್ಲಿ, ಇದು ನಿಮ್ಮ ತ್ವಚೆಗೆ ಉರಿಯುವಂತಹ ಅನುಭವವನ್ನು ನೀಡುತ್ತದೆ. ಆದ್ದರಿಂದ ಇದನ್ನು ನೇರವಾಗಿ ಮುಖದ ಮೇಲೆ ಬಳಸುವ ಮೊದಲು, ಕಿವಿಯ ಹಿಂದಿನ ಭಾಗದಲ್ಲಿ ಪರೀಕ್ಷಿಸಿ ನಂತರ ಪ್ರಯತ್ನಿಸಿ. ಅಪ್ಸರೆಯಂತಹ ತ್ವಚೆಗೆ ಹೇಳಿ ಮಾಡಿಸಿದ ಗಿಡಗಳಿವು ಕಣ್ರೀ!

ತ್ವಚೆ ಬೆಳ್ಳಗಾಗಲು ಹುಣಸೆ ಹಣ್ಣು ಬಳಸುವುದು ಉತ್ತಮವಾದ ಪರಿಹಾರವಾಗಿರುತ್ತದೆ. ಕಾರಣ ಇದು ಕೇವಲ ಒಂದೆರಡು ದಿನಗಳಲ್ಲಿ ನಿಮಗೆ ಫಲಿತಾಂಶವನ್ನು ಒದಗಿಸುತ್ತದೆ. ಬೆಳ್ಳಗಾಗಲು ನೀವು ಹುಣಸೆ ಹಣ್ಣಿನ ಜೊತೆಗೆ ಇನ್ನು ಕೆಲವೊಂದು ಪದಾರ್ಥಗಳನ್ನು ಬಳಸಬೇಕಾಗುತ್ತದೆ. ಅವುಗಳಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದು ಮುಖ್ಯವಾದ ಅಂಶವಾಗಿರುತ್ತದೆ.

ಉದಾಹರಣೆಗೆ: ಆಲೀವ್ ಎಣ್ಣೆಯನ್ನು ಹುಣಸೆ ಹಣ್ಣಿನ ಜೊತೆಗೆ ಬಳಸಿದರೆ, ನಿಮ್ಮ ತ್ವಚೆ ಮೃದು ಮತ್ತು ಕೋಮಲತೆಯಿಂದ ಕೂಡಿ ತಾಜಾ ಆಗಿ ಕಂಗೊಳಿಸುತ್ತದೆ. ಆದ್ದರಿಂದ ಹುಣಸೆಹಣ್ಣಿನ ಫೇಸ್ ಪ್ಯಾಕ್ ಬಳಸಿದ ಮೇಲೆ ಸ್ವಾಭಾವಿಕವಾದ ಎಣ್ಣೆಗಳನ್ನು ಬಳಸಲು ಮರೆಯಬೇಡಿ. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಫೇಸ್‍ ವಾಶ್ ಆಗಿ ಬಳಸಿ

ಫೇಸ್‍ ವಾಶ್ ಆಗಿ ಬಳಸಿ

ಹುಣಸೆಹಣ್ಣಿನ ಫೇಸ್ ವಾಶ್ ತ್ವಚೆಗೆ ತುಂಬಾ ಒಳ್ಳೆಯದು. ಆದ್ದರಿಂದ ಮೊದಲು ಇದನ್ನು ಫೇಸ್ ವಾಶ್ ಆಗಿ ಬಳಸಿ ನೋಡಿ. ಇದಕ್ಕಾಗಿ ನೀವು ಹುಣಸೆಹಣ್ಣನ್ನು ಮೊದಲು ನೀರಿನಲ್ಲಿ ನೆನೆಸಿ, ನಂತರ ಆ ನೀರಿನಲ್ಲಿ ಮುಖವನ್ನು ತೊಳೆಯಿರಿ. ಅದಾದ ಮೇಲೆ ಚೆನ್ನಾಗಿ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಫೇಸ್ ಮಾಸ್ಕ್ ಆಗಿ ಬಳಸಿ

ಫೇಸ್ ಮಾಸ್ಕ್ ಆಗಿ ಬಳಸಿ

ಬೆಳ್ಳಗಾಗಲು ಹುಣಸೆಹಣ್ಣಿನ ಫೇಸ್ ಮಾಸ್ಕ್ ಅನ್ನು ವಾರಕ್ಕೆರಡು ಬಾರಿ ಬಳಸಿ. ಹುಣಸೆಹಣ್ಣನ್ನು ಇದಕ್ಕಾಗಿ ರುಬ್ಬಿಕೊಳ್ಳಿ, ಅದನ್ನು ಹಾಲಿನೊಂದಿಗೆ ಬೆರೆಸಿ. ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ, ಇದು ಒಣಗಿದ ನಂತರ ತೊಳೆಯಿರಿ.

ಫೇಸ್ ಸ್ಕ್ರಬ್ ಆಗಿ ಬಳಸಿ

ಫೇಸ್ ಸ್ಕ್ರಬ್ ಆಗಿ ಬಳಸಿ

ನಿರ್ಜೀವ ಕೋಶಗಳಿಂದ ಮುಕ್ತರಾಗಲು ಹುಣಸೆಹಣ್ಣಿನ ಸ್ಕ್ರಬ್ ಅನ್ನು ಬಳಸಿ. ಇದನ್ನು ಮಾಡುವುದರಿಂದ ನಿಮ್ಮ ತ್ವಚೆಗೆ ಹೊಳಪು ದೊರೆಯುತ್ತದೆ ಹಾಗು ನಿಮ್ಮ ಮುಖಕ್ಕೆ ಮೆರಗು ಸಹ ದೊರೆಯುತ್ತದೆ.

ಫೇಸ್ ಟೋನರ್ ಆಗಿ ಬಳಸಿ

ಫೇಸ್ ಟೋನರ್ ಆಗಿ ಬಳಸಿ

ಹುಣಸೆಹಣ್ಣನ್ನು ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಬಳಸುವುದರ ಜೊತೆಗೆ, ಇದನ್ನು ನೀವು ನಿಮ್ಮ ತ್ವಚೆಯ ಪರಿಪೂರ್ಣ ಟೋನರ್ ಆಗಿ ಸಹ ಬಳಸಬಹುದು. ಹುಣಸೆ ಹಣ್ಣನ್ನು ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಮತ್ತು ಬೇಸಿಗೆಯಲ್ಲಿ ಟೋನರ್ ಆಗಿ ಬಳಸಿ.

ಕಣ್ಣಿನ ಸುತ್ತ ಇರುವ ವೃತ್ತಗಳಿಗಾಗಿ

ಕಣ್ಣಿನ ಸುತ್ತ ಇರುವ ವೃತ್ತಗಳಿಗಾಗಿ

ಕೆಲವೊಮ್ಮೆ ನಿಮ್ಮ ಕಣ್ಣುಗಳ ಸುತ್ತ ಇರುವ ವೃತ್ತಗಳು ನಿಮ್ಮ ಸೌಂದರ್ಯವನ್ನು ಮಂಕುಗೊಳಿಸುತ್ತವೆ. ಆದ್ದರಿಂದ ಈ ಕಲೆಗಳಿಂದ ಮುಕ್ತರಾಗಲು, ಹುಣಸೆಹಣ್ಣಿನ ಪೇಸ್ಟ್ ಬಳಸಿ. ಇದು ತ್ವಚೆಯನ್ನು ಬೆಳ್ಳಗೆ ಮಾಡುವುದರ ಜೊತೆಗೆ ಕಣ್ಣಿನ ಸುತ್ತಿನ ವೃತ್ತಗಳನ್ನು ಸಹ ನಿವಾರಿಸುತ್ತದೆ. ಇದಕ್ಕಾಗಿ ಹುಣಸೆಹಣ್ಣಿನ ಪೇಸ್ಟನ್ನು ಕಣ್ಣಿನ ಸುತ್ತ ಹತ್ತು ನಿಮಿಷ ಬಿಡಿ. ನಂತರ ಹಾಲಿನಲ್ಲಿ ಇದನ್ನು ತೊಳೆಯಿರಿ.

English summary

How To Use Tamarind For Skin

Tamarind is one of the best things to use on your face to improve your colour naturally. Using tamarind on your skin will remove blemishes in no time as well. However, this kitchen ingredient might burn if you have sensitive skin
X
Desktop Bottom Promotion