For Quick Alerts
ALLOW NOTIFICATIONS  
For Daily Alerts

ಥಟ್ಟನೆ ಮೊಡವೆಗಳ ನಿವಾರಣೆಗೆ ಪನ್ನೀರಿನ ಚಿಕಿತ್ಸೆ

By C.M. Prasad
|

ಈಗಿನ ದಿನಮಾನಸದಲ್ಲಿ ಮೊಡವೆಗಳು ಮತ್ತು ಮುಖದ ಕಲೆಗಳು ಹೆಚ್ಚಾಗಿ ಹುಡುಗಿಯರನ್ನು ಮತ್ತು ಮಹಿಳೆಯರನ್ನು ಕಾಡುತ್ತಿದೆ. ಪುರುಷರೂ ಸಹ ಇದಕ್ಕೆ ಹೊರತಾಗಿಲ್ಲ. ಅವು ಮುಖದ ಅಂದವನ್ನು ಕುಂದಿಸುವುದಲ್ಲದೇ ಅದರಿಂದ ಕಾಣುವ ಕೆಂಪು ಚಹರೆಗಳು ಒಂದು ರೀತಿಯಲ್ಲಿ ಭಯ ಹುಟ್ಟಿಸುವಂತೆ ಮಾಡುತ್ತದೆ. ಮೊಡವೆ ಉಂಟಾಗಲು ಅನೇಕ ಕಾರಣಗಳಿವೆ. ಜಿಡ್ಡು ಹೆಚ್ಚಾಗುವಿಕೆಯಿಂದ, ಬ್ಯಾಕ್ಟೀರಿಯಾ ಸೋಂಕಿನಿಂದ, ಮಾನಸಿಕ ಒತ್ತಡ, ದೇಹದ ಸಂಚಲನ ವ್ಯವಸ್ಥೆಯಲ್ಲಿ ಏರುಪೇರುಗಳಾದಾಗ, ತ್ವಚೆಯಲ್ಲಿ ಚಿಕ್ಕ ಚಿಕ್ಕ ರಂಧ್ರಗಳು ಹೆಚ್ಚಾದಾಗ, ಧೂಮಪಾನ ಹಾಗೂ ಮಧ್ಯಪಾನ ಹೀಗೆ ಹಲವಾರು ಕಾರಣಗಳಿಂದ ಮೊಡವೆಗಳು ಬರುತ್ತವೆ.

ಹುಡುಗಿಯರು ಮೊಡವೆ ಹೊಂದಿದ ಮುಖವನ್ನು ತೋರಿಸಲು ಹಿಂಜರಿಯುತ್ತಾರೆ, ವಿಶೇಷ ಸಂದರ್ಭದಲ್ಲಿ ಇದು ಕಷ್ಟವೆನಿಸುತ್ತದೆ. ಇದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಂಭವವೂ ಇದೆ. ಇದನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಲು ಪನ್ನೀರನ್ನು ಬಳಸಬಹುದಾಗಿದೆ. ಪನ್ನೀರನ್ನು ನಿಮ್ಮ ತ್ವಚೆಯ ಮೇಲೆ ನಯವಾಗಿ ಸವರುತ್ತಾ ಹೋದರೆ ಕ್ರಮವಾಗಿ ಮೊಡವೆಗಳು ವಾಸಿಯಾಗುತ್ತವೆ. ಇದೊಂದು ನೈಸರ್ಗಿಕ ವಿಧಾನವಾಗಿದೆ.

ಪನ್ನೀರಿನಲ್ಲಿ ಶುದ್ಧೀಕರಣ ಮಾಡುವ, ಉರಿಯೂತಗಳನ್ನು ನಿವಾರಿಸುವ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತದೆ. ಅಲ್ಲದೆ ಇದು ಒಂದು ನೈಸರ್ಗಿಕ ದ್ರವ್ಯವಾಗಿದ್ದು ತ್ವಚೆಯ ಜಿಡ್ಡನ್ನು ತೆಗೆಯಲು ನೆರವಾಗುತ್ತದೆ. ತ್ವಚೆಯಲ್ಲಿನ ಧೂಳಿನ ಅಂಶವನ್ನು ಸ್ವಚ್ಛಗೊಳಿಸಿ ತ್ವಚೆಯನ್ನು ಬಿಗಿಯಾಗಿರಿಸುತ್ತದೆ. ಪನ್ನೀರಿನ ಅಂಶವು ನೈಸರ್ಗಿಕವಾಗಿ ಪಿಹೆಚ್ ಸಮತೋಲನವನ್ನು ಕಾಪಾಡಲು ಸಹಕಾರಿಯಾಗಿದೆ.

ಪನ್ನೀರು ಸೌಮ್ಯ ಸ್ವಭಾವದ ದ್ರವ್ಯವಾಗಿದ್ದು ಫಲಿತಾಂಶವು ನಿಧಾನವಾಗಿ ಲಭಿಸುತ್ತದೆ. ಆದರೆ ಫಲಿತಾಂಶವು ಮಾತ್ರ ಪರಿಣಾಮಕಾರಿಯಾಗಿರಲಿದೆ. ನಿಜ ವ್ಯತ್ಯಾಸವನ್ನು ಅರಿಯಲು ಪನ್ನೀರನ್ನು ದಿನಂಪ್ರತಿ ಬಳಸಬೇಕಾಗುತ್ತದೆ. ಹೆಚ್ಚು ಮೊಡವೆ ಪೀಡಿತ ತ್ವಚೆ ಹೊಂದಿರುವವರಿಗೆ ಹೆಚ್ಚು ಉಪಕಾರಿ. ಬರೀ ಒಂದೇ ದಿನದಲ್ಲಿ ಮೊಡವೆಗಳು ಮಂಗಮಾಯ..!

How To Use Rose Water To Treat Acne

ಮೊದಲೇ ಹೇಳಿದಂತೆ, ಮೊಡವೆಗಳನ್ನು ಹೋಗಲಾಡಿಸಲು ಪನ್ನೀರನ್ನು ಅನೇಕ ವಿಧದಲ್ಲಿ ಬಳಸಲಾಗುತ್ತದೆ. ಈ ಬೋಲ್ಡ್ ಸ್ಕೈ ತಾಣದಲ್ಲಿ ನಿಮ್ಮ ಸೌಂದರ್ಯದ ಗುರುತಾಗಿ ಪನ್ನೀರಿನ ಊಪಯೋಗದ ಅನೇಕ ವಿಧಗಳ ಬಗ್ಗೆ ವಿಶೇಷವಾದ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ವಿವರಗಳನ್ನು ಮನಗಂಡು ಒಮ್ಮೆ ಪ್ರಯತ್ನಿಸಿ ನೋಡಿ. ಬದಲಾವಣೆ ಖಂಡಿತ ಸಾಧ್ಯವಾಗುತ್ತದೆ.

ಲಿಂಬೆಯೊಂದಿಗೆ ಪನ್ನೀರಿನ ಬಳಕೆ
ನಿಂಬೆಯಲ್ಲಿ ಆಮ್ಲ ಗುಣಲಕ್ಷಣವಿದ್ದು, ಪನ್ನೀರಿನಲ್ಲಿ ಹಿತತರುವ ಗುಣವಿದ್ದು, ಇವೆರಡೂ ಒಟ್ಟುಗೂಡಿದರೆ ನಿಮ್ಮ ಮೊಡವೆಗಳ ನಿವಾರಣೆಗೆ ರಾಮಬಾಣವಿದ್ದಂತೆ. 10 ತೊಟ್ಟುಗಳು ಪನ್ನೀರಿಗೆ 6 ತೊಟ್ಟುಗಳು ಲಿಂಬೆ ರಸವನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮೊಡವೆಗಳ ಮೇಲೆ ನಯವಾಗಿ ಹಚ್ಚಿ ಸ್ವಲ್ಪ ಸಮಯ ಹಾಗೇ ಒಣಗಲು ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ.

ಕಿತ್ತಳೆ ಸಿಪ್ಪೆಯೊಂದಿಗೆ ಪನ್ನೀರಿನ ಬಳಕೆ
ಕಿತ್ತಳೆಯ ಸಿಪ್ಪೆಯನ್ನು ತ್ವಚೆಯ ಕಾಂತೆ ಹೆಚ್ಚಿಸುವುದಕ್ಕೆ ಬಳಸುತ್ತಾರೆ. ಇದರಲ್ಲಿ ವಿಟಮಿನ್ ಸಿ ಸತ್ವವು ಹೇರಳವಾಗಿದ್ದು, ಇದನ್ನು ಪನ್ನೀರಿನೊಂದಿಗೆ ಬಳಸಿದಲ್ಲಿ ನಿಮ್ಮ ಮೊಡವೆಗಳನ್ನು ಸುಲಭವಾಗಿ ನಿವಾರಣೆ ಮಾಡಬಹುದು. ಕಿತ್ತಳೆ ಸಿಪ್ಪೆಯನ್ನು ಪುಡಿಗೊಳಿಸಿ ಪನ್ನೀರಿಗೆ ಬೆರೆಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮೊಡವೆ ಜಾಗಕ್ಕೆ ನಯವಾಗಿ ಹಚ್ಚಿ 20 ನಿಮಿಷ ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ.

ಶ್ರೀಗಂಧದೊಂದಿಗೆ ಪನ್ನೀರಿನ ಬಳಕೆ
ಶ್ರೀಗಂಧದಲ್ಲಿ ತ್ವಚೆಗೆ ಹಿತಕರ ಅನುಭವ ನೀಡುವ ಗುಣ ಹೊಂದಿದ್ದು, ಮೊಡವೆಗಳನ್ನು ಪರಿಣಾಮಾಕಾರಿಯಾಗಿ ನಿವಾರಣೆ ಮಾಡುತ್ತದೆ. ಶ್ರೀಗಂಧ ಪುಡಿಯನ್ನು ಪನ್ನೀರಿನೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಮೊಡವೆಗಳಿಗೆ ನೇರವಾಗಿ ಹಚ್ಚಿ ಅರ್ಧ ತಾಸು ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಅಯ್ಯೋ ದೇವರೆ, ಮೂಗಿನಲ್ಲಿ ಮೊಡವೆ ಏನು ಮಾಡ್ಲಿ..?

ಮುಲ್ತಾನಿ ಮಿಟ್ಟಿಯೊಂದಿಗೆ ಪನ್ನೀರಿನ ಬಳಕೆ
ಮುಲ್ದಾನಿ ಮಿಟ್ಟಿ ಎಂಬ ತರಕಾರಿಯು ಮೊಡವೆ ನಿವಾರಿಸಲು ವಂಶಪಾರಂಪರ್ಯವಾಗಿ ಅನುಸರಿಸಿಕೊಂಡು ಬಂದ ಪದ್ಧತಿಯಾಗಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣವು ಮೊಡವೆಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ. ಇದನ್ನು ಪನ್ನೀರಿನೊಂದಿಗೆ ಬೆರೆಸಿ ಮೆದುವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ತ್ವಚೆಯ ಮೇಲೆ ನಯವಾಗಿ ಹಚ್ಚಿ. ಸ್ವಲ್ಪ ಸಮಯ ಹಾಗೆಯೇ ಬಿಡಿ ನಂತರ ನೀರಿನಿಂದ ಸ್ವಚ್ಛಗೊಳಿಸಿ.

ಶುಂಠಿಯೊಂದಿಗೆ ಪನ್ನೀರಿನ ಬಳಕೆ


ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣವು ತ್ವಚೆಯನ್ನು ಶುದ್ಧೀಕರಿಸುತ್ತದೆ. ಶುಂಠಿಯ ಅಂಶದಿಂದ ಮೊಡವೆಗಳು ಹಾಗೂ ತ್ವಚೆಯ ಕಲೆಗಳನ್ನು ಸುಲಭವಾಗಿ ತೆಗೆಯಬಹುದು. ಶುಂಠಿಯ ರಸವನ್ನು ಪನ್ನೀರಿಗೆ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತ್ವಚೆಗೆ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಒಳ್ಳೆಯ ಫಲಿತಾಂಶ ನಿಮ್ಮದಾಗುತ್ತದೆ.
English summary

How To Use Rose Water To Treat Acne

Acne can be caused by various reasons such as clogged pores, over secretion of oil, bacterial infection, stress, hormonal imbalance, smoking and alcoholism. Rose water is one of the effective remedies to treat acne. Rose water is gentle on the skin and is a natural remedy to treat acne. have a look
Story first published: Wednesday, December 23, 2015, 18:46 [IST]
X
Desktop Bottom Promotion