For Quick Alerts
ALLOW NOTIFICATIONS  
For Daily Alerts

ಹಾಲಿನಂತಹ ಬಿಳುಪುಳ್ಳ ತ್ವಚೆ ನಿಮ್ಮದಾಗಬೇಕೆ?

By Arshad
|

ಚರ್ಮದ ಆರೈಕೆಯ ಉತ್ಪನ್ನಗಳ ಬೆಲೆಯ ಶೇಖಡಾ ಅರವತ್ತರಷ್ಟು ಅದರ ಜಾಹೀರಾತಿಗೆ ಖರ್ಚಾಗಿರುತ್ತದೆ. ಏಕೆಂದರೆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮುಂದುವರೆಯುವಂತೆ ಮಾಡಲು ಬಣ್ಣಬಣ್ಣದ ಭರವಸೆಯನ್ನು ಸುಳ್ಳಿನ ಸರಮಾಲೆಯ ಮೂಲಕ ಗ್ರಾಹಕರಿಗೆ ನೀಡಲಾಗುತ್ತದೆ. ಒಮ್ಮೆ ಇದನ್ನು ಬಳಸಿ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಬಿಸಾಡುವ ವೇಳೆಗೆ ಆ ಸಂಸ್ಥೆ ನಿಮ್ಮಂತಹ ಒಂದು ಕೋಟಿ ಜನರಿಂದ ತನ್ನ ಕಳಪೆ ಉತ್ಪನ್ನದಿಂದ ಕೋಟ್ಯಂತರ ರೂಪಾಯಿ ಬಾಚಿ ಆಗಿರುತ್ತದೆ.

ನಾಳೆ ಇದರ ಬದಲಿಗೆ ಇನ್ನೊಂದು 'ಹೊಸ' ಉತ್ಪನ್ನ ಬಂದಿರುತ್ತದೆ. ಕ್ರಿಯೆ ಮುಂದುವರೆಯುತ್ತಾ ಹೋಗುತ್ತದೆ. ಈ ಅನಗತ್ಯ ಪ್ರಸಾಧನಗಳ ಬದಲು ನಿಸರ್ಗ ನಮಗೆ ನೀಡಿರುವ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸೌಂದರ್ಯವನ್ನು ಪಡೆಯಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಾಲು.

ಇದು ನೈಸರ್ಗಿಕವಾಗಿ ಚರ್ಮಕ್ಕೆ ಆರ್ದ್ರತೆ ಮತ್ತು ಸೂಕ್ಷ್ಮ ರಂಧ್ರಗಳನ್ನು ಸ್ವಚ್ಛಗೊಳಿಸುವ ಮೂಲಕ ಉತ್ತಮ ಪೋಷಣೆ ಮತ್ತು ಆರೈಕೆ ನೀಡುತ್ತದೆ. ಇದೇ ಕಾರಣಕ್ಕೆ ಶತಮಾನಗಳಿಂದ ಹಾಲನ್ನು ಮಹಿಳೆಯರು ತಮ್ಮ ಸೌಂದರ್ಯವೃದ್ಧಿಗಾಗಿ ಬಳಸುತ್ತಾ ಬಂದಿದ್ದಾರೆ.

ಒಂದು ವೇಳೆ ನಿಮ್ಮ ಹಿರಿಯರು ನಿಮಗೆ ಇದರ ಬಗ್ಗೆ ಹೇಳಲು ಬಂದಿದ್ದಾಗ ಕೇಳಿಸಿಕೊಳ್ಳುವಷ್ಟೂ ವ್ಯವಧಾನವಿಲ್ಲದೇ ಹೋಗಿದ್ದಿದ್ದರೆ ಅಥವಾ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲದೇ ಇದ್ದರೆ ಈಗಲಾದರೂ ಹಾಲನ್ನು ಬಳಸಿ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಕೆಳಗಿನ ಸ್ಲೈಡ್ ಶೋ ನೆರವಾಗುತ್ತದೆ.

ಆದರೆ ಯಾವುದೇ ಹೊಸ ಪ್ರಯೋಗವನ್ನು ನಿಮ್ಮ ತ್ವಚೆಯ ಮೇಲೆ ಪ್ರಯೋಗಿಸಿಕೊಳ್ಳುವ ಮೊದಲು ಚರ್ಮವೈದ್ಯರ ಅಥವಾ ಚರ್ಮತಜ್ಞರ ಬಳಿ ಸಲಹೆ ಪಡೆದುಕೊಳ್ಳುವುದು ಉತ್ತಮ. ಏಕೆಂದರೆ ಪ್ರತಿಯೊಬ್ಬರ ಚರ್ಮವೂ ಕೊಂಚ ಭಿನ್ನವಾಗಿದ್ದು ಭಿನ್ನವಾದ ಆರೈಕೆ ಬೇಕಾಗುತ್ತದೆ. ಹಾಲನ್ನು ಬಳಸುವ ವಿಧಾನವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ..

ಸೂಕ್ಷ್ಮ ರಂಧ್ರಗಳ ಸ್ವಚ್ಛತೆಗಾಗಿ

ಸೂಕ್ಷ್ಮ ರಂಧ್ರಗಳ ಸ್ವಚ್ಛತೆಗಾಗಿ

ನಮ್ಮ ಚರ್ಮದಲ್ಲಿರುವ ಸೂಕ್ಷ್ಮರಂಧ್ರಗಳಲ್ಲಿ ಕುಳಿತಿರುವ ಕೊಳೆಯನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಬರೆಯ ನೀರು ಈ ರಂಧ್ರಗಳ ಒಳಗೆ ತೂರುವುದಿಲ್ಲ. ಮಾರುಕಟ್ಟೆಯ ಪ್ರಸಾದನಗಳು ಸೂಕ್ಷ್ಮ ಚರ್ಮದವರಿಗೆ ಉರಿಯುಂಟು ಮಾಡಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೂಕ್ಷ್ಮ ರಂಧ್ರಗಳ ಸ್ವಚ್ಛತೆಗಾಗಿ

ಸೂಕ್ಷ್ಮ ರಂಧ್ರಗಳ ಸ್ವಚ್ಛತೆಗಾಗಿ

ಆದರೆ ತಣ್ಣನೆಯ ಹಾಲು ಎಲ್ಲಾ ಬಗೆಯ ಚರ್ಮದವರಿಗೆ ಸೂಕ್ತವಾಗಿದ್ದು ಸೂಕ್ಷ್ಮರಂಧ್ರಗಳ ಒಳಗಿರುವ ಕಲ್ಮಶವನ್ನು ನಿವಾರಿಸಲು ಶಕ್ತವಾಗಿದೆ. ಈಗತಾನೇ ತೊಳೆದ ಮುಖವನ್ನು ಕೊಂಚ ಹಸಿಹಾಲಿನಲ್ಲಿ ಮುಳುಗಿಸಿದ ಹತ್ತಿಯುಂಡೆಯಿಂದ ಒರೆಸಿಕೊಳ್ಳಿ. ಇಡಿಯ ಮುಖ ಸ್ವಚ್ಛಗೊಳಿಸಲು ಅರ್ಧ ಕಪ್ ಹಾಲು ಸಾಕು.

ಸತ್ತ ಜೀವಕೋಶಗಳನ್ನು ನಿವಾರಿಸಲು

ಸತ್ತ ಜೀವಕೋಶಗಳನ್ನು ನಿವಾರಿಸಲು

ಸ್ನಾನದ ಬಳಿಕ ಕೆರೆದುಕೊಂಡರೆ ತೆಳುವಾದ ಪುಡಿಯಂತಹದ್ದು ಹೊರಬರುತ್ತದೆ. ಇದು ಚರ್ಮದ ಸತ್ತ ಜೀವಕೋಶಗಳಾಗಿವೆ. ಒಣಗಿದ ಬಳಿಕ ಇದು ಅತಿ ಸೂಕ್ಷ್ಮವಾದ ಪುಡಿಯ ರೂಪದಲ್ಲಿ ಉದುರಿ ಹೋಗಬೇಕು. ಆದರೆ ಬೆವರು ಮತ್ತು ಚರ್ಮದ ಎಣ್ಣೆಯ ಕಾರಣ ಇದು ಅಂಟಿಕೊಂಡೇ ಇರುತ್ತದೆ.

ಸತ್ತ ಜೀವಕೋಶಗಳನ್ನು ನಿವಾರಿಸಲು

ಸತ್ತ ಜೀವಕೋಶಗಳನ್ನು ನಿವಾರಿಸಲು

ಇದನ್ನು ನಿವಾರಿಸಲು ಹಸಿಹಾಲಿನಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ಒರೆಸಿಕೊಳ್ಳಿ. ಅಲ್ಲದೇ ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲಕ್ಕೆ ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣವಿರುವುದರಿಂದ ನೆರಿಗೆಗಳು ಮೂಡುವ ಪ್ರಕ್ರಿಯೆ ನಿಧಾನವಾಗಿ ಮುಪ್ಪನ್ನು ಮುಂದೂಡಿದಂತಾಗುತ್ತದೆ.

ಚರ್ಮದ ಮೃದುತ್ವಕ್ಕೆ

ಚರ್ಮದ ಮೃದುತ್ವಕ್ಕೆ

ಸ್ನಾನದ ಬಳಿಕ ಮುಖ, ಕುತ್ತಿಗೆ ಭುಜಗಳನ್ನು ಹಸಿಹಾಲಿನಿಂದ ನಯವಾಗಿ ಮಸಾಜ್ ಮಾಡುವ ಮೂಲಕ ಚರ್ಮ ಅತ್ಯಂತ ಕೋಮಲವಾಗಿ ಮೃದುತ್ವದ ಅನುಭವ ನೀಡುತ್ತದೆ.

ಮುಖಲೇಪವನ್ನಾಗಿ ಬಳಸಲು

ಮುಖಲೇಪವನ್ನಾಗಿ ಬಳಸಲು

ಹಾಲು ಮುಖದ ಮೇಲೆ ಲೇಪನವಾಗಿ ನಿಲ್ಲದ ಕಾರಣ ತಣ್ಣಗಿನ ಗಟ್ಟಿಮೊಸರನ್ನು ಮುಖದ ಮೇಲೆ ದಪ್ಪನಾಗಿ ಹಚ್ಚಿ ಹತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಮೊಡವೆ ನಿವಾರಿಸಲು

ಮೊಡವೆ ನಿವಾರಿಸಲು

ಸತ್ತ ಜೀವಕೋಶಗಳನ್ನು ಹಾಲು ನಿವಾರಿಸಿದಂತೆಯೇ ಮೊಡವೆಗಳಿಗೆ ಕಾರಣವಾದ ಕಲ್ಮಶಗಳನ್ನೂ ಹಾಲು ನಿವಾರಿಸುತ್ತದೆ. ಸೂಕ್ಷರಂಧ್ರಗಳ ಒಳಗೆ ಹಾದು ಅಗತ್ಯವಿದ್ದ ನೀರು ಮತ್ತು ಇತರ ಪೋಷಕಾಂಶಗಳನ್ನು ನೀಡುತ್ತದೆ.

ಮೊಡವೆ ನಿವಾರಿಸಲು

ಮೊಡವೆ ನಿವಾರಿಸಲು

ಇದರಿಂದ ಮೊಡವೆಗಳು ಮೂಡುವ ಸಂಭವ ಕಡಿಮೆಯಾಗುತ್ತದೆ. ವಿಶೇಷವಾಗಿ ಹದಿಹರೆಯದವರು ರಾತ್ರಿ ಮಲಗುವ ಮುನ್ನ ಕೊಂಚ ಹಾಲನ್ನು ಮುಖಕ್ಕೆ ಸಿಂಪಡಿಸಿ ಒಣಗಿಸಿ ಮಲಗಿ ಬೆಳಿಗ್ಗೆ ತೊಳೆದುಕೊಳ್ಳುವ ಮೂಲಕ ಮೊಡವೆಗಳಿಂದ ದೂರವಿರಲು ಸಾಧ್ಯ.

ಹಾಲಿನ ಸ್ನಾನಕ್ಕಾಗಿ

ಹಾಲಿನ ಸ್ನಾನಕ್ಕಾಗಿ

ಹಾಲಿನ ಸ್ನಾನ ಎಂದರೆ ನೀರಿನ ಬದಲಿಗೆ ಹಾಲನ್ನೇ ಸುರಿದುಕೊಳ್ಳುವುದೆಂದು ಅರ್ಥವಲ್ಲ. ಬದಲಿಗೆ ಒಂದು ಬಕೆಟ್ ನೀರಿಗೆ ಒಂದು ಕಪ್ ಹಾಲು ಸೇರಿಸಿದರೆ ಸಾಕು. ಈ ನೀರಿನಿಂದ ಸ್ನಾನ ಮಾಡಿಕೊಂಡರೆ ಇಡಿಯ ದಿನ ತಾಜಾತನವನ್ನು ಅನುಭವಿಸಬಹುದು ಹಾಗೂ ತ್ವಚೆಯೂ ಆರೋಗ್ಯಪೂರ್ಣವಾಗಿ ಕಳಕಳಿಸುತ್ತದೆ.

ಪಾದಗಳ ಸ್ವಚ್ಛತೆಗಾಗಿ

ಪಾದಗಳ ಸ್ವಚ್ಛತೆಗಾಗಿ

ಇಡಿಯ ದಿನದ ಚಟುವಟಿಕೆಯ ಬಳಿಕ ಪಾದಗಳೂ ಹೆಚ್ಚು ದಣಿಯುತ್ತವೆ. ಅಲ್ಲದೇ ಪಾದರಕ್ಷೆಗಳ ಕಾರಣ ಪಾದಗಳು ಹಸ್ತದಷ್ಟು ಗಾಳಿಗೆ ಒಡ್ಡದೇ ಇರುವುದರಿಂದ ಮತ್ತು ಸವೆಯದೇ ಇರುವುದರಿಂದ ಚರ್ಮದ ಮೇಲಿನ ಕೊಳೆ ಗಾಢವಾಗುತ್ತಾ ಹೋಗುತ್ತದೆ.

ಪಾದಗಳ ಸ್ವಚ್ಛತೆಗಾಗಿ

ಪಾದಗಳ ಸ್ವಚ್ಛತೆಗಾಗಿ

ಇದನ್ನು ನಿವಾರಿಸಲು ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಪಾದ ಮುಳುಗುವಷ್ಟು ನೀವು ತಾಳಿಕೊಳ್ಳುವಷ್ಟು ಬಿಸಿಯಾದ ನೀರನ್ನು ತುಂಬಿ ಅದರಲ್ಲಿ ಒಂದು ಕಪ್ ಹಾಲು ಸೇರಿಸಿ. ಈ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷ ಪಾದಗಳು ಮುಳುಗಿರುವಂತೆ ಮಾಡುವ ಮೂಲಕ ಪಾದಗಳಿಗೆ ಉತ್ತಮ ಆರೈಕೆ ನೀಡಬಹುದು.

English summary

How To Use Milk For Skin Care

Instead of trying moisturisers and cleansers that never perform up to expectations, use milk for skin care. It is a natural way of cleansing and moisturising your skin. In fact, using milk for skin care has been the norm here since centuries. Before most of these skin care products were invented, women relied more on milk for its brightening effects.
X
Desktop Bottom Promotion